ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ಮಾರ್ಚ್, 2012 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಕನ್ನಡಿಗರಿಗೆ ಏರ್‌ಟೆಲ್ ನಾಮ !

ನಾನು ಏಳೆಂಟು ವರ್ಷದಿಂದ ಏರ್‌ಟೆಲ್ ಪ್ರೀಪೇಡ್ ಮೊಬೈಲ್ ಸಿಮ್‌ಕಾರ್ಡ್‌ ಉಪಯೋಗಿಸುತ್ತಿದ್ದೇನೆ. ಮೂರ್ನಾಲ್ಕು ವರ್ಷದಿಂದ ಮತ್ತೊಂದು ಪೋಸ್ಟ್‌ಪೇಡ್ ಸಿಮ್‌ಕಾರ್ಡ್‌ ಉಪಯೋಗಿಸುತ್ತಿದ್ದೇನೆ. ಒಂದು ವರ್ಷದಿಂದ ಏರ್‌ಟೆಲ್ ಡಿಶ್ ಟಿವಿ ಉಪಯೋಗಿಸುತ್ತಿದ್ದೇನೆ. ಆದರೂ ಇವರ ಸೇವೆ ನನಗೆ ತೃಪ್ತಿದಾಯಕವಾಗಿಲ್ಲ. ಪ್ರಿಪೇಡ್‌ ಸಿಮ್‌ನಲ್ಲಿ ಈ ಹಿಂದೆ ಆಗಾಗ ಇದ್ದಕ್ಕಿದ್ದಂತೆ ದುಡ್ಡು ಕಟಾವು ಆಗುತಿತ್ತು. ಕೇಳಿದರೆ ನೀವು "ಅದನ್ನು ಆಯ್ಕೆ ಮಾಡಿದ್ದೀರಿ, ಇದನ್ನು ಒತ್ತಿದ್ದೀರಿ" ಎಂದು ಕಾಗೆ ಹಾರಿಸುತ್ತಿದ್ದರು. ಒಂದು ಸಲ ಜಗಳ ಮಾಡಿದ ನಂತರ ಕಟಾವು ಆದ ಹಣ ಹಿಂದಿರುಗಿಸಿದ್ದರು. ಯಾವುದಾದರೂ ವಿಷಯವನ್ನು ನೀವು ಪಟ್ಟು ಹಿಡಿದು ಕೇಳಿದರೆ, "ಸರ‍್ ಅರ್ಧ ಗಂಟೆಯಲ್ಲಿ ಸರಿ ಮಾಡಿ ಕೊಡುತ್ತೇವೆ", ಎಂದು ಹೇಳುತ್ತಾರೆ. ಅರ್ಧ ಗಂಟೆ ಕಳೆದ ನಂತರ ಮತ್ತೆ ಕರೆ ಮಾಡಿದರೆ ’ಗ್ರಾಹಕ ಸೇವಾ ಪ್ರತಿನಿಧಿ’ಗಳಿಗೆ ಕರೆ ಹೋಗುವುದೇ ಇಲ್ಲ. ಕಂಪ್ಯೂಟರ‍್ ಆಂಟೀ "ಒಂದು ಒತ್ತಿ, ಎರಡು ಒತ್ತಿ, ಅದನ್ನು ಒತ್ತಿ, ಇದನ್ನು ಒತ್ತಿ’ ಎಂದು ನಮ್ಮ ಸಮಯ ತಿನ್ನುತ್ತಾಳೇಯೇ ಹೊರತೂ, ’ಒಂಬತ್ತು ಒತ್ತಿ’ ಎಂದು ಹೇಳುವುದೇ ಇಲ್ಲ. ಸುಮಾರು ಹದಿನೈದು ದಿನ ನಾವು ಏನೇ ತಿಪ್ಪರಲಾಗ ಹಾಕಿದರೂ ಸಂಪರ್ಕಿಸಲು ಸಾಧ್ಯವಾಗುವುದಿಲ್ಲ. ಅಷ್ಟರಲ್ಲಿ ಆ ವಿಷಯವೇ ಮರೆತು ಹೋಗಿರುತ್ತದೆ. ಎರಡು ವರ್ಷದ ಹಿಂದೆ ಟ್ರಾಯ್ ಸೂಚನೆ ಮೇರೆಗೆ "ಆಜೀವ ಸದಸ್ಯತ

ಎಲ್ಲಾರ್ನೂ ಕಾಯೋ ದೇವ್ರೇ, ನೀ ಎಲ್ಲಿ ಕುಂತಿದ್ದಿ ?

ನಿಜವಾಗಿಯೂ ದೇವರಿದ್ದಾನೆಯೇ? ಎಂದು ಆಸ್ತಿಕರನ್ನು ಕೇಳಿದರೆ ಹೌದು ಎನ್ನುತ್ತಾರೆ. ತೋರಿಸಿ ಎಂದರೆ ಅವರಿಂದ ಅದು ಸಾಧ್ಯವಿಲ್ಲ. ಆದರೆ ಲೋಕದ ಸೃಷ್ಠಿ, ಅನಂತ ವಿಶ್ವ, ವಿಜ್ಞಾನಕ್ಕೂ ಬೇಧಿಸಲಾಗದ ಸಾವಿರಾರು ವಿಷಯಗಳನ್ನು ಕಂಡಾಗ `ದೇವರು ಇರಬಹುದೇ?' ಎಂಬ ಸಂದೇಹ ಮೂಡದಿರದು. ಯಾವ ಯಾವುದೋ ವಿಷಯಗಳತ್ತ ಸಂಶೋಧನೆ ನಡೆಸುವ ವಿಜ್ಞಾನಿಗಳು ದೇವರಿದ್ದಾನೆಯೇ ಎಂಬುದನ್ನು ಸಂಶೋಧಿಸಲು ಮುಂದಾಗಿಲ್ಲ! ದೇವರನ್ನು ಕಣ್ಣಾರೆ ಕಂಡವರು ಎಲ್ಲೂ ದೊರಕುವುದಿಲ್ಲ. ಆದರೂ ಅದರ ಅನುಭೂತಿಯಾದುದರ ಬಗ್ಗೆ ಅಲ್ಲಲ್ಲಿ ಕೇಳಿಬರುವುದುಂಟು. ಅದು ಅವರವರ ಭ್ರಮೆಯೇ? ಅಥವಾ ನಿಜವೇ? ಉತ್ತರ ತಿಳಿದಿಲ್ಲ.  ಅನಾದಿ ಕಾಲದಿಂದ ಹೇಗೆ ದೇವರ ಅಸ್ತಿತ್ವ ನಂಬಿಕೆಯಲ್ಲಿ, ಸಂಪ್ರದಾಯದಲ್ಲಿ ಹಾಸು ಹೊಕ್ಕಾಗಿದೆಯೋ, ಹಾಗೆಯೇ ಅವಘಡಗಳೂ ಸಂಭವಿಸುತ್ತಾ ದೇವರ ಅಸ್ತಿತ್ವದ ನಂಬಿಕೆಯನ್ನೇ ಅಲ್ಲಾಡಿಸುತ್ತಾ ಬಂದಿವೆ. ನಾವು ಕಂಡಿರುವಂತೆಯೇ ಗುಜರಾತ್ ಭೂಕಂಪ, ಓರಿಸ್ಸಾ ಚಂಡಮಾರುತ, ಲಕ್ಷಾಂತರ ಜನರನ್ನು ಬಲಿ ತೆಗೆದುಕೊಂಡ ತ್ಸುನಾಮಿ, ಕುಂಭಕೋಣಂ ಅಗ್ನಿ ದುರಂತದಲ್ಲಿ ಎಳೆ ಹಸುಳೆಗಳು ಸುಟ್ಟು ಕರಕಲಾದುದು `ದೇವರು ಇರಲು ಸಾಧ್ಯವೇ ಇಲ್ಲ' ಎಂಬ ನಾಸ್ತಿಕರ ಹೇಳಿಕೆಯನ್ನು ಪುಷ್ಟೀಕರಿಸುತ್ತವೆ. ಆಸ್ತಿಕರಾದವರಿಗೆ ಅದನ್ನು ಅಷ್ಟು ಸುಲಭವಾಗಿ ಅರಗಿಸಿಕೊಳ್ಳಲಾಗದ ಕಾರ್ಯ. ಅದೇನೇ ನಡೆದರೂ ದೇವರಿಂದಲೇ ನಡೆಯುತ್ತಿದೆಯೆಂಬ ನಂಬುಗೆ. ಒಳ್ಳೆಯದೆಲ್ಲಾ ನಡೆಯುವಾಗ `ಎಲ್ಲಾ ದೇವರ ದಯೆ ಎಂದು ಧನ್ಯತೆಯ

ಭಾರತ ಹಾಕಿ ತಂಡದ ಗೆಲುಮೆಯೋಟ - 2

1928ರಲ್ಲಿ ಮೊದಲ ಬಾರಿಗೆ ಆಮ್ಸಟರ್ ಡಾಮ್ ಒಲಂಪಿಕ್ ಗೆ ಭಾರತದ ಹಾಕಿ ತಂಡ ಹೊರಡುವ ಹೊತ್ತಿಗೆ ದೇಶದಲ್ಲೇನೂ ಹಾಕಿ ಪ್ರಚಲಿತವಾಗಿರಲಿಲ್ಲ. ಹಾಗೆ ನೋಡಿದರೆ ಜನರಿಗೆ ಈಗ ಹಾಕಿಯ ಬಗ್ಗೆ ಇರುವ ಪರಿಚಯವಾಗಲಿ ಆಸಕ್ತಿಯಾಗಲಿ ಆಗ ಇರಲೇ ಇಲ್ಲ. ಪತ್ರಿಕೆಗಳೂ ಇಷ್ಟೊಂದು ಇರಲಿಲ್ಲ. ಇದ್ದಂತಹ ಪತ್ರಿಕೆಗಳೆಲ್ಲಾ ಸ್ವಾತಂತ್ರ್ಯ ಹೋರಾಟದ ವಿಷಯಗಳಿಗೇ ಮೀಸಲಾಗಿದ್ದವು. ಒಲಂಪಿಕ್ ಅಂದರೇನೆಂದೆ ತಿಳಿಯದ ಜನರಿಗೆ ಅಲ್ಲಿ ಹೋಗಿ ಭಾರತದವರು ಹಾಕಿ ಆಡುತ್ತಾರೆಂಬ ವಿಷಯ ತಿಳಿಸುವ ದರ್ದು ಆಗ ಪತ್ರಿಕೆಗಳಿಗೂ ಇರಲಿಲ್ಲ. ಒಂದು ವೇಳೆ ಯಾವುದಾದರೊಂದು ಪತ್ರಿಕೆ ಪ್ರಕಟಿಸಿದರೂ ಜನರಿಗದು ಬೇಕೂ ಆಗಿರಲಿಲ್ಲ. ಕೆಲವು ಪತ್ರಿಕೆಗಳಲ್ಲಿ ಮೂಲೆಯ ಸುದ್ದಿಯಾಗಿ ಅದು ಪ್ರಕಟವಾಗಿತ್ತಷ್ಟೇ. ಆ ವರ್ಷದ ಭಾರತದಿಂದ ಬೇರಾವ ಸ್ಪರ್ಧಿಗಳೂ ಒಲಂಪಿಕ್‌ಗೆ ಭಾಗವಹಿಸಲು ಹೊರಡಲಿಲ್ಲ. ಹೊರಟದ್ದು ದ್ಯಾನ್‌ಚಂದ್ ನೇತೃತ್ವದ ಹಾಕಿ ತಂಡವೊಂದೇ. ಅಂದು ಮುಂಬೈ ಬಂದರಿನಲ್ಲಿ ಅಮ್ಸರ್‌ಡಾಮ್‌ಗೆ ಹೊರಡಲು ಹಡಗನ್ನೇರಿದ ಭಾರತದ ಹಾಕಿ ತಂಡವನ್ನು ಬೀಳ್ಕೊಡಲು ಅಲ್ಲಿದ್ದುದು ಮೂರೇ ಜನ! ಹಾಕಿ ಫೆಡರೇಷನ್‌ನ ಅಧ್ಯಕ್ಷ, ಕಾರ್ಯದರ್ಶಿ, ಹಾಗೂ ಒಬ್ಬ ಪತ್ರಕರ್ತ. ಆ ಪತ್ರಕರ್ತನಿಲ್ಲದೇ ಹೋಗಿದ್ದರೆ ಅಲ್ಲಿ ಮೂರು ಜನರಾದರೂ ಇದ್ದರು ಎಂಬ ವಿಷಯವೂ ತಿಳಿಯುತ್ತಿರಲಿಲ್ಲ! ಹೀಗೆ ಹೊರಟಿತ್ತು ನಮ್ಮ ತಂಡ. ಅದರ ನಂತರದ  ವಿಜಯೋತ್ಸವವನ್ನು ಹಿಂದಿನ ಸಂಚಿಕೆಯಲ್ಲೇ ಓದಿದ್ದೀರಿ. ನಂತರದ ಸತತ ಆರು ವಿಜಯಗಳ ನಂತರ ಭಾರತದ ಹ

ಕತ್ತಲಲ್ಲಿ ಕಾನೂನು... ವಕೀಲರ ಗೂಂಡಾಗಿರಿ !

ಇಂದು ವಕೀಲರು ಪತ್ರಕರ್ತರ ಮೇಲೆ ನಡೆಸಿದ ಅಮಾನವೀಯ ಹಲ್ಲೆ ನಾಗರಿಕ ಸಮಾಜ ತಲೆ ತಗ್ಗಿಸುವಂತದ್ದು. ಆದರೆ ಆಶ್ಚರ್ಯ ಪಡುವಂತದ್ದು ಏನೂ ಇಲ್ಲ. ಏಕೆಂದರೆ ಇದು ಮೊದಲೇನಲ್ಲ, ಕೊನೆಯೂ ಅಗುವುದಿಲ್ಲ. ಏಕೆಂದರೆ ನಮ್ಮ ವ್ಯವಸ್ಥೆ ಸದ್ದಿಲ್ಲದೇ ಹದಗೆಟ್ಟಿದೆ. ಒಳಗೊಳಗೇ ಕೊಳೆತಿರುವ ಈ ಸಮಾಜದಲ್ಲಿ ಇಂತಹ ಘಟನೆಗಳು ಆಗಾಗ ಮರುಕಳಿಸುತ್ತಲೇ ಇರುತ್ತವೆ. ಇಂದು ವಕೀಲರು ಮಾಡಿದ್ದನ್ನು ನಾಳೆ ಪೊಲೀಸರು ಮಾಡಬಹುದು. ನಾಡಿದ್ದು ಇನ್ಯಾರೋ ಮಾಡಬಹದು. ಇದಕ್ಕೆಲ್ಲಾ ಕಾರಣಗಳು ಅನೇಕ... ಆದರೆ ಮೂಲ ಒಂದೇ... ವ್ಯವಸ್ಥೆ ಹದಗೆಟ್ಟಿದೆ. ಇಲ್ಲಿ ಉತ್ತಮ ಸಮಜದ ನಿರ್ಮಾಣದ ಕನಸು ಕಾಣುವವರಿಗಿಂತಲೂ ಅಕ್ರಮ ಸಂಪಾದನೆಯ ಕನಸು ಕಾಣುತ್ತಿರುವವರೇ ಅಧಿಕ. ಹೀಗಾಗಿ ಸಮಾಜ ಘಾತುಕರ ನಡುವೆ ಉತ್ತಮ ಸಂಬಂಧ ಏರ್ಪಟ್ಟಿದೆ. ಹಣ ಹೆಚ್ಚು ಹೇಗೆ ಬರುತ್ತೋ ಆ ಕಡೆಗೆ ಜನರ ಮನನ್ಸು ಒಲಿಯುತ್ತಿದೆ. ಇದಕ್ಕೆ ನ್ಯಾಯವಾದಿಗಳೇನೂ ಹೊರತಾಗಿಲ್ಲ. ಭ್ರಷ್ಟರೊಂದಿಗೆ ಕೈ ಜೋಡಿಸುತ್ತಿರುವ ಅನೇಕ ನ್ಯಾಯವಾದಿಗಳಿಗೆ ಸಹಜವಾಗಿಯೇ ’ಭ್ರಷ್ಟರಿಗೆ ದುಸ್ವಪ್ನವಾಗಿರುವ’ ಸುದ್ದಿ ವಾಹಿನಿಗಳ ಬಗ್ಗೆ ಆಕ್ರೋಶವಿದೆ. ಇದರ ಜೊತೆ ಜಾತಿ ರಾಜಕೀಯ ವಕೀಲರನ್ನು ಬಿಟ್ಟಿಲ್ಲ. ಯಡಿಯೂರಪ್ಪನನ್ನು ಬೆತ್ತಲು ಮಾಡಿ ಮಾನ ಕಳೆದ ಸುದ್ದಿ ವಾಹಿನಿಗಳ ಮೇಲೆ ಜಾತಿಯ ಕಾರಣಕ್ಕೇ ಸಿಟ್ಟುಗೊಂಡಿರುವವರಿದ್ದಾರೆ. ಅದೇ ರೀತಿ ಜನಾರ್ದನ ರೆಡ್ಡಿಯ ವಿಷಯದಲ್ಲೂ ನಡೆದಿದೆ. ಆತನ ಬಿಟ್ಟಿ ದುಡ್ಡು ತಿಂದ ಕೆಲವು ನ್ಯಾಯವಾದಿಗಳು ಇಂ