ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ಜುಲೈ, 2017 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ವೇಶ್ಯಾವೃತ್ತಿ ಕಾನೂನುಬದ್ದಗೊಳ್ಳಲಿ...

ಕೆಲವು ವರ್ಷದ ಹಿಂದೆ ಒಬ್ಬರು ಕನ್ನಡದ ನಟಿ ( ತಾರಾ ಅವರು ಅಂತ ನೆನಪು ) "ವೇಶ್ಯಾವಾಟಿಕೆ ಯನ್ನು ಕಾನೂನು ಬದ್ಧಗೊಳಿಸಬೇಕು" ಅಂತ ಹೇಳಿದ್ದರು. ಅದನ್ನು ಅಂದು ಬಹಳಷ್ಟು ಮಂದಿ ವಿರೋಧ ಮಾಡಿದ್ದರು. ಅದನ್ನು ನಾನು ಬೆಂಬಲಿಸಿ ಫೇಸ್‌ಬುಕ್‌ನಲ್ಲಿ ಹಂಚಿಕೆ ಮಾಡಿದಾಗ ಅಲ್ಲಿಯೂ ತುಂಬಾ ಜನ ವಿರೋಧ ಮಾಡಿದ್ದರು. "ನಿನ್ನ ಅಕ್ಕ, ತಂಗಿ ಆ ವೃತ್ತಿಯಲ್ಲಿ ಇದ್ದಿದ್ದರೂ ಹೀಗೆ ಬೆಂಬಲ ಕೊಡುತಿದ್ಯಾ?" ಅಂತಲೂ ಕೇಳಿದ್ದರು. ವೇಶ್ಯಾವಾಟಿಕೆ ನಿರ್ಮೂಲನೆ ಹೇಗೆ ? ಅಂತ ತಿರುಗಿ ಕೇಳಿದರೆ ಅದಕ್ಕೆ ಕಾನೂನು ಇದೆಯಲ್ಲ ಅಂದಿದ್ದರು..  ಅದಾಗಿ ಐದಾರು ವರ್ಷಗಳೇ ಕಳೆದಿವೆ. ಈಗಲೂ ವೇಶ್ಯಾವಾಟಿಕೆ ಯಲ್ಲಿ ನಮ್ಮ ರಾಜ್ಯದಲ್ಲೇ ಒಂದು ಲಕ್ಷಕ್ಕೂ ಹೆಚ್ಚು ಮಂದಿ ತೊಡಗಿಸಿಕೊಂಡಿದ್ದಾರೆ ಅನ್ನೋ ವರದಿ ಬಂದಿದೆ !! ವೇಶ್ಯಾವಾಟಿಕೆ ವಿರೋಧಿ ಕಾನೂನು ಹಾಗೆಯೇ ಇದೆ, ಆದರೆ ಆ ದಂದೆ ಮಾತ್ರ ನಿಂತಿಲ್ಲ. ಅದರಲ್ಲಿ ತೊಡಗಿಸಿಕೊಂಡಿರುವ ಆ ಲಕ್ಷಕ್ಕೂ ಹೆಚ್ಚು ಮಹಿಳೆಯರ ಮಾಹಿತಿ ಯಾರ ಬಳಿಯೂ ಇಲ್ಲ ! ಅವರಿಂದ ಬರುವ ಆದಾಯ ಅವರಿಗೇ ಸಿಗುತ್ತಿದೆ ಅಂತ ಯಾರಾದರೂ ಹೇಳಲು ಸಾದ್ಯವೇ ? ವಿಟರಿಂದ, ಪೊಲೀಸರಿಂದ ಮತ್ತು ದಂದೆ ನಡೆಸುವವರಿಂದ ನಡೆಯುತ್ತಿರುವ ದೌರ್ಜನ್ಯವನ್ನು ಯಾರು ತಡೆಯಲು ಸಾಧ್ಯ ಹೇಳಿ. 'ಕೊಳಕು ಎಷ್ಟಾದರೂ ಇರಲಿ, ಅದು ಎದುರಿಗೆ ಕಾಣಿಸದಿದ್ದರೆ ಸಾಕು' ಅನ್ನುವಂತಿದೆ ಇವರು ಹೇಳುವುದು. [ ಕೃಪೆ : ಪ್ರಜಾವಾಣಿ ೧೫ ಜುಲೈ ೨೦೧೭