ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ಜನವರಿ, 2011 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಪ್ರಾಮಾಣಿಕ ಆಯುಕ್ತ ಸಿದ್ಧಯ್ಯ ಎತ್ತಂಗಡಿಗೆ ತಯಾರಿ!

ಬಿಜೆಪಿ ಸುಧಾರಿಸುವಂತೆ ಕಾಣಿಸುತ್ತಿಲ್ಲ. ಬೆಂಗಳೂರು ಮಹಾನಗರ ಪಾಲಿಕೆಯ ಆಯುಕ್ತ ಸಿದ್ಧಯ್ಯ ಅವರನ್ನು ಎತ್ತಂಗಡಿ ಮಾಡಲು ತಯಾರಿ ನಡೆಸಿದ್ದಾರೆ ಯಡಿಯೂರಪ್ಪ. ಇದಕ್ಕೆ ಕಾರಣ ಬೆಂಗಳೂರಿನ ಬಿಜೆಪಿ ಶಾಸಕರಿಗೆ ಕಮಿಷನ್ ಕಡಿಮೆ ಆಗಿರುವುದು. ವಾಸ್ತವ ಏನೆಂದರೆ ಈ ವರ್ಷದಲ್ಲಿ ಅಧಿಕಾರಿಗಳು ಪಟ್ಟಿ ಮಾಡಿದ್ದ "ಅಭಿವೃದ್ಧಿ" ಕೆಲಸಗಳಲ್ಲಿ ಸುಮಾರು ಸಾವಿರದಷ್ಟನ್ನು ಸಿದ್ದಯ್ಯ "ಅನಗತ್ಯ ಖರ್ಚು" ಎಂದು ತೆಗೆದು ಹಾಕಿದ್ದಾರೆ. ಅವು ಎಂತಹ ಕೆಲಸಗಳೆಂದರೆ, ಚೆನ್ನಾಗಿದ್ದ ರಸ್ತೆ ಮೇಲೆ ಮತ್ತೆ ಡಾಂಬರು ಹಾಕುವುದು, ಕಲ್ಲು ಹಾಸಿನ ಫೂಟ್‌ಪಾತ್ ತೆಗೆದು ಟೈಲ್ ಹಾಕುವುದು ಇತ್ಯಾದಿ. ಆದರೆ ಇದರಿಂದ ನಮ್ಮ ಅಭಿವೃದ್ಧಿ ಶೂರರಿಗೆ ಕಮಿಷನ್ ಹೋಯ್ತು ಅಂತ ಹೊಟ್ಟೆ ಉರಿ. ಕೂಡಲೇ ಸಿದ್ಧಯ್ಯ ಅವರ ಮೇಲೆ "ಅಭಿವೃದ್ಧಿ ವಿರೋಧಿ" ಹಣೆಪಟ್ಟಿ ಕಟ್ಟಿಯೇ ಬಿಟ್ಟಿದ್ದಾರೆ. ಎಸ್.ಕೆ. ನಟರಾಜ್ ಎಂಬ ಆಸಾಮಿ ಅರಚಾಡಿ ಆಗಿದೆ. ಈಗ ಭ್ರಷ್ಟರ ಪಾಲಿನ ಆರಾಧ್ಯ ದೈವ ಯಡ್ಡಿ ಸಿದ್ದಯ್ಯ ಅವರ ಎತ್ತಂಗಡಿಗೆ ಮುಹೂರ್ತ ಇಟ್ಟಿದ್ದಾರಂತೆ. ಇದು ಬಿಜೆಪಿ ಮತ್ತೊಂದು ಅಭಿವೃದ್ಧಿ ಮಂತ್ರ.

ಸೂಪರ್ ಸ್ಟಾರ್ ಉಪೇಂದ್ರ !

ಬಹು ನಿರೀಕ್ಷೆಯ ಸೂಪರ್ ಗೆದ್ದಿದೆ. ಇದು ಉಪ್ಪಿಯ ಅಥವಾ ರಾಕ್ಲೈನ್ ವೆಂಕಟೇಶ್ ಅವರಿಬ್ಬರ ಗೆಲುವು ಮಾತ್ರವಲ್ಲ, ಕನ್ನಡ ಚಿತ್ರರಸಿಕರ ಗೆಲುವು ಕೂಡಾ ಹೌದು ಎನ್ನಬಹುದು. ಏಕೆಂದರೆ ಉಪ್ಪಿ ಚಿತ್ರಗಳೆಂದರೆ ಅವು ಬರಿಯ ಚಿತ್ರಗಳಷ್ಟೇ ಅಲ್ಲ, ಅಲ್ಲೊಂದು ಸಂದೇಶವಿದ್ದೇ ಇರುತ್ತದೆ. ಸುಧೀರ್ಘ ಎನ್ನಬಹುದಾದ ಹತ್ತು ವರ್ಷಗಳ ನಂತರ ಉಪೇಂದ್ರ ನಿದರ್ೇಶನಕ್ಕಿಳಿದಿದ್ದರೂ ಸಹ ಸಾಕಷ್ಟು ವ್ಯವಸ್ಥೆ ಮಾಡಿಕೊಂಡೇ ಬಂದಿದ್ದಾರೆ ಎಂಬುದು ಚಿತ್ರವನ್ನು ನೋಡಿದಾಗ ತಿಳಿಯುತ್ತದೆ. ಏಕೆಂದರೆ ಚಿತ್ರರಂಗದೊಳಗೆ ಹೋಗಿ ಕುಳಿತರೆ ನಮಗೆ ಎರಡೂಕಾಲು ಗಂಟೆ ಕಳೆದದ್ದೇ ಗೊತ್ತಾಗುವುದಿಲ್ಲ. ಅಷ್ಟೊಂದು ರಸದೌತಣವನ್ನೀಯುತ್ತದೆ ಸೂಪರ್. ಲೇಟ್ ಆಗಿ ಬಂದ್ರೂ ಲೇಟೆಸ್ಟ್ ಆಗಿ ಬಂದಿದ್ದಾರೆ ಅನ್ನೋದು ಉಪ್ಪಿ ಅಭಿಮಾನಿಗಳ ಮಾತು. ಸೂಪರ್ ಎಂಬ ಚಿಹ್ನೆಯೊಂದಿಗೆ ತೆರೆ ಕಂಡಿರುವ ಈ ಚಿತ್ರ ಕನ್ನಡದ ಮಟ್ಟಿಗೆ ಒಂದು ಹೊಸ ದಾಖಲೆ ಹೌದು. ಏಕೆಂದರೆ ಬೃಹತ್ ಬಜೆಟ್ನಲ್ಲಿ ತಯಾರಾದ ಚಿತ್ರ ಇದು. ಸುಮಾರು ಮೂವತ್ತು ಕೋಟಿ ಬಂಡವಾಳ ಹೂಡಿರುವುದಾಗಿ ನಿಮರ್ಾಪಕ ವಲಯ ಹೇಳಿದೆ. ಇದು ಪ್ರತಿ ಫ್ರೇಮ್ನಲ್ಲೂ ದುಡ್ಡು ಕಾಣಿಸುತ್ತದೆ, ಜೊತೆಗೆ ಉಪೇಂದ್ರ ಕಾರ್ಯಶ್ರದ್ಧೆ. ಈ ಚಿತ್ರದ ಕಥಾ ಹಂದರ ಅಷ್ಟು ಸುಲಲಿತವಾಗಿಲ್ಲ. ಅರ್ಥ ಮಾಡಿಕೊಳ್ಳದಷ್ಟು ಕಷ್ಟವೂ ಇಲ್ಲ. ಹಾಗಂತ ಉಪ್ಪಿ ತಮ್ಮ ಛಾಪು ಬಿಟ್ಟು ಕೊಟ್ಟಿಲ್ಲ. ಆದರೆ ಪ್ರಸ್ತುತ ವಿದ್ಯಮಾನಗಳನ್ನು ಆಧಾರವಾಗಿಟ್ಟುಕೊಂಡು ಈ ರೀತಿಯ ಕಥೆ ಹೆಣೆಯುವುದು ಉಪ್ಪಿಗಷ

ಮುಖ್ಯಮಂತ್ರಿ ಮೇಲೆ ಮೊಖದ್ದಮೆ ದಾಖಲಾಗುತ್ತಾ ?

ಕೊನೆಗೂ ರಾಜ್ಯಪಾಲರು ಒಂದು ಒಳ್ಳೆಯ ಕೆಲಸ ಮಾಡಿದ್ದಾರೆ. ಭ್ರಷ್ಟ ಮುಖ್ಯಮಂತ್ರಿಯೊಬ್ಬನ ಮೇಲೆ ಮೊಖದ್ದಮೆ ದಾಖಲಿಸಲು ಅವಕಾಶ ಕೊಟ್ಟು ಕರ್ನಾಟಕದ ಮಟ್ಟಿಗೆ ಇತಿಹಾಸ ಬರೆದಿದ್ದಾರೆ. ಅಧಿಕಾರದಲ್ಲಿರುವಾಗಲೇ ಮೊಖದ್ದಮೆ ಎದುರಿಸುತ್ತಿರುವ ಎರಡನೇ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ. ಇಂಥಹುದೊಂದು ಧೈರ್ಯದ ಕೆಲಸಕ್ಕೆ ಕೈ ಹಾಕಿದ ಇಬ್ಬರು ನ್ಯಾಯವಾದಿಗಳಿಗೆ ಜಯವಾಗಲಿ. ಅವರು ಮೊಖದ್ದಮೆ ದಾಖಲಿಸಲಿ, ನ್ಯಾಯಾಲಯದಲ್ಲಿ ಯಡ್ಡಿ ಹಗರಣ ಮಾಡಿರುವುದು ನಿರೂಪಿತವಾದರೆ ಈ ಮನುಷ್ಯ ಜೈಲಿಗೆ ಹೋಗಲಿ. ಅದು ಉಳಿದ ರಾಜಕಾರಣಿಗಳಿಗೂ ಪಾಠವಾಗಲಿ. ರಾಜ್ಯ ಉದ್ಧಾರವಾಗಲಿ. ಭ್ರಷ್ಟ ಮುಖ್ಯಮಂತ್ರಿ ಯಡಿಯೂರಪ್ಪ ತನ್ನ ಹಗರಣಗಳಿಗೆ ಎಲ್ಲಿ ಶಿಕ್ಷೆಯಾಗಿ ಹೋಗುತ್ತೋ ಎಂಬ ಭಯದಲ್ಲಿ ತೊಳಲಾಡುತ್ತಿರುವುದು ಗೋಚರವಾಗುತ್ತಿದೆ. ಹಾಗಾಗಿಯೇ ರಾಜ್ಯಪಾಲರ ವಿರುದ್ಧ "ರಾಜ್ಯ ಬಂದ್"ಗೆ ಕರೆ ಕೊಟ್ಟಿದ್ದಾರೆ. ಆದರೆ ಇದರಿಂದ ಆಗುವ ನಷ್ಟ ಇವರಪ್ಪ ತುಂಬಿ ಕೊಡ್ತಾರಾ? ಅಥವಾ ಬಿಜೆಪಿ ತುಂಬಿ ಕೊಡುತ್ತಾ ? ಬಹಳಷ್ಟು ಕಡೆ ಕಲ್ಲು ತೂರಾಟ ನಡೆಯುತ್ತಿದೆ. ಬಸ್‌ಗಳು ಇಲ್ಲ. ಪೊಲೀಸರೇ ಬಂದ್ ನಡೆಸುತ್ತಿದ್ದಾರೆ. ಶಾಲಾ ಕಾಲೇಜು ರಜೆ. ನನ್ನದೇ ಒಂದು ಮುಖ್ಯವಾದ ಕೆಲಸಕ್ಕೆ ಪ್ರಮುಖ ಟೆಕ್ನಿಷಿಯನ್ ಒಬ್ಬರು ಇಂದು ತಮ್ಮ ಸಮಯ ನೀಡಿದ್ದರು. ಬಂದ್‌ನಿಂದ ಆ ಕೆಲಸ ನಿಂತು ಹೋಯ್ತು. ಅವರು ಇನ್ನು ಸಿಗುವುದು ಯಾವತ್ತೋ? ಒಂದೋ ಅವರಿಗಾಗಿ ಕಾದು ನನ್ನ ಸಮಯ ಹಾಳು ಮಾಡಿಕೊಳ್ಳಬೇಕು, ಅಥವಾ ಬೇರೆ ಯಾ

ಮೂಖ ಮನಸ್ಸಿನ ಮರ್ಮರ

ಮನದ ಮರಳುಗಾಡಲ್ಲಿ ಅಳಿದುಳಿದ ಸ್ನೇಹದ ಪಳೆಯುಳಿಕೆ ಜೀವದುಸುರಿಗೆ ಅದುವೇ ಅರಿವಳಿಕೆ ನಳನಳಿಸಿದ ಹೂಮರವೇಕೋ ಅಲುಗಾಡಿಸಿ ಬೀಳಿಸಿತು ಪಕ್ಷಿಯ ಗೂಡ ಸ್ನೇಹಕೂ ಇಲ್ಲದಾಯ್ತೇ ಬೇಡಿಕೆ ನೋಡ. ಅಜರಾಮರ ಗೆಳೆತನವೆಂದುಕೊಂಡದ್ದು ಅರೆಘಳಿಗೆಗೇ ಕರಗುವ ದುರಂತ ಹೃದಯದೊಳಗೆ ಪ್ರಚಂಡ ಚಂಡಮಾರುತ ಅನ್ಯರ ನುಡಿಗೆ ದಿಕ್ಕಟ್ಟು ಹೊರ ನಡೆದಳಾಕೆ ಪಾದ ಹೊರಗಿಟ್ಟು.

ಲೈಫು ಇಷ್ಟೇನೆ V/S ಲವ್ವು ಇಷ್ಟೇನೆ (ಪಂಚರಂಗಿ ಹಾಡು ಅನುಕರಣೆ )

ಇದು ನನ್ನ ಸ್ವಂತ ಬರಹ (ಪಂಚರಂಗಿ ಹಾಡು ಅನುಕರಣೆ ) ಲೈಫು ಇಷ್ಟೇನೆ ಲವ್ವು  ಇಷ್ಟೇನೆ ಲವ್ವು  ಇಷ್ಟೇನೆ ಕಾಲೇಜ್  ಮೆಟ್ಲು ಹತ್ತಿದ ಕೂಡ್ಲೇ ಹುಡುಗಿ ಇರಬೇಕು ಅನಿಸೋದು ಸಹಜ ಹಂಗೂ  ಹಿಂಗೂ ಹುಡುಗಿ ಹುಡುಕೊಂಡು ಹಾಳಾಗ್ಹೋದೇ ಲವ್ವು  ಇಷ್ಟೇನೆ.. ರಾತ್ರಿ ಹಗಲು ಒಂದೂ ತಿಳಿದೇ ಸಿಕ್ಕಾಗಲೆಲ್ಲ  ಮಿಸ್ ಕಾಲ್ ಕೊಟ್ಟು ಮೆಸೇಜ್ ನಲ್ಲಿ ಕಿಸ್ಸು ಮಾಡೋ ಲವ್ವು  ಇಷ್ಟೇನೆ ಅವ್ಳು ಕರೆದ್ಲು ಅಂತಾ ನಿಂದು ಪೆಟ್ರೋಲ್ ಗಾಗಿ ಜೇಬು ಖಾಲಿ ಮಾಡ್ಕೊಂಡು ಕೊನೆಗೆ ಅವಳ ಹಿಂದೆ ಅಲೆಯ ಬೇಕು ಲವ್ವು  ಇಷ್ಟೇನೆ ಕಾಲೇಜ್ ಹುಡುಗ್ರು ಏನೂ ತಿಳಿದೇ ತಪ್ಪು ಮಾಡವ್ರೆ ಅವರೇನು ಮಾಡ್ತಾರೆ ಪಾಪ ಅವರ ವಯಸ್ಸು ಹಿಂಗೆನೆ ಅಪ್ಪ ಅಮ್ಮ ಹೇಳಿದ್ ಕೇಳ್ದೆ ಕಾಲೇಜ್ ಗೆ ಹೋಗ್ದೆ ಫಿಲಂ ಗೆ ಹೋಗಿ exam time ಲ್ಲಿ tention ಮಾಡ್ಕೊಳೋದು ಲವ್ವು  ಇಷ್ಟೇನೆ bath room bed room ಎಲ್ಲಿ ಅಂದ್ರೆ ಅಲ್ಲಿ ಕುಳಿತು ಹುಡುಗಿ ಜೊತೆಗೆ chat ಮಾಡೋ ಲವ್ವು  ಇಷ್ಟೇನೆ ಮಧ್ಯ ರಾತ್ರಿ ಆದ್ರೂ ಕೂಡ ಮಿಸ್ ಕಾಲ್ ಬರುತ್ತೆ ನೋಡು ನಿದ್ದೆ ಮಾಡ್ದೆ ಕಾಲ ತಳ್ಳೋ ಲವ್ವು  ಇಷ್ಟೇನೆ ಲವ್ವು ಮಾಡೋದ್ ತಪ್ಪು ಅಂದ್ರೆ ಬಾಳೋದು ಹೇಗ್ಹೇಳಿ ಲವ್ವು ಮಾಡು ಹಾಳಾಗ್ ಬೇಡ ಅಂದ್ರೆ ok ನೇ ಊಟ ಬೇಡ ನಿದ್ದೆ ಬೇಡ ಅವಳ ನೆನಪೇ ಬಂದು ನೀನು week  body ಆಗ್ತಿಯ ನೀನು ಲವ್ವು  ಇಷ್ಟೇನೆ ಹುಡುಗಿ ಜೊತೆಗೆ ಜಗಳ ಮಾಡ್ಕೊಂಡ್ Bar ಗೆ ಹೋಗಿ ಬೀಯರ್ ಕುಡುಕೊಂಡು Pack ಗಟ್ಲೆ ಸಿಗರೇಟ್ ಸೇದ್ಕೊಂಡ್ ಫೀಲ್ ಆಗ

ಯಾರು ನಿನ್ನ ಒಂದು ಚಿತ್ರದಂತೆ ಗೀಚಿ ಹೋದವರು?

ಯಾರು ನಿನ್ನ ಒಂದು ಚಿತ್ರದಂತೆ ಗೀಚಿ ಹೋದವರು? ಆ ರವಿವರ್ಮನಾ? ಇಲ್ಲ ಸಾಕ್ಷಾತ್ ಬ್ರಹ್ಮಾನಾ? ಯಾರು ನಿನ್ನ ಕೆನ್ನೆ ಮೇಲೆ ಕುಳಿಯನಿಟ್ಟವರು? ಆ ಮದನನೇನಾ? ಅಥವಾ ಕಳ್ಳ ಕೃಷ್ಣನಾ? ಹುಬ್ಬು ತೀಡಿ ಕಾಮನ ಬಿಲ್ಲ ಹೊಸೆದವರ್ಯಾರೋ? ಕಣ್ಣ ಜೋಡಿ ತಂದು ಇಟ್ಟು ಮೋಡಿ ಮಾಡಿದೋರ್ಯಾರೋ? ಬೆಣ್ಣೆ ಮುದ್ದೆ ಜಾರಿ ಬಂದು ನಿನ್ನ ನಯ ಕೆನ್ನೆಯಾಯ್ತೋ. ಮೇಘದ ತುಂಡು ತಂದು ಮುಂಗುರಳ ಮಾಡಲಾಯ್ತೋ? ತುಟಿಯ ರಂಗು ಸೂರ್ಯ ತಾನೇ ಸಂಜೆ ತಂದು ಕೊಟ್ಟನೋ? ಆ ಮುಗುಳು ನಗು ಚಂದ್ರ ಪೌರ್ಣಿಮೆಗೆ ಕಳೆದುಬಿಟ್ಟನೋ? ಗುಲಾಬಿ ರಂಗು ನಿನ್ನ ಮೊಗದಿ ತನ್ನ ಅಂದ ಚೆಲ್ಲಿತೋ ಕೋಗಿಲೆ ತನ್ನ ಧ್ವನಿಯ ನಿನಗೆಂದೇ ಧಾರೆಯೆರೆಯಿತೋ?

ಬ್ಲಾಗರ್‌ಗಳೆಂಬ ಜರ್ನಲಿಸ್ಟುಗಳಿಗೆ ಜಯವಾಗಲಿ

ಇವರು ಪತ್ರಕರ್ತರಲ್ಲ, ಆದರೂ ಪತ್ರಕರ್ತರು. ಇವರು ಪತ್ರಿಕೋದ್ಯಮಿಗಳಲ್ಲ, ಆದರೂ ಪತ್ರಿಕೋದ್ಯಮಿಗಳು. ಇವರು ಬ್ಲಾಗರ್‌ಗಳು. ಪರ್ಯಾಯ ಮಾಧ್ಯಮವನ್ನು ಕಟ್ಟಿಕೊಂಡವರು. ಇವರು ತಮ್ಮ ಪಾಡಿಗೆ ತಾವು ಬರೆಯುತ್ತಾರೆ. ಪಿಕ್ನಿಕ್ಕಿಗೆ ಹೋಗಿ ಬಂದ ಖುಷಿ, ಮನೆಯಲ್ಲಿ ಮಗು ಹುಟ್ಟಿದ ಸಡಗರ, ಕಸದ ತೊಟ್ಟಿಯಲ್ಲಿ ಎಸೆಯಲ್ಪಟ್ಟು ಸತ್ತ ಮಗುವಿನ ಕುರಿತ ಮರುಕ, ಹೊಸದಾಗಿ ಓದಿದ ಕವಿತೆಯ ಕನವರಿಕೆ, ಮನೆಯಲ್ಲಿ ಘಟಿಸಿದ ಸಾವಿನ ವಿಷಾದ, ರಸ್ತೆ ಅಪಘಾತದಲ್ಲಿ ಸತ್ತೋದವರ ಕುರಿತು ನೋವು, ಹಬ್ಬಗಳ-ವಿವಿಧ ಡೇಗಳ ಸಂಭ್ರಮ, ಹೊಸದಾಗಿ ಶಾಪಿಂಗ್ ಮಾಡಿದ ವಸ್ತುಗಳ ವಿವರ, ರಾತ್ರಿಯಷ್ಟೇ ಕಂಡ ದುಃಸ್ವಪ್ನದ ಕಿರಿಕಿರಿ... ಹೀಗೆ ಎಲ್ಲವನ್ನೂ ಹಂಚಿಕೊಳ್ಳುತ್ತಾರೆ. ಇವರ ಬ್ಲಾಗುಗಳಿಗೆ ಇವರೇ ಮಾಲೀಕರು, ಇವರೇ ಸಂಪಾದಕರು, ಇವರೇ ಉಪಸಂಪಾದಕರು, ಇವರೇ ವರದಿಗಾರರು, ಇವರೇ ಡಿಟಿಪಿ ಆಪರೇಟರ್‌ಗಳು. ಯಾರ ಅಂಕೆಯಲ್ಲಿ ಇವರಿಲ್ಲವಾದರೂ ತಮ್ಮ ತಮ್ಮ ಅಂಕೆಯಲ್ಲಿ ಇದ್ದು ಬರೆಯುವವರು. ಇಲ್ಲಿನ ಬರವಣಿಗೆಯೂ ಅಷ್ಟೆ. ಅದಕ್ಕೆ ಯಾವುದರ ಹಂಗೂ ಇಲ್ಲ. ಎದೆ ಬಿಚ್ಚಿ ಹೇಳಲು ಕವಿತೆ, ದೊಡ್ಡದೇನನ್ನೋ ಹೇಳಲು ಸಣ್ಣ ಕತೆ, ಆತ್ಮಕಥನದ ಧಾಟಿಯ ಹರಟೆಗಳು, ಸೀರಿಯಸ್ಸಾದ ಪ್ರಬಂಧಗಳು... ಹೇಳುವುದಕ್ಕೆ ಸಾವಿರ ವಿಧಾನ, ಓದುವವರಿಗೆ ವ್ಯವಧಾನವಿರಬೇಕು ಅಷ್ಟೆ. ಈ ಬ್ಲಾಗರ್‌ಗಳು ಸದಾ ಕ್ರಿಯಾಶೀಲರು. ಒಂದು ಪೋಸ್ಟಿನ ಹಿಂದೆ ಮತ್ತೊಂದು ಪೋಸ್ಟು ಒದ್ದುಕೊಂಡು ಬರುತ್ತಿದ್ದಂತೆ ಪುಳಕ. ಒಂದೊಂದು ಕ

ಆಟವೋ ಆಟ

ದಿನ ದಿನವೂ ಸಂಸಾರ ಜಂಜಾಟ ಜೊತೆಗೆ ಸವಿಯಲೊಂದಿಷ್ಟು ತುಂಟಾಟ ತುಂಟ ಗೆಳೆಯರ ಕಾಟ ಕೂತು ನೋಡಿದ ನೆನಪಿನ ಬಯಲಾಟ ಪ್ರೀತಿ ವಂಚಿಸಿದ ಹೃದಯದ ತೊಳಲಾಟ ಬದುಕಲ್ಲಿ ಸಿಹಿ ಕಹಿಗಳ ಪೀಕಲಾಟ ಯೌವ್ವನಗಿತ್ತಿಯರ ಓರೆ ಕೋರೆ ನೋಟ ಮನಸೆಳೆವ ಮದನೆಯರ ಮೈಮಾಟ ಬದುಕು ಓಡಿಸಿದೆಡೆಗೆ ನಿಲ್ಲದ ಓಟ ನಿಂತಲ್ಲಿ ಸಿಕ್ಕವರೊಂದಿಗೆ ಸ್ನೇಹಕೂಟ ಅನಿಸುತ್ತೆ ಕೆಲವೊಮ್ಮೆ ಇದೆಲ್ಲಾ ಬಂಡಾಟ ಆದರೂ ಬಿಡೆವು ಸಾಯುವ ತನಕ ಮೊಂಡಾಟ ಬದುಕೊಂದು ನಿಲ್ಲದ ಹಾವು ಏಣಿಯಾಟ ದಿನವೂ ಉಂಟಿಲ್ಲಿ ಕಷ್ಟ ಸುಖಗಳ ಸವಿಯೂಟ

ವಿಶ್ವೇಶ್ವರ ಭಟ್ಟರ ಜಾಲತಾಣ

ಕನ್ನಡದ ವಿಶಿಷ್ಟ ಸಂಪಾದಕ ವಿಶ್ವೇಶ್ವರ ಭಟ್ಟರು ವಿಜಯಕರ್ನಾಟಕ ಪತ್ರಿಕೆಯನ್ನು ಬಿಟ್ಟ ನಂತರ ಒಂದು ಉತ್ತಮವಾದ ಕನ್ನಡ ಜಾಲತಾನವನ್ನು ಶುರು ಮಾಡಿದ್ದಾರೆ. http://vbhat.in/ ಇದರಲ್ಲಿ ಇವರ ಬಗ್ಗೆ, ಲೇಖನಗಳ ಬಗ್ಗೆ, ಏನು ಮಾಡುತ್ತಿದ್ದಾರೆ, ಮುಂದೇನು ಮಾಡುತ್ತಾರೆ ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿ ಇದೆ. ಹಾಗೆಯೇ ವಿಕ ದಲ್ಲಿ ಪ್ರಕಟಗೊಳ್ಳುತ್ತಿದ್ದ ಭಟ್ಟರ ಜನಪ್ರಿಯ ಅಂಕಣಗಳಾದ ಜನಗಳ ಮನ, ಸುದ್ದಿಮನೆ ಕತೆ, ನೂರೆಂಟು ಮಾತು ಮುಂತಾದ ಅಂಕಣಗಳೂ ಲಭ್ಯ ಇವೆ.