ದಾವಣಗೆರೆಯ ಆ ಹುಡುಗಿ ನನಗೆ ಪರಿಚಯವಾಗಿದ್ದು ಸುಮಾರು ಐದು ವರ್ಷಗಳ ಹಿಂದೆ. ಆಗ ಆಕೆ ಏಳನೇ ತರಗತಿ ಓದುತ್ತಿದ್ದಳು. ಒಂದು ದಿನ ಅವರ ಚಿಕ್ಕಪ್ಪನಿಗೆ ಮಾಡಿದ ಕರೆ ಗುರಿ ತಪ್ಪಿ ನನ್ನ ಮೊಬೈಲಿಗೆ ಬಂದಿತ್ತು. ರಾಂಗ್ ನಂಬರ್ ಅಂದರೂ ಕೇಳದೇ "ತಮಾಷೆ ಮಾಡ್ತಿದೀರ" ಅಂತ ಮಾತು ಮುಂದುವರಿಸಿದಳು. ನಾನು ನಿನ್ನ ಚಿಕ್ಕಪ್ಪ ಅಲ್ಲ ಅಂತ ಆಕೆಯನ್ನು ನಂಬಿಸಲು ಒಂದರ್ಧ ಗಂಟೆಯೇ ಹಿಡಿದಿತ್ತು. ಆಮೇಲೆ ಸ್ವಲ್ಪ ಸಮಯದ ನಂತರ ಮತ್ತೆ ಕರೆ ಮಾಡಿದ ಆಕೆ "ಸ್ಸಾರಿ" ಕೇಳಿದಳು. ಸರಿ ಅಂತ ನಾನೂ ಸುಮ್ಮನಾದೆ. ಆದರೆ ಕೆಲ ದಿನಗಳ ನಂತರ ಮತ್ತೆ ಕರೆ ಮಾಡಿದ ಹುಡುಗಿ "ನಿಮ್ಮ ನಂಬರ್ ಚೆನ್ನಾಗಿದೆ, ಹಾಗಾಗಿ ನೆನಪಲ್ಲಿ ಇತ್ತು. (ಅವಳ ಚಿಕ್ಕಪ್ಪನ ನಂಬರಿಗೆ ಸಮೀಪದ್ದು ಬೇರೆ.) ಅದಕ್ಕೆ ಮತ್ತೊಮ್ಮೆ ಮಾತಾಡಿಸೋಣ ಅಂತ ಕಾಲ್ ಮಾಡಿದೆ" ಅಂದಳು. ಈ ಸಲ ನಾನೂ ಕುಶಿಯಿಂದ ಸಲುಗೆಯಿಂದ ಮಾತಾಡಿದೆ. ಅವಳ ಓದಿನ ಬಗ್ಗೆಯೆಲ್ಲಾ ವಿಚಾರಿಸಿದೆ. ಆಕೆ ತುಂಬಾ ಮುದ್ದು ಮುದ್ದಾಗಿ ಎಲ್ಲಾ ಹೇಳಿಕೊಂಡಳು. ಹೀಗೆ ನಮ್ಮ ಸ್ನೇಹ ಶುರುವಾಯ್ತು. ಆಕೆ ತನ್ನ ತಾಯಿಯ ಮೊಬೈಲ್‌ನಿಂದ ಕರೆ ಮಾಡುತ್ತಿದ್ದುದರಿಂದ ನಾನು ಆ ನಂಬರನ್ನು ಸೇವ್ ಮಾಡಿಕೊಳ್ಳಲಿಲ್ಲ. ತಿಂಗಳಿಗೆ ಮೂರ್ನಾಲ್ಕು ಬಾರಿಯಾದರೂ ನನಗೆ ಕರೆ ಮಾಡಿ ಮಾತಾಡುತ್ತಿದ್ದಳು. ಹೀಗೆ ದಿಗಳೆಯುತ್ತಾ ವರ್ಷಗಳುರುಳಿದಂತೆ ನಮ್ಮ ಸ್ನೇಹ ಹೆಚ್ಚು ಗಟ್ಟಿಯಾಯ್ತು. ಅದಾಗಲೇ ಆಕೆ SSLCಗೆ ಕಾಲಿರಿಸಿದ್ದಳು. ಜೊ
ಮನಸು ಹೃದಯಗಳ ಸವಿಮಾತು............