ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ಜನವರಿ, 2012 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಪತ್ತೇದಾರಿ ಕಥೆ ಬರೆವ ರಹಸ್ಯ

ಪ್ರಾರಂಭ ಹೇಗಿರಬೇಕು ? ಸಾಧಾರಣ, ಸಾಮಾಜಿಕ ಕಥೆ ಬರೆಯುವುದು ಸುಲಭ. ಆದರೆ ಒಂದು ಪತ್ತೇದಾರಿ ಕಥೆ ಬರೆಯುವುದು ತುಂಬಾ ಕಷ್ಟ. ಸಾಮಾಜಿಕ ಕಥೆ ಬರೆಯಲು ನೂರಾರು ವಿಷಯಗಳು ಸಿಗುತ್ತವೆ. ಅವುಗಳನ್ನು ಎಲ್ಲಿಂದ ಹೇಗೆ ಬೇಕಾದರೂ ಪ್ರಾರಂಭಿಸಬಹುದು. ಹೇಗೆ ಬೇಕಾದರೂ ಮುಕ್ತಾಯ ಮಾಡಬಹುದು. ಇಂತದ್ದೇ ಅನ್ನುವಂತಹ ಅಂತ್ಯ ಕಾಣಿಸುವ ಅಗತ್ಯ ಇರುವುದಿಲ್ಲ. ಮೇಲಾಗಿ ಬರವಣಿಗೆಯ ಶೈಲಿ ಅಷ್ಟೇನೂ ಉತ್ತಮವಾಗಿರದಿದ್ದರೂ ನಡೆದೀತು, ಒಂದು ಉತ್ತಮ ವಿಷಯವನ್ನಿಟ್ಟುಕೊಂಡು ಕಥೆ ಬರೆದು ಬಿಡಬಹುದು. ಆದರೆ ಪತ್ತೇದಾರಿ ಕಥೆಗೆ ಹಾಗಲ್ಲ. ಹೇಗಾದರೂ ಬರೆದರಾದೀತು ಅನ್ನುವಂತಿಲ್ಲ. ಮೊದಲ ಪ್ಯಾರಾದಿಂದಲೇ ಓದುಗರನ್ನು ಹಿಡಿದಿಡುವ ಕುಶಲತೆ ನಮಗಿರಬೇಕು. ಉದಾ : ವಿಶಾಲವಾದ ಸ್ನಾನಗೃಹದ ಬಕೇಟಿನಲ್ಲಿದ್ದ ಬಿಸಿ ನೀರಿನಿಂದ ಎದ್ದ ಹಬೆ ಆ ಸ್ನಾನದ ಕೋಣೆಯನ್ನು ಪೂರ್ತಿಯಾಗಿ ಮಂಜಿನಂತೆ ಆವರಿಸುತ್ತಿತ್ತು. ಎದುರಿನ ಗೋಡೆಯಲ್ಲಿದ್ದ ನಿಲುವುಗನ್ನಡಿಯ ಮೇಲೆ ಮಂದ್ರವಾಗಿ ಹಬೆ ಅಂಟಿಕೊಂಡು ಸ್ನಾನಕ್ಕಿಳಿದಿದ್ದ ನಿತ್ಯಾಳ ಸುಂದರವಾದ ನಗ್ನ ದೇಹಕ್ಕೆ ತಾನೇ ಉಡುಗೆಯಾದಂತೆ ಭಾಸವಾಗುತ್ತಿತ್ತು. ಇದ್ಯಾವುದರ ಅರಿವೇ ಇಲ್ಲದ ಹದಿನೆಂಟರ ತರುಣಿ ನಿತ್ಯಾ ತನ್ನಷ್ಟಕ್ಕೆ ತಾನು ಸ್ನಾನ ಮುಗಿಸಿ ಆ ಕನ್ನಡಿಯಿಂದ ಎರಡಡಿ ದೂರ ನಿಂತು ಅದರಲ್ಲಿ ಮಂಜು ಮಂಜಾಗಿ ಗೋಚರಿಸುತ್ತಿದ್ದ ತನ್ನ ನಗ್ನ ಪ್ರತಿಬಿಂಬವನ್ನೇ ನೋಡುತ್ತಾ ಮೈ ಒರೆಸಿಕೊಳ್ಳತೊಡಗಿದಳು. ತನ್ನ ಸೌಂದರ್ಯವನ್ನು ತಾನೇ ಸವಿಯಲೋ, ಅಥವಾ ಮೊದಲೇ ಚ

ತರ್ಲೆ ಬೈರಪ್ಪರ ಸಂಸ್ಕೃತ ರಾಗ

ತರ್ಲೆ ಬೈರಪ್ಪರಿಗೂ ಸಂಸ್ಕೃತಕ್ಕೂ ಅದೇನು ನಿಕಟ ಸಂಬಂಧವೋ ತಿಳಿದಿಲ್ಲ. ಆದರೆ ಆಗಾಗ ತಮ್ಮ ಸಂಸ್ಕೃತ ಪ್ರೀತಿಯನ್ನು ಕನ್ನಡಿಗರ ಮೇಲೆ ಹೇರುತ್ತಲೇ ಇದ್ದಾರೆ. ಈ ಹಿಂದೆ ಕರ್ನಾಟಕದಲ್ಲಿ ಸಂಸ್ಕೃತ ವಿ.ವಿ. ಆಗಬೇಕು ಎಂದು ಯಡ್ಡಿಗೆ ಫರ್ಮಾನು ನೀಡಿದ್ದರು. ಈಗ ಹೈಸ್ಕೂಲು ಪಠ್ಯದಲ್ಲಿ ಸಂಸ್ಕೃತ ಕಡ್ಡಾಯವಾಗಲಿ ಎಂದು  ಹೇಳಿದ್ದಾರೆ. ಅಷ್ಟಕ್ಕೇ ಸುಮ್ಮನಾಗದೇ "ಸಂಸ್ಕತ ಅಧ್ಯಯನ ಮಾಡಿದವರ ಕನ್ನಡ ಗಟ್ಟಿಯಾಗಿರುತ್ತದೆ, ಅವರ ಮಾತು ಸ್ಪಷ್ಟವಾಗಿರುತ್ತದೆ" ಎಂದೆಲ್ಲಾ ಹೇಳಿದ್ದಾರೆ. ಆದರೆ ಕನ್ನಡವನ್ನು ಇವರಿಗಿಂತಲೂ ಸ್ಪಷ್ಟವಾಗಿ ಮಾತನಾಡುತ್ತಿದ್ದ ರಾಜ್‌ಕುಮಾರ‍್ ಅವರು ಸಂಸ್ಕೃತ ಹಾಗಿರಲಿ, ಕನ್ನಡ ಶಾಲೆಗೂ ಸರಿಯಾಗಿ ಹೋದವರಲ್ಲ ಅನ್ನೋದು ಗೊತ್ತಿಲ್ಲವೋ ಏನೋ. ಹಾಗೆಯೇ ಕನ್ನಡದ ಅನೇಕ ಸಾಹಿತಿಗಳು ಹೆಚ್ಚೇನೂ ಓದದೇನೇ ಉತ್ತಮ ಸಾಹಿತ್ಯ ರಚಿಸಿದ್ದಾರೆ. ಇದೇ ಬೈರಪ್ಪರು ಸಹ ಕನ್ನಡದಲ್ಲೇ ಸಾಹಿತ್ಯ ರಚಿಸಿದ್ದೇ ಹೊರತೂ ಸಂಸ್ಕೃತದಲ್ಲಿ ಅಲ್ಲ. ಸಂಸ್ಕೃತ ಈಗಾಗಲೇ ಒಂದು ಐಚ್ಚಿಕ ವಿಷಯವಾಗಿ ಹೈಸ್ಕೂಲಿನಲ್ಲಿ ಇದೆ. ಅದನ್ನೂ ಕಡ್ಡಾಯ ಮಾಡಿ ಮತ್ತೊಂದಿಷ್ಟು ಕನ್ನಡಿಗ ಮಕ್ಕಳು ಅನುತ್ತೀರ್ಣರಾಗುವ ಹಾಗೆ ಮಾಡದಿರಲಿ.

ಹೆಣ್ಣಿನ ಕಣ್ಣು : ಸುಂದರವಷ್ಟೇ ಅಲ್ಲ... ಸೂಕ್ಷ್ಮವೂ ಹೌದು

ಮಹಿಳೆಯರ ಕಣ್ಣು ಪುರುಷರ ಕಣ್ಣಿಗಿಂತಲೂ ತುಂಬಾ ಸೂಕ್ಷ್ಮ. ಅವರು ಎದುರಿನ ವ್ಯಕ್ತಿಗಳ ಭಾವನೆಗಳನ್ನು ಬರಿಯ ನೋಟವೊಂದರಿಂದಲೇ ತಿಳಿದುಕೊಂಡು ಬಿಡುತ್ತಾರೆ. ಇದು ಪುರುಷರಿಂದ ಅಸಾಧ್ಯ. ಕಣ್ಣು ಮಾತ್ರವಲ್ಲದೇ ಸ್ತ್ರೀಯರ ಎಲ್ಲಾ ಗ್ರಹಣೇಂದ್ರಿಯಗಳೂ ಸಹ ತುಂಬಾ ಸೂಕ್ಷ್ಮ ಸಂವೇದಿಗಳೆಂಬುದರಲ್ಲಿ ಎರಡು ಮಾತಿಲ್ಲ ! ಅದಕ್ಕಾಗಿಯೆ ಹುಡುಗಿಯರೊಂದಿಗೆ ವ್ಯವಹರಿಸುವಾಗ ಹುಡುಗರು ತುಂಬಾ ಎಚ್ಚರಿಕೆಯಿಂದಿರಬೇಕಾಗುತ್ತದೆ. ಏಕೆಂದರೆ ಹುಡುಗನ ಮನದಲ್ಲೇಳುವ ಕಾಮನೆಗಳನ್ನೆಲ್ಲಾ ಹುಡುಗಿ ಅವನ ಮುಖಭಾವದಿಂದಲೇ ಗ್ರಹಿಸಿಬಿಡುವ ಸಾಮಥ್ರ್ಯ ಹೊಂದಿದ್ದಾಳೆ. ತನ್ನೊಂದಿಗೆ ಸ್ನೇಹದಿಂದ ವತರ್ಿಸುವ ಹುಡುಗನನ್ನೂ, ಸ್ನೇಹದ ನೆಪದಲ್ಲಿ ಪ್ರೇಮ ವ್ಯಕ್ತಪಡಿಸುವ ಹುಡುಗನನ್ನೂ ಹುಡುಗಿಯೊಬ್ಬಳು ಬಹುಬೇಗನೆ ಗುರುತಿಸಿಬಿಡುತ್ತಾಳೆ. ಆದರೂ ಕೆಲವು ಹುಡುಗಿಯರು ತಿಳಿದೂ ತಿಳಿಯದಂತಿರುತ್ತಾರೆ. ಅದಕ್ಕೆ ಕಾರಣವೇನೆಂದರೆ ಮುಂದೇನು ಮಾಡಬೇಕೆಂಬುದು ಅವರಿಗೆ ತೋಚುವುದಿಲ್ಲ. ವಿವೇಚನೆಗಿಂತಾ ಭಾವನೆಗೇ ಹೆಚ್ಚು ಮಹತ್ವ ಕೊಡುತ್ತಾರವರು. ಆ ಹುಡುಗನೊಂದಿಗಿನ ಸ್ನೇಹವನ್ನು ಕಳೆದುಕೊಳ್ಳಲಿಚ್ಚಿಸುವುದಿಲ್ಲ. ಈ ಎಲ್ಲಾ ಕಾರಣಗಳಿಂದಾಗಿಯೇ ಹುಡುಗಿಯೊಬ್ಬಳು ಹುಡುಗನೊಂದಿಗಿನ ತನ್ನ ಸ್ನೇಹವನ್ನು ಮುರಿದುಕೊಂಡಳೆಂದರೆ ಅದಕ್ಕೆ ಕಾರಣ ಹೆಚ್ಚಾಗಿ ಅವನೇ ಆಗಿರುತ್ತಾನೆ. ಹೆಣ್ಣಾದವಳು ತನ್ನ ಸುತ್ತ ಮುತ್ತಲಿನ ಆಗು ಹೋಗುಗಳನ್ನೆಲ್ಲ ತುಂಬಾ ಸೂಕ್ಷ್ಮವಾಗಿ, ಅಷ್ಟೇ ವಿವರವಾಗಿ ಗ್ರಹಿಸುತ್ತಾಳೆ. ಗಂಡ ತಡವ