ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ಆಗಸ್ಟ್, 2018 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಕನ್ನಡ ನಾಡಿನ ಕಲಿ ಸಂಗೊಳ್ಳಿ ರಾಯಣ್ಣ

ಈ ಹೆಸರು ಕೇಳಿದರೇನೇ ಎಂತವರ ಮೈಯ್ಯಲ್ಲೂ ಒಂದು ಮಿಂಚಿನ ಸಂಚಾರವಾಗುತ್ತದೆ. ರಾಯಣ್ಣ ಅನ್ನುವುದು ಒಂದು ವ್ಯಕ್ತಿಯಲ್ಲ, ಅದೊಂದು ಈ ಕರುನಾಡಿನಲ್ಲಿ ಹುಟ್ಟಿದ ಮಹಾನ್‌ ಶಕ್ತಿ. ಅಂದು ಬ್ರಿಟೀಷರು ರಾಯಣ್ಣನ ಹೆಸರು ಕೇಳಿದರೇನೇ ನಡುಗುತ್ತಿದ್ದರು. ರಾಯಣ್ಣನ ಹೆಸರು ಕೇಳಿದರೆ ಅವರ ಮೈಯ್ಯಲ್ಲಿ ಕಂಪನ ಶುರುವಾಗುತ್ತಿತ್ತು. ರಾಯಣ್ಣನಿಂದಾಗಿ ಬ್ರಿಟಿಷರು ಕಿತ್ತೂರಿನ ಕಡೆ ಕಾಲಿಡಲೂ ಹೆದರುವ ಕಾಲವೊಂದಿತ್ತು. ಅದು ರಾಯಣ್ಣನ ಶಕ್ತಿ ಮತ್ತು ಯುಕ್ತಿಯ ಹೆಚ್ಚುಗಾರಿಕೆ. ರಾಯಣ್ಣ ಹುಟ್ಟಿದ್ದು ೧೭೯೮ ರ ಆಗಷ್ಟ್‌ ೧೫ ರಂದು ಈಗಿನ ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲ್ಲೂಕಿನ ಸಂಗೊಳ್ಳಿಯಲ್ಲಿ. ರಾಯಣ್ಣನ ಹಿರಿಯರು ಕಿತ್ತೂರು ಸಂಸ್ಥಾನದ ಅರಮನೆಗಳಲ್ಲಿ ವಾಲೇಕಾರ ಕೆಲಸ ಮಾಡುತ್ತಾ ಬಂದವರು. ಇವರ ಮುತ್ತಜ್ಜ ಆಯುರ್ವೇದ ಪಂಡಿತರಾಗಿದ್ದರೆ. ರಾಯಣ್ಣನ ತಂದೆ ಭರಮಣ್ಣ ಮಹಾನ್ ಸಾಹಸಿಯಾಗಿದ್ದ. ಊರೊಳಗೆ ನುಗ್ಗಿ ಜನ ಜಾನುವಾರುಗಳಿಗೆ ತೊಂದರೆ ಕೊಡುತ್ತಿದ್ದ ಹೆಬ್ಬುಲಿಯೊಂದನ್ನು ಹೊಡೆದು ಹಾಕಿದ ಸಾಹಸಿ ಬರಮಣ್ಣ! ಅವರ ಆ ಸಾಹಸಕ್ಕೆ ಮೆಚ್ಚಿ ರಾಜರು "ರಕ್ತ ಮಾನ್ಯದ ಹೊಲ"ವನ್ನು ಬಳುವಳಿ ನೀಡಿದ್ದರು. ಅದಲ್ಲದೇ ಬರಮಣ್ಣ ಸಂಗೊಳ್ಳಿಯ ಗರಡಿ ಮನೆಯ ಗಟ್ಟಿ ಕಟ್ಟಾಳು ಕೂಡಾ ಆಗಿದ್ದರು. ಅಂತಹ ಅಂಜದೆಯ ಗಂಡಿನ ಮಗನಾಗಿ ಹುಟ್ಟಿದ ರಾಯಣ್ಣ ನೂರೆದೆಯ ಸಾಹಸಿಯಾಗಿದ್ದ. ಇತ್ತ ಕಿತ್ತೂರಿನ ದೊರೆ ಮಲ್ಲಸರ್ಜನು ಮರಾಠಿ ಪೇಶ್ವೆಗಳ ಮೋಸದ ಬಲೆಗೆ ಸಿಕ್ಕು ಸಾವಿಗೆ ಈಡ