ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ನವೆಂಬರ್, 2012 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ತಮಿಳರಿಗೆ ಡಬಲ್ ಧಮಾಕ !

ನಿನ್ನೆ ಚೆನ್ನೈಯಿಂದ ಲಾಲ್‌ಬಾಗ್ ಎಕ್ಸ್‌ಪ್ರೆಸ್ ರೈಲಿನಲ್ಲಿ ಮರಳುತ್ತಿದ್ದೆ. ಟಿಕೇಟು ಕಾಯ್ದಿರಿಸಿರದಿದ್ದ ಕಾರಣ ಸಾಮಾನ್ಯ ಬೋಗಿಯಲ್ಲೇ ಹತ್ತಿದ್ದೆ. ಅದು ಹೆಸರಿಗೆ ಮಾತ್ರ ಎಕ್ಸ್‌ಪ್ರೆಸ್, ಆದರೆ ಬಹುತೇಕ ಎಲ್ಲಾ ನಿಲ್ದಾಣಗಳಲ್ಲೂ ನಿಲ್ಲುತ್ತೆ. ಚೆನ್ನೈ ನಂತರದ ಒಂದು ನಿಲ್ದಾಣದಲ್ಲಿ ಕೆಲವರು ಅಕ್ಕಿ ಮೂಟೆಗಳನ್ನು ಹೇರಿದರು. ಮೂರ್ನಾಲ್ಕು ನಿಲ್ದಾಣಗಳ ನಂತರ ಒಂದು ನಿಲ್ದಾಣದಲ್ಲಿ ಬಂದ ರೈಲ್ವೇ ಪೊಲೀಸರು ಅವುಗಳನ್ನು ವಶಪಡಿಸಿಕೊಂಡರು. ಆಗ ಮೂಟೆಗಳ ವಾರಸುದಾರರು ಯಾರೂ ಮುಂದೆ ಬರಲಿಲ್ಲ. ರೈಲು ಅಲ್ಲಿಂದ ಹೊರಟ ನಂತರ ಮೂಟೆಗಳನ್ನು ತಂದಿದ್ದವರು 'ಅಷ್ಟು ಕೆ.ಜಿ. ಅಕ್ಕಿ ಇತ್ತು, ಇಷ್ಟು ಕೆ.ಜಿ. ಅಕ್ಕಿ ಇತ್ತು' ಎಂದು ತಮ್ಮ ಅಳಲು ತೋಡಿಕೊಂಡರು. ಆದರೆ ಯಾರ ಮುಖದಲ್ಲೂ ಅಕ್ಕಿ ಹೋದುದರ ದುಃಖ ಕಿಂಚಿತ್ತೂ ಇರದಿದ್ದುದನ್ನು ಕಂಡು ಆಶ್ಚರ್ಯವಾಯ್ತು. ನಂತರ ಅಕ್ಕಪಕ್ಕದವರನ್ನು ವಿಚಾರಿಸಿದೆ. ಆಗ ತಿಳಿದು ಬಂದ ವಿಷಯವೇ ಬೇರೆ. ಅದೇನೆಂದರೆ ತಮಿಳುನಾಡಿನಲ್ಲಿ ಕರುಣಾನಿಧಿ ಮತ್ತು ಜಯಲಲಿತ ಪೈಪೋಟಿಯಲ್ಲಿ ಮತಬ್ಯಾಂಕ್ ರಾಜಕಾರಣ ಮಾಡಿದ್ದಾರೆ. ಅವುಗಳ ಅಂಗವಾಗಿ ಮನೆ ಮನೆಗೆ ಟಿವಿ, ಮಿಕ್ಸಿ, ಸೀರೆ ಮುಂತಾದ ವಸ್ತುಗಳು ಬಂದಿವೆ. ಜೊತೆಗೆ ಪಡಿತರ ಕಾರ್ಡುದಾರರಿಗೆ ತಿಂಗಳಿಗೆ ೨೦ ಕಿಲೋ ಅಕ್ಕಿ ಉಚಿತ! ಹಲವರು ಒಂದೇ ಕುಟುಂಬಕ್ಕೆ ನಾಲ್ಕೈದು ಕಾರ್ಡು ಹೊಂದಿದ್ದು ಉಚಿತವಾಗಿ ಸಿಗುವ ಕ್ವಿಂಟಾಲ್‌ಗಟ್ಟಲೇ ಅಕ್ಕಿಯನ್ನು ಬೆಂಗಳೂರು ಮುಂತಾದೆಡೆ ತಂದು ಒಳ್ಳೆ

ವಿವೇಕಾನಂದರನ್ನು ದೇಶದ್ರೋಹಿ ದಾವುದ್‌ಗೆ ಹೋಲಿಸುವ ಹರಕತ್ತು ಏನಿತ್ತು ?

ಬಿಜೆಪಿ ಪುಂಡರು ತಮ್ಮ ಉಡಾಳ ತನವನ್ನು ಮೇಲಿಂದ ಮೇಲೆ ಪ್ರದರ್ಶನ ಮಾಡುತ್ತಲೇ ಬರುತ್ತಿದ್ದಾರೆ. ಅದು ಕರ್ನಾಟಕದ ಶಿಖಾಮಣಿಗಳಿಗೆ ಮಾತ್ರ ಸೀಮಿತವಾಗಿದೆ ಅಂದುಕೊಳ್ಳುತ್ತಿರುವಾಗಲೇ ದೆಹಲಿ ಮುಖಂಡರೂ ಸಹ ತಾವೇನೂ ಕಡಿಮೆ ಇಲ್ಲ ಎಂದು ನಮ್ಮ ರಾಜ್ಯದ ಬಿಜೆಪಿಗರಿಗೆ ಸೆಡ್ಡು ಹೊಡೆದಿದ್ದಾರೆ. ಅದರಲ್ಲೂ ಪ್ರಮುಖವಾಗಿ ಗಡ್ಕರಿಗೆ ಸಮಯ ಸರಿ ಇಲ್ಲವೋ ಅಥವಾ ಅವರ ಕೈ ಬಾಯಿ ಶುದ್ಧವಿಲ್ಲವೋ ತಿಳಿಯದು. ಒಟ್ಟಿನಲ್ಲಿ ಮಾಡಿದ ಮಹಪರಾಧವೆಲ್ಲಾ ಒಂದೆಡೆಯಿಂದ ಒಂದೊಂದಾಗಿ ಹೊರ ಬರುತ್ತಿದ್ದರೆ ಇನ್ನೊಂದೆಡೆ ಆಡಬಾರದ್ದನ್ನು ಆಡಿ ಛೀ, ಥೂ ಎಂದು ಉಗಿಸಿಕೊಳ್ಳುತ್ತಿದ್ದಾರೆ. ಅವರು ಹೇಳಿದ್ದಾದರೂ ಏನು ? "ದಾವುದ್‌ ಇಬ್ರಾಹಿಂ (ದೇಶದ್ರೋಹಿ) ಹಾಗೂ ಸ್ವಾಮಿ ವಿವೇಕಾನಂದರ (ದೇಶಭಕ್ತ) ಐಕ್ಯೂ (ಬೌದ್ಧಿಕ ಮಟ್ಟ) ಒಂದೇ ಮಟ್ಟದ್ದು.... ಇದನ್ನು ಇಬ್ಬರೂ ಬೇರೆ ಬೇರೆ ರೀತಿ ಬಳಸಿಕೊಂಡರು". [ವೀಡಿಯೋ ಇಲ್ಲಿದೆ : http://ibnlive.in.com/news/dawood-ibrahims-iq-level-almost-same-as-swami-vivekanandas-nitin-gadkari/303938-37-64.html ] ಅದಾಗಲೇ ಕೆಲವು ದೇಶಭಕ್ತಿಯ ಲೇಬಲ್ ಹಚ್ಚಿಕೊಂಡಿರುವ ಕುಹಕಿಗಳು ಗಡ್ಕರಿ ಹೇಳಿದ್ದರಲ್ಲಿ ತಪ್ಪೇನೂ ಇಲ್ಲ ಎಂದು ತಿಪ್ಪೆ ಸಾರಿಸಲು ಶುರು ಮಾಡಿದ್ದಾರೆ. "ಅವರು ಹೋಲಿಕೆ ಮಾಡಿದ್ದು ವೈರುದ್ಧತೆಯ ಬಗ್ಗೆ ಅಷ್ಟೇ" ಎಂದು ಹೇಳುವ ಮೂಲಕ ವಿಷಯವನ್ನು "ಇಷ್ಟೇ" ಮಾಡಲು ಹರ ಸಾಹಸ ಪಡುತ