೧. ವ್ಯಕ್ತಿಯೊಬ್ಬ ಕೊಳವೆ ಬಾವಿ ಕೊರೆಸಬೇಕೆಂದರೆ ಕಡ್ಡಾಯವಾಗಿ ಅನುಮತಿ ಪಡೆಯಲೇ ಬೇಕು. (ಗ್ರಾಮಗಳಲ್ಲಿ ಗ್ರಾಮಾಧಿಕಾರಿಯಿಂದ)
೨. ಕೊಳವೆಬಾವಿ ಕೊರೆಯುವ ಸಂಸ್ಥೆಯವರು ಅನುಮತಿ ಪಡೆಯದ ಬಾವಿಗಳನ್ನು ಕೊರೆಯುವಂತಿಲ್ಲ.
೩. ಅನುಮತಿ ನೀಡುವಾಗ ಗ್ರಾಮಾಧಿಕಾರಿಯು ಸ್ಥಳಕ್ಕೆ ಭೇಟಿ ನೀಡಿ ಅದು ಕೊಳವೆಬಾವಿಗೆ ಯೋಗ್ಯವೇ ಎಂದರಿತು ಅನುಮತಿ ನೀಡಬೇಕು. (ಹತ್ತಿರದಲ್ಲೇ ಬೇರೆ ಕೊಳವೆಬಾವಿ ಇರಬಹುದು, ನೀರಿಲ್ಲದಿರುವಿಕೆ ಇತ್ಯಾದಿ)
೪. ಅನುಮತಿ ನೀಡುವಾಗ ಆ ವ್ಯಕ್ತಿಯಿಂದ ಒಂದು ಲಕ್ಷ ರೂಪಾಯಿಯನ್ನು ಠೇವಣಿ ಪಡೆದು ಅನುಮತಿ ಪತ್ರ ನೀಡಬೇಕು.
೫. ರೈತನಿಂದ ಅನುಮತಿ ಪತ್ರ ಪಡೆದ ನಂತರವೇ ಕೊಳವೆಬಾವಿ ಕೊರೆಯುವವರು ಕೆಲಸ ಪ್ರಾರಂಭಿಸಬೇಕು.
೬. ಕೊರೆದಾದ ನಂತರ ಮತ್ತೆ ಗ್ರಾಮಾಧಿಕಾರಿಯನ್ನು ಕರೆಸಿ ನೀರು ಸಿಕ್ಕಿದ್ದರೆ ಅದಕ್ಕೆ ಮಾಡಿರುವ ವ್ಯವಸ್ಥೆ, ಅಥವಾ ನೀರು ಸಿಗದಿದ್ದರೆ ಕೊಳವೆಬಾವಿಯನ್ನು ಮುಚ್ಚಿರುವುದನ್ನು ಅಧಿಕಾರಿಯು ಪರಿಶೀಲಿಸಬೇಕು.
೭. ಎಲ್ಲವೂ ಸಮರ್ಪಕವಾಗಿದೆ ಎಂದಾದ ನಂತರವೇ ರೈತ ಇರಿಸಿರುವ ಠೇವಣಿಯನ್ನು ಕೊಳವೆಬಾವಿ ಕೊರೆದ ಸಂಸ್ಥೆಗೆ ಹಸ್ತಾಂತರಿಸಬೇಕು.
೮. ಇಷ್ಟೆಲ್ಲಾ ಆದ ನಂತರವೂ ಏನಾದರೂ ಅವಘಡ ಸಂಭವಿಸಿದಲ್ಲಿ ಈ ಮೂವರ ಮೇಲೂ ಕ್ರಿಮಿನಲ್ ಮೊಖದ್ದಮೆ ದಾಖಲಿಸಬೇಕು.
ಹೀಗೆ ಮಾಡುವುದರಿಂದ ಒಂದಿಷ್ಟು ಲಂಚಕ್ಕೆ ದಾರಿಯಾಗಬಹುದಾದರೂ ಮಕ್ಕಳ ಪ್ರಾಣಹಾನಿಯಂತ ಅವಘಡಗಳನ್ನು ಕಡಿಮೆ ಮಾಡಬಹುದು.

ಕಾಮೆಂಟ್‌ಗಳು