ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ಆಗಸ್ಟ್, 2012 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಪ್ರೇಮಿಗೊಂದು ಪ್ರೇಮದೋಲೆ ಬರೆಯಿರಿ ಇಂದೇ...

ನೀವು ಪ್ರೇಮಿಸಿದ್ದೀರಿ. ಬದಲಿಗೆ ಆಕೆಯೂ ನಿಮ್ಮನ್ನು ನಿಮಗಿಂತಲೂ ಗಾಢವಾಗಿ ಪ್ರೀತಿಸುತ್ತಿದ್ದಾಳೆ. ಬಹುಶಃ ಇಬ್ಬರದೂ ಒಂದೇ ಕಾಲೇಜು. ಬೇಡವೆಂದರೂ ಹೆಚ್ಚು ಕಡಿಮೆ ದಿನವೂ ನೋಡುತ್ತೀರಿ, ಸಂದಿಸುತ್ತೀರಿ. ಬೇಕಾದಷ್ಟು ಮಾತೂ ಆಡ್ತೀರಿ. ಮೆಸೇಜೂ ಮಾಡ್ತೀರಿ... ಆದ್ರೂ ಒಂದು `ಪ್ರೇಮಪತ್ರ`ವನ್ನು ಬರೆದು ಕೊಟ್ಟು ನೋಡಿ. ಅದರ ಸಂಭ್ರಮವೇ ಬೇರೆ. ಅವಳಿಗಾಗುವ ಆನಂದವೂ ಬೇರೆ. ಪ್ರೇಮ ಪತ್ರಕ್ಕೆ ಆ ಶಕ್ತಿಯಿದೆ.  `ಯಾಕೆ ಬಿಡಿ, ದಿನವೂ ನೋಡ್ತಿರ್ತೀವಿ. ಮಾತೂ ಆಡ್ತೀವಿ. ಅವಳ ಹತ್ರ ಮೊಬೈಲ್ ಇದೆ. ನನ್ನ ಹತ್ರಾನೂ ಇದೆ. ನನಗೆ ಮಾತನಾಡಬೇಕೆನ್ನಿಸಿದಾಗ ನಾನು ಕರೆ ಮಾಡ್ತೇನೆ. ಅವಳಿಗೆ ಆಸೆಯಾದಾಗ ಅವಳೇ ಕರೆ ಮಾಡ್ತಾಳೆ. ಇಬ್ಬರೂ ಗಂಟೆಗಟ್ಟಲೇ  ಫೋನ್‌ನಲ್ಲೇ ಮಾತಾಡ್ತೇವೆ. ಸಂದೇಶಗಳಿಗೆ ಲೆಕ್ಕವಿಲ್ಲ, ಎದುರು ಸಿಕ್ಕರಂತೂ ದಿನವೆಲ್ಲಾ ಕೂತು ಹರಟೆ ಹೊಡೀತೀವಿ. ಇನ್ನಾರು ತಿಂಗಳಲ್ಲೇ ಮದುವೆ. ಈಗ ಹೋಗಿ ಪ್ರೇಮ ಪತ್ರ?! ಅದೆಲ್ಲಾ ಓಲ್ಡ್ ಸ್ಟೈಲು. ಫಸ್ಟ್ ಗಿಯರ್ ಅದು. ನಾವು ಈಗಾಗ್ಲೇ ಟಾಪ್ ಗಿಯರಲ್ಲಿದ್ದೀವಿ" ಅಂತಲೂ ಕೆಲವರು ಹೇಳಬಹುದು.  ಅದೆಲ್ಲಾ ನಿಜ. ದಿನವೂ ನೋಡ್ತೀರಿ. ಮೆಸೇಜೂ ಕಳಿಸ್ತೀರಿ. ಫೋನ್‌ನಲ್ಲಿ ಗಂಟೆಗಟ್ಟಲೇ ಮಾತೂ ಆಡ್ತೀರಿ. ಎದುರು ಸಿಕ್ರೆ ದಿನವೆಲ್ಲಾ ಹರಟೆ ಹೊಡಿತೀರಿ. ಎಲ್ಲಾ ನಿಜ... ಆದರೂ ನಿಮ್ಮ ಅಂತರಂಗದ ಪ್ರೇಮದ ತುಡಿತವನ್ನು ಎಂದಾದರೂ ಅವಳೆದುರು ಬಿಚ್ಚಿಟ್ಟಿದ್ದೀರಾ? ಬದಲಿಗೆ ನೀವೇ ನೋಡಿಕೊಂಡಿದ್ದೀರಾ? ದ

ನಿತೀಶ್‌ರನ್ನು ನಿರ್ಲಕ್ಷಿಸಬೇಡಿ !

ಫೇಸ್‌ಬುಕ್‌ ತುಂಬಾ ಮೋದಿ ರಾರಾಜಿಸುತ್ತಿದ್ದಾರೆ. ಅವರೊಬ್ಬ ಧೀಮಂತ ನಾಯಕ, ಅಭಿವೃದ್ದಿಯ ಹರಿಕಾರ ಎಂಬುದರಲ್ಲಿ ಎರಡು ಮಾತಿಲ್ಲ. ಅವರ ಬಗ್ಗೆ ನನ್ನ ಅಪಸ್ವರವೂ ಇಲ್ಲ. ಆದರೆ ಹೇಗಿದ್ದ ಬಿಹಾರವನ್ನು ಐದು ವರ್ಷದೊಳಗೆ ಇಂದು ಗುಜರಾಥಿಗೆ ಸೆಡ್ಡು ಹೊಡೆವಂತೆ ಮಾಡಿದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ‍್ ಸಹ ಸಾಧಾರಣ ವ್ಯಕ್ತಿಯಲ್ಲ. ಆದರೆ ಇದುವರೆಗೂ ಯಾರೂ ನಿತೀಶ್ ಬಗ್ಗೆಯಾಗಲೀ ಅವರ ಸಾಧನೆ ಬಗ್ಗೆಯಾಗಲೀ ಒಂದೇ ಒಂದು ಫೋಟೋವನ್ನೂ ಷೇರ‍್ ಮಾಡಿದ್ದನ್ನು ನಾನು ಕಂಡಿಲ್ಲ. ಯಾಕೆ ಹೀಗೆ ? ಭಾರತೀಯರಿಗೆ ಒಬ್ಬ ಪ್ರಾಮಾಣಿಕ, ಅಭಿವೃದ್ಧಿಶೀಲ ಮನಸ್ಸಿನ ವ್ಯಕ್ತಿಯನ್ನು ಮೆಚ್ಚಲಿಕ್ಕೂ ಸಂಕೋಚ, ಸಂಕುಚಿತ ಮನೋಭಾವವೇ ? ಅಥವಾ ನಿತೀಶ್ ರನ್ನು ಮೆಚ್ಚಿದರೆ ಎಲ್ಲಿ ಅವರು ಪ್ರಧಾನಿ ಗಾಧಿಗೆ ಮೋದಿಗೆ ಪೈಪೋಟಿ ಆಗಿ ಬಿಡುತ್ತಾರೋ ಎಂಬ ಭಯ ಜನಸಾಮಾನ್ಯರಿಗೂ ಇದೆಯೇ ? ಕರ್ನಾಟಕದ ರಾಜಕಾರಣಿಗಳನ್ನು ಕಂಡು ರೋಸಿ ಹೋದ ನಮಗೆ ದೂರದ ಈ ಇಬ್ಬರೂ ಆದರ್ಶಪ್ರಾಯವಾದಲ್ಲಿ ತಪ್ಪೇನಿಲ್ಲ. ಬಿಜೆಪಿ, ಕಾಂಗ್ರೆಸ್ ಎರಡಕ್ಕೂ ಸೇರದ ನಿತೀಶ್‌ರನ್ನು ಈ ರೀತಿ ನಿರ್ಲಕ್ಷಿಸುವುದೂ ಸರಿಯಲ್ಲ. ಏಕೆಂದರೆ ಭಾರತದಲ್ಲಿ ಉತ್ತಮ ರಾಜಕಾರಣಿಗಳಿಗೆ ಬರ!

ಹಾದಿ ತಪ್ಪಿದ ಹೋರಾಟ !

ಕೊನೆಗೂ ನಮ್ಮ ಕಣ್ಣೆದುರೇ ನಡೆದ ಒಂದು ಭೃಹತ್ ಚಳವಳಿ ನೋಡ ನೋಡುತ್ತಲೇ ಮಣ್ಣು ಪಾಲಾಗಿದೆ. ಗಾಂಧಿಯನ್ನು ನಾವ್ಯಾರೂ ನೋಡಿಲ್ಲ. ಆದರೆ ಅವರ ಅಪರಾವತಾರದಂತೆ ಬಂದ ಅಣ್ಣ ನಮ್ಮೆಲ್ಲರ ಕಣ್ಮಣಿಯಾದುದು ನಿಜ. ಹತ್ತಾರು ವರ್ಷಗಳ ಅಣ್ಣ ಹೋರಾಟ ಒಂದು ಅಂತಿಮ ಘಟ್ಟಕ್ಕೆ ಬಂದುದು ಜನಲೋಕಪಾಲ ಹೋರಾಟದಿಂದ. ಇದರಿಮದಾಗಿ ಅವರು ದೇಶಾಧ್ಯಂತ ಪ್ರಖ್ಯಾತರಾದರು. ಹಾಗೆಯೇ ಜನರ ಒಲವನ್ನೂ ಗಳಿಸಿ ಹೋರಾಟವು ಅತ್ಯಂತ ಯಶಸ್ವಿಯಾಗುವಂತೆ ಮಾಡಿದರು. ಆದರೆ ಅದಕ್ಕೆ ಬಾಗಿದಂತೆ ನಾಟಕವಾಡಿದ ಕಳ್ಳ ಕಾಂಗ್ರೆಸಿಗರು ಪೊಳ್ಳು ಲೋಕಪಾಲವನ್ನೇ ಲೋಕಸಭೆಯಲ್ಲಿ ಮಂಡನೆ ಮಾಡಿತು. ತಾನೇನೋ ಸಂಪನ್ನ ಎಂದು ಬೊಗಳೆ ಬಿಡುವ ಬಿಜೆಪಿ ಸಹ ಅಣ್ಣಾ ಬೆಂಬಲಕ್ಕೆ ನಿಲ್ಲಲಿಲ್ಲ. ಅದರೊಳಗೇ ಹತ್ತಾರು ಹುಳುಕು. ಆದರೂ ಅಣ್ಣಾ ಹೋರಾಟ ಒಂದು ಕ್ರಾಂತಿ ಗೀತೆಯಾಗಿ ಮುಂದುವರಿಯುತ್ತಲೇ ಇತ್ತು. ಅಣ್ಣಾಗೆ ಜೊತೆಯಾಗಿ ನಮ್ಮ ಸಂತೋಷ್ ಹೆಗಡೆ, ಕೇಜ್ರೀವಾಲ್, ಕಿರಣ್ ಬೇಡಿ, ಪ್ರಶಾಂತ್ ಭೂಷಣ್ ಮತ್ತವರ ಮಗ - ಹೀಗೆ ಒಂದು ಪ್ರಾಮಾನಿಕರ ಪಡೆಯೇ ಇತ್ತು. ಆದರೆ ಅದೆಲ್ಲವೂ ಕೇವಲ ಒಂದು ವರ್ಷದ ಅವಧಿಯಲ್ಲಿ ಗಾಳಿಯಲ್ಲಿ ಕರಗಿದ ಕರ್ಪೂರದಂತೆ ನಿಧಾನವಾಗಿ ಮರೆಯಾಗುತ್ತಿದೆ. ಒಂದು ಸಮಯ ಸರ್ಕಾರವನ್ನೇ ನಡುಗಿಸಿದ ಈ ಹೋರಾಟ ನೋಡ ನೋಡುತ್ತಲೇ ಧರಾಶಾಯಿಯಾದುದು ಈ ದೇಶದ ದುರಂತ. ಆದರೆ ಇದು ಅಣ್ಣಾ ಮತ್ತವರ ಸಂಗಡಿಗರು ಮಾಡಿದ ಸ್ವಯಂಕೃತಪರಾಧವಲ್ಲದೇ ಬೇರೇನೂ ಅಲ್ಲ. ಬರೀ ಭ್ರಷ್ಟರಿಂದಲೇ ತುಂಬಿರುವ ಇಂದಿನ ರಾಜಕಾರಣದ