ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ಜೂನ್, 2013 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ರೇಡಿಯೋ ಕಾಮೆಂಟೇಟರ‍್ ಡಿಕ್ಕಿ ರತ್ನಾಗರ‍್ ನಿಧನ!

ಈ ಸುದ್ದಿಯ ತಲೆ ಬರಹವನ್ನು ಇಂದಿನ ಕನ್ನಡಪ್ರಭದಲ್ಲಿ ನೋಡಿ ಕೊಂಚ ಯೋಚಿಸುವಂತಾಯ್ತು. ಮೊದಲಿಗೆ ರತ್ನಾಗರ‍್ ಯಾರೆಂದು ನನಗೆ ತಿಳಿದಿಲ್ಲ. ಆದರೂ ಅವರು ನಿಧನರಾಗಿರುವ ಸುದ್ದಿ ಪತ್ರಿಕೆಯಲ್ಲಿ ಬಂದಿರುವುದರಿಂದ ಅವರೊಬ್ಬ ಖ್ಯಾತ ವ್ಯಕ್ತಿ ಎಂದು ಅರಿವಾಯ್ತು. ಇಲ್ಲದಿದ್ದರೆ ಮುಖಪುಟದಲ್ಲಿ ಹೆಸರು ಹಾಕಿ ನಿಧನ ಸುದ್ದಿ ಹಾಕುತ್ತಿರಲಿಲ್ಲ. ಒಳಗಿನ ಯಾವುದೋ ಪುಟದಲ್ಲಿ "ರೇಡಿಯೋ ಕಮೆಂಟೇಟರ‍್ ಡಿಕ್ಕಿ - ವ್ಯಕ್ತಿ ಸಾವು" ಎಂದು ಕೊಟ್ಟಿರುತ್ತಿದ್ದರು. ಆದರೆ ಅವರು ಸತ್ತಿರುವ ರೀತಿ ಸ್ವಲ್ಪ ಗೊಂದಲ ಮೂಡಿಸಿತು. ನನಗೆ ಮೊದಲು ಅನ್ನಿಸಿದ್ದು ರೇಡಿಯೋ ಕಮೆಂಟೇಟರ‍್ ಡಿಕ್ಕಿಯಿಂದಾಗಿ ರತ್ನಾಗರ‍್ ಸತ್ತಿದ್ದಾರೆ ಎಂದು. ಸುದ್ದಿಯ ತಲೆಬರಹ ಮುಖಪುಟದಲ್ಲಿ ಇದ್ದು ವಿವರ ೧೫ನೇ ಪುಟದಲ್ಲಿರುವುದಾಗಿ ತೋರಿಸಿದ್ದರು. ಆ ಪುಟಕ್ಕೆ ಹೋಗುವ ಮುನ್ನ ಉಳಿದ ಪ್ರಮುಖ ಸುದ್ದಿಗಳತ್ತ ಕಣ್ಣಾಡಿಸಲೇ ಬೇಕಿತ್ತು. ಆ ಸಮಯದಲ್ಲೇ ರತ್ನಾಗರ‍್ ಸಾವಿನ ಬಗ್ಗೆ ನಾನು ಯೋಚಿಸಿದ್ದು. ರೇಡಿಯೋ ಕಮೆಂಟೇಟರ‍್ ಡಿಕ್ಕಿಯಿಂದಾಗಿ ರತ್ನಾಗರ‍್ ಸಾಯಬೇಕಿದ್ದರೆ ರೇಡಿಯೋ ಕಮೆಂಟೇಟರ‍್ ಬಹುಶಃ ಅತಿ ವೇಗವಾಗಿಯೇ ಬಂದಿರಬೇಕು. ಎಷ್ಟೇ ವೇಗವಾಗಿ ಬಂದರೂ ಒಬ್ಬ ವ್ಯಕ್ತಿ ಇನ್ನೊಬ್ಬರಿಗೆ ಡಿಕ್ಕಿ ಹೊಡೆದರೆ ಸಾವು ಸಂಭವಿಸುವುದು ಅಷ್ಟೊಂದು ಸಲೀಸಲ್ಲ. ಓಡಿ ಬಂದು ಡಿಕ್ಕಿ ಹೊಡೆದಿರಬಹುದೇ ? ಒಂದು ವೇಳೆ ರತ್ನಾಗರ‍್ ವಯಸ್ಸಾದವರಾಗಿದ್ದರೆ ಎದುರಿನ ವ್ಯಕ್ತಿ ಓಡಿ ಬಂದು ಡಿಕ್ಕಿ ಹೊಡೆದರೆ

ಅನ್ನಪೂರ್ಣೇಶ್ವರಿ ಪಾದದಲ್ಲಿ ಇದೆಂತಾ ಹೋಟೆಲು ?

ಮೊನ್ನೆ ಅಲ್ಲಿ ಇಲ್ಲಿ ಸುತ್ತಾಡಿಕೊಂಡು ಕೊನೆಗೆ ಹೊರನಾಡು ಅನ್ನಪೂರ್ಣೇಶ್ವರಿ ದೇವಸ್ಥಾನಕ್ಕೆ ಹೋದೆವು. ಅಲ್ಲಿ ದಿನದ ಎಲ್ಲಾ ಸಮಯದಲ್ಲೂ ಊಟದ ವ್ಯವಸ್ಥೆ ಇರುತ್ತದೆ ಎಂದು ಯಾರೋ ರೈಲು ಹತ್ತಿಸಿದ್ದರು. ಆದರೆ ಅಲ್ಲಿ ನಾವು ಹೋಗುವಾಗ ಸಂಜೆ ನಾಲ್ಕು ಗಂಟೆ. ಆ ಸಮಯದಲ್ಲಿ ಊಟ ದೊರೆಯುವುದಿಲ್ಲ ಎಂದು ಹೇಳಿದರು. ಹಾಗಾಗಿ ವಿಧಿ ಇಲ್ಲದೆ ಎದುರಲ್ಲೆ ಇರುವ ಒಂದು ಹೋಟೆಲಿಗೆ ಉಪಹಾರಕ್ಕೆಂದು ಹೋದೆವು. ಅಲ್ಲಿ ಯಾವ ತಿಂಡಿಯೂ ಚೆನ್ನಾಗಿರಲಿಲ್ಲ. ನಾವು ಪಡೆದ ದೋಸೆ ಬೆಂದಿರಲಿಲ್ಲ. ಚಟ್ನಿಯನ್ನು ತೆಂಗಿನಕಾಯಿ ಹಾಕಿ ಮಾಡಿರದೇ ಉಪ್ಪಿನಿಂದಲೇ ಮಾಡಿದ್ದರು. ಅವಲಕ್ಕಿ ಕೊಂಡರೆ ಖಾರವೋ ಖಾರ. ಆದರೆ ಬೆಲೆ ಮಾತ್ರ ಕಡಿಮೆ ಏನಿರಲಿಲ್ಲ. ಅಂತಹ ಪ್ರವಾಸಿ ಸ್ಥಳದಲ್ಲಿ ದುಡ್ಡು ಕೊಟ್ಟರೂ ಒಳ್ಳೆಯ ಉಪಹಾರ ದೊರೆಯುವುದಿಲ್ಲ ಎಂದಾದರೆ ಪ್ರವಾಸಿಗರು ಹೇಗೆ ತಾನೆ ಹೋಗಲು ಇಷ್ಟ ಪಡುತ್ತಾರೆ ? ಅಲ್ಲಿನ ನಿರ್ವಾಹಕರು ಇದನ್ನೆಲ್ಲಾ ಗಮನಿಸಿದರೆ ಒಳ್ಳೆಯದಲ್ಲವೆ?