ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ಡಿಸೆಂಬರ್, 2014 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಪ್ರಜಾಮತ ಅಶೋಕ್‌ ಬಾಬುರವರಿಗೆ ನಮನಗಳು

​ ನಾನು ಐದಾರು ಚಿಕ್ಕ ಚಿಕ್ಕ ಪತ್ರಿಕೆಗಳಲ್ಲಿ ವರದಿಗಾರನಾಗಿ ಕೆಲಸ ಮಾಡಿದ್ದೇನೆ. ಪತ್ರಿಕೆಗಳು ಚಿಕ್ಕವಾದರೂ ಇವುಗಳ ಸಂಪಾದಕರು ಮಾತ್ರ ಸಾಮಾನ್ಯದವರು ಅಂತ ನನಗನ್ನಿಸಿಲ್ಲ. ಕೆಲವರಂತೂ ಅಂಗೈಯಲ್ಲೇ ಆಕಾಶ ತೋರಿಸಬಲ್ಲ ಜಾಣರು, ಮತ್ತು ಅವಕಾಶ ಸಿಕ್ಕರೆ ಅದೇ ಅಕಾಶವನ್ನೇ ನುಂಗಿ ಅರಗಿಸಿಕೊಳ್ಳಬಲ್ಲಷ್ಟು ಸಾಮರ್ಥ್ಯರು. ಅವರುಗಳಲ್ಲಿ ಇಬ್ಬರು ಅಂತಹ ಅಸಾಧಾರಣ ವ್ಯಕ್ತಿಗಳ ಜೊತೆ ಕೆಲಸ ಮಡುವ ಅವಕಾಶ ನನಗೆ ದೊರೆತಿತ್ತು. ಮೊದಲನೆಯವರು ವಿ. ಶಶಿಧರ್‌. ಕೇವಲ ಇವರ ಹೆಸರು ಹೇಳಿದರೆ ಅಷ್ಟಾಗಿ ಯಾರಿಗೂ ಗೊತ್ತಾಗುವುದಿಲ್ಲ. ಆದರೆ ದೇಶದಲ್ಲೇ ಏಕೈಕ 'ಪೊಲೀಸ್‌ ಮಹಾ ಸಂಘ'ವನ್ನು ನಮ್ಮ ರಾಜ್ಯದಲ್ಲಿ ಸ್ಥಾಪಿಸಿ ಅದರ ಮೂಲಕ ಇಡೀ ಇಲಾಖೆಗೆ ಮತ್ತು ಸರ್ಕಾರಕ್ಕೆ ತಲೆ ನೋವಾಗಿ ಒಂದು ಸಮಯದಲ್ಲಿ ಕಲರವವೆಬ್ಬಿಸಿದ ಶಶಿಧರ‍್ ಎಂದರೆ ಬಹುತೇಕರಿಗೆ ಗೊತ್ತಾಗಿ ಹೋಗುತ್ತದೆ. ಇಂದು ಪತ್ರಿಕೆ ನಿಲ್ಲಿಸಿದ್ದರೂ ಭ್ರಷ್ಟರ ಮೇಲೆ ದೂರು ದಾಖಲಿಸುತ್ತಾ ಕೆಲವರ ಪಾಲಿಗೆ ನುಂಗಲಾರದ ತುತ್ತಾಗಿದ್ದಾರೆ. ಒಂದು ಕೇಸಿನಲ್ಲಿ ಸೋನಿಯಾ ಗಾಂಧಿಗೂ ಹೈಕೋರ್ಟ್‌‌ನಿಂದ ನೋಟೀಸ್ ಕೊಡಿಸಿದ ಕೀರ್ತಿ ಇವರದು! ಇವರು ಸ್ಥಾಪಿಸಿದ 'ಪೊಲೀಸ್‌ ವರ್ಲ್ಡ್‌' ಪತ್ರಿಕೆಗೆ ಸುಮಾರು ಮೂರು ವರ್ಷ ದುಡಿದೆ.  ಎರಡನೆಯವರು ಪ್ರಜಾಮತ ಖ್ಯಾತಿಯ ಅಶೋಕ್‌ ಬಾಬು. ನನಗೆ ತಿಳಿದಂತೆ ಇವರು ಕನ್ನಡ ಪತ್ರಿಕಾ ರಂಗದ ದಿಗ್ಗಜರೇ ಹೌದು. ನಾವು ಚಿಕ್ಕ ಹುಡುಗರಾಗಿದ್ದಾಗ ಇವರ ಪ್ರಜಾಮತ ಮನೆ ಮಂದಿಯ ಪತ