ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ಆಗಸ್ಟ್, 2011 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಜನಲೋಕ್‌ಪಾಲ್ ದೀವಿಗೆ !

ಗೆಳೆಯರೇ..... ಗೆಳೆಯರೇ.... ಭಾರತದ ಪ್ರೀತಿವೆತ್ತ ಸ್ನೇಹ ಬಂಧು ಮಿತ್ರರೆ | ಬನ್ನಿ ಹೆಗಲ ಕೊಡುವ ನಮ್ಮ ಅಣ್ಣನೊಡನೆ ಇಂದು ಬನ್ನಿ ದೇಶಕ್ಕಾಗಿ ಮೀಸಲಿಡುವ ರಕ್ತ ಬಿಂದು || ದೇಶಕ್ಕಿಂದು ಅಂಟಿರುವ ಭ್ರಷ್ಟಾಚಾರ ಕೊಂದು ಬಲವಾದ ಹೆಜ್ಜೆ ಇಟ್ಟು ನಾವು ನಡೆವ ಮುಂದು || ರಕ್ತ ಸುರಿಸಿ ಪ್ರಾಣ ತೆತ್ತು ಪಡೆದರು ಸ್ವಾತಂತ್ರ್ಯ ಅವರ ಋಣದ ಸಮಾದಿ ಮೇಲೆ ಆಯ್ತು ಗಣತಂತ್ರ || ಆಳುತಿರುವ ದೊರೆಗಳಿಗೆ ದುಡ್ಡಿನದೇ ಮಂತ್ರ ಅಧೋಗತಿಗೆ ಇಳಿದ ದೇಶ ಆಯ್ತು ಅತಂತ್ರ || ಅಣ್ಣನಿಗೆ ತಮ್ಮನಾಗಿ ನಮ್ಮ ಸಂತೋಷ್ ಹೆಗಡೆ ಅರವಿಂದ ಕೇಜ್ರಿವಾಲ ಅವರ ಜೊತೆಗೆ ನಡಿಗೆ || ಘರ್ಜಿಸಿದ ದೇಶಪ್ರೇಮಿ ಕಿರಣ್ ಬೇಡಿ ಇಹರು ಸ್ವಾಮಿ ಅಗ್ನಿವೇಶರೊಡನೆ ಶಾಂತಿಭೂಷಣ್ ತ್ರಯರು || ಕಡು ಬಡವರು ಅರೆ ಹೊಟ್ಟೆಗೆ ಪ್ರಾಣ ನೀಗುತಿಹರು ಕಡು ಭ್ರಷ್ಟರು ನಮ್ಮನಾಳಿ ಕೇಕೆ ಹಾಕುತಿಹರು || ನಾವು ಬೀಳಲಾರೆವಿಂದು ರಾತ್ರಿ ಕಂಡ ಬಾವಿಗೆ ಅಣ್ಣ ತಂಡ ತಂದಿವುದು ಜನಲೋಕ್‌ಪಾಲ್ ದೀವಿಗೆ || --------------------------------------------------- ಇಂದು [27.08.2011] ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ನೆರೆದಿದ್ದ ಸುಮಾರು ನಾಲ್ಕೈದು ಸಾವಿರ ಅಣ್ಣಾ ಬೆಂಬಲಿಗರ ಎದುರು ಈ ಹಾಡನ್ನು ಸ್ವತಃ ನಾನೇ ಹಾಡಿದೆ. ಆ ಸಂದರ್ಭದಲ್ಲಿ ನಿವೃತ್ತ ನ್ಯಾಯಮೂರ್ತಿ ಶ್ರೀ ಸಂತೋಷ್ ಹೆಗಡೆ ಅವರೂ ಅಲ್ಲಿ ಉಪಸ್ಥಿತರಿದ್ದರು. ತುಂಬಾ ಖುಷಿಯಾಯ್ತು.

ಸೋಲು ಗೆಲುವಿನ ಬದುಕಿನಲ್ಲಿ ಕಲ್ಪನೆ ಮತ್ತು ವಾಸ್ತವ

ನಮ್ಮ ಜೀವನದಲ್ಲಿ ಸೋಲೆಂಬುದು ಎಷ್ಟು ಸಹಜವೋ ಅದರಂತೆಯೇ ಪ್ರತಿ ಸೋಲಿನ ನಂತರವೂ ನಾವು ಒಬ್ಬಂಟಿಯಾಗಿಯೇ ಉಳಿದಿರುತ್ತೇವೆಂಬುದೂ ಕೂಡ ನಿಜ. `ಸೋಲು ಎಂಬ ಒಂದು ಅಗೋಚರ ಪ್ರಕ್ರಿಯೆ ಗೆಲುವಿಗಿಂತಲೂ ತುಂಬಾ ಬಿರುಸು ಹಾಗೂ ಶಕ್ತಿಶಲಿಯಾದುದು. ಹಾಗೂ ತೀರಾ ಕಹಿಕಹಿ. ಆ ಕಹಿಯ ಘಾಟು ನಾವು ತಾಳಿಕೊಳ್ಳುವುದಂತಿರಲಿ, ನಮ್ಮ ಗೆಳಯ ಗೆಳತಿಯರೇ ತಾಳಲಾಗದೇ ಮೂಗು ಮುರಿದು ನಮ್ಮಿಂದ ನಾಜೂಕಾಗಿ ಜಾರಿ ದೂರಾಗಿ ಬಿಡುವ ಸಂಭವವವೂ ಇರುತ್ತದೆ. (ಒಬ್ಬಿಬ್ಬರು ಉತ್ತಮ ಸ್ನೇಹಿತು ಉಳಿದರೆಂದರೆ ಅದೇ ನಮ್ಮ ಪುಣ್ಯ) ಜೀವನದಲ್ಲಿ ಮನುಷ್ಯನಿಗೆ ಅತಿ ದೊಡ್ಡದೆನ್ನಬಹುದುದಾದ ಸೋಲೊಂದು ಬಂದು ಅಪ್ಪಳಿಸಿತೆಂದರೆ ಅದರ ನಂತರ ಮನಸ್ಸು ಸಾಂತ್ವನ ಬಯಸುತ್ತದೆ. ಮತ್ತು ಸೋಲಿನಿಂದ ಎದ್ದು ಮತ್ತೊಂದು ಗೆಲುವಿಗೆ ಅಣಿಯಾಗಬೇಕು. ಹೆಚ್ಚಿನ ಸಂದರ್ಭಗಳಲ್ಲಿ ಮುಂದಿನ ಗೆಲುವನ್ನು ನಿಶ್ಚಯಿಸುವ ಭರದಲ್ಲಿ ಹಠಕ್ಕೆ ಬೀಳುವ ಮನಸ್ಸು ಯೋಜನೆಗೆ ಬದಲಾಗಿ `ಕನಸು ಎಂಬ ರತ್ನಮಾಳಿಗೆ ಹೊಕ್ಕು ಬಿಟ್ಟಿತೆಂದರೆ ಗತಿ? ಮುಂದಿನ `ಯಶಸ್ಸು ಎಂಬ ಕಲ್ಪನೆಯನ್ನು ಅದೆಷ್ಟು ಸುಂದರವಾಗಿ ಕಟ್ಟಿಕೊಳ್ಳುತ್ತೇವೆ? ಮುಂದೆ ಅದೇನೋ ದೊಡ್ಡದೊಂದು ಯಶಸ್ಸು ನಮಗಾಗಿಯೇ ರತ್ನಗಂಬಳಿ ಹಾಸಿ ಕಾದಿರುವಂತೆ ಕಲ್ಪಿಸಿಕೊಳ್ಳುತ್ತೇವೆ. ಈ ಕಲ್ಪನೆ ಅಥವಾ ಕನಸು ನಮ್ಮನ್ನು ಮತ್ತೊಂದು ಸೋಲಿಗೆ ದೂಡುವ ಅವಕಾಶ ಕೂಡಾ ಇರುತ್ತದೆ. ಈ ಸಮುಯದಲ್ಲಿ ಕೊಂಚವಾರದೂ ವಾಸ್ತವನವನ್ನು ವಿವೇಚಿಸದೇ ಹೋದರೆ ಬದುಕಿಗೆ ಮತ್ತೊಂದು `ಹೊಡ್ತ ಗ್ಯಾರಂಟಿ.

ಕತ್ತಿ ಜಳಪಿಸುವರೇ ಶಿವರಾಜ್ ಪಾಟೀಲ್ ?

ವೆಂಕಟಾಚಲಯ್ಯನವರು ಬರುವ ವರೆಗೆ ನಮ್ಮ ರಾಜ್ಯದಲ್ಲಿ ಲೋಕಾಯುಕ್ತ ಸಂಸ್ಥೆ ಇರುವುದೇ ಹೆಚ್ಚಿನವರಿಗೆ ತಿಳಿದಿರಲಿಲ್ಲ.  ವೆಂಕಟಾಚಲಯ್ಯನವರ ನಂತರ ಬಂದ ಸಂತೋಷ್ ಹೆಗಡೆಯವರು ಯಾರ ಮುಲಾಜನ್ನೂ ನೋಡದೇ ದೊಡ್ಡ ದೊಡ್ಡ ತಿಮಿಂಗಿಲಗಳನ್ನೇ ಹೆಡೆಮುರಿ ಕಟ್ಟಿದರು. ಇವರಿಂದಾಗಿ "ಕರ್ನಾಟಕ ಲೋಕಾಯುಕ್ತ" ದೇಶದಲ್ಲೇ ನಂ 1 ಆಯ್ತು. ಸಿಬಿಐ ಸಹ ತನ್ನ ವಾರ್ಷಿಕ ಮೀಟಿಂಗ್‌ನಲ್ಲಿ ತನಿಖಾ ಮಾದರಿಗೆ ಕರ್ನಾಟಕ ಲೋಕಾಯುಕ್ತದ ತನಿಖಾ ರೀತಿಯ ಮಾದರಿಯನ್ನು ಅಳವಡಿಸಿಕೊಳ್ಳಲು ಚರ್ಚೆ ನಡೆಸಿದರು. ಈಗ ಬಿಹಾರ್‌ನ ಮುಖ್ಯಮಂತ್ರಿ ನಿತೀಶ್‌ಕುಮಾರ‍್ ತಮ್ಮ ರಾಜ್ಯದ ಲೋಕಾಯುಕ್ತಕ್ಕೆ ಕಾಯಕಲ್ಪ ಕಲ್ಪಿಸಿ ಕೊಡಲು ಸಂತೋಷ್ ಹೆಗಡೆಯವರಿಗೆ ಆಹ್ವಾನ ನೀಡಿದ್ದಾಗಿ ಸುದ್ದಿ ಇದೆ. ಹೊಸ ಲೋಕಾಯುಕ್ತರಾದ ಶ್ರೀ ಶಿವರಾಜ್‌ ಪಾಟೀಲ್ ಅವರು ಸಂತೋಷ್ ಹೆಗಡೆಯವರಿಗಿಂತಲೂ ಹೆಚ್ಚು ಅಥವಾ ಕಡೇ ಪಕ್ಷ ಅವರಷ್ಟಾದರೂ ಖಡಕ್ ಆಗಿ ಕಾರ್ಯ ನಿರ್ವಹಿಸಬೇಕಾಗಿದೆ. ಅವರ ವೈಖರಿ ನೋಡಿದರೆ ರಾಜ್ಯದ ಜನತೆಗೆ ನಿರಾಶೆ ಮಾಡಲಾರರು ಎಂದೇ ತೋರುತ್ತಿದೆ. ಏಕೆಂದರೆ ಗಣಿ ವರದಿಯಲ್ಲಿ ಯಡ್ಡಿಗೆ ಹೆಗಡೆಯವರು ವಿವರಣೆ ಕೇಳದಿರುವುದು ತಪ್ಪೇನಲ್ಲ, ಕೇಳಲೇಬೇಕಾದ ಅಗತ್ಯ ಇಲ್ಲ ಎಂದು ಹೆಗಡೆಯವರ ಕ್ರಮವನ್ನು ಸಮರ್ಥಿಸಿದ್ದಾರೆ. ಭ್ರಷ್ಟರ ಪಾಲಿಗೆ ಇವರೂ ಸಹ ದುಸ್ವಪ್ನವಾಗಲಿ... ಇವರಿಗೆ ನಮ್ಮ ಬೆಂಬಲ ಸದಾ ಇರುತ್ತದೆ.

ಶಿಕ್ಷಣದ ಬಗೆಗಿನ ನುಡಿಮುತ್ತುಗಳು

* ನಿಜವಾದ ಶಿಕ್ಷಣವೆಂದರೆ ಮಾನವೀಯತೆಯ ವಿಕಾಸ. - ಸ್ವಾಮಿ ವಿವೇಕಾನಂದರು . * ಸಚ್ಛಾರಿತ್ರ್ಯದ ಬೆಳವಣಿಗೆಯೇ ಶಿಕ್ಷಣದ ಆರಂಭ. - ಮಾಹಾತ್ಮ ಗಾಂಧೀಜಿ. * ಶಿಕ್ಷಣ ಪ್ರತಿ ವ್ಯಕ್ತಿಯಲ್ಲಿ ಪರಿಪೂರ್ಣತೆಯನ್ನು ತರಬೇಕು.  ಜೀವನದಲ್ಲಿ ಮುನ್ನಡೆಸುವ ಸಾಮಥ್ರ್ಯ ನೀಡಬೇಕು. -    ಜಿಡ್ಡು ಕೃಷ್ಣಮೂರ್ತಿ . * ದೈಹಿಕ, ಮಾನಸಿಕ ಹಾಗೂ ಆಧ್ಯಾತ್ಮಿಕ ಪ್ರಗತಿಗೆ ಇಂಬು ಕೊಡದ ಶಿಕ್ಷಣ ಅಪೂರ್ಣ. - ಡಾ. ಎಸ್. ರಾಧಾಕೃಷ್ಣನ್. * ಶಿಕ್ಷಣವೆಂದರೆ, ಪುಸ್ತಕದ ಜ್ಞಾನವೇ ಮಾತ್ರ ಅಲ್ಲ.  ಸಂಸಾರ, ಮನುಷ್ಯ ಮತ್ತು ಕಾರ್ಯ ಕಲಾಪಗಳ ಪರಸ್ಪರ ಸಂಯೋಗವೇ ಶಿಕ್ಷಣ. -    ಬರ್ಕ. * ಜೀವನವೇ ಶಿಕ್ಷಣ, ಶಿಕ್ಷಣವೇ ಜೀವನ. - ಜಾನ್ ಟ್ಯೂಯ್ಲಿ. * ಸಮನ್ವಯತೆ, ಸಮತೋಲನ, ಉಪಯುಕ್ತತೆ,  ಪರಿಪೂರ್ಣತೆ, ಆನಂದದಾಯಕ ಹಾಗೂ ನೈಸರ್ಗಿಕತೆಯೇ ಶಿಕ್ಷಣದ ಗುಣಗಳು. - ರೂಸೋ. * ಶಿಕ್ಷಣವು ಧಾರ್ಮಿಕ ವಿಚಾರಗಳ ಸಮನ್ವಯವಾದಾಗಲೇ ಪೂರ್ಣವಾಗುವುದು. - ಅಜ್ಞಾತ. * ನಡತೆ ಬೋಧಿಸುವ ಶಿಕ್ಷಣ, ಮನುಷ್ಯತ್ವ ತೋರದ ವಿಜ್ಞಾನ, ಇವೆರಡೂ ಅಪಾಯಕಾರಿ ಮತ್ತು ಉಪಯೋಗವಿಲ್ಲದವು. - ನೀತಿವಚನ . * ಶಿಕ್ಷಣವೇ ಜೀವನದ ಬೆಳಕು - ಗೊರೂರು * ಶಿಕ್ಷಣವು ಮನುಷ್ಯನನ್ನು ಶ್ರೇಷ್ಠ ನಾಗರಿಕನನ್ನಾಗಿ ಮಾಡುತ್ತದೆ. - ಡಾ: ಎಸ್. ರಾಧಾಕೃಷ್ಣನ್. * ಮನುಷ್ಯರಲ್ಲಿ ಪರಿಪೂರ್ಣತೆಯನ್ನು ಹಿಗ್ಗಿಸುವದೇ ಶಿಕ್ಷಣ - ವಿವೇಕಾನಂದ. * ವಿದ್ಯೆ ಗುರುಗಳ ಗುರು - ಭ್ರತೃ ಹರಿ. * ವಿದ್ಯೆಯಿಂದಲೇ ಮನುಷ್ಯನಿಗೆ ಸುಖ, ಭೋಗ, ಧನ,