ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ಡಿಸೆಂಬರ್, 2013 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಅ‘ಳ‘ಬೇಡ, ಕ‘ಳ‘ವ‘ಳ‘ ಬೇಡ, ಸ್ಯಾಮ್‌ಸಂಗ್‌ನವರಿಗೆ ಕನ್ನಡ ‘ಳ‘ ಬೇಡ !

'ಪಾಪಿ ಸಮುದ್ರಕ್ಕೆ ಹಾರಿದರೂ ಮೊಣಕಾಲುದ್ದ ನೀರು' ಅನ್ನೋ ಮಾತು ಅಂತೂ ಧೃಡವಾಯ್ತು. ಕಾರಣ ಇಷ್ಟೇ, ಮೊಬೈಲ್‌ನಲ್ಲಿ ಕನ್ನಡ ಬರೆಯಬೇಕೆಂಬ ನನ್ನ ಬಹುದಿನಗಳ ಕನಸು ಕನಸಾಗಿಯೇ ಇತ್ತು. ಆರ್ಥಿಕ ಸಂಕಷ್ಟದಿಂದಾಗಿ ಒಂದು ಉತ್ತಮ ಸ್ಮಾರ್ಟ್‌‌ಫೋನ್ ಕೊಂಡು ಸ್ನೇಹಿತರಿಗೆ ಕನ್ನಡದಲ್ಲಿ ಸಂದೇಶ ರವಾನಿಸಿ ಖುಷಿ ಪಡುವ ದಿನವು ದೂರವೇ ಇದ್ದವು. ಒಂದು ದಿನ ಅವಸರದಲ್ಲಿ ಹೋಗಿ ಎಲ್‌ಜಿ ಸ್ಮಾರ್ಟ್‌‌ಫೋನ್ ಒಂದನ್ನು ಕೊಂಡು ತಂದೆ. ಕೊಂಡು ತಂದಿದ್ದು ಅವಸರದಲ್ಲಾದ್ದರಿಂದ ಅದರಲ್ಲಿ ಕನ್ನಡ ಇದೆಯೇ, ಅದಕ್ಕೆ ಕನ್ನಡ ಕಲಿಸಬಹುದೇ ಎಂಬುದನ್ನೆಲ್ಲಾ ಯೋಚಿಸಿರಲೇ ಇಲ್ಲ. ನನ್ನ ಅದೃಷ್ಟವೂ ನೆಟ್ಟಗಿರಲಿಲ್ಲ ಅಂತ ಕಾಣುತ್ತೆ. ನಾನು ತಂದ ಎಲ್‌.ಜಿ ಇ-೪೦೦ ಹ್ಯಾಂಡ್‌ಸೆಟ್‌ನಲ್ಲಿ ಕನ್ನಡ ಇರುವುದಂತಿರಲಿ ಅದಕ್ಕೆ ಕನ್ನಡ ತುಂಬುವುದೂ ಸಾಧ್ಯವಿರಲಿಲ್ಲ. ಇದರಿಂದ ತುಂಬಾ ನಿರಾಶಿತನಾದೆ. ಸ್ನೇಹಿತರು 'ಸ್ಯಾಮ್‌ಸಂಗ್ ಗೆಲಾಕ್ಸಿ' ತಗೊ, ಅದು ಕನ್ನಡ ಚೆನ್ನಾಗಿ ಬೆಂಬಲಿಸುತ್ತದೆ ಎಂದರು. ಅಂದಿನಿಂದ ಒಂದು ಸ್ಯಾಮ್‌ಸಂಗ್ ಸ್ಮಾರ್ಟ್‌‌ಫೋನ್ ಪಡೆಯಲೇ ಬೇಕೆಂದು ಸಿದ್ಲಿಂಗು ತರ ದುಡ್ಡು ಹೊಂದಿಸತೊಡಗಿದೆ. ಕೊನೆಗೂ ಸತತ ಆರು ಮಾಸದ ಪರಿಶ್ರಮದ ನಂತರ ಸ್ಯಾಮ್‌ಸಂಗ್ ಗೆಲಾಕ್ಸಿ ಪಡೆಯುವ ಮಟ್ಟಕ್ಕೆ ಬಂದೆ ಅಂತ ಆಯ್ತು. ನಾನು ಹೊಂದಿಸಿದ ಕೆಲವೇ ಸಾವಿರ ರೂಪಾಯಿಗೆ ಸ್ಯಾಮ್‌ಸಂಗ್ ಗೆಲಾಕ್ಸಿ ಟ್ರೆಂಡ್ ಎಂಬ ಮೊಬೈಲ್ ಸೂಕ್ತ ಅನ್ನಿಸಿತು. ಇದರ ಬಗ್ಗೆ  ಅಂತರ್ಜಾಲದಲ್ಲಿ ಸಿ

ಸಲಿಂಗ ಕಾಮ ಶಿಕ್ಷೆ ಕೊಡುವಂತಾ ತಪ್ಪಾ ?

'ಸಲಿಂಗ ಕಾಮ ಶಿಕ್ಷಾರ್ಹ ಅಪರಾಧ!' ಅಂತ ಸುಪ್ರೀಂ ಕೋರ್ಟು ತೀರ್ಪು ಬರೆಯುವುದರೊಂದಿಗೆ  ಅಷ್ಟೊಂದು ಬಹಿರಂಗವಾಗಿರದಿದ್ದ ಸಲಿಂಗ ಕಾಮದ ವಿಷಯ ಬಯಲಿಗೆ ಬಿದ್ದಿದೆ. ಸಲಿಂಗ ಕಾಮವೆಂದರೆ ಹೆಸರೇ ಹೇಳುವಂತೆ ಗಂಡು ಗಂಡಿನೊಂದಿಗೆ ಹಾಗೂ ಹೆಣ್ಣು ಹೆಣ್ಣಿನೊಂದಿಗೆ ಸಲ್ಲಾಪ ನಡೆಸುವ ಮೂಲಕ ಕಾಮವನ್ನು ಹಂಚಿಕೊಳ್ಳೂವುದು, ಹಾಗೂ ತೀರಿಸಿಕೊಳ್ಳುವುದು. ಇದು ಕೆಲವರಿಗೆ ಅಸಹ್ಯ ಅನ್ನಿಸಿದರೂ, ತಪ್ಪು ಅನ್ನಿಸಿದರೂ, ಸುಪ್ರೀಂ ಕೋರ್ಟು 'ಒದ್ದು ಜೈಲಿಗೆ ಹಾಕಿ' ಅಂದರೂ ಇದನ್ನು ಮಾಡಿಕೊಳ್ಳುವವರನ್ನು ತಡೆಯಲಾದೀತೆ ? ಏಕೆಂದರೆ ದ್ವಿಲಿಂಗಿಗಳ ಸಲ್ಲಾಪದಂತೆಯೇ ಸಲಿಂಗಿಗಳ ಸಲ್ಲಾಪ ಸಹ ಬಹುತೇಕ ನಾಲ್ಕು ಗೋಡೆಗಳ ನಡುವೆಯೇ ನಡೆಯುವ ಕ್ರಿಯೆಯಲ್ಲವೆ ? ಕಾರಣವೇನು ? ಈ ಲೋಕದ ಪ್ರತಿ ಜೀವಿಯೂ ಒಂದಲ್ಲ ಒಂದು ರೀತಿಯಲ್ಲಿ ಕಾಮವನ್ನು ವ್ಯಕ್ತ ಪಡಿಸುವುದನ್ನು ಕಾಣುತ್ತೇವೆ. ಕಾಮದ ಪರಿಮಾಣ ಹೆಚ್ಚು ಕಡಿಮೆ ಇರಬಹುದೇ ಹೊರತೂ ಅದು ಇಲ್ಲವೇ ಇಲ್ಲ ಎಂದು ಹೇಳಲಾಗದು. ಜೀವಿಗಳ ವಂಶೋದ್ದಾರಕ್ಕೆ ಕಾಮ ಪ್ರಮುಖ ಪಾತ್ರ ವಹಿಸುತ್ತದೆ. ಪ್ರಾರಂಭದಲ್ಲಿ ಕಾಮವು ಪ್ರಕೃತಿದತ್ತವಾಗಿ ಶುರುವಾಗಿದ್ದೇ ವಂಶೋದ್ದಾರಕ್ಕಾಗಿ. ಮಾನವ ನಾಗರಿಕತೆಗೆ ಕಾಲಿಟ್ಟ ನಂತರ ಹೆಚ್ಚು ಹೆಚ್ಚು ಸುಖಗಳನ್ನು ಅರಸತೊಡಗಿದ. ಅವುಗಳಲ್ಲಿ ಸುಲಭಕ್ಕೆ ಸಿಕ್ಕಿದ್ದೇ ಕಾಮ. ಏಕೆಂದರೆ ಇದನ್ನು ಹುಡುಕಿಕೊಂಡು ಬೇರೆಲ್ಲೋ ಕಾಡು ಮೇಡು ಅಲೆಯುವ ಅಗತ್ಯ ಇರಲೇ ಇಲ್ಲವಲ್ಲ ?! ತನ್ನೊಳಗೇ ಹುಟ್ಟಿಕೊಳ್ಳುತ್ತಿ

ಧನ್ಯವಾದಗಳು ‘ಪ್ರಜಾವಾಣಿ ಮೆಟ್ರೋ‘

ಪ್ರಜಾವಾಣಿ ಪತ್ರಿಕೆಯ ಮೆಟ್ರೋ ಪುರವಣಿಯ ಇಂದಿನ ಸಂಚಿಕೆಯ ಮೂರನೆ ಪುಟದಲ್ಲಿ ನನ್ನ ಬ್ಲಾಗ್ ಬಗ್ಗೆ ಲೇಖನ ಪ್ರಕಟವಾಗಿದೆ. ನಾನಿಲ್ಲಿ ಅನೇಕ ಋಣಾತ್ಮಕ ವಿಷಯಗಳ ಬಗ್ಗೆ ಬರೆದರೂ 'ಸಾಕ್ಷಿ'ಯವರು ಮತ್ರ ಬ್ಲಾಗ್ ಬಗ್ಗೆ ಧನಾತ್ಮಕವಾಗಿಯೇ ಬರೆದಿದ್ದಾರೆ. ಇದಕ್ಕಾಗಿ ಲೇಖಕರು ಹಾಗೂ ಪ್ರಜಾವಾಣಿಗೆ ನನ್ನ ಧನ್ಯವಾದಗಳು. ಈ ಲೇಖನದಲ್ಲಿ ಎರಡು ವಿಷಯಗಳ ಪ್ರಸ್ತಾಪದ ಬಗ್ಗೆ ಕೊಂಚ ವಿವರಣೆ ಕೊಡಬೇಕು ಅನ್ನಿಸಿದೆ. ಮೊದಲನೆಯದು 'ಬ್ಲಾಗ್ ಶೀರ್ಷಿಕೆಯ ಲಾಲಿತ್ಯಕ್ಕೆ ವಿರುದ್ಧವಾಗಿ ಶ್ರೀಪತಿ ಅವರು ಸಮಕಾಲೀನ ಸಂಗತಿಗಳನ್ನು ಗಟ್ಟಿ ದನಿಯಲ್ಲಿ ಚರ್ಚಿಸಿರುವುದು ಬ್ಲಾಗ್‌ನ ವಿಶೇಷ.' ಎಂದು ಸಾಕ್ಷಿಯವರು ಹೇಳಿದ್ದಾರೆ. ನಿಜ, 'ಪಿಸುಮಾತು' ಹೆಸರಿಗೂ ನಾನು ಬರೆಯುತ್ತಿರುವ ವಿಷಯಗಳಿಗೂ ಬಹಳಷ್ಟು ವೈರುಧ್ಯವಿದೆ. ಪಿಸುಮಾತು ಹೆಸರಿನ ಮಾಸ ಪತ್ರಿಕೆ ಶುರು ಮಾಡಿದಾಗಿನಿಂದ (೨೦೦೪) ಈ ಹೆಸರು ನನ್ನೊಂದಿಗೆ ತಳಕು ಹಾಕಿಕೊಂಡಿದೆ. ಅದರಿಂದ ಬಿಡಿಸಿಕೊಳ್ಳಲು ಆಗಿಲ್ಲ. ಮೊದಲಿಗೆ ಈ ಬ್ಲಾಗ್ ಶುರು ಮಾಡುವಾಗ ಕಥೆ, ಕವನ, ಲಘು ಲೇಖನಗಳನ್ನೇ ಬರೆಯಬೇಕು ಅಂತ ಅಂದುಕೊಂಡಿದ್ದೆ. ಆದರೆ ಈ ಸಮಾಜದ ಕ್ರೂರತೆಗಳನ್ನು, ವಂಚನೆಗಳನ್ನ ನೋಡುತ್ತಾ ನೋಡುತ್ತಾ ಋಣಾತ್ಮಕ ವಿಷಯಗಳನ್ನ ಬರೆಯದೇ ಇರಲು ಆಗಲಿಲ್ಲ. ಅಂತಹ ವಿಷಯಗಳಿಗಾಗಿ ಮತ್ತೊಂದು ಬ್ಲಾಗ್ ರಚಿಸುವ ಯೋಚನೆ ಬಂದರೂ 'ಆಗಿದ್ದಾಗ್ಲಿ, ಓದೋದು ಓದ್ತಾರೆ, ಬಿಡೋರು ಬಿಡ್ತಾರೆ' ಎಂಬ ಉಡಾಪೆಯಿಂದಲೇ ಇದ

ಜನರ ಹೃದಯ ಸಿಂಹಾಸನವೇರದ ರಾಜ !

ನಿನ್ನೆ ತೀರಿಕೊಂಡ ಮೈಸೂರು ರಾಜವಂಶದ ಕೊನೆಯ ಕುಡಿ ಶ್ರೀಕಂಠದತ್ತ ಒಡೆಯರ‍್ ಅವರಿಗೆ ನನ್ನ ಶ್ರದ್ದಾಂಜಲಿಗಳಿವೆ. ಒಬ್ಬ ವ್ಯಕ್ತಿ ತೀರಿಕೊಂಡಾಗಲೂ ಅವರ ಬಗ್ಗೆ ಋಣಾತ್ಮಕವಾಗಿ ಯೋಚಿಸಬಹುದಾ ? ಬರೆಯಬಹುದಾ ? ಅಂತ ಕೇಳಬಹುದು. ಧನಾತ್ಮಕವಾಗಿ ಯೋಚಿಸಲು ಯಾವುದೇ ವಿಷಯವನ್ನು ಬಿಟ್ಟು ಹೋಗದ ವ್ಯಕ್ತಿಯ ಬಗ್ಗೆ ಋಣಾತ್ಮಕ ಯೋಚನೆಗಳೇ ಬರುವುದು. ನಿಜ, ಎಲ್ಲಾ ವ್ಯಕ್ತಿಗಳಲ್ಲೂ ಅದರಲ್ಲೂ ಮೇಲ್ಮಟ್ಟದ ವ್ಯಕ್ತಿಗಳ ಜೀವನವನ್ನು ಅವಲೋಕಿಸಿದಾಗ ಅವರೆಷ್ಟೇ ಉತ್ತಮ ಜೀವನ ನಡೆಸಿದ್ದರೂ ಕೆಲವೊಂದು ತಪ್ಪುಗಳು ಇರಲೂ ಬಹುದು. ಆದರೆ ಅವುಗಳನ್ನು ಮರೆಸಿ ಹಾಕುವಷ್ಟು ಉತ್ತಮ ಸಾಧನೆ/ಕೆಲಸಗಳನ್ನು ಅವರು ಮಾಡಿದ್ದಾಗ ಮಾತ್ರ ಅವರ ಬಗ್ಗೆ ಧನಾತ್ಮಕವಾಗಿ ಮಾತನಾಡಲು ಸಾಧ್ಯ.  ಆದರೆ ಶ್ರೀಕಂಠದತ್ತರು ಅಂತಹ ಯಾವ ಘನಾಂಧಾರಿ ಕೆಲಸ ಮಾಡಿದ್ದಾರೆ ? ಇಂದಿನ ಪತ್ರಿಕೆಗಳನ್ನ ಹೊರಳಿಸಿದಾಗ ಒಬ್ಬ ಹಳ್ಳಿಯ ಕ್ರಿಕೆಟಿಗ 'ಒಂದು ಬಾರಿ ಚೆನ್ನೈಗೆ ನಮ್ಮೊಟ್ಟಿಗೇ ಬಂದರು, ಚೆನ್ನಾಗಿ ಬೆರೆತು ಮಾತನಾಡಿದರು' ಅನ್ನುವ ಒಂದಂಶವನ್ನು ಬಿಟ್ಟರೆ ಬೇರ‍್ಯಾವ ಸಮಾಜಮುಖಿ ಕೆಲಸಗಳನ್ನು ಮಾಡಿರುವ ಮಾಹಿತಿಯೂ ಸಿಗಲಿಲ್ಲ. ಅದರ ಬಗ್ಗೆ ಈ ಹಿಂದೆ ಸುದ್ದಿ ಬಂದುದರ ಬಗ್ಗೆಯೂ ನನಗೆ ತಿಳಿದಿಲ್ಲ. ಇರುವಷ್ಟು ದಿನವೂ ರಾಜವೈಭೋಗ ಅನುಭವಿಸುತ್ತಾ, ಅರಮನೆಯನ್ನು ಉಳಿಸಿಕೊಳ್ಳಲು ಸರ್ಕಾರದೊಂದಿಗೆ ಕಿತ್ತಾಡುತ್ತಾ, ತಮಗೆ ಸಂಬಂಧವೇ ಇಲ್ಲದ ಕರ್ನಾಟಕ ಕ್ರಿಕೆಟ್‌ ಮಂಡಳಿಯ ಅಧಿಕಾರವನ್ನು ಅನುಭವಿಸುತ್ತಾ,

6-5=2

ಇದೀಗ 6-5=2 ಚಿತ್ರ ನೋಡಿ ಬಂದೆ. ಕನ್ನಡದ ಮಟ್ಟಿಗೆ ಅತ್ಯತ್ತಮ ಪ್ರಯತ್ನ. ವಿಶಿಷ್ಟ ಚಲನಚಿತ್ರಗಳನ್ನು ಆಯ್ದು ನೋಡ ಬಯಸುವ ನನ್ನಂತವರಿಗೆ ಪ್ರಿಯವಾಗುವ ಚಿತ್ರ.  ೨೦೧೦ರಲ್ಲಿ ಗುಂಡ್ಯ ಅರಣ್ಯದಲ್ಲಿ ಟ್ರೆಕ್ಕಿಂಗ್ ಹೋದ ಮೂವರು ಮಳೆಯ ಕಾರಣಕ್ಕೆ ದಾರಿ ತಪ್ಪಿಸಿಕೊಂಡು ಹೊರ ಬರಲಾರದೇ ಆಹಾರವಿಲ್ಲದೇ ಕಾಡಿನೊಳಗೇ ಸಾವನ್ನಪ್ಪಿದ್ದರು. ಈ ಸತ್ಯ ಘಟನೆಯನ್ನು ಇಟ್ಟುಕೊಂಡು ಚಲನಚಿತ್ರಕ್ಕೆ ಬೇಕಾದಂತೆ ಮೂವರನ್ನು ಆರು ಜನರನ್ನಾಗಿಸಿ ಈ ಚಿತ್ರವನ್ನು ನಿರ್ದೇಶಿಸಿದವರ ಜಾಣ್ಮೆಯನ್ನು ಮೆಚ್ಚಲೇ ಬೇಕು. ಮೃತರಾದವರಲ್ಲಿ ಒಬ್ಬನಾದ ರಮೇಶ್ ಎಂಬಾತನ ಕ್ಯಾಮೆರಾ ದೊರೆತಿದ್ದು ಅದನ್ನೇ ಚಿತ್ರ ಮಂದಿರದಲ್ಲಿ ಪ್ರದರ್ಶಿಸಲಾಗುತ್ತಿದೆ ಎಂಬ ಒಕ್ಕಣೆಯೊಂದಿಗಿನ ಭಿತ್ತಿಪತ್ರಗಳ ಆಕರ್ಷಣೆ, ಹಾಗೂ ರೋಮಾಂಚನಗೊಳಿಸುವ ಟ್ರೈಲರ್‌ಗಳ ವಿಶೇಷವೇ ನಮ್ಮನ್ನು ಚಿತ್ರಮಂದಿರಕ್ಕೆ ಸೆಳೆಯುವಲ್ಲಿ ಯಶಸ್ವಿಯಾಗುತ್ತದೆ. ತೆರೆಮರೆಯಲ್ಲೇ ಚಿತ್ರತಂಡ ! ಕಾಂಜಿಪೀಂಜಿ ಚಿತ್ರಗಳನ್ನು ನಿರ್ದೇಶಿಸುವ ಕೆಟ್ಟ ನಿರ್ದೆಶಕರೆಲ್ಲಾ ಹಾಡುಗಳನ್ನು ಅರ್ಧಕ್ಕೆ ನಿಲ್ಲಿಸಿ ಅದರಲ್ಲಿ ತಮ್ಮ ಹೆಸರು ದೊಡ್ಡದಾಗಿ ತೋರಿಸುವ ಈ ಕಾಲದಲ್ಲೂ 6-5=2 ಚಿತ್ರತಂಡದ ಪ್ರಮುಖರ ಹೆಸರನ್ನೂ ಪ್ರಚಾರ ಮಾಡದೇ ತಮ್ಮ ವೃತ್ತಿಪ್ರೀತಿಯನ್ನು ಮೆರೆದಿರುವುದು ಮತ್ತೊಂದು ವಿಶೇಷ.  ಈ ಚಿತ್ರದ ಪ್ರಕಾರ ಮೃತ ರಮೇಶನ ಕ್ಯಾಮೆರಾದಲ್ಲಿ ಸಿಕ್ಕ ವೀಡಿಯೋವನ್ನೇ ಸಂಕಲನ ಮಾಡಿ ಚಿತ್ರಮಂದಿರದಲ್ಲಿ ತೋರಿಸಲಾಗುತ್ತಿದೆ.