ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ಫೆಬ್ರವರಿ, 2011 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಭಾವನೆಯ ಬೇಲಿ

ಎಲ್ಲೋ ಒಂದು ಕಣ್ಣ ಬಿಂದು ಜಾರುತ್ತದೆ ಕೆನ್ನೆ ಮೇಲೆ ತಾನಾಗಿ. ಅದು ನೀನಿಟ್ಟ ಪ್ರೀತಿಗಾ? ನಾನಿಟ್ಟ ನಂಬಿಕೆಗಾ? ತನ್ನ ತಾನು ಹಿಡಿದಿಡಲಾಗದ ಬಿರುಕು ಬಿಟ್ಟ ಮಡಕೆಗಾ? ಉತ್ತರವಿರದು ಎಲ್ಲಾ ಪ್ರಶ್ನೆಗಳಿಗೂ ಪ್ರಶ್ನಿಸಲೂ ಆಗದು ಎಲ್ಲಾ ಸಂದೇಹಗಳಿಗೂ ಸಾಗಬೇಕು ನಾವೇ ಹೆಣೆದ ಬಲೆಯಿಂದ ಹೊರಗೆ ಬಾಗಬೇಕು ಭಾವನೆಯ ಕಿರು ಹೊಸ್ತಿಲಿಗೆ ಭಾವನೆಯ ಜೇಡ ಕಟ್ಟುವುದು ದಿನವೂ ಭಾವಗಳ ಬೇಲಿಯ ಪಡೆದರೂ ನೋವು ಬಂಧಿಸಲಾಗದು ಯಾವ ಹೃದಯವ ಬಯಲಾಗುವುದು ಬಲೆ, ಅದು ಸದಾ ಅಬಲೆ.

ಪಕ್ಷೇತರ ಮಂಗಗಳಿಗೆ ತಕ್ಕ ಶಾಸ್ತಿ

ದುಡ್ಡಿನಾಸೆಗೆ ಮಂಗನಾಟ ಆಡಿದ ಐವರು ಪಕ್ಷೇತರ (ಮಾಜಿ) ಶಾಸಕರು ಅನರ್ಹಗೊಂಡಿದ್ದಾರೆ. ಅವರಿನ್ನು ಆರು ವರ್ಷ ಯಾವುದೇ ಚುನಾವಣೆ ಎದುರಿಸುವಂತಿಲ್ಲ. ರೆಡ್ಡಿಗಳ ಕಂತೆ ಕಂತೆ ನೋಟು ಎಣಿಸಿಕೊಂಡು ಮತದಾರರನ್ನು ಕಾಲ ಕಸ ಮಾಡಿದ್ದ ಇವರಿಗೆ ತಕ್ಕ ಶಾಸ್ತಿಯಾಗಿದೆ. ಯಡಿಯೂರಪ್ಪ ಇವರಿಗೆ ಮಾಡಿದ್ದು ಮೋಸವೇ ಆದರೂ ಇವರು ಮತದಾರರಿಗೆ ಮಾಡಿದ ಮೋಸಕ್ಕೆ ತಕ್ಕ ಬೆಲೆ ತೆತ್ತಿದ್ದಾರೆ. ಮೂರೂ ಪಕ್ಷವನ್ನು ತಿರಸ್ಕರಿಸಿ ಜನ ಪಕ್ಷೇತರರನ್ನು ಗೆಲ್ಲಿಸಿದ್ದೇ ಇವರಾದರೂ ಏನಾದರೂ ಒಳ್ಳೆಯದು ಮಾಡುತ್ತಾರೆ ಎಂದು. ಆದರೆ ಇವರೂ ಜನರ ನಿರೀಕ್ಷೆಗೆ ಎಳ್ಳು ನೀರು ಬಿಟ್ಟು ರೆಸಾರ್ಟ್‌ ರಾಜಕೀಯವನ್ನೇ ಮಾಡಿದರು. ಬಿಜೆಪಿಗೆ ಕೇವಲ ಬಾಹ್ಯ ಬೆಂಬಲ ಕೊಟ್ಟು ಸುಮ್ಮನಾಗಿದ್ದರೆ ಇಂದು ಈ ಗತಿ ಬರುತ್ತಿರಲಿಲ್ಲ. ಇವರಷ್ಟೇ ಅಲ್ಲದೇ ಆಪರೇಷನ್ ಕಮಲಕ್ಕೆ ಬಲಿಯಾದವರಿಗೂ ಇದೇ ಶಿಕ್ಷೆಯಾಗಬೇಕು. ಆಗ ಮಾತ್ರ ರಾಜಕಾರಣಿಗಳು ಬುದ್ಧಿ ಕಲಿಯುತ್ತಾರೆ.

ಸಚಿವೆ ಶೋಭಾ ಕರಂದ್ಲಾಜೆಯವರಿಗೆ ಅಭಿನಂದನೆಗಳು

ಕೊನೆಗೂ ಅಕ್ರಮ ಪಡಿತರ ಚೀಟಿ ಮತ್ತು ಅಕ್ರಮ ಅನಿಲ ಸಿಲಿಂಡರ‍್ ಬಳಕೆದಾರರ ಮೇಲೆ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿರುವ ೧.೨ ಕೋಟಿ ಕುಟುಂಬಗಳಿಗೆ ನಮ್ಮ ಅಧಿಕಾರಿಗಳು ಲಂಚ ತಿಂದು ೧.೬ ಪಡಿತರ ಚೀಟಿ ಒದಗಿಸಿದ್ದಾರೆ. ಆದರೂ ಎಷ್ಟೋ ಬಡವರಿಗೆ ಅದು ದೊರೆತಿಲ್ಲ. ಹಾಗೆಯೇ ಅನಿಲ ಸಿಲಿಂಡರ್‌ ಸಹ. ಸಚಿವೆ ಶೋಭಾ ಅವರಿಗೆ ಧನ್ಯವಾದಗಳು. ಆದರೆ ಇದು ಬರೇ ಆರಂಭ ಶೂರತ್ವ ಆಗಬಾರದು. ಎಲ್ಲಾ ಅಕ್ರಮ ಪಡಿತರ ಚೀಟಿಗಳು ಮತ್ತು ಅನಿಲ ಬಳಕೆಗಳು ರದ್ದಾಗಬೇಕು. ಇದನ್ನು ಅವರು ಮಾಡಿ ಜನ ಮೆಚ್ಚುಗೆಗೆ ಕಾರಣರಾಗಲಿ ಎಂದು ಹಾರೈಸೋಣ.

ವಿಶ್ವೇಶ್ವರ ಭಟ್ಟರು ಕನ್ನಡಪ್ರಭ ಪತ್ರಿಕೆಯ ಪ್ರಧಾನ ಸಂಪಾದಕರಾಗಿದ್ದಾರೆ

ವಿಶ್ವೇಶ್ವರ ಭಟ್ಟರು ಕನ್ನಡಪ್ರಭ ಪತ್ರಿಕೆಯ ಪ್ರಧಾನ ಸಂಪಾದಕರಾಗಿದ್ದಾರೆ. ಈ ಹಿಂದೆ ಸಹ-ಸಂಪಾದಕರಾಗಿ ಇದೇ ಪತ್ರಿಕೆಯಲ್ಲಿ ಭಟ್ಟರು ಕೆಲಸ ಮಾಡಿದ್ದರು. ಕನ್ನಡದ ವಿಷಯದಲ್ಲಿ ಕನ್ನಡಪ್ರಭ ಹೆಚ್ಚು ಉಗ್ರವಾಗಿ ಜನರನ್ನು ಎಚ್ಚರಿಸುತ್ತಾ ಬಂದಿದೆ. ಮತ್ತು ಯಾವುದೇ ರಾಜಕೀಯ ಪಕ್ಷಕ್ಕೂ ಮಣೆ ಹಾಕದೇ ತನ್ನದೇ ಆದ ಛಾಪನ್ನೂ ಉಳಿಸಿಕೊಂಡಿದೆ. ಇನ್ನು ಮುಂದೆ ಭಟ್ಟರು ಪತ್ರಿಕೆಯನ್ನು ಯಾವ ರೀತಿ ಮುನ್ನಡೆಸುತ್ತಾರೆ ಕಾದು ನೋಡಬೇಕಾಗಿದೆ. ಮೂರನೇ ಸ್ಥಾನದಲ್ಲಿರು ಪತ್ರಿಕೆ ಕನ್ನಡಪ್ರಭ ಸೇರಿದ್ದು ಸಂತೋಷದ ವಿಷಯ. ಕನ್ನಡದ ವಿಷಯದಲ್ಲಿ ಈ ಪತ್ರಿಕೆ ಮೊದಲಿನಿಂದಲೂ ವಿಶೇಷ ಕಾಳಜಿ ವಹಿಸುತ್ತಾ ಬಂದಿದೆ. ಇನ್ನು ಭಟ್ಟರ ಸಾರಥ್ಯದಲ್ಲಿ ಹೊಸ ಹೋರಾಟಗಳು ಶುರುವಾಗಲಿ. ಮುಖ್ಯವಾಗಿ ನಾಡಿಗೆ ಮಾರಕವಾಗಿರುವ ಭ್ರಷ್ಟಾಚಾರದ ವಿರುದ್ಧ ತಮ್ಮ ಲೇಖನಿ ಜಳಪಿಸಲಿ.

೭೭ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರ ಭಾಷಣ

ಸರ್ವಜ್ಞಂ ತದಹಂ ವಂದೇ ಪರಂಜ್ಯೋತಿಸ್ತಮೋಪಹಂ ಪ್ರವೃತ್ತಾಯನ್ಮುಖಾದ್ದೇವೀ ಸರ್ವಭಾಷಾ ಸರಸ್ವತೀ                                           -ನಾಗವರ್ಮ ಯಾರ ಮುಖಂದಿದೆಳ್ದು ನಿಂದಳೊ ಭಾಷೆಯೆಲ್ಲಕು ದೇವಿ ಸರಸತಿ ಅಂಥ ದೇವಗೆ ಎಲ್ಲ ಬಲ್ಲಗೆ ತಮವ ದೂಡುವ ಹೊಳೆವ ಬೆಳಕಿಗೆ ಇದಿಗೊ ನನ್ನಯ ವಂದನೆ ಎಲ್ಲ ಸಾರಸ್ವತ ಚೇತನಗಳಿಗೂ ನನ್ನ ನಮಸ್ಕಾರ , ಕನ್ನಡ ಸಾಹಿತ್ಯ ಪರಿಷತ್ತು ಕನ್ನಡ ಲೇಖಕರಿಗೆ ನೀಡುವ ಅತ್ಯಂತ ಪ್ರಮುಖವಾದ ಗೌರವ--ಇಂಥ ಸಾಹಿತ್ಯ ಸಮ್ಮೇಳನಗಳ ಅಧ್ಯಕ್ಷ ಪದವಿ. ನನಗೆ ಈ ಗೌರವವನ್ನು ನೀಡಿರುವ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಿಗೂ ಇತರ ಕಾರ್ಯಕಾರಿ ಸಮಿತಿ ಸದಸ್ಯರಿಗೂ ನನ್ನ ಕೃತಜ್ಞತೆಯನ್ನು ಸಲ್ಲಿಸಿ ನನ್ನ ಕೆಲವು ಅರಿವಿನ ಮಾತುಗಳನ್ನು ಹೇಳುತ್ತೇನೆ. ಶಾಂತವಾಗಿ ಕೇಳಬೇಕೆಂದು ನನ್ನ ಬಿನ್ನಹ. ಕನ್ನಡದ ಕಥೆ ಬಲು ದೊಡ್ಡದು ಕನ್ನಡನಾಡಿನ ಚರಿತ್ರೆಯಲ್ಲಿ ಕ್ರಿ.ಶ. ಹದಿನೆಂಟನೆಯ ಶತಮಾನದ ಕೊನೆಯ ಭಾಗಕ್ಕೂ ಹತ್ತೊಂಬತ್ತನೆಯ ಶತಮಾನದ ಮೊದಲ ಭಾಗಕ್ಕೂ ಉಂಟಾದ ಸಂಧಿಕಾಲವು ಕನ್ನಡ ಭಾಷಾ ಸಾಹಿತ್ಯಗಳ ದೃಷ್ಟಿಯಿಂದ ಒಂದು ವಿಶಿಷ್ಟ ಪರಿಸರದಲ್ಲಿ ಮುಳುಗಿದ್ದ ಕಾಲ. ರಾಜಕೀಯವಾಗಿ ಕನ್ನಡ ಪ್ರದೇಶಗಳು ವಿವಿಧ ಆಡಳಿತಗಳಿಗೆ ಸಿಕ್ಕಿಕೊಂ

ಅಯ್ಯಮ್ಮಳಿಗೆ "ಪಿಸುಮಾತು ಸಮುದಾಯ"ದ ಕಡೆಯಿಂದ ಸಹಾಯ

ನಾನು ಮತ್ತು ಡೆಮ್ ಸೋಮವಾರ ಸಂಜೆ 31 ಜನವರಿ 2011ರಂದು ಸಂಜೆ ೬:೩೦ ಕ್ಕೆ ಮೆಜೆಸ್ಟಿಕ್‌ನಿಂದ ಗುಲ್ಬರ್ಗಾ ಬಸ್ [ ಕರ್ನಾಟಕ ಸಾರಿಗೆ ] ಹತ್ತಿದೆವು. ಅದು ಬೆಳಗ್ಗೆ ೭:೦೦ ಗಂಟೆಗೆ ಸುರಪುರ ತಲುಪಿತು. ಅಲ್ಲಿ ಒಂದು ಹೋಟೆಲ್‌ನಲ್ಲಿ ಕಾಫಿ ಕುಡಿದು ಪಕ್ಕದಲ್ಲಿದ್ದ ಲಾಡ್ಜ್ ಒಂದಕ್ಕೆ ಹೊಗಿ ರೂಮ್ ವಿಚಾರಿಸಿದೆವು. ಅವನು "೩೫೦ ರೂ. ಆಗುತ್ತೆ. ಅದಕ್ಕಿಂತಾ ಕಡಿಮೆ ಆಗಲ್ಲ" ಎಂದು ಹೇಳುತ್ತಿದ್ದ. ಅಷ್ಟರಲ್ಲಿ ಅಲ್ಲಿಯೇ ಇದ್ದ ಇನ್ನೊಬ್ಬ ಗ್ರಾಹಕರು ನಮಗೆ ಕಣ್ಸನ್ನೆಯಲ್ಲೇ ಇನ್ನೊಂದು ಲಾಡ್ಜ್‌ಗೆ ಹೋಗುವಂತೆ ತಿಳಿಸಿದರು. ಇಬ್ಬರೂ ಅಲ್ಲಿಂದ ಹೊರಟು ಬಸ್‌ನಿಲ್ದಾಣದ ಪಕ್ಕದಲ್ಲೇ ಇದ್ದ ಮತ್ತೊಂದು ಲಾಡ್ಜ್‌ಗೆ ತೆರಳಿದೆವು. ಅಲ್ಲಿ ೧೫೦ ರೂಪಾಯಿಗೆ ರೂಮ್ ದೊರೆಯಿತು. ಅಲ್ಲಿ ಸ್ನಾನ ಮಾಡಿದೆ. ಡೆಮ್ "ನಾನು ಸ್ನಾನ ಮಾಡಿ ಇನ್ನೂ ಎಂಟೇ ದಿನ ಆಗಿರೋದು" ಅಂದ್ರು. ಆಮೇಲೆ ಮತ್ತೆ ಅದೇ ಉಡುಪಿ ಹೋಟೆಲ್‌ಗೆ ಹೋಗಿ ತಿಂಡಿ ತಿಂದೆವು. ಅಲ್ಲಿಂದ "ಮಹಮ್ಮದ್ ರಫೀ" ಅನ್ನುವವರ ಆಟೋ ಹಿಡಿದು ದೇವೀಕೇರ ಗ್ರಾಮಕ್ಕೆ ಹೊರಟೆವು. ದಾರಿಯಲ್ಲಿ ಕಂಡ ಹಂದಿಗಳ ಗುಂಪು.  ಅಸಲಿ ವಿಷಯಕ್ಕೆ ಈಗ ಬರೋಣ... ಇವಳೇ ಅಯ್ಯಮ್ಮ ಅಯ್ಯಮ್ಮ ಮತ್ತು ಅವಳ ನಾಲ್ಕು ವಿಕಲ ಚೇತನ ಹಾಗೂ ಬುದ್ಧಿ ಮಾಂದ್ಯ ಮಕ್ಕಳು.  ಅಲ್ಲಿನ ದೃಶ್ಯ ಕಂಡು ಮನಸ್ಸು ಒಮ್ಮೆ ಮಮ್ಮಲ ಮರುಗಿತು. ಅಯ್ಯಮ್ಮಳ ಐದು ಜನ ಮಕ್ಕಳಲ್ಲಿ ದೇವಮ್ಮ (೧೬ ವರ್ಷ) ಎಂಬ ಹುಡ