ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ಅಕ್ಟೋಬರ್, 2011 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಪೀಠ ಇಷ್ಟೊಂದು ಘಾಟಾ ?

ಜ್ಞಾನಪೀಠ ಬಂದಿದ್ದು ಕಂಬಾರರಿಗಾದರೆ ಅದರಿಂದ ತಲೆ ಬಿಸ ಮಾಡಿಕೊಂಡಿರುವ ವ್ಯಕ್ತಿಗಳೇ ಬೇರೆಯವರು. ಕನ್ನಡಕ್ಕೆ ಎಂಟನೇ ಜ್ಞಾನಪೀಠ ಪ್ರಶಸ್ತಿ ಬಂತು ಎಂದು ನಾವು ಖುಷಿ ಪಡುವ ಹೊತ್ತಿಗೇ ಅದರಲ್ಲೊಂದು ಕಿಡಿ ಮತ್ತು ಹೊಗೆ ಶುರುವಾಗಿ ಕನ್ನಡ ಸಾಹಿತ್ಯ ಲೋಕವನ್ನು ಮಸುಕಾಗಿಸುತ್ತಿರುವುದು ವಿಪರ್ಯಾಸ. ಪೀಠ ಬಂದ ಖುಷಿಯಲ್ಲಿ ಕಂಬಾರರಿದ್ದರೆ ಭೈರಪ್ಪರಿಗೆ ಎಲ್ಲಿ ಬಂದು ಬಿಡುತ್ತೋ ಅನ್ನುವ ಆತಂಕದಲ್ಲಿ ಅನೇಕರಿರುವಂತೆ ತೋರುತ್ತಿದೆ. ಕಂಬಾರರಿಗೆ ಪ್ರಶಸ್ತಿ ಕೊಟ್ಟಿದ್ದಕ್ಕೇ ಪಾಟೀಲ ಪುಟ್ಟಪ್ಪ ಗರಮ್ ಆಗಿ ಮೊದಲಿಗೆ ತಲ್ಲಣ ಉಂಟು ಮಾಡಿದರು. "ಹೋಗಿ ಹೋಗಿ ಇವರಿಗೆ ಕೊಡೋದಾ ?" ಎಂಬ ಪಾಪುರವರ ಪಾಪದ ಮಾತಲ್ಲಿ ತನಗೆ ಬರಲಿಲ್ಲ ಅನ್ನುವ ನೋವಿತ್ತೋ, ಅಥವಾ ಕಂಬಾರರಿಗೆ ಬಂದೋಯ್ತಲ್ಲ ಅನ್ನುವ ಹೊಟ್ಟೆಕಿಚ್ಚು ಇತ್ತೋ ಗೊತ್ತಾಗಲಿಲ್ಲ. ಆದರೆ ಅಗ್ನಿ ಶ್ರೀಧರ‍್ ಮತ್ತು ನಿಡುಮಾಮಿಡಿ ಸ್ವಾಮೀಜಿಗಳಂತವರು ಜ್ಞಾನಪೀಠ ಹೊತ್ತು ತಂದ ಕಂಬಾರರ ತಲೆಯನ್ನು ನೇವರಿಸುವುದು ಬಿಟ್ಟು ಬೈರಪ್ಪರ ಜುಟ್ಟು ಹಿಡಿದು ಅಲ್ಲಾಡಿಸ ಹೊರಟಿದ್ದು ಅತಿರೇಕವೆನ್ನಿಸದಿರದು. ಹೇಳಿ ಕೇಳಿ ಅದು ಖಾಸಗಿ ಸಂಸ್ಥೆ ನೀಡುವ ಒಂದು ಪ್ರಶಸ್ತಿ. ಅದನ್ನು ಅವರಿಗೆ ಕೊಡಬಾರದು, ಇವರು ಸತ್ತ ನಂತರ ಬೇಕಾದರೆ ಕೊಡಲಿ ಎಂದೆಲ್ಲಾ ಹೇಳಿದ್ದು ಸರಿಯಲ್ಲ. ಪ್ರಶಸ್ತಿಯ ಬಗ್ಗೆ ಈಗಾಗಲೇ ಲಾಬಿಯ ಕಳಂಕ ತಟ್ಟಿರುವುದೇನೋ ಹೌದು. ಹಾಗಂತ ಅವರೇನೂ ಕಣ್ಣು ಮುಚ್ಚಿಕೊಂಡು ಪ್ರಶಸ್ತಿ ನೀಡುತ್ತಾರೆಯೇ ? ನೂರಕ್ಕೆ

ಕೊನೆಗೂ ಜೈಲು ಸೇರಿದ ಮಹಾಭ್ರಷ್ಟ !

ಕರ್ನಾಟಕ ಕಂಡ ಮಹಾ ಭ್ರಷ್ಟ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಕೊನೆಗೂ ಜೈಲು ಮುದ್ದೆ ಮುರಿಯಲು ಹೋಗುವ ಮೂಲಕ ರಾಜ್ಯಕ್ಕೆ ಆಶಾಕಿರಣ ಮೂಡಿಸಿದ್ದಾರೆ. ಇವರ ರೈತಪರ ಹೋರಾಟವನ್ನು ನೋಡಿ ಮೆಚ್ಚಿದ ಜನತೆ ಕುಮಾರಸ್ವಾಮಿಯನ್ನು ಮೂಲೆಗೆಸೆದು ಮುಖ್ಯಮಂತ್ರಿ ಗಾದಿ ಮೇಲೆ ಕೂರಿಸಿದ್ದೇನೋ ಸರಿ. ಆದರೆ ಅದರ ನಂತರ ಈ ಮನುಷ್ಯ ಬದಲಾದ ಪರಿ ನೋಡಿದರೆ ಊಸರವಳ್ಳಿಯೂ ನಾಚಿಕೊಳ್ಳುತ್ತೆ. ಅಂತಹ ಹೋರಾಟದ ಹಿನ್ನೆಲೆಯ ವ್ಯಕ್ತಿ ಇವರೇನಾ ? RSS ನಿಂದ ಬಂದವರು ಇವರೇನಾ ಅನ್ನಿಸಿದ್ದು ಸುಳ್ಳಲ್ಲ. ಅಧಿಕಾರಕ್ಕೆ ಬರುತ್ತಿರುವಂತೆಯೇ ಶೋಭಾಳನ್ನು ಬಗಲಲ್ಲಿಟ್ಟುಕೊಂಡು ಮಾಡಬಾರದ ಅನಾಚಾರಕ್ಕಿಳಿದ ಯಡ್ಡಿ ಫಕತ್ತು ನುಂಗಲು ಕುಳಿತುಬಿಟ್ಟರು. ಅಭಿವೃದ್ಧಿಯ ಹೆಸರಲ್ಲಿ ತಾವು ಮತ್ತು ತಮ್ಮ ಕುಟುಂಬವನ್ನು ಅಭಿವೃದ್ದಿ ಮಾಡಿಕೊಂಡರು. ಇದಕ್ಕೆ ತಮ್ಮ ಜಾತಿಯನ್ನು ಕೋಟೆಯನ್ನಾಗಿ ಬಳಸಿಕೊಂಡರು. ಇದಕ್ಕಾಗಿ ಐನಾತಿ ಸ್ವಾಮೀಜಿಗಳಿಗೆ ಕೋಟ್ಯಾಂತರ ರೂಪಾಯಿ ಬಿಟ್ಟಿ ಹಣ ನೀಡಿ ಜಾತಿಯ ಜನರನ್ನು ಏಮಾರಿಸಲು ಉಪಯೋಗಿಸಿಕೊಂಡರು. ಇಂತಹ ಹಲಾಲುಖೋರ ಯಡಿಯೂರಪ್ಪ ಕೊನೆಗೂ ಜೈಲೂಟ ಉಣ್ಣಲು ಕಂಬಿ ಹಿಂದೆ ಚಕ್ಕಳಮಕ್ಕಳ ಹಾಕಿರುವುದು ಉಳಿದ ರಾಜಕಾರಣಿಗಳಿಗೆ, ಮುಖ್ಯಮಂತ್ರಿಗಳಿಗೆ ಪಾಠವಾಗಲಿ. ನ್ಯಾಯಾಲಯಕ್ಕೆ ಒಂದು ಧನ್ಯವಾದಗಳು. ಇಂತಹ ನೀತಿಗೆಟ್ಟ ಜಾತೀವಾದಿ ಹಲಾಲುಟೋಪಿ ರಾಜಕಾರಣಿ ಹಿಂದೆ ಬಂದಿರಲಿಲ್ಲ, ಮುಂದೆಯೂ ಬರುವುದು ಬೇಡ. ಹಾಗೆಯೇ ಕೇವಲ ಜಾತಿ ಕಾರಣಕ್ಕೆ ಭ್ರಷ್ಟರನ್ನೂ ಬೆಂಬಲಿಸುವ ಮಠಾಧೀಶರಿಗ