ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ಆಗಸ್ಟ್, 2014 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಗುರುತ್ವ ಬಲದಿಂದ ವಿಶ್ವದ ನಿರ್ದಿಷ್ಟ ಭಾಗಕ್ಕೆ ಚಲಿಸಬಹುದೇ ?

​ ಬೇರೆ ಗ್ರಹದ ಜೀವಿಗಳು ಭೂಮಿಯನ್ನು ತಲುಪುವುದು ಇಂದಿಗೂ ಬಿಡಿಸಲಾಗದ ರಹಸ್ಯವಾಗಿದೆ. ಅಷ್ಟು ದೂರದಿಂದ ಬರಲು ಅಗಾಧವಾದ ಇಂದನ ಬೇಕಾಗುತ್ತದೆ. ಹಾಗೂ ಅದಕ್ಕಿಂತಲೂ ಮಿಗಿಲಾದ ವೇಗವೂ ಬೇಕು. ಅವರು ಎಲ್ಲಾ ಗ್ರಹಗಳಿಗೂ ಇರುವ ಪ್ರತ್ಯೇಕ ಗುರುತ್ವ ಶಕ್ತಿಯನ್ನೋ ಅಥವಾ ಕಾಂತ ಶಕ್ತಿಯನ್ನೋ ಬಳಸಿ ಆ ಗ್ರಹದ ಸಮೀಪ ಹೋಗುವ ವಿಶಿಷ್ಟ ಯಂತ್ರಗಳನ್ನು ಬಳಸುತ್ತಿರಬಹುದೇ ?  ಉದಾಹರಣೆಗೆ ನಮ್ಮ ಭೂಮಿಗೆ ಇರುವ ಗುರುತ್ವ ಬಲ ಇನ್ನೊಂದು ಗ್ರಹಕ್ಕೆ ಇಷ್ಟೇ ಪ್ರಮಾಣದಲ್ಲಿ ಇರಲಾರದು. ಈ ಗುರುತ್ವ ಬಲವನ್ನು ಗ್ರಹಿಸುವ ಯಂತ್ರವೊಂದನ್ನು ಕಂಡು ಹಿಡಿದಿದ್ದೇ ಆದಲ್ಲಿ ಪ್ರತಿ ಗ್ರಹವನ್ನೂ ಪ್ರತ್ಯೇಕವಾಗಿ ಗುರುತಿಸಬಹುದಾಗಿದೆ. ಸೌರ ಮಂಡಲದಿಂದ ಹೊರಗಿರುವಾಗ ಸೌರಮಂಡಲದ ಗುರುತ್ವ ಬಲವನ್ನು ಗ್ರಹಿಸಿ ಸೌರ ಮಂಡಲ ಪ್ರವೇಶಿಸಬಹುದು. ಕ್ಷೀರ ಪಥದಿಂದ ಹೊರಗಿರುವಾಗ ಕ್ಷೀರಪಥದ ಗುರುತ್ವ ಬಲವನ್ನು ಗ್ರಹಿಸಿ ನಮ್ಮ ಗೆಲಾಕ್ಸಿಯನ್ನು ಪ್ರವೇಶಿಸಬಹುದು. ಅಂದರೆ ಪ್ರತಿ ಗೆಲಾಕ್ಸಿಗೂ, ಸೌರವ್ಯೂಹಕ್ಕೂ (ನಕ್ಷತ್ರ), ಗ್ರಹಗಳಿಗೂ ಪ್ರತ್ಯೇಕವಾದ ಪ್ರಮಾಣದ ಗುರುತ್ವ ಬಲ ಇದೆ. ಅದನ್ನು ಗ್ರಹಿಸಿ ಅದನ್ನು ಬಳಸಿಕೊಂಡು ಪ್ರಯಾಣಿಸುವ ಯಂತ್ರಗಳನ್ನು ಅನ್ಯಗ್ರಹವಾಸಿಗಳು ತಯಾರಿಸಿರಲೂ ಬಹುದು. ಅಂದರೆ ಕ್ಷೀರ ಪಥದಿಂದ ಬಲು ದೂರ ಇರುವ ಅನ್ಯಗ್ರಹವಾಸಿಗಳು ಮೊದಲು ಕ್ಷೀರಪಥದ ಗುರುತ್ವವನ್ನು ಗ್ರಹಿಸಿ ಅದರ ಸಮೀಪ ಬರುತ್ತಾರೆ. ನಂತರ ಕ್ಷೀರಪಥದಲ್ಲಿನ ಕೋಟ್ಯಾಂತರ ನಕ್ಷತ್ರಗಳ ನಡುವೆ ಸೂರ್ಯನ ಗು

ಅವನು ಅವಳು ಹಾಗೂ ಮತ್ತೊಬ್ಬಳು !

​ ನಮ್ಮ ಹಳೆ ಮನೆ ಮಾಲಿಕರ ಮಗಳು ನನ್ನೊಂದಿಗೆ ಆತ್ಮೀಯವಾಗಿಯೇ ಇದ್ದಳು. ಆಗಾಗ ನನ್ನ ಮನೆಗೆ ಬಂದು ಹರಟೆ ಹೊಡೆಯುತ್ತಾ, ಗಣಕದಲ್ಲಿ ಫೇಸ್‌ಬುಕ್ ನೋಡುತ್ತಾ ಕೂತಿರುತ್ತಿದ್ದಳು. ಅದೇ ರೀತಿ ನನ್ನ ಕಿರಿಯ ಗೆಳೆಯನೊಬ್ಬ ಸಹ ಆಗಾಗ ಮಾತನಾಡಲೆಂದು ಬರುತ್ತಿದ್ದ. ಎರಡು ಗ್ರಹಗಳು ಒಂದಲ್ಲಾ ಒಂದು ದಿನ ಹತ್ತಿರತ್ತಿರ ಬರಲೇ ಬೇಕಲ್ಲ ? ಅದೇ ತರ ಆಯ್ತು. ಆ ಹುಡುಗನನ್ನು ನೋಡಿದ ಈ ಹುಡುಗಿ ಆತನ ಬಗ್ಗೆ ಇಂಚಿಂಚೇ ವಿಚಾರಿಸತೊಡಗಿದಳು. ನಾನೂ ತಮಾಷೆಗೆ ರೇಗಿಸತೊಡಗಿದೆ. ಕೊನೆಗೊಂದು ದಿನ ಅವಳೀಗೆ ಇವನನ್ನು ಪರಿಚಯ ಮಾಡಿ ಕೊಟ್ಟೆ. ಇಬ್ಬರೂ ಅವರಷ್ಟಕ್ಕೆ ಅವರೇ ಮೊಬೈಲ್‌ನಲ್ಲಿ ಸಂದೇಶ-ಮಾತುಗಳನ್ನ ವಿನಿಮಯ ಮಾಡಿಕೊಳ್ಳತೊಡಗಿದರು. ಹೀಗೆ ಹೊಸ ಶಕೆ ಶುರುವಾದ ಹೊಸದರಲ್ಲೇ ಈ ಹುಡುಗಿ ಏನು ಮಾಡಿದೆ ಅಂದರೆ 'ಇರಲರದವಳು ಇರುವೆ ಬಿಟ್ಕೊಂಡಳು' ಅನ್ನುವಂತೆ ಒಂದು ದಿನ ತನ್ನ ಗೆಳತಿಗೆ 'ತನಗೊಬ್ಬ ಹೊಸ ಗೆಳೆಯ ಸಿಕ್ಕಿರುವ ಬಗ್ಗೆ' ಕೊಚ್ಚಿಕೊಂಡು ಆಕೆಯ ಮೊಬೈಲ್‌ನಿಂದಲೂ ಈತನೊಂದಿಗೆ ಚಾಟ್‌ ಮಾಡಿ ತನ್ನ ಹಿರಿಮೆಯನ್ನು ಸಾರಿಕೊಂಡಿದ್ದಾಳೆ.  ಈಕೆಯ ಗೆಳೆಯನ ಬಗ್ಗೆ ಗೆಳತಿಯಾದ ಆಕೆಗೆ ಇವಳು ಏನೇನು ಹೇಳಿ ಹುರಿದುಂಬಿಸಿದ್ದಳೋ ಏನೋ, ಆಕೆಗೂ ಒಮ್ಮೆ ಈ ಗೆಳೆಯನೊಂದಿಗೆ ಸ್ನೇಹ ಬೆಳೆಸುವ ಮನಸ್ಸಾಗಿದೆ. ಅದೊಂದು ರಾತ್ರಿ ಅವನಿಗೆ ಹೆದರುತ್ತೆದರುತ್ತಲೇ 'ಹಾಯ್‌' ಹೇಳಿದ್ದಾಳೆ. ಇವನು ಅದು ಈ ಹುಡುಗಿ ಅಂದುಕೊಂಡು ಮಾತು ಶುರು ಮಾಡಿದ್ದಾನೆ. ಕೊನೆಗೆ

ಓ ನಿರ್ಭಾವುಕ ಕಥೆಗಾರ...

​ ಇದು ಪ್ರೇಮ ಪತ್ರವಲ್ಲ. ಪ್ರೇಮದ ಆಲಾಪನೆ, ನಿವೇದನೆಗಳೂ ಅಲ್ಲ. ಇಲ್ಲಿರುವುದು ನನ್ನ ವೇದನೆ ಮತ್ರ. ನೀನೇಕೆ ಹಾಗೆ ಮತು ಕೊಟ್ಟು ಮೋಸ ಮಡಿದೆ? ನಿನ್ನ ಮೋಸಕ್ಕೊಂದು ಸಾಮಜಿಕ ನ್ಯಾಯದ ಪ್ಯಾಲೆ ಸಾಕ್ಷಿಯನ್ನೊದಗಿಸುತ್ತೀಯ. ನನಗೆ ಮೂವತ್ತಾರು, ನಿನಗೆ ಇಪ್ಪತ್ತಾರು. ಈ ಹತ್ತು ವರ್ಷಗಳ ಅಂತರವೇ ನ್ನ ನನ್ನ ನಡುವಿನ ಮಹದಂತರವಾಗಿ ನಿರೂಪಿಸಿ ಪ್ರಶ್ನಿಸಿದವರ ಬಾಯಿ ಮುಚ್ಚಿಸಿಬಿಡುತ್ತೀಯ. ಆದರೆ ವಯಸ್ಸಿನಲ್ಲಿ ಅಂತರವಿತ್ತೇ ಹೊರತೂ ಮನಸ್ಸಿನಲ್ಲಿ ಅಲ್ಲವಲ್ಲ? ನಮ್ಮೆರಡು ಮನಸ್ಸುಗಳೂ ಸಂಭವಗಳ ಪ್ರೀತಿಗೆ ಸಿಲುಕಿ ಆಕರ್ಷಣೆಯ ಸಂಭಾವನೀಯತೆಯಲ್ಲಿ ಒಂದಾಗಿ ಹೋಗಿರಲಿಲ್ಲವೇ? ದೂರದ ಊರಲ್ಲಿದ್ದರೂ ನಾವು ಪತ್ರಗಳಲ್ಲಿ ಪ್ರೇಮಲೋಕ ಸೃಷ್ಟಿಸಿದೆವು. ಅಕ್ಷರಗಳಲ್ಲಿ ಅರಮನೆ ಕಟ್ಟಿದೆವು. ಭಾವನೆಗಳ ಮಹಲನ್ನು ಆಕಾಶದೆತ್ತರಕ್ಕೆ ಹಬ್ಬಿಸಿದೆವು. ಕೈಗೂಡದ ಪ್ರೇಮಕ್ಕಾಗಿ ಹಪಹಪಿಸಿದೆವು. ನೀನಿಂದು ದೂರಾಗಿ ಹೋಗುವೆಂಂದಾದರೆ ಈ ಮೋಸಕ್ಕೆ ನಾನ್ಯಾರ ಬಳಿ ಮೊರೆಯಿಡಲಿ? ಈ ನನ್ನ ಚೀತ್ಕಾರವನ್ನಾಲಿಸಿ ತೀರ್ಪು ನೀಡುವ ನ್ಯಾಯದಿsಶ ಯರು? ಒಳ್ಳೆಯವನೆಂದು, ಶುದ್ಧ ಮನಸ್ಸಿನವನೆಂದು, ಮನುಷ್ಯನೆಂದು, ಕೊನೆಗೆ ದೇವರೆಂದೇ ನಿನ್ನನ್ನು ಸ್ವೀಕರಿಸಿದೆ. ನಂಬಿದ ದೇವರೇ ಮುಳ್ಳು ದಾರಿಗೆ ದೂಡಿದರೆ ನಾನ್ಯಾವ ನ್ಯಾಯದಿsಶನಲ್ಲಿ ಮೊರೆಯಿಡಲಿ ಪ್ರಭುವೇ? ಹೌದು, ಈ ನನ್ನ ರೋಧನಕ್ಕೆ ಕಿವಿಗೊಟ್ಟು ನನ್ನ ವೇದನೆಯ ದೂರಿಗೆ ತೀರ್ಪು ನೀಡುವ ನ್ಯಾಯದಿsಶ ನಿನ್ನ ಅಂತರಾತ್ಮವೊಂದೇ. ನೀನೊಮ್ಮೆ ಅದರ

ಕೊಳವೆ ಬಾವಿ ಅವಘಡಗಳನ್ನು ನಿಲ್ಲಿಸಲು ಸರ್ಕಾರ ಹೀಗೆ ಮಾಡಲಿ

​ ೧. ವ್ಯಕ್ತಿಯೊಬ್ಬ ಕೊಳವೆ ಬಾವಿ ಕೊರೆಸಬೇಕೆಂದರೆ ಕಡ್ಡಾಯವಾಗಿ ಅನುಮತಿ ಪಡೆಯಲೇ ಬೇಕು. (ಗ್ರಾಮಗಳಲ್ಲಿ ಗ್ರಾಮಾಧಿಕಾರಿಯಿಂದ) ೨. ಕೊಳವೆಬಾವಿ ಕೊರೆಯುವ ಸಂಸ್ಥೆಯವರು ಅನುಮತಿ ಪಡೆಯದ ಬಾವಿಗಳನ್ನು ಕೊರೆಯುವಂತಿಲ್ಲ. ೩. ಅನುಮತಿ ನೀಡುವಾಗ ಗ್ರಾಮಾಧಿಕಾರಿಯು ಸ್ಥಳಕ್ಕೆ ಭೇಟಿ ನೀಡಿ ಅದು ಕೊಳವೆಬಾವಿಗೆ ಯೋಗ್ಯವೇ ಎಂದರಿತು ಅನುಮತಿ ನೀಡಬೇಕು. (ಹತ್ತಿರದಲ್ಲೇ ಬೇರೆ ಕೊಳವೆಬಾವಿ ಇರಬಹುದು, ನೀರಿಲ್ಲದಿರುವಿಕೆ ಇತ್ಯಾದಿ) ೪. ಅನುಮತಿ ನೀಡುವಾಗ ಆ ವ್ಯಕ್ತಿಯಿಂದ ಒಂದು ಲಕ್ಷ ರೂಪಾಯಿಯನ್ನು ಠೇವಣಿ ಪಡೆದು ಅನುಮತಿ ಪತ್ರ ನೀಡಬೇಕು. ೫. ರೈತನಿಂದ ಅನುಮತಿ ಪತ್ರ ಪಡೆದ ನಂತರವೇ ಕೊಳವೆಬಾವಿ ಕೊರೆಯುವವರು ಕೆಲಸ ಪ್ರಾರಂಭಿಸಬೇಕು. ೬. ಕೊರೆದಾದ ನಂತರ ಮತ್ತೆ ಗ್ರಾಮಾಧಿಕಾರಿಯನ್ನು ಕರೆಸಿ ನೀರು ಸಿಕ್ಕಿದ್ದರೆ ಅದಕ್ಕೆ ಮಾಡಿರುವ ವ್ಯವಸ್ಥೆ, ಅಥವಾ ನೀರು ಸಿಗದಿದ್ದರೆ ಕೊಳವೆಬಾವಿಯನ್ನು ಮುಚ್ಚಿರುವುದನ್ನು ಅಧಿಕಾರಿಯು ಪರಿಶೀಲಿಸಬೇಕು. ೭. ಎಲ್ಲವೂ ಸಮರ್ಪಕವಾಗಿದೆ ಎಂದಾದ ನಂತರವೇ ರೈತ ಇರಿಸಿರುವ ಠೇವಣಿಯನ್ನು ಕೊಳವೆಬಾವಿ ಕೊರೆದ ಸಂಸ್ಥೆಗೆ ಹಸ್ತಾಂತರಿಸಬೇಕು. ೮. ಇಷ್ಟೆಲ್ಲಾ ಆದ ನಂತರವೂ ಏನಾದರೂ ಅವಘಡ ಸಂಭವಿಸಿದಲ್ಲಿ ಈ ಮೂವರ ಮೇಲೂ ಕ್ರಿಮಿನಲ್ ಮೊಖದ್ದಮೆ ದಾಖಲಿಸಬೇಕು. ಹೀಗೆ ಮಾಡುವುದರಿಂದ ಒಂದಿಷ್ಟು ಲಂಚಕ್ಕೆ ದಾರಿಯಾಗಬಹುದಾದರೂ ಮಕ್ಕಳ ಪ್ರಾಣಹಾನಿಯಂತ ಅವಘಡಗಳನ್ನು ಕಡಿಮೆ ಮಾಡಬಹುದು.