ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

2019 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಎಂ.ಹೆಚ್. 370 ನಿಗೂಢ ಕಣ್ಮರೆ!

ಮಾರ್ಚ್ 8, 2014 ರ ನಡುರಾತ್ರಿ ಹನ್ನೆರಡೂವರೆಗೆ ಸರಿಯಾಗಿ ಕೌಲಾಲಂಪುರ ದಿಂದ ಒಂದು ವಿಮಾನವು ಹೊರಡುತ್ತೆ. ಅದು ಮರುದಿನ ಬೆಳಗ್ಗೆ 6.30 ರ ಹೊತ್ತಿಗೆ ಚೀನಾದ ಬೀಜಿಂಗ್ ನ್ನು ಹೋಗಿ ಸೇರಬೇಕು. ಆದರೆ ಮರುದಿನ ಬೆಳಿಗ್ಗೆ ಅದು ಎಷ್ಟು ಹೊತ್ತು ಕಳೆದರೂ ಬೀಜಿಂಗ್ ಹೋಗಿ ಸೇರಲೇ ಇಲ್ಲ. ಅದಾಗಿ ಬರೋಬ್ಬರಿ ಐದು ವರ್ಷಗಳು ಕಳೆಯುತ್ತಾ ಬಂದರೂ ಇದುವರೆಗೂ ಕೂಡ ವಿಮಾನವು ಏನಾಯ್ತು, ಎಲ್ಲಿ ಹೋಯಿತು, ಈಗ ಎಲ್ಲಿದೆ, ಸಮುದ್ರಕ್ಕೆ ಬಿದ್ದು ಹೋಯಿತ, ಸಿಡಿದು ಹೋಯಿತಾ, ಸುಟ್ಟು ಬೂದಿ ಅಗೋಯ್ತಾ, ಅಥವಾ ಅನ್ಯಗ್ರಹ ವಾಸಿಗಳು ಏನಾದ್ರು ಅಪಹರಣ ಮಾಡ್ಕೊಂಡು ತಗೊಂಡೆ ಹೋಗ್ಬಿಟ್ರ ಏನಾಯ್ತು ಅನ್ನುವ ಸುಳಿವು ಸಿಕ್ಕಿಲ್ಲ. ಆ ವಿಮಾನದ ಹೆಸರು ಮಲೇಶಿಯನ್ 370. ಅದರಲ್ಲಿ ಇದ್ದಿದ್ದು 229 ಜನ ಪ್ರಯಾಣಿಕರು ಮತ್ತು 12 ಜನ ಸಿಬ್ಬಂದಿಗಳು. ಈ ವಿಮಾನದ ಕಣ್ಮರೆಯು ವಿಮಾನಗಳ ಇತಿಹಾಸದಲ್ಲೇ ಅತಿದೊಡ್ಡ ಒಗಟಾಗಿ ಉಳಿದಿದೆ. ಅತ್ಯಾಧುನಿಕ ತಂತ್ರಜ್ಞಾನದ ಈ ಕಾಲದಲ್ಲಿಯೂ ಈ ರೀತಿ ನೂರಾರು ಜನರು ತುಂಬಿರುವ ದೊಡ್ಡದೊಂದು ವಿಮಾನವು ಕಳೆದು ಹೋಗುವುದು ಅಂದರೆ ನಂಬಲು ಕಷ್ಟವಾದರೂ ನಂಬಲೇ ಬೇಕಾಗಿದೆ. ಎಂ.ಎಚ್. 370 ವಿಮಾನವು ಬೀಜಿಂಗ್ ಮತ್ತು ಕೌಲಾಲಂಪುರ್ ನಡುವೆ ಪ್ರತಿದಿನವೂ ಓಡಾಡುತ್ತಿರುತ್ತದೆ. ಕೌಲಾಲಂಪುರ್ ಇಂದ ಬೀಜಿಂಗ್ ಗೆ 5.30 ಘಂಟೆಗಳ ಪ್ರಯಾಣ. ಅಂದು ಆ ವಿಮಾನದಲ್ಲಿ 49000 ಕೆಜಿಯಷ್ಟು ಉರುವಲು ಇತ್ತು. ಇದು ಸುಮಾರು ಏಳು ಮುಕ್ಕಾಲು ಗಂಟೆಗಳಷ್ಟು ಹೊತ್ತು ಹಾರಾಡಲು ಸಾ

ಹುಡುಗಿಯರು ಯಾಕೆ 'ತುಂಬಾ ಒಳ್ಳೆಯ ಹುಡುಗ'ರನ್ನ ಪ್ರೀತಿ ಮಾಡಲ್ಲ ?

ತುಂಬಾ ಸಲ ಹುಡುಗರು ಹೇಳ್ತಾ ಇರೋದನ್ನು ಕೇಳಿರುತ್ತೇವೆ ಏನೆಂದರೆ ಹುಡುಗೀರು ಎಂಥೆಂಥವರನ್ನೋ ಪ್ರೀತಿ ಮಾಡುತ್ತಾರೆ ಆದರೆ ನಮ್ಮಂಥ ಒಳ್ಳೆ ಹುಡುಗನ ಪ್ರೀತಿ ಮಾಡಲ್ಲ ಅಂತ. ಇದು ನಿಜ ಕೂಡ. ತುಂಬಾ ಒಳ್ಳೆ ಹುಡುಗರನ್ನ ಹುಡುಗಿಯರು ಯಾಕೆ ಪ್ರೀತಿ ಮಾಡಲ್ಲ ಅನ್ನೋ ಪ್ರಶ್ನೆ ನಿಮ್ಮನ್ನು ಕಾಡ್ತಾ ಇದ್ರೆ ಈ ವಿಡಿಯೋನ ನೋಡಿ. ಸಾಧಾರಣವಾಗಿ "ತುಂಬಾ ಒಳ್ಳೆಯ ಹುಡುಗ"ರನ್ನು ಯಾವ ಹುಡುಗಿ ಕೂಡ ಪ್ರೀತಿ ಮಾಡೋದಿಲ್ಲ. ಅಂತಹ ಹುಡುಗರ ಜೊತೆ ಹುಡುಗೀರು ಗೆಳೆತನ ಮಾಡ್ತಾರೆ, ಚೆನ್ನಾಗಿ ಮಾತನಾಡುತ್ತಾರೆ, ಹೆಲ್ಪ್ ತಗೊಳ್ತಾರೆ ಮತ್ತು ತಮ್ಮ ಕಷ್ಟ ಸುಖಗಳನ್ನ ಹೇಳಿಕೊಳ್ಳುತ್ತಾರೆ. ಆದರೆ ಅಪ್ಪಿ ತಪ್ಪಿಯೂ ಪ್ರೀತಿ ಮಾತ್ರ ಮಾಡೋದಿಲ್ಲ. ಒಂದು ವೇಳೆ ಮಾಡಿದರೂ ಕೂಡ ಆ ಪ್ರೀತಿ ತುಂಬಾ ದಿನ ಬಾಳೋದು ಕಷ್ಟ. ನಿಧಾನವಾಗಿ ಹುಡುಗೀರು ಆ "ತುಂಬಾ ಒಳ್ಳೆಯ ಹುಡುಗ"ರಿಂದ ದೂರಾಗಿ ಬಿಡುತ್ತಾರೆ. ಅದೇ ಹುಡುಗಿಯರು ಒರಟರನ್ನು, ಪಟಿಂಗರನ್ನು, ರೋಡ್ ರೋಮಿಯೋಗಳನ್ನು, ಪೊರ್ಕಿಗಳನ್ನು, ಕಣ್ಣು ಮುಚ್ಚಿಕೊಂಡು ಪ್ರೀತಿ ಮಾಡ್ತಾ ಇರ್ತಾರೆ. ಇದು ಒಳ್ಳೆಯ ಹುಡುಗರ ಪಾಲಿಗೆ ಬಿಡಿಸಲಾಗದ ಒಗಟಾಗಿ ಕಾಡುತ್ತೆ. ತುಂಬಾ ಹುಡುಗರಿಗೆ ಹುಡುಗಿಯರ ಈ ನಿಲುವು ಅರ್ಥವಾಗುವುದೇ ಇಲ್ಲ. ಹಾಗಾಗಿ ಎಷ್ಟೋ ಜನ ತಮ್ಮ ಪ್ರೀತಿಯನ್ನು ಉಳಿಸಿಕೊಳ್ಳಲು ಹಣ ಮತ್ತು ಸಮಯವನ್ನು ಕಳೆಯುತ್ತಿರುತ್ತಾರೆ. ಆದರೆ ಇಂತಹ ಗೆಳೆತನಗಳು ಪ್ರೀತಿಯಾಗಿ ಬದಲಾಗದೆ, ಅಥವಾ ಒಂದು ಬದಿಯ ಪ್ರೀತಿ ಮಾತ