ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ಮೇ, 2014 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ದುನಿಯಾ ವಿಜಿಯ ಸಾಮಾಜಿಕ ಬದುಕು !

​ನೀವು ಎಷ್ಟೋ ನಟ ನಟಿಯರ ಫೇಸ್‌ಬುಕ್ ಪ್ರೊಫೈಲ್ ಪುಟ ನೋಡಿರಬಹುದು. ಅವರೊಂದಿಗೆ ಅಲ್ಲಿ ಗೆಳೆತನವನ್ನೂ ಸಾಧಿಸಿರಬಹುದು. ಆದರೆ ಅವರು ಹಂಚಿಕೊಳ್ಳುವ ವಿಷಯ, ಚಿತ್ರಗಳಾದರೂ ಎಂಥವು ? ನಟರಾದರೆ ತಾನು ಇತ್ತೀಚಿಗೆ ನಟಿಸಿರುವ, ನಟಿಸುತ್ತಿರುವ ಚಿತ್ರಗಳಲ್ಲಿ ತಾನು ಮಾಡಿದ ಪಾತ್ರಗಳ ಚಿತ್ರ, ನಟಿಯರನ್ನು ತಬ್ಬಿಕೊಂಡಿರುವ ಚಿತ್ರ, ನೃತ್ಯ, ಸಾಹಸ ಮಾಡುತ್ತಿರುವ ಚಿತ್ರಗಳನ್ನು  ಹಂಚಿಕೊಳ್ಳುತ್ತಾರೆ. ಅದೇ ನಟಿಯರಾದರೆ ಅವರೂ ಕೂಡಾ ಇತ್ತೀಚಿನ ತಮ್ಮ ಚಿತ್ಗಳ ಬಗ್ಗೆ, ದೊಡ್ಡ ದೊಡ್ಡ ನಟರ ಜೊತೆ ಅವಕಾಶ ಸಿಕ್ಕಿರುವುದರ ಬಗ್ಗೆ, ಅಲ್ಲಿ ಇಲ್ಲಿ ಸುತ್ತಾಡಿ ಸಂತೋಷಗೊಂಡಿದುದರ ಬಗ್ಗೆ ಹಾಗೂ ಯಥಾ ಪ್ರಕಾರ ತಮ್ಮ ವಿವಿಧ ಭಂಗಿಗಳ ಚಿತ್ರಗಳಲ್ಲಿ ಎದೆ, ಸೊಂಟ, ಕಾಲುಗಳನನ್‌ಉ ತೋರಿಸುತ್ತಾ ದಿನನಿತ್ಯ ಪ್ರಕಟಣೆಗಳನ್ನು ಹಂಚಿಕೊಳ್ಳುತ್ತಾರಷ್ಟೇ ? ಇದಕ್ಕೆ ಹೊರತಾದ ನಟ-ನಟಿಯರು ತೀರಾ ಕಡಿಮೆ ಎಂದೇ ಹೇಳಬೇಕು. ಆದರೆ ನಾನು ಕಂಡ ಸಿನೆಮಾ ನಟ ನಟಿಯರ ಫೇಸ್‌ಬುಕ್ ಪ್ರೊಫೈಲ್‌ಗಳಲ್ಲಿ ದುನಿಯಾ ವಿಜಿ ಅವರ ಪ್ರೊಫೈಲ್ ಮಾತ್ರ ವಿಭಿನ್ನ! ಇವರ ಪ್ರೊಫೈಲ್‌ನಲ್ಲಿ ಚಿತ್ರ ಜೀವನಕ್ಕಿಂತಲೂ ನಿಜ ಜೀವನದ ವಿವಿಧ ಮುಳ್ಳಿನ ಮಗ್ಗುಲುಗಳನ್ನು ತೆರೆದಿಡುತ್ತಿದ್ದಾರೆ. ಇವರ ಪ್ರೊಫೈಲ್ ವೀಕ್ಷಿಸಿದರೆ ಒಬ್ಬ ನಟನ ಪ್ರೊಫೈಲ್ ನೋಡುತ್ತಿರುವುದರ ಬದಲಾಗಿ ಒಬ್ಬ ಸಮಾಜ ಸೇವಕನ ಪ್ರೊಫೈಲ್ ನೋಡುತ್ತಿರುವಂತೆ ಭಾಸವಾಗುತ್ತದೆ. ಚಿತ್ರರಂಗದಲ್ಲಿನ ಅನೇಕರ ಕಷ್ಟ ಕಾರ್ಪಣ್ಯಗಳಿಗೆ ಮಿಡಿಯುವ ಇವರು ಅಲ್

ಈ ಚುನಾವಣೆಯಲ್ಲಿ ನಡೆಯಿತೇ ಮೆಘಾ ಮೋಸ ?!

​ ಆಶ್ಚರ್ಯವೇ ? ವಾರಣಾಸಿ ಕ್ಷೇತ್ರದ ಮತದಾನದ ಈ ಲೆಕ್ಕಾಚಾರ ಗಮನಿಸಿ : ವಾರಣಾಸಿ ಕ್ಷೇತ್ರದ ಮತದಾರರ ಸಂಖ್ಯೆ : 15,32,438 ಮತ ಚಲಾಯಿಸಿದವರು ಶೇ. 55.63% = ಅಂದರೆ ಸುಮಾರು 8,52,496 ಇದರಲ್ಲಿ ಮೋದಿ ಪಡೆದಿರುವುದು = 5,81,022 ಉಳಿದವರಿಗೆ ಹೋಗಿರುವ ಮತಗಳು = 4,49,627 ಇಬ್ಬರಿಗೂ ಸೇರಿ (ಮೋದಿ + ಉಳಿದವರು) = 10,30,649 ಮತ ಚಲಾವಣೆ ಆಗಿದ್ದು 8,52,496, ಆದರೆ ಎಣಿಕೆ ಆಗಿದ್ದು 10,30,649 ?! ಇದು ಹೇಗೆ ಸಾಧ್ಯ ? ಈ ಒಂದೂವರೆ ಲಕ್ಷಕ್ಕೂ ಹೆಚ್ಚು ಮತಗಳು ಎಲ್ಲಿಂದ ಬಂದವು ? ನನ್ನ ಲೆಕ್ಕದಲ್ಲಿ ಏನಾದರೂ ತಪ್ಪಿದ್ದರೆ ದಯವಿಟ್ಟು ತಿಳಿಸಿ. 

ಹೊಸ ಸರ್ಕಾರ, ಹಳೆ ಆಶಯಗಳು !

​ಎನ್‌.ಡಿ.ಎ.ಗೆ ಸ್ಪಷ್ಟ ಬಹುಮತ ಬಂದಿರುವುದರಿಂದ ಕೆಲವೊಂದು ವಿಷಯಗಳು ಸ್ಪಷ್ಟವಾಗಿವೆ.  ೧. ಅತಂತ್ರ ಲೋಕಸಭೆ ಏನಾದರೂ ಆಗಿದ್ದರೆ ಅದರಿಂದ ದೇಶಕ್ಕೆ ತುಂಬಾ ನಷ್ಟವೇ ಆಗುತ್ತಿತ್ತು.  ೨. ರಾಹುಲ್‌ / ಸೋನಿಯಾಗಾಂಧಿಗೆ ಪಕ್ಷವನ್ನು/ದೇಶವನ್ನು ಮುನ್ನಡೆಸುವಂತಾ ಶಕ್ತಿ ಇಲ್ಲ ಅನ್ನುವುದು ಸಾಬೀತಾಯ್ತು. ೩. ಹತ್ತಾರು ವರ್ಷಗಳಿಂದ ಒಂದೇ ಪಕ್ಷದ ಅಧಿಕಾರ ಇರುವುದು ಕೂಡಾ ಉತ್ತಮ ಬೆಳವಣಿಗೆ ಅಲ್ಲ. ಅದರಲ್ಲೂ ೨ಜಿ, ಕಾಮನ್‌ವೆಲ್ತ್‌ನಂತಹ ಲಕ್ಷಾಂತರ ಕೋಟಿ ರೂಪಾಯಿಗಳ ಹಗರಣ ನಡೆದ ಬಳಿಕವೂ ಯುಪಿಎ ಯನ್ನು ಮುಂದುವರಿಸಿದ್ದರೆ ಅದು ಅವರ ಭ್ರಷ್ಟಾಚಾರಕ್ಕೆ ನೀಡುವ ಕುಮ್ಮಕ್ಕಿನಂತೆ ಆಗುವ ಸಾಧ್ಯತೆ ಇತ್ತು. ೪. ಕಾಂಗ್ರೆಸ್ ಅಲ್ಪಸಂಖ್ಯಾತರ ಮತಬ್ಯಾಂಕ್ ರಾಜಕಾರಣ ಮಾಡುತ್ತಾ ಬಂದಿರುವುದೇ ಬಹುಸಂಖ್ಯಾತರು ಬಿಜೆಪಿಯತ್ತ ಒಲಿಯಲು ಪ್ರಮುಖ ಕಾರಣ.  ೫. ಕಾಂಗ್ರೆಸ್ ಮಾಡಿದ ಒಳ್ಳೆಯ ಕೆಲಸಗಳನ್ನೂ ಪ್ರಚಾರ ಮಾಡದೇ ಕೇವಲ ರಾಹುಲ್‌ಗಾಂಧಿ ಬಜನೆಯಲ್ಲಿ ತೊಡಗಿದ್ದು ಮತ್ತೊಂದು ತಪ್ಪು. (ನೆಹರು ಕುಟುಂಬದಿಂದ ಆ ಪಕ್ಷ ಹೊರ ಬಾರದಿದ್ದುದರ ಪರಿಣಾಮ ಇದು) ೫. ಆಮ್ ಆದ್ಮಿ ಪಕ್ಷ ಸ್ಪಷ್ಟ ದಾರಿಯನ್ನು ಕಂಡುಕೊಳ್ಳಲಿಲ್ಲ. ಅದೂ ಕೂಡಾ ಕೇಜ್ರೀವಾಲ್ ಕೇಂದ್ರೀಕೃತವಾಯ್ತು, ಅಲ್ಲದೇ 'ಆಮ್ ಆದ್ಮಿ' ಎಂಬ ಹೆಸರೇ ಹಿಂದಿಯೇತರ ರಾಜ್ಯಗಳಿಗೆ ಪರಕೀಯವೆನ್ನಿಸುತ್ತದೆ. ಅದೇನೇ ಇದ್ದರೂ ಜನರ ತೀರ್ಮಾನವೇ ಅಂತಿಮ. ಮುಂಬರುವ ಸರ್ಕಾರ, ಪ್ರಧಾನಿ ಜನರ/ದೇಶದ ಆಶೋತ್ತರಗಳಿಗೆ ಸ್ಪಂದ

ಶಿಕ್ಷಣ ಮಾಫಿಯಾ !

​ ಏಪ್ರಿಲ್ ಕಳೆದು ಮೇ ಬಂತೆಂದರೆ ಮಕ್ಕಳಿರುವ ಮನೆಯಲ್ಲಿ ತಲ್ಲಣ ಶುರುವಾಗುತ್ತದೆ. ಅದು ಮಕ್ಕಳನ್ನು ಶಾಲೆಗೆ ಸೇರಿಸುವ, ಅಥವಾ ಮುಂದಿನ ತರಗತಿಗೆ ಶುಲ್ಕ ತುಂಬುವ ತಲ್ಲಣ. ಕೆಲವೇ ವರ್ಷಗಳ ಹಿಂದಿನವರೆಗೂ ವಿದ್ಯೆ ಇಷ್ಟೊಂದು ದುಬಾರಿಯಾಗಿರಲಿಲ್ಲ. ಬಡ ಹಾಗೂ ಮಧ್ಯಮ ವರ್ಗದವರಿಗೆ ಉನ್ನತ ಶಿಕ್ಷಣವೊಂದು ಕೈಗೆಟುಕದ ಹಾಗಿತ್ತು ಅನ್ನುವುದನ್ನು ಬಿಟ್ಟರೆ ಪ್ರಾಥಮಿಕ ಶಿಕ್ಷಣವಾಗಲೀ ಪ್ರೌಢ ಶಿಕ್ಷಣವಾಗಲೀ ಅಥವಾ ಕಾಲೇಜು ವಿದ್ಯಾಭ್ಯಾಸವಾಗಲೀ - ಇವ್ಯಾವೂ ದುಬಾರಿ ಅನ್ನಿಸುತ್ತಲೇ ಇರಲಿಲ್ಲ. ಹಾಗಾಗಿ ಮನೆಯ ಮಕ್ಕಳು ಕಾಲೇಜು ಶಿಕ್ಷಣ ಮುಗಿಸುವವರೆಗೂ ಮನೆ ಮಂದಿಗೆ ಓದಿಸುವ ತಲೆ ಬಿಸಿ ಅಂತ ಏನೂ ಅನ್ನಿಸುತ್ತಿರಲಿಲ್ಲ. ಓದುವವರಿಗಷ್ಟೇ ಅದು ಇರುತ್ತಿದ್ದುದು.  ಆದರೆ ಈಗೇನಾಗಿ ಹೋಗಿದೆ ? ವಿದ್ಯೆಯನ್ನ ಯಾರೂ ಕದಿಯಲಾಗದು, ಕದಿಯಲಾಗದ ವಸ್ತು ವಿದ್ಯೆ-ಸರಸ್ವತಿ ಎಂದೆಲ್ಲಾ ಹೇಳಲಾಗುತ್ತಿತ್ತು. ಶಿಕ್ಷಣ ಅಥವಾ ವಿದ್ಯೆ ಎಂದು ಹೇಳಲ್ಪಡುವ ವಿಷಯ ದೇಶದ ಪ್ರಮುಖ ವ್ಯಾಪಾರಗಳ ಪಟ್ಟಿಯಲ್ಲಿ ಮುಂಚೂಣಿಯಲ್ಲಿದೆ. ಹಿಂದೆ ವರ್ತಕರು ದಿನಸಿ ಅಂಗಡಿ ಇಟ್ಟರೆ ನಷ್ಟ ಬಾರದು ಎಂದು ಹೇಳುತ್ತಿದ್ದರು. ಆ ಮಾತು ಈಗ ಶಾಲೆಯೊಂದನ್ನು ತೆರೆದರೆ.. ಎಂಬಂತೆ ಮಾರ್ಪಾಟಾಗಿದೆ. ಬೇರೆ ಯಾವ ವ್ಯವಹಾರ ಮಾಡಲು ತೊಡಗಿದರೂ ನಷ್ಟವೇರ್ಪಡುವ ಅವಕಾಶ ಇದೆ. ಆದರೆ ಶಾಲೆಯೊಂದನ್ನು ತೆರೆದುದೇ ಆದರೆ ಯಾವ ಕಾರಣಕ್ಕೂ ನಷ್ಟ ಎಂಬುದಿಲ್ಲ. ಏಕೆಂದರೆ ಇದೊಂದು ಪಕ್ಕಾ ವ್ಯಾಪಾರಿ ಸರಕಾಗಿ ಬದಲಾಗಿ ಹೋಗಿದೆ.