ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ಏಪ್ರಿಲ್, 2013 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಗೊತ್ತಾ ನಿಮಗೆ ಮುಳ್ಳು ಹಣ್ಣು ?

ಇದು ನಮ್ಮ ಮಲೆನಾಡಿನ ಗುಟ್ಟ ಬೆಟ್ಟಗಳ ಮುಳ್ಳು ಗಿಡಗಳಲ್ಲಿ ಬಿಡುತ್ತೆ. ಮುಳ್ಳಿನ ಗಿಡದಲ್ಲೆ ಬಿಡುವುದರಿಮದ ಮುಳ್ಳು ಹಣ್ಣು ಅಂತ ಹೆಸರು. ಕೆಲವು ಕಡೆ ಬೆಣ್ಣೆ ಹಣ್ಣು ಅಂತಲೂ ಕರೆಯುತ್ತಾರೆ. ಬೇರೆ ಬೇರೆ ಹೆಸರುಗಳೂ ಉಂಟು. ಹೆಸರಿಗೆ ತಕ್ಕಂತೆ ಇದು ಬೆಣ್ಣೆಯಷ್ಟೇ ಮೃದುವಾಗಿರುತ್ತದೆ. ಕಾಯಿಯಾಗಿರುವಾಗ ಹಸಿರಾಗಿರುವ ಇದು ಹಣ್ಣಾಗುವಾಗ ಬೆಳ್ಳಗೆ ಹೊಳೆಯುತ್ತದೆ. ಅದನ್ನು ಬಾಯಿಯಲ್ಲಿ ಇರಿಸಿಕೊಂಡರೆ ಆಹಾ... ಅದ್ಬುತ ರುಚಿ... ಕರಗಿ ಹೋಗುವುದೇ ಗೊತ್ತಾಗುವುದಿಲ್ಲ. ಹಾಗೆಯೆ ಚಿಕ್ಕಪುಟ್ಟ ಹಕ್ಕಿಗಳಿಗೆ ಹಾಗೂ ಅಳಿಲುಗಳಿಗೆ ಈ ಹಣ್ಣು ತುಂಬಾ ಪ್ರಿಯವಾದ್ದರಿಂದ ಅವುಗಳ ಕಣ್ಣು ತಪ್ಪಿಸಿ ನಮಗೆ ದೊರಕುವುದು ಕಷ್ಟವೇ. ಆದರೂ ಇದು ಹಣ್ಣಾಗುವ ಸಮಯದಲ್ಲಿ ವಿಪರೀತ ಹಣ್ಣಾಗುವುದರಿಂದ ಹಕ್ಕಿಗಳಿಗೆ ಅಷ್ಟೊಂದು ತಿನ್ನಲು ಆಗುವುದಿಲ್ಲ ಎನ್ನಬಹುದು. ನಾವು ಶಾಲೆಗೆ ಹೋಗುವ ದಿನಗಳ ರಜೆ ಸಮಯದಲ್ಲಿ ಅರ್ಧ ಸಮಯ ಶರಾವತಿ ಹಿನ್ನೀರಿನಲ್ಲಿ ಕಳೆದರೆ ಇನ್ನರ್ಧ ಸಮಯ ಗುಡ್ಡ ಬೆಟ್ಟದಲ್ಲೇ ಕಳೆಯುತ್ತಿದ್ದವು. ಗುಡ್ಡದಲ್ಲಿ ಸಿಗುವ ಮುಳ್ಳಣ್ಣು, ನೇರಳೇ ಹಣ್ಣು, ಪರಿಗೇ ಹಣ್ಣು, ನೆಲ್ಲಿಕಾಯಿ, ಕೌಳೀಹಣ್ಣು, ಸಂಪಿಗೆ ಹಣ್ಣು, ಬುಕ್ಕೆಹಣ್ಣುಗಳಲ್ಲಿ ಒಂದನ್ನೂ ಬಿಡುತ್ತಿರಲಿಲ್ಲ. ಅದರಲ್ಲೂ ಈ ಮುಳ್ಳಣ್ಣು ಹಾಗೂ ಪರಿಗೆ ಹಣ್ಣುಗಳ ಗಿಡಗಳು ಬರೀ ಮುಳ್ಳು ಪೊದೆಯಂತೆ ಬೆಳೆಯುತ್ತವೆ. ಅವಗಳ ತುದಿಯಲ್ಲಿ ಹಣ್ಣು ಇದ್ದರೆ ಕೀಳುವುದೇ ಕಷ್ಟ. ಆದರೂ ನಾವು ಬಿಡುತ್ತಿರಲಿಲ್ಲ. ಮುಳ್ಳುಗಳನ