ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ಮೇ, 2018 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಮಳೆ ಶುಭವೋ ಅಶುಭವೋ ?

ಈಗ ಮತ್ತೊಂದು ಸಮಸ್ಯೆ ತಲೆದೋರಿದೆ. ಅದು ಏನೆಂದರೆ ಕುಮಾರಸ್ವಾಮಿ ಪ್ರಮಾಣ ವಚನ ಸ್ವೀಕರಿಸುವಾಗ ಮಳೆ ಬಂದಿದ್ದು ಶುಭ ಸೂಚಕವೋ, ಅಶುಭ ಸೂಚಕವೋ ಅನ್ನೋದು. ಕುಮಾರಸ್ವಾಮಿ ಅವರನ್ನ ಒಪ್ಪುವವರಿಗೆ ಶುಭ ಸೂಚಕವಾಗಿಯೂ, ಒಪ್ಪದವರಿಗೆ ಅಶುಭ ಸೂಚಕವಾಗಿಯೂ ಮತ್ತು ಈ ಶುಭ ಅಶುಭವನ್ನೇ ಒಪ್ಪದ ನನ್ನಂಥವರಿಗೆ ಅದು ಕೇವಲ ಒಂದು ಮಳೆಯಾಗಿಯೂ ಕಾಣಿಸಿದೆ. ನೋಡಿ ಒಂದು ಮಳೆಗೆ ಮೂರು ಮೂರು ಆಯಾಮ ! ಮಳೆ ಬಂದಿದ್ದು ಶುಭ ಅನ್ನುವವರು ಸೀದಾ ದ್ವಾಪರಯುಗಕ್ಕೆ ಹೋಗಿ ಕೃಷ್ಣ ಹುಟ್ಟಿದಾಗ ಬಂದ ಮಳೆಯನ್ನು ಪ್ರಮುಖ ಸಾಕ್ಷಿಯನ್ನಾಗಿ ಕರೆ ತಂದಿದ್ದಾರೆ. ಇನ್ನು ನನ್ನ ಲಿಸ್ಟ್ ನಲ್ಲಿ ಅಶುಭದ ಕಡೆಯವರು ಇಲ್ಲದ ಕಾರಣ ಅವರ ಬತ್ತಳಿಕೆಯಲ್ಲಿ ಏನೆಲ್ಲಾ ಸಾಕ್ಷ್ಯ ಪುರಾವೆಗಳು ಇವೆಯೋ ತಿಳಿದಿಲ್ಲ. ಇಲ್ಲ ಅಂದರೂ ಸಹ ಪೋಸ್ಟ್ ಕಾರ್ಡ್ ಮೂಲಕ ಎಷ್ಟು ಪುರಾವೆಗಳನ್ನು ಬೇಕಿದ್ದರೂ ಅವರು ತಂದು ನಿಲ್ಲಿಸುವ ಶಕ್ತಿ ಇರುವವರು. ಅವರಿಬ್ಬರನ್ನು ಬಿಟ್ಟು ಮೂರನೇ ಗುಂಪಿನ ನಮಗೆ ಹಳೇ ಕಾಲದ ಸಾಕ್ಷಿಗಳು ಸಿಗುವುದು ಕಷ್ಟ. ಹಾಗಾಗಿ ನಾವು ಈಗಿನ ಕಾಲದ ವಿಷಯಗಳನ್ನೇ ಮುಂದಿಡಬೇಕು. ಹಳೆಯ ಕಾಲದ ಸಾಕ್ಷಿಗಳನ್ನೇ ಪರಿಗಣಿಸುವುದಾದರೆ ಕೂಡ ಶುಭ, ಅಶುಭ ಎರಡೂ ಅವರವರಿಗೆ ಸರಿ ಆಗುತ್ತದೆ. ಹೇಗೆಂದರೆ ಕೃಷ್ಣನಿಂದ ಒಳ್ಳೆಯದು ಆದವರಿಗೆ ಆತ ಹುಟ್ಟಿದಾಗ ಮಳೆ ಬಂದುದು ಶುಭ ಸೂಚನೆ ಆಗಿದ್ದರೆ, ಅವನಿಂದ ತೊಂದರೆಗೆ ಒಳಗಾದವರಿಗೆ (ಕೌರವರು) ಅದು ಅಶುಭ ಸೂಚನೆ ಅಲ್ಲವೇ ? ಅದನ್ನು ಹಾಗೆ ಎತ್ತಿಕೊಂಡು ಬಂದು ಕುಮಾರ

ಗುಬ್ಬಿ ಗೂಡು ಮತ್ತು ಅನಾಥ ಮರಿ !

ಆಗ ನಾನು ಕುಂಬಳಗೊಡಿನ ಪೆಪ್ಸಿ ಕಂಪನಿಯ ಸಮೀಪ ಮನೆ ಮಾಡಿಕೊಂಡಿದ್ದೆ. ಆ ಮನೆಯ ಹೊರಗಿನ ಒಂದು ಮೂಲೆಯಲ್ಲಿ ಒಂದು ಜೋಡಿ ಗುಬ್ಬಿಗಳು ಗೂಡು ಮಾಡಿಕೊಂಡು ಇದ್ದವು. ಅವು ಮೊಟ್ಟೆ ಇಟ್ಟು ಮರಿಯನ್ನೂ ಮಾಡಿದವು. ಅದೇ ಸಮಯಕ್ಕೆ ಸರಿಯಾಗಿ ಹತ್ತಿರದಲ್ಲೆ ಇದ್ದ ನನ್ನ ಗೆಳೆಯನ ಮೆಯವರು ಅವರ ಗೋಡೌನ್‌ ಸ್ವಚ್ಚ ಮಾಡುವಾಗ ಅಲ್ಲಿಯೂ ಒಂದು ಗುಬ್ಬಿ ಗೂಡು ಇದ್ದು, ಅದರಲ್ಲೂ ಎರಡು ಮರಿಗಳು ಇದ್ದವು. ಆದರೆ ಅವರು ನೋಡದೇ ಎಳೆದು ಹಾಕಿದ್ದರಿಂದ ಬಿದ್ದು ಒಂದು ಮರಿ ಸತ್ತು ಹೋಗಿ ಮತ್ತೊಂದು ಮರಿ ಮಾತ್ರ ಉಳಿಯಿತು. ಅದನ್ನು ಅವನು ತಂದು ನನಗೆ ಕೊಟ್ಟ. ನಾನದನ್ನು ನಮ್ಮ ಮನೆಯಲ್ಲಿ ಇದ್ದ ಗುಬ್ಬಿ ಗೂಡಿನ ಒಳಗೆ ಇದನ್ನೂ ಬಿಟ್ಟೆ. ಮೂರೂ ಮರಿಗಳೂ ಒಂದೇ ತರ ಇದ್ದವು. ಮೂರೂ ಕಣ್ಣು ಕೂಡಾ ಬಿಟ್ಟಿರಲಿಲ್ಲ. ಆದರೆ ಹೊರಗೆ ಹೋಗಿದ್ದ ತಾಯಿ ಗುಬ್ಬಿ ಬಂದು ತನ್ನ ಮರಿಗಳ ಜೊತೆ ಬೇರೆ ಮರಿಯೊಂದು ಇರುವುದನ್ನು ಹೇಗೋ ಗುರುತಿಸಿ ಅದನ್ನು ಎಳೆದು ಹೊರಗೆ ಹಾಕಿತು. ಅದು ಹೀಗೆ ಮಾಡಬಹುದು ಎಂದು ಮೊದಲೇ ಊಹಿಸಿದ್ದ ನಾನು ಆ ಗೂಡಿನ ನೇರಕ್ಕೆ ಗೋಣಿಚೀಲಗಳನ್ನೆಲಾ ಹಾಕಿ ಮೆತ್ತೆ ಮಾಡಿ ಇಟ್ಟಿದ್ದೆ, ಮರಿ ಬಿದ್ದರೂ ಏನೂ ಆಗಬಾರದು ಅಂತ. ತಾಯಿ ಗುಬ್ಬಿ ಹೊರಗೆ ಹೋದಾಗ ಮತ್ತೆ ಆ ಮರಿಯನ್ನು ಗೂಡಿನೊಳಗೆ ಬಿಟ್ಟರೂ ಮತ್ತೊಮ್ಮೆ ಬಂದಾಗ ಮತ್ತೆ ಹೊರಗೆ ತಳ್ಳಿತು. ಬೇರೆ ದಾರಿ ಕಾಣದೇ ಅನಾಥ ಮರಿಯನ್ನು ತಂದು ಮನೆಯ ಒಳಗೆ ಒಂದು ಮೂಲೆಯಲ್ಲಿ ಗೂಣಿಚೀಲವನ್ನೇ ಗೂಡಿನಂತೆ ಮಾಡಿ ನೀರು ಕುಡಿಸಿ ಮರಿಯನ್ನು ಅಲ