ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ಸೆಪ್ಟೆಂಬರ್, 2017 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಅಂದಿನ ಸಮುದ್ರ ಇಂದಿನ ಮರಳುಗಾಡು !

ಮರಳುಗಾಡಲ್ಲಿ ಯಾಕೆ ಬೋಟ್‌ಗಳು ನಿಂತಿವೆ ಅಂತ ಚಕಿತರಾಗಬೇಡಿ. ಕೇವಲ ಆರೇಳು ದಶಕದ ಹಿಂದೆ ಇದು ಒಂದು ಚಿಕ್ಕ ಸಮಸ್ರವಾಗಿತ್ತು ಮತ್ತು ಈ ಜಾಗದಲ್ಲಿ ೨೦೦ ಮೀಟರಿಗೂ ಹೆಚ್ಚು ಎತ್ತರ ನೀರು ನಿಂತಿತ್ತು. ಆದರೆ ಇಂದು ಎಲ್ಲವೂ ಬತ್ತಿ ಬರಡಾಗಿ ಸಮಸ್ರವಿದ್ದ ಜಾಗ ಮರಳುಗಾಡಾಗಿದೆ. ಈ ಸಮುದ್ರದ ಹೆಸರು "Aral Sea" ಎಂದು. ಕಜಕಿಸ್ತಾನ್‌ ದೇಶದಲ್ಲಿದೆ. ಒಂದು ಸಮಯದಲ್ಲಿ ಇದರಿಂದ ವರ್ಷಕ್ಕೆ ೫೦,೦೦೦ ಟನ್‌ಗಳಷ್ಟು ಮೀನು ಸಿಗುತ್ತಿತ್ತಂತೆ ! ಆದರೆ ಈಗ ಹೀಗೆ ಬರಡು ಬೂಮಿಯನ್ನಾಗಿಸಿದ್ದು ಮಾತ್ರ ಮನುಷ್ಯ. ನದಿಗಳನ್ನು ತಿರುಗಿಸಿ, ಈ ಸಮುದ್ರದಿಂದಲೂ ನೀರನ್ನೆತ್ತಿ ಕೃಷಿಗೆ ಅಂತ ಉಪಯೋಗಿಸಲಾರಂಭಿಸಿದರು. ಅರ್ಧ ಶತಮಾನ ಕಳೆಯುವುದರಲ್ಲಿ ಸಮುದ್ರ ಮರಳುಗಾಡಾಗಿ ಬದಲಾಗಿದೆ. ಈಗ ಅಲ್ಲಿನ ಕೃಷಿಯೂ ನೀರಿಲ್ಲದೇ ಅತಂತ್ರ ಸ್ಥಿತಿಯಲ್ಲಿದೆ. ಅಂದಿನ ಸೋವಿತ್‌ ಯೂನಿಯನ್‌ ಸರ್ಕಾರ ಮಾಡಿದ ಎಡವಟ್ಟಿನಿಂದ ಪ್ರಕೃತಿಗೆ ಅತಿ ದೋಡ್ಡ ಹೊಡೆತ ಬಿದ್ದಿದೆ. ಹಾಗೆಯೇ ಈಗ ನಮ್ಮ ಯೂನಿಯನ್‌ ಸರ್ಕಾರ ಸಹ "ಗಂಗಾ ಕಲ್ಯಾಣ" "ಗಂಗಾ ಕಾವೇರಿ" ಎಂಬ ಏನೇನೋ ಯೋಜನೆಗಳ ಬಗ್ಗೆ ಮಾತಾಡುತ್ತಿದೆ. ಗಂಗಾ ನದಿಯನ್ನು ತಿರುಗಿಸಿ ದೇಶವನ್ನು ಉದ್ದಾರ ಮಾಡ್ತೀವಿ ಅಂತಿದ್ದಾರೆ. ಆದರೆ ಮುಂದಿನ ಪರಿಣಾಮ ?

ವಿಶ್ವ ಹಿರಿದೋ ? ನಕ್ಷತ್ರ ಹಿರಿದೋ ??

ಬಹುತೇಕ ವಿಜ್ಞಾನಿಗಳ ಲೆಕ್ಕಾಚಾರದ ಪ್ರಕಾರ ಈ ವಿಶ್ವದ ಸೃಷ್ಟಿಯಾಗಿದ್ದು ( ಮಹಾಸ್ಪೋಟದ ಮೂಲಕ ) ೧೩.೮ ಬಿಲಿಯನ್‌ ವರ್ಷಗಳ ಹಿಂದೆ. ಈಗ ಅಸ್ತಿತ್ವದಲ್ಲಿ ಇರುವ ವಸ್ತು, ಕಪ್ಪು ವಸ್ತು, ಕಪ್ಪು ಶಕ್ತಿ - ಹೀಗೆ ಎಲ್ಲವೂ ೧೩.೮ ಬಿಲಿಯನ್‌ ವರ್ಷದ ಹಿಂದಷ್ಟೇ ಸೃಷ್ಟಿ ಆದವು ಎನ್ನಲಾಗಿದೆ. ಅಂದರೆ ಅದಕ್ಕಿಂತ ಮೊದಲು ಈಗ ಇರುವ ಏನೊಂದೂ ಇರಲಿಲ್ಲ. ಆದರೆ ಅದೇ ವಿಜ್ಞಾನಿಗಳಿಗೆ ಈಗ ಬಹು ದೊಡ್ಡ ಸಮಸ್ಯೆಯೊಂದು ಎದುರಾಗಿದೆ. ಅದೇನೆಂದರೆ ಸುಮಾರು ೧೪.೫ ಬಿಲಿಯನ್‌ ವರ್ಷ ವಯಸ್ಸಿನ ಕೆಲವು ನಕ್ಷತ್ರಗಳನ್ನು ಇದೀಗ ಹಬಲ್‌ ಟೆಲಿಸ್ಕೋಪ್‌ ಗುರುತಿಸಿದೆ ! ವಿಶ್ವಕ್ಕಿಂತಲು ಸುಮಾರು ೦.೭ ಬಿಲಿಯನ್‌ ವರ್ಷ ಹಿರಿಯ ನಕ್ಷತ್ರಗಳು ಬಂದಿರುವುದಾದರೂ ಎಲ್ಲಿಂದ ? ಇದು ಹೇಗೆ ಸಾಧ್ಯವಾಯ್ತು ಅನ್ನೋದು ವಿಜ್ಞಾನಿಗಳ ತಲೆಬಿಸಿಗೆ ಕಾರಣವಾಗಿದೆ. ಅಂದರೆ ಇಲ್ಲಿ ಒಂದೋ ವಿಶ್ವದ ಸೃಷ್ಟಿಯ ಲೆಕ್ಕಾಚಾರ ತಪ್ಪಿರಬೇಕು. ( ೧೪.೫ ಬಿಲಿಯನ್‌ ವರ್ಷಗಳಿಗಿಂತಲೂ ಹಿಂದೆಯೇ ವಿಶ್ವವು ಸೃಷ್ಟಿಯಾಗಿರಬೇಕು. ). ಅಥವಾ ನಕ್ಷತ್ರಗಳ ವಯಸ್ಸಿನ ಲೆಕ್ಕಚಾರ ತಪ್ಪಾಗಿರಬೇಕು. ( ನಕ್ಷತ್ರಗಳ ಗಾತ್ರ, ಅವುಗಳಿಂದ ಬರುತ್ತಿರುವ ಇನ್ಫ್ರಾರೆಡ್‌ ಕಿರಣ, ಬೆಳಕಿನ ವೇವ್‌ಲೆನ್ತ್‌, ಮಾಸ್‌ ಮುಂತಾದವುಗಳ ಮೂಲಕ ನಕ್ಷತ್ರವೊಂದರ ವಯಸ್ಸನ್ನು ಅಳೆಯಲಾಗುತ್ತಿದೆ. ) ಇವೆರಡರಲ್ಲಿ ಯಾವ ಲೆಕ್ಕ ತಪ್ಪಾಗಿದೆ ಅನ್ನೋದನ್ನ ಈಗ ಪತ್ತೆ ಹಚ್ಚುವ ಕೆಲಸ ನಡೆದಿದೆಯಂತೆ.