ವಿಷಯಕ್ಕೆ ಹೋಗಿ

ಅವನು ಅವಳು ಹಾಗೂ ಮತ್ತೊಬ್ಬಳು !



ನಮ್ಮ ಹಳೆ ಮನೆ ಮಾಲಿಕರ ಮಗಳು ನನ್ನೊಂದಿಗೆ ಆತ್ಮೀಯವಾಗಿಯೇ ಇದ್ದಳು. ಆಗಾಗ ನನ್ನ ಮನೆಗೆ ಬಂದು ಹರಟೆ ಹೊಡೆಯುತ್ತಾ, ಗಣಕದಲ್ಲಿ ಫೇಸ್‌ಬುಕ್ ನೋಡುತ್ತಾ ಕೂತಿರುತ್ತಿದ್ದಳು. ಅದೇ ರೀತಿ ನನ್ನ ಕಿರಿಯ ಗೆಳೆಯನೊಬ್ಬ ಸಹ ಆಗಾಗ ಮಾತನಾಡಲೆಂದು ಬರುತ್ತಿದ್ದ. ಎರಡು ಗ್ರಹಗಳು ಒಂದಲ್ಲಾ ಒಂದು ದಿನ ಹತ್ತಿರತ್ತಿರ ಬರಲೇ ಬೇಕಲ್ಲ ? ಅದೇ ತರ ಆಯ್ತು.

ಆ ಹುಡುಗನನ್ನು ನೋಡಿದ ಈ ಹುಡುಗಿ ಆತನ ಬಗ್ಗೆ ಇಂಚಿಂಚೇ ವಿಚಾರಿಸತೊಡಗಿದಳು. ನಾನೂ ತಮಾಷೆಗೆ ರೇಗಿಸತೊಡಗಿದೆ. ಕೊನೆಗೊಂದು ದಿನ ಅವಳೀಗೆ ಇವನನ್ನು ಪರಿಚಯ ಮಾಡಿ ಕೊಟ್ಟೆ. ಇಬ್ಬರೂ ಅವರಷ್ಟಕ್ಕೆ ಅವರೇ ಮೊಬೈಲ್‌ನಲ್ಲಿ ಸಂದೇಶ-ಮಾತುಗಳನ್ನ ವಿನಿಮಯ ಮಾಡಿಕೊಳ್ಳತೊಡಗಿದರು.

ಹೀಗೆ ಹೊಸ ಶಕೆ ಶುರುವಾದ ಹೊಸದರಲ್ಲೇ ಈ ಹುಡುಗಿ ಏನು ಮಾಡಿದೆ ಅಂದರೆ 'ಇರಲರದವಳು ಇರುವೆ ಬಿಟ್ಕೊಂಡಳು' ಅನ್ನುವಂತೆ ಒಂದು ದಿನ ತನ್ನ ಗೆಳತಿಗೆ 'ತನಗೊಬ್ಬ ಹೊಸ ಗೆಳೆಯ ಸಿಕ್ಕಿರುವ ಬಗ್ಗೆ' ಕೊಚ್ಚಿಕೊಂಡು ಆಕೆಯ ಮೊಬೈಲ್‌ನಿಂದಲೂ ಈತನೊಂದಿಗೆ ಚಾಟ್‌ ಮಾಡಿ ತನ್ನ ಹಿರಿಮೆಯನ್ನು ಸಾರಿಕೊಂಡಿದ್ದಾಳೆ. 

ಈಕೆಯ ಗೆಳೆಯನ ಬಗ್ಗೆ ಗೆಳತಿಯಾದ ಆಕೆಗೆ ಇವಳು ಏನೇನು ಹೇಳಿ ಹುರಿದುಂಬಿಸಿದ್ದಳೋ ಏನೋ, ಆಕೆಗೂ ಒಮ್ಮೆ ಈ ಗೆಳೆಯನೊಂದಿಗೆ ಸ್ನೇಹ ಬೆಳೆಸುವ ಮನಸ್ಸಾಗಿದೆ. ಅದೊಂದು ರಾತ್ರಿ ಅವನಿಗೆ ಹೆದರುತ್ತೆದರುತ್ತಲೇ 'ಹಾಯ್‌' ಹೇಳಿದ್ದಾಳೆ. ಇವನು ಅದು ಈ ಹುಡುಗಿ ಅಂದುಕೊಂಡು ಮಾತು ಶುರು ಮಾಡಿದ್ದಾನೆ. ಕೊನೆಗೆ ಗೊತ್ತಾಗಿದೆ, ಅದು ಈ ಹುಡುಗಿ ಅಲ್ಲ, ಬೇರೆ ಹುಡುಗಿ ಅಂತ. ಫೇಸ್‌ಬುಕ್‌ನ ವಿವರ ಪಡೆದು ಆ ಹುಡುಗಿಯ ಭಾವಚಿತ್ರ ನೋಡಲಾಗಿ ಎದುರೆದುರು ನೋಡಿದ ಈಕೆಗಿಂತಾ ಭಾವಚಿತ್ರದ ಆ ಹುಡುಗಿಯೇ ಚೆಂದವಿದ್ದಾಳೆ ಅನ್ನಿಸಿಬಿಟ್ಟಿದೆ. ಹಾಗಾಗಿ ಅವಾಗಲೇ ಆಕೆಗೆ ಸ್ನೇಹದ ಕೋರಿಕೆ ಕಳಿಸಿದ್ದಾನೆ.

ಮರುದಿನ ಆ ಹುಡುಗಿಯೂ ಇವನ ಕೋರಿಕೆಯನ್ನು ಆನಂದದಿಂದ ಸ್ವಾಗತಿಸಲು ಮತ್ತೊಂದು ಶಕೆ ಶುರವಾಯ್ತು ಅಂತಾಯ್ತು. ಆ ಹುಡುಗನೂ ನಮ್ಮನೆ ಈ ಹುಡುಗಿಗಿಂತಾ ಈಕೆಯ ಗೆಳತಿಯಾದ ಆ ಹುಡುಗಿಯೊಂದಿಗೇ ಹೆಚ್ಚು ಸ್ನೇಹದಿಂದ ಇರುವುದನ್ನು ನೋಡಿ ಈ ಹುಡುಗಿಗೆ ತಲೆ ಕೆಟ್ಟು ಗೊಬ್ಬರ ಆಗಿದೆ. 

ಈ ನಡುವೆ ನಾನೂ ಆ ಮನೆಯನ್ನು ಬಿಟ್ಟು ಬೇರೆ ಮನೆಗೆ ಬಂದೆ. ಈಗ ಈಕೆ ನನ್ನನ್ನು ಕಂಡರೆ ಮುಖ ತಿರುಗಿಸಿಕೊಂಡು ಹೋಗುತ್ತಾಳೆ !... ನಾನೇನೋ ತಪ್ಪು ಮಾಡಿರುವೆನೋ ಅನ್ನವ ಹಾಗೆ ! 

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಶಿಕ್ಷಣದ ಬಗೆಗಿನ ನುಡಿಮುತ್ತುಗಳು

* ನಿಜವಾದ ಶಿಕ್ಷಣವೆಂದರೆ ಮಾನವೀಯತೆಯ ವಿಕಾಸ. - ಸ್ವಾಮಿ ವಿವೇಕಾನಂದರು . * ಸಚ್ಛಾರಿತ್ರ್ಯದ ಬೆಳವಣಿಗೆಯೇ ಶಿಕ್ಷಣದ ಆರಂಭ. - ಮಾಹಾತ್ಮ ಗಾಂಧೀಜಿ. * ಶಿಕ್ಷಣ ಪ್ರತಿ ವ್ಯಕ್ತಿಯಲ್ಲಿ ಪರಿಪೂರ್ಣತೆಯನ್ನು ತರಬೇಕು.  ಜೀವನದಲ್ಲಿ ಮುನ್ನಡೆಸುವ ಸಾಮಥ್ರ್ಯ ನೀಡಬೇಕು. -    ಜಿಡ್ಡು ಕೃಷ್ಣಮೂರ್ತಿ . * ದೈಹಿಕ, ಮಾನಸಿಕ ಹಾಗೂ ಆಧ್ಯಾತ್ಮಿಕ ಪ್ರಗತಿಗೆ ಇಂಬು ಕೊಡದ ಶಿಕ್ಷಣ ಅಪೂರ್ಣ. - ಡಾ. ಎಸ್. ರಾಧಾಕೃಷ್ಣನ್. * ಶಿಕ್ಷಣವೆಂದರೆ, ಪುಸ್ತಕದ ಜ್ಞಾನವೇ ಮಾತ್ರ ಅಲ್ಲ.  ಸಂಸಾರ, ಮನುಷ್ಯ ಮತ್ತು ಕಾರ್ಯ ಕಲಾಪಗಳ ಪರಸ್ಪರ ಸಂಯೋಗವೇ ಶಿಕ್ಷಣ. -    ಬರ್ಕ. * ಜೀವನವೇ ಶಿಕ್ಷಣ, ಶಿಕ್ಷಣವೇ ಜೀವನ. - ಜಾನ್ ಟ್ಯೂಯ್ಲಿ. * ಸಮನ್ವಯತೆ, ಸಮತೋಲನ, ಉಪಯುಕ್ತತೆ,  ಪರಿಪೂರ್ಣತೆ, ಆನಂದದಾಯಕ ಹಾಗೂ ನೈಸರ್ಗಿಕತೆಯೇ ಶಿಕ್ಷಣದ ಗುಣಗಳು. - ರೂಸೋ. * ಶಿಕ್ಷಣವು ಧಾರ್ಮಿಕ ವಿಚಾರಗಳ ಸಮನ್ವಯವಾದಾಗಲೇ ಪೂರ್ಣವಾಗುವುದು. - ಅಜ್ಞಾತ. * ನಡತೆ ಬೋಧಿಸುವ ಶಿಕ್ಷಣ, ಮನುಷ್ಯತ್ವ ತೋರದ ವಿಜ್ಞಾನ, ಇವೆರಡೂ ಅಪಾಯಕಾರಿ ಮತ್ತು ಉಪಯೋಗವಿಲ್ಲದವು. - ನೀತಿವಚನ . * ಶಿಕ್ಷಣವೇ ಜೀವನದ ಬೆಳಕು - ಗೊರೂರು * ಶಿಕ್ಷಣವು ಮನುಷ್ಯನನ್ನು ಶ್ರೇಷ್ಠ ನಾಗರಿಕನನ್ನಾಗಿ ಮಾಡುತ್ತದೆ. - ಡಾ: ಎಸ್. ರಾಧಾಕೃಷ್ಣನ್. * ಮನುಷ್ಯರಲ್ಲಿ ಪರಿಪೂರ್ಣತೆಯನ್ನು ಹಿಗ್ಗಿಸುವದೇ ಶಿಕ್ಷಣ - ವಿವೇಕಾನಂದ. * ವಿದ್ಯೆ ಗುರುಗಳ ಗುರು - ಭ್ರತೃ ಹರಿ. * ವಿದ್ಯೆಯಿಂದಲೇ ಮನುಷ್ಯನಿಗೆ ಸುಖ, ಭೋಗ, ಧನ, ...

ಈ ಹುಡುಗಿಯರೇ ಹೀಗೆ !

ಬೆಟ್ಟದ ಬದಿಯಿಂದ ಮುಂಜಾನೆಯ ರವಿ ಇಣುಕಿದಂತೆ ಕಿಟಕಿ ಹಿಂದಿನ ಕಂಗಳು, ಕಂಡೂ ಕಾಣದ ಮುಂಗುರುಳು ಗಲಗಲ ಬಳೆಯ ತರಂಗ ಕಿಲಕಿಲ ನಗುವಿನಂತರಂಗ, ಎದುರು ಬರಲಾರರು ಚೆಲುವೆಯರು ಬಂದರೂ ಬಹು ಲಾಸ್ಯ ಲಜ್ಜೆ ಇಡುತಲಿ ಒಂದೊಂದೇ ಹೆಜ್ಜೆ ಮುಗಿಲಿಂದ ಬರಗಾಲದಿ ಮಳೆ ಹನಿ ಬಿಸಿ ನೆಲಕ್ಕೆ ಎಣಿಸಿ ಮುತ್ತಿಕ್ಕಿದಂತೆ ! ಕಿರು ಹಣತೆ ಉರಿಯಂತೆ ತುಟಿ ರಂಗು ಪತಂಗ ಹಾರಿದಂತೆ ತೆಳು ಸೆರಗು ಕಾವ್ಯದೊಡತಿಯರು, ಮೌನವೇ ಮಾತು. ಅರೆಕ್ಷಣದಿ ಸೃಷ್ಟಿಸಿ ಕಲ್ಪಾನಾ ಲೋಕ ನಗ್ನ ಬಿಂಬ ತೋರಿ ತೆರೆವರು ಪ್ರೇಮಲೋಕ ಒಮ್ಮೆ ಧಾರಾಳ ದಮಯಂತಿ ಮಗದೊಮ್ಮೆ ಮುನಿದ ಮಗುವಂತೆ ಅಲ್ಲಿ ಪ್ರೇಮ ಪ್ರೀತಿಯನ್ನರಸುವ ಹುಡುಗನ ನಿರಂತರ ಬೇಟೆ ! ಅರಿವಾಗುವ ಮುನ್ನವೇ ಮಾನಸಿಕ ಪತ್ನಿಯಾಗಿರುತ್ತಾಳೆ, ಛೇಧಿಸಿ ಹೃದಯ ಕೋಟೆ.

ಪಡುವಣಕ್ಕೆ ಹೊರಟ ವಿಮಾನ ಏಕೆ ಬೇಗನೆ ತಲುಪುವುದಿಲ್ಲ ?

ಭೂಮಿ ವೇಗವಾಗಿ ಸುತ್ತುತ್ತಿದೆ ಎಂಬುದನ್ನು ಒಪ್ಪದವರು ಮುಂದಿಡುವ ಒಂದು ಪ್ರಶ್ನೆ ಹೀಗಿದೆ. "ಭೂಮಿ ಅಷ್ಟು ವೇಗವಾಗಿ ತಿರುಗುತ್ತ ಇದ್ದರೆ ಒಂದು ವಿಮಾನವು ಚೀನಾದಿಂದ ಸೌದಿಗೆ ಹೋಗಬೇಕಾದಲ್ಲಿ ಸ್ವಲ್ಪ ಮೇಲೆ ಹೋಗಿ ನಿಂತುಕೊಂಡರೆ ಸಾಕಲ್ಲ, ಭೂಮಿ ತಿರುಗುವುದರಿಂದ ಸೌದಿ ಅರೇಬಿಯಾ ತಾನಾಗಿಯೇ ವಿಮಾನದ ಕೆಳಗೆ ಬರುತ್ತದೆ. ಅಥವಾ ಮೂಡಣ ದಿಕ್ಕಿಗೆ ಹೊರಟ ವಿಮಾನವು ತಡವಾಗಿ ತಲುಪಬೇಕು ಮತ್ತು ಪಡುವಣ ದಿಕ್ಕಿಗೆ ಹೊರಟ ವಿಮಾನವು ಬೇಗನೆ ತಲುಪಬೇಕು" ಎಂಬ ವಾದವನ್ನು ಮುಂದಿಡುತ್ತಾರೆ. ಆದರೆ ಹಾಗೆ ಆಗಲು ಸಾಧ್ಯವಿಲ್ಲ, ಏಕೆಂದರೆ ಭೂಮಿ ಅಂದರೆ ಬರೀ ನೆಲವಷ್ಟೇ ಅಲ್ಲ, ಅದರ ಸುತ್ತಲಿನ ವಾತಾವರನವೂ ಸೇರಿ ಅದರ ಜೊತೆಗೇ ತಿರುಗುತ್ತಾ ಇದೆ. ಹಾಗಾಗಿ ವಿಮಾನವು ಮೇಲೆ ಹೋಗಿ ನಿಂತರೂ ಸಹ ಅದು ಭೂಮಿಯ ಜೊತೆಗೇ ಸಾಗುತ್ತದೆಯಾದ್ದರಿಂದ ಕೆಳಗಿನ ನೆಲ ಮಾತ್ರ ಜರುಗಲು ಸಾಧ್ಯ ಇಲ್ಲ. ಇದನ್ನು ನಾವೇ ಪರಿಶೀಲಿಸಬಹುದು. ಹೇಗೆಂದರೆ.. ವೇಗವಾಗಿ ಹೋಗುತ್ತಿರುವ ರೈಲಿನ ಎಲ್ಲಾ ಕಿಟಕಿಗಳನ್ನೂ ಮುಚ್ಚಿ ಅದರ ಮಾಡಿನ ಹತ್ತಿರದಿಂದ ಒಂದು ಚಿಕ್ಕ ವಸ್ತುವನ್ನು (ಉದಾ : ಗೋಲಿ) ಬಿಟ್ಟರೆ ಅದು ನಾವು ಬಿಟ್ಟಬಿಂದುವಿನ ನೇರಕ್ಕೇ ಬಿಳುತ್ತದೆಯೆ ಹೊರತಾಗಿ ರೈಲು ಓಡುತ್ತಿರುವುದರಿಂದ ಸ್ವಲ್ಪ ಹಿಂದೆ ಬೀಳುವುದಿಲ್ಲ. ಹಾಗೆಯೇ ಗಾಳಿಯಾಡದಂತೆ ಮುಚ್ಚಿದ ರೈಲು ಬೋಗಿಯ ಒಳಗೆ ಒಂದು ತುದಿಯಿಂದ ಇನ್ನೊಂದು ತುದಿಗೆ ಚೆಂಡನ್ನು ಒಂದೇ ಜೋರಿನಲ್ಲಿ ಎಸೆದರೆ ಅದು ಎರಡೂ ದಿಕ್ಕಿಗೂ (ಮುಂದಿನಿ...