ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

2016 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಭೂಮಿಯ ಕಾಂತ ವಲಯ ಬದಲಾಗುವ ಹೊತ್ತಲ್ಲಿ..

ಸೂರ್ಯನಿಂದ ಬರುವ ರೆಡಿಯೇಷನ್ ಕಿರಣಗಳನ್ನು ಭೂಮಿಯ ಕಾಂತ ವಲಯ ತಡೆದು ಇಲ್ಲಿನ ಜೀವಿಗಳನ್ನು ಪೊರೆಯುತ್ತಿದೆ ಅನ್ನೋದು ಎಲ್ಲರಿಗೂ ಗೊತ್ತು. ಅಂದರೆ ಒಂದೇ ಒಂದು ನಿಮಿಷ ಭೂಮಿಯ ಈ ಕಾಂತ ವಲಯ ಕೆಲಸ ನಿಲ್ಲಿಸಿದರೂ ಸಾಕು, ಬಹಳಷ್ಟು ಜೀವಿಗಳ ನಾಶ ಮತ್ತು ಉಳಿದರೂ ಕ್ಯಾನ್ಸರ್ ನಂತಹ ಭೀಕರ ಕಾಯಿಲೆಗಳಿಗೆ ತುತ್ತಾಗುವ ಅಪಾಯ ಇದ್ದೇ ಇದೆ.  ಆದರೆ ಹೀಗೆ ಭೂಮಿಯ ಕಾಂತ ವಲಯ ಇದ್ದಕ್ಕಿದ್ದಂತೆ ಕೆಲಸ ನಿಲ್ಲಿಸಲು ಸಾದ್ಯವೇ ಎಂದು ನೋಡಲು ಹೋದರೆ "ಹೌದು, ಅದೂ ಆಗುತ್ತದೆ" ಎಂದು ಹೇಳುತ್ತಾರೆ ವಿಜ್ಞಾನಿಗಳು.  ಭೂಮಿಯ ಕಾಂತ ವಲಯವು ತೆಂಕಣ ಮತ್ತು ಬಡಗಣ ತುದಿಗಳನ್ನು ಹೊಂದಿದೆ ತಾನೇ, ಈ ತುದಿಗಳು ಸುಮಾರು ಐವತ್ತು ಸಾವಿರದಿಂದ ಲಕ್ಷ ವರ್ಷಗಳ ಒಳಗೆ ಒಂದು ಸಲ ತೆಂಕಣ ತುದಿಯು ಬಡಗಣಕ್ಕೂ, ಬಡಗಣ ತುದಿಯು ತೆಂಕಣಕ್ಕೂ ಬದಲಾಗುವುದನ್ನು ವಿಜ್ಞಾನಿಗಳು ಕಂಡುಕೊಂಡಿದ್ದಾರೆ. ಅಂದರೆ ಈಗ ಒಂದು ದಿಕ್ಸೂಚಿಯನ್ನು ಎಲ್ಲಿ ಇಟ್ಟರೂ ಅದು ಈಗ ಬಡಗು ದಿಕ್ಕನ್ನು ತೋರಿಸುತ್ತೆ. ಆದರೆ ಭೂಮಿಯ ಕಾಂತ ವಲಯ ತಲೆ ಕೆಳಗು ಆಯ್ತು ಅಂದರೆ ದಿಕ್ಸೂಚಿಯು ತೆಂಕು ದಿಕ್ಕನ್ನು ತೋರಿಸಲು ತೊಡಗುತ್ತೆ. ಇದು ಸುಮಾರು 50 ಸಾವಿರ ವರ್ಷಗಳಿಗೆ ಒಮ್ಮೆ ಹೀಗೆ ಬದಲಾಗುತ್ತ ಇರುತ್ತೆ ಅನ್ನೋದು ವಿಜ್ಞಾನಿಗಳ ಹೇಳಿಕೆ. ಆದರೆ ಅದು ಯಾಕೆ ಬದಲಾಗುತ್ತೆ ಅನ್ನೋದು ಇನ್ನೂ ತಿಳಿದು ಬಂದಿಲ್ಲ. ಆದರೆ ಈ ರೀತಿ ಈ ಹಿಂದೆ ಬದಲಾಗಿ ಆಗಲೇ 50 ಸಾವಿರ ವರ್ಶ ಕಳೆದಿದ್ದು ಮುಂದಿನ ಬದಲಾವಣೆ ಯಾವ ಹೊತ್ತಲ್ಲ

ಸ್ವತಂತ್ರ ಭಾರತದಲ್ಲಿ ಅತಂತ್ರ ಕರ್ನಾಟಕ!

ನಾವು, ಅಂದರೆ ಕನ್ನಡಿಗರು ಒಂದು ವಿಷಮ ಪರಿಸ್ಥಿತಿಯಲ್ಲಿ ಇದ್ದೇವೆ. ನಮ್ಮ ಜೊತೆ ನಮ್ಮ ಕನ್ನಡ ನುಡಿಯೂ ಅತಂತ್ರವಾಗುತ್ತಿದೆ. ಇದಕ್ಕೆ ಕಾರಣ ಯಾವುದೋ ಹೊರ ದೇಶದ ಜನರೋ, ಅಥವಾ ಹೊರ ದೇಸದ ಭಾಷೆಯೋ ಅಲ್ಲ, ಬದಲಾಗಿ ನಮ್ಮದೇ ದೇಶದ ಹಿಂದಿ! ಇಂದು ಹಿಂದಿ ಎಂಬ ಪೆಡಂಭೂತ ದಿನ ದಿನವೂ ಕನ್ನಡ ನಾಡನ್ನು, ನಮ್ಮ ನುಡಿಯನ್ನು, ಕೊನೆಗೆ ಕನ್ನಡಿಗರನ್ನೂ ನುಂಗಿ ಹಾಕುತ್ತಲಿದೆ. ಆದರೆ ನಿರ್ಲಜ್ಜರಾದ ಕನ್ನಡಿಗರು ಕೇವಲ ದೇಶಪ್ರೇಮದ ಹೆಸರಲ್ಲಿ ಎಲ್ಲವನ್ನೂ ಸಹಿಸಿಕೊಂಡು ಸಹನಾಶೀಲರಾಗಿ ಕೊರಗುತಿದ್ದೇವೆ. ಕೆಲವು ವರ್ಷಗಳ ಹಿಂದೆ ಆಂಗ್ಲ ಶಾಲೆಗಳು ಹೆಚ್ಚು, ಹೆಚ್ಚು ತಲೆ ಎತ್ತತೊಡಗಿದಾಗ ಕನ್ನಡಿಗರು ಆತಂಕಗೊಂಡಿದ್ದರು. ಮುಂದೆ ಒಂದು ದಿನ ಈ ಪರಕೀಯ ಆಂಗ್ಲ ನುಡಿ ನಮ್ಮ ಕನ್ನಡ ನುಡಿಯನ್ನೇ ತಿಂದು ಹಾಕಲಿದೆ ಎಂದು ಭಯಗೊಂಡಿದ್ದಿದೆ. ಆದರೆ ಕಾಲ ಕಳೆದಂತೆ ಆಂಗ್ಲದಿಂದ ಕನ್ನಡಕ್ಕೆ ಅಷ್ಟೇನೂ ತೊಂದರೆ ಇಲ್ಲ ಅನ್ನುವುದು ಗೊತ್ತಾಯಿತು. ಹಾಗೆಯೇ ಲೋಕಜ್ಞಾನಕ್ಕಾಗಿ, ಪ್ರಪಂಚದ ಆಗು ಹೋಗುಗಳ ತಿಳುವಳಿಕೆಗಾಗಿ, ದೈನಂದಿನ ವಿಜ್ಞಾನದ ಬೆಳವಣಿಗೆಗಳ ಮಾಹಿತಿಗಾಗಿ ಆಂಗ್ಲ ನುಡಿ ಅತ್ಯವಶ್ಯ ಎಂಬ ಸತ್ಯವೂ ಅರವಿಗೆ ಬಂತು. ಆದರೆ ಅಷ್ಟರಲ್ಲಾಗಲೇ ಇನ್ನೊಂದು ಹಿಂಬಾಗಿಲಿನಿಂದ ಹಿಂದಿ ಎಂಬ ಜಂತುವೊಂದು ಸದ್ದಿಲ್ಲದೇ ಸುಂದರವಾದ ವೇಶವೊಂದನ್ನು ತೊಟ್ಟು ಬಂದು ನಮ್ಮ ನಾಡನ್ನು ಮತ್ತು ನಮ್ಮ ಮನ, ಮನೆಯನ್ನು ಸೇರಿಕೊಂಡಾಗಿತ್ತು. ಹಾಗೆ ಅದು ತೊಟ್ಟು ಬಂದ ನಕಲಿ ವೇಶದ ಹೆಸರೇ "ರಾಷ್ತ್ರಭ

ಪಡುವಣಕ್ಕೆ ಹೊರಟ ವಿಮಾನ ಏಕೆ ಬೇಗನೆ ತಲುಪುವುದಿಲ್ಲ ?

ಭೂಮಿ ವೇಗವಾಗಿ ಸುತ್ತುತ್ತಿದೆ ಎಂಬುದನ್ನು ಒಪ್ಪದವರು ಮುಂದಿಡುವ ಒಂದು ಪ್ರಶ್ನೆ ಹೀಗಿದೆ. "ಭೂಮಿ ಅಷ್ಟು ವೇಗವಾಗಿ ತಿರುಗುತ್ತ ಇದ್ದರೆ ಒಂದು ವಿಮಾನವು ಚೀನಾದಿಂದ ಸೌದಿಗೆ ಹೋಗಬೇಕಾದಲ್ಲಿ ಸ್ವಲ್ಪ ಮೇಲೆ ಹೋಗಿ ನಿಂತುಕೊಂಡರೆ ಸಾಕಲ್ಲ, ಭೂಮಿ ತಿರುಗುವುದರಿಂದ ಸೌದಿ ಅರೇಬಿಯಾ ತಾನಾಗಿಯೇ ವಿಮಾನದ ಕೆಳಗೆ ಬರುತ್ತದೆ. ಅಥವಾ ಮೂಡಣ ದಿಕ್ಕಿಗೆ ಹೊರಟ ವಿಮಾನವು ತಡವಾಗಿ ತಲುಪಬೇಕು ಮತ್ತು ಪಡುವಣ ದಿಕ್ಕಿಗೆ ಹೊರಟ ವಿಮಾನವು ಬೇಗನೆ ತಲುಪಬೇಕು" ಎಂಬ ವಾದವನ್ನು ಮುಂದಿಡುತ್ತಾರೆ. ಆದರೆ ಹಾಗೆ ಆಗಲು ಸಾಧ್ಯವಿಲ್ಲ, ಏಕೆಂದರೆ ಭೂಮಿ ಅಂದರೆ ಬರೀ ನೆಲವಷ್ಟೇ ಅಲ್ಲ, ಅದರ ಸುತ್ತಲಿನ ವಾತಾವರನವೂ ಸೇರಿ ಅದರ ಜೊತೆಗೇ ತಿರುಗುತ್ತಾ ಇದೆ. ಹಾಗಾಗಿ ವಿಮಾನವು ಮೇಲೆ ಹೋಗಿ ನಿಂತರೂ ಸಹ ಅದು ಭೂಮಿಯ ಜೊತೆಗೇ ಸಾಗುತ್ತದೆಯಾದ್ದರಿಂದ ಕೆಳಗಿನ ನೆಲ ಮಾತ್ರ ಜರುಗಲು ಸಾಧ್ಯ ಇಲ್ಲ. ಇದನ್ನು ನಾವೇ ಪರಿಶೀಲಿಸಬಹುದು. ಹೇಗೆಂದರೆ.. ವೇಗವಾಗಿ ಹೋಗುತ್ತಿರುವ ರೈಲಿನ ಎಲ್ಲಾ ಕಿಟಕಿಗಳನ್ನೂ ಮುಚ್ಚಿ ಅದರ ಮಾಡಿನ ಹತ್ತಿರದಿಂದ ಒಂದು ಚಿಕ್ಕ ವಸ್ತುವನ್ನು (ಉದಾ : ಗೋಲಿ) ಬಿಟ್ಟರೆ ಅದು ನಾವು ಬಿಟ್ಟಬಿಂದುವಿನ ನೇರಕ್ಕೇ ಬಿಳುತ್ತದೆಯೆ ಹೊರತಾಗಿ ರೈಲು ಓಡುತ್ತಿರುವುದರಿಂದ ಸ್ವಲ್ಪ ಹಿಂದೆ ಬೀಳುವುದಿಲ್ಲ. ಹಾಗೆಯೇ ಗಾಳಿಯಾಡದಂತೆ ಮುಚ್ಚಿದ ರೈಲು ಬೋಗಿಯ ಒಳಗೆ ಒಂದು ತುದಿಯಿಂದ ಇನ್ನೊಂದು ತುದಿಗೆ ಚೆಂಡನ್ನು ಒಂದೇ ಜೋರಿನಲ್ಲಿ ಎಸೆದರೆ ಅದು ಎರಡೂ ದಿಕ್ಕಿಗೂ (ಮುಂದಿನಿ

ಚಿತ್ರಮಂದಿರಗಳಲ್ಲಿ ಯಾರ್‌ ಯಾರ ಬಾಯಲ್ಲಿ "ಜ್ವಳ ಜ್ವಳ" ಆಗಲಿದೆಯೋ...

ನಾವು ಪ್ರಾಥಮಿಕ ಶಾಲೆಯಲ್ಲಿ ರಾಷ್ಟ್ರಗೀತೆ ಹಾಡುವಾಗ ಹೆಚ್ಚಾಗಿ ಗುಂಪಲ್ಲಿ ಗೋವಿಂದ ಆಗಿ ಹಾಡುವುದೇ ಹೆಚ್ಚು. ಅದೇ ಒಬ್ಬೊಬ್ಬರನ್ನೇ ನಿಲ್ಲಿಸಿ ಹಾಡು ಅಂದರೆ ಯಾರಿಗೂ ಸರಿಯಾಗಿ ಬರುತ್ತಿರಲಿಲ್ಲ. ಹೀಗಿರಲೊಮ್ಮೆ ನಮ್ಮ ಶಾಲೆಗೆ ಹಾವೇರಿ ಕಡೆಯ ಕಡಕ್‌ ಮುಸ್ಲಿಂ ಮೇಷ್ಟ್ರು ವರ್ಗ ಆಗಿ ಬಂದ್ರು. ಬಂದ ಮೊದಲ ದಿನವೇ "ಬಡಿಗಿ ತರ‍್ರಲೇ" ಅಂತ ಒಂದು ದೊಡ್ಡ ಕೋಲು ತರಿಸಿ ಇಟ್ಟುಕೊಂಡು ಬಡಿಯತೊಡಗಿದರು. ಪ್ರತಿಯೊಂದಕ್ಕೂ ಭಯಂಕರ ಸ್ಟ್ರಿಕ್ಟು.  ಒಂದು ದಿನ ರಾಷ್ಟ್ರಗೀತೆ ಹೇಳುತ್ತಿರುವಾಗ ಅವರಿಗೆ ಯಾರೋ ಸರಿಯಾಗಿ ಹೇಳುತ್ತಿಲ್ಲ ಅನ್ನೋ ಅನುಮಾನ ಬಂದಿದೆ. ಒಂದೆರಡು ದಿನ ಗಮನಿಸಿದವರು ಕೊನೆಗೂ ಯಾರು ತುಂಬಾ ತಪ್ಪಾಗಿ ಹೇಳುತ್ತಾರೆ ಅಂಗ ಗೊತ್ತು ಮಾಡಿ ಆ ಹುಡುಗನಿಗೆ "ನೀನೊಬ್ನೇ ಹೇಳಲೇ ರಾಷ್ಟ್ರಗೀತೆನಾ" ಅಂದ್ರು. ಸರಿ ಅವ ಸುರು ಮಾಡಿದ.. "ಜನ ಗಣ ಮನ ಅದಿ ನಾಯಕ ಜಯ ಹೇ..." ... ... "ಉಚ್ಚಲ ಜಲದಿ ತರಂಗ" ಅನ್ನೋ ಸಾಲನ್ನು "ಉಚ್ಚೆಲ್ಲ ಜ್ವಳ ಜ್ವಳ ಲಂಗ!" ಅಂದು ಬಿಟ್ಟ. ಮೇಷ್ಟ್ರು ಬಡಿಗೆ ಹಿಡಿದೇ ನಿಂತಿದ್ರು. ಅಂಡಿನ ಮೇಲೆ ಚೆನ್ನಾಗಿ ಬಡಿದ್ರು. ಅದಾದ ನಂತರ ಎಲ್ಲರಿಗೂ ರಾಷ್ಟ್ರಗೀತೆ ಸರಿಯಾಗಿ ಬಾಯಿಪಾಠ ಮಾಡಿಸಿದ್ರು. ಅದೆಲ್ಲಾ ಆಗಿ ಈಗ... ಚಿತ್ರಮಂದಿರಗಳಲ್ಲಿ ಯಾರ್‌ ಯಾರ ಬಾಯಲ್ಲಿ "ಜ್ವಳ ಜ್ವಳ" ಆಗಲಿದೆಯೋ... 

ಜೀವ ವಿಕಾಸದಲ್ಲಿ ವೈರಸ್ ಗಳ ಕೈವಾಡ ?!

ಡಾರ್ವಿನ್ ಥಿಯರಿಯನ್ನು ಹಲವರು ಒಪ್ಪಿದ್ದಾರೆ, ಕೆಲವರು ಒಪ್ಪಿಲ್ಲ. ಅದರೆ ಡಾರ್ವಿನ್ ಥಿಯರಿ ಒಪ್ಪಿದವರಿಗೂ ಒಂದು ಗೊಂದಲ ಇದೆ. ಏನೆಂದರೆ ಹೊಸ ಜೀವಿ ಉದಯವಾಗುವಾಗ ತನಗೆ ಬೇಕಾದಂತೆ ಜೀನ್ (DNA) ನಲ್ಲಿ ಮಾರ್ಪಾಡು ಹೇಗೆ ಮಾಡಿಕೊಳ್ಳುತ್ತದೆ ? ಎಂದು. ಅದರೆ ಇತ್ತೀಚಿನ ಸಂಶೋಧನೆಗಳ ಪ್ರಕಾರ ಜೀವಿಗಳ ವಿಕಾಸದಲ್ಲಿ ಕೈ ಆಡಿಸುತ್ತಿರುವುದು ಕೆಲವು ವೈರಸ್ ಅಂತೆ ! ನಮ್ಮ ಜೀವ ಕೋಶಗಳಿಗಿಂತಲೂ ಚಿಕ್ಕದಾದ ವೈರಸ್ ಗಳು ಗಂಡಿನ ವೀರ್ಯ ಮತ್ತು ಹೆಣ್ಣಿನ ಅಂಡಾಣು ಒಳಗೆ ಸೇರಿಕೊಂಡು ಹೊಸ ಜೀವದ ಉದಯ ಆಗುವ ಸಮಯದಲ್ಲಿ ತಂದೆ ತಾಯಿಗಳ ಯಥಾವತ್ ಪ್ರತಿ ಮಗು ಆಗದಂತೆ ಜೀನ್ ನಲ್ಲಿ ಕೆಲವೊಂದು ಕಡತಗಳನ್ನು ಹಾಳು ಮಾಡುತ್ತವೆ ಅಂತೆ. ಆ ಹಾಳಾದ ಕೊಂಡಿಗಳ ಬದಲು ಜೀವ ಕೋಶಗಳು ಬೇರೆ ಕಡತಗಳನ್ನು ಬಳಸಿ ಬೆಳೆಯುವದರ ಮೂಲಕ ತಂದೆ, ತಾಯಿಯ ಜೆರಾಕ್ಸ್ ಪ್ರತಿ ಹುಟ್ಟದಂತೆ ಆಗುತ್ತದೆ. ಭೂಮಿಯ ಜೀವಿಗಳೇಲ್ಲ ಬೇರೆ ಗ್ರಹದ ಮುಂದುವರಿದ ಜೀವಿಗಳ ಪ್ರಯೋಗ ಪಶುಗಳು ಅಂತಾನೂ ಕೆಲವು ವಿಜ್ಞಾನಿಗಳು ಹೇಳಿದ್ದಾರೆ. ಈಗ ಅನುಮಾನ ಇರೋದು ಈ ವೈರಸ್ ಗಳು ಆ ಮುಂದುವರಿದ ಜೀವಿಗಳ ಸೃಷ್ಟಿ ಇರಬಹುದಾ  ? (ಕಂಪ್ಯೂಟರ್ ವೈರಸ್ ಕೂಡ ಮನವ ಜೀವಿಗಳ ಸೃಷ್ಟಿ!)

ಸಿ.ಟಿ. ರವಿ ಸಂದರ್ಶನ ಮಾಡಿದ್ದು

​ ಅದು ನಾನು ಚಿಕ್ಕಮಗಳೂರಿನ ಒಂದು ಸ್ಥಳಿಯ ಪತ್ರಿಕೆಯಲ್ಲಿ ಸಹ ಸಂಪಾದಕನಾಗಿ ಇದ್ದ ಸಮಯ. ಆಗ ಸಿ.ಟಿ. ರವಿ ಅವರು ಬರಿ ಶಾಸಕರಾಗಿದ್ದರು. ನಮ್ಮ ಪತ್ರಿಕೆಯ ಮಾಲೀಕರು ದೊಡ್ಡ ಗಾರ್ಮೆಂಟ್ಸ್ ಸಹ ಹೊಸದಾಗಿ ಮಾಡಿದ್ದರು. ಬೇರೆ ಬೇರೆ ಕಾರಣಗಳಿಂದ ಅವರಿಗೆ ಶಾಸಕರ ಸಹಾಯ ಬೇಕೇ ಆಗಿತ್ತು.  ಒಂದು ದಿನ ರವಿ ಅವರನ್ನು ಕಚೇರಿಗೆ ಕರೆದು, ಪಕ್ಕದಲ್ಲೇ ಇದ್ದ ಗಾರ್ಮೆಂಟ್ಸ್ ಅನ್ನೂ ತೋರಿಸಲು ನಿರ್ಧರಿಸಿದರು. ಹಾಗೆ ಬರುವ ರವಿ ಅವರದೊಂದು ಸಂದರ್ಶನ ಮಾಡಿ ಪತ್ರಿಕೆಯಲ್ಲಿ ಹಾಕುವಂತೆ ನನಗೂ ಹೇಳಿದರು. ಆಗಷ್ಟೇ ಬಾಬಾ ಬುಡನ್ ಗಿರಿ ವಿವಾದ ಭುಗಿಲೆದ್ದ ಸಮಯ, ಮತ್ತು ಅದರಲ್ಲಿ ರವಿ ಅವರೂ ಸಹ ಸಕ್ರಿಯರಾಗಿದ್ದರು. ಸಂದರ್ಶನ ಶುರು ಮಾಡಿದ ನಾನು ಅವರ ರಾಜಕೀಯ ಜೀವನದ ಬಗ್ಗೆ ಎಲ್ಲಾ ಕೇಳಿ ಆದ ನಂತರ ಸಹಜವಾಗಿ ದತ್ತ ಪೀಠದ ಬಗ್ಗೆ ಪ್ರಶ್ನೆ ಎತ್ತಿದೆ. ಒಂದು ಕ್ಷಣ ಮೌನವಾದ ರವಿ ಅವರು ಪಕ್ಕದಲ್ಲೇ ಕುಳಿತಿದ್ದ ಪರಕಾಶಕರನ್ನು ನೋಡಿದರು. ಪ್ರಕಾಶಕರು (ಸಂಪಾದಕ, ಮಾಲೀಕ) ಸಾವರಿಸಿಕೊಂಡು ನನ್ನಲ್ಲಿ "ಈಗ ಆ ವಿಶಯ ಬೇಡ ಬಿಡಿ." ಅಂದರು. ಅಲ್ಲಿಗೆ ಸಂದರ್ಶನ ಮುಕ್ತಾಯವಾಯ್ತು. ಶಾಸಕರು ಹೋದ ನಂತರ ಸಂಪಾದಕರು ನನ್ನಲ್ಲಿ ಹೇಳಿದರು.. "ಯಾವುದೇ ಪ್ರಶ್ನೆಗೆ ಸಮಯ ಸಂದರ್ಭ ಇರುತ್ತೆ. ಈಗ ಅವರಿಂದ ನಮಗೆ ಕೆಲಸ ಆಗಬೇಕಾಗಿದೆ. ಇಂತಹ ಸಮಯದಲ್ಲಿ ಅವರಿಗೆ ಮುಜುಗರ ಮಾಡಬಾರದು... ನಮ್ಮ ಕೆಲಸ ಆಗಿಲ್ಲ ಅಂದರೆ ಮುಂದೆ ನೋಡುವ.." ಅಂದರು. ಅವರ ಕೆಲಸ ಅಯ್ತೋ ಬಿಡ್ತೋ

ಆ ಪುಟ್ಟ ಗೆಳತಿಯ ಕರೆಗಾಗಿ ಕಾಯುತ್ತಾ...

​ ದಾವಣಗೆರೆಯ ಆ ಹುಡುಗಿ ನನಗೆ ಪರಿಚಯವಾಗಿದ್ದು ಸುಮಾರು ಐದು ವರ್ಷಗಳ ಹಿಂದೆ. ಆಗ ಆಕೆ ಏಳನೇ ತರಗತಿ ಓದುತ್ತಿದ್ದಳು. ಒಂದು ದಿನ ಅವರ ಚಿಕ್ಕಪ್ಪನಿಗೆ ಮಾಡಿದ ಕರೆ ಗುರಿ ತಪ್ಪಿ ನನ್ನ ಮೊಬೈಲಿಗೆ ಬಂದಿತ್ತು. ರಾಂಗ್‌ ನಂಬರ್‌ ಅಂದರೂ ಕೇಳದೇ "ತಮಾಷೆ ಮಾಡ್ತಿದೀರ" ಅಂತ ಮಾತು ಮುಂದುವರಿಸಿದಳು. ನಾನು ನಿನ್ನ ಚಿಕ್ಕಪ್ಪ ಅಲ್ಲ ಅಂತ ಆಕೆಯನ್ನು ನಂಬಿಸಲು ಒಂದರ್ಧ ಗಂಟೆಯೇ ಹಿಡಿದಿತ್ತು. ಆಮೇಲೆ ಸ್ವಲ್ಪ ಸಮಯದ ನಂತರ ಮತ್ತೆ ಕರೆ ಮಾಡಿದ ಆಕೆ "ಸ್ಸಾರಿ" ಕೇಳಿದಳು. ಸರಿ ಅಂತ ನಾನೂ ಸುಮ್ಮನಾದೆ. ಆದರೆ ಕೆಲ ದಿನಗಳ ನಂತರ ಮತ್ತೆ ಕರೆ ಮಾಡಿದ ಹುಡುಗಿ "ನಿಮ್ಮ ನಂಬರ್‌ ಚೆನ್ನಾಗಿದೆ, ಹಾಗಾಗಿ ನೆನಪಲ್ಲಿ ಇತ್ತು. (ಅವಳ ಚಿಕ್ಕಪ್ಪನ ನಂಬರಿಗೆ ಸಮೀಪದ್ದು ಬೇರೆ.) ಅದಕ್ಕೆ ಮತ್ತೊಮ್ಮೆ ಮಾತಾಡಿಸೋಣ ಅಂತ ಕಾಲ್‌ ಮಾಡಿದೆ" ಅಂದಳು. ಈ ಸಲ ನಾನೂ ಕುಶಿಯಿಂದ ಸಲುಗೆಯಿಂದ ಮಾತಾಡಿದೆ. ಅವಳ ಓದಿನ ಬಗ್ಗೆಯೆಲ್ಲಾ ವಿಚಾರಿಸಿದೆ. ಆಕೆ ತುಂಬಾ ಮುದ್ದು ಮುದ್ದಾಗಿ ಎಲ್ಲಾ ಹೇಳಿಕೊಂಡಳು. ಹೀಗೆ ನಮ್ಮ ಸ್ನೇಹ ಶುರುವಾಯ್ತು. ಆಕೆ ತನ್ನ ತಾಯಿಯ ಮೊಬೈಲ್‌ನಿಂದ ಕರೆ ಮಾಡುತ್ತಿದ್ದುದರಿಂದ ನಾನು ಆ ನಂಬರನ್ನು ಸೇವ್‌ ಮಾಡಿಕೊಳ್ಳಲಿಲ್ಲ.  ತಿಂಗಳಿಗೆ ಮೂರ್ನಾಲ್ಕು ಬಾರಿಯಾದರೂ ನನಗೆ ಕರೆ ಮಾಡಿ ಮಾತಾಡುತ್ತಿದ್ದಳು. ಹೀಗೆ ದಿಗಳೆಯುತ್ತಾ ವರ್ಷಗಳುರುಳಿದಂತೆ ನಮ್ಮ ಸ್ನೇಹ ಹೆಚ್ಚು ಗಟ್ಟಿಯಾಯ್ತು. ಅದಾಗಲೇ ಆಕೆ SSLCಗೆ ಕಾಲಿರಿಸಿದ್ದಳು. ಜೊ

ಭೂಮಿಯು ಸೂರ್ಯನನ್ನು ಮೊಟ್ಟೆಯಾಕಾರದಲ್ಲಿ ಸುತ್ತುತ್ತಿದೆಯೇ ?

​[ಚಿತ್ರ ೧] ​ "ಭೂಮಿಯು ಸೂರ್ಯನನ್ನು ಮೊಟ್ಟೆಯಾಕಾರದಲ್ಲಿ ಸುತ್ತುತ್ತದೆ, ಬಾದಾಮಿ ಕಾಳಿನ ಆಕಾರದಲ್ಲಿ ಸುತ್ತುತ್ತದೆ" ಎಂಬುದನ್ನು ನಮ್ಮ ಪಾಠಗಳಲ್ಲಿ ಓದುತ್ತಾ ಬಂದಿದ್ದೇವೆ. ಕೆಲವು ಚಿತ್ರಗಳೂ [ಚಿತ್ರ ೧] ಇದನ್ನೇ ತೋರಿಸುತ್ತವೆ ಕೂಡಾ. ಭೂಮಿಯ ಸುತ್ತುವಿಕೆಯು ಸರಿಯಾದ ವೃತ್ತಾಕಾರದಲ್ಲಿ ಇಲ್ಲ ಅಂತ ಹೇಳಲು ವಿಜ್ಞಾನಿಗಳು ಮೊಟ್ಟೆ, ಬಾದಾಮಿಗಳನ್ನು ಉದಾಹರಿಸಿದರೋ ಅಥವಾ ವಿಜ್ಞಾನಿಗಳ ಮತ್ತು ಜನರ ನಡುವಿನವರು ಹಾಗೆ ಮಾಡಿದರೋ ಗೊತ್ತಿಲ್ಲ. ಆದರೆ ಭೂಮಿ ಮೊಟ್ಟೆಯಾಕಾರದಲ್ಲೋ, ಬಾದಾಮಿ ಆಕಾರದಲ್ಲೋ ಸೂರ್ಯನಿಗೆ ಸುತ್ತು ಹೊಡೆಯುವುದಿಲ್ಲ.  ಹಾಗೇನಾದರೂ ಮೊಟ್ಟೆಯಾಕಾರದಲ್ಲಿ ಸುತ್ತು ಹೊಡೆಯುತ್ತಿದ್ದಲ್ಲಿ ವರ್ಷಕ್ಕೆ ಎರಡು ಬಾರಿ ಬೇಸಗೆ ಕಾಲ ಬರಬೇಕಾಗಿತ್ತು. ಭೂಮಿಯ ಸೂರ್ಯನ ಸುತ್ತುವಿಕೆ ಸರಿಯಾಗಿ ವೃತ್ತಾಕಾರವಾಗಿ ಇಲ್ಲವಾದರೂ ಮೊಟ್ಟೆಯಾಕಾರದಲ್ಲೂ ಇಲ್ಲ. ಬದಲಿಗೆ ವೃತ್ತದಿಂದ ಸ್ವಲ್ಪ ಮಾತ್ರ ಉಬ್ಬಿದಂತಹ ಆಕಾರದಲ್ಲಿ ಸುತ್ತುತ್ತಿದೆ. (ಚಿತ್ರ ಚಿತ್ರ ೨ ನೋಡಿ) ಚಿತ್ರದಲ್ಲಿ ಹಸಿರು ಗೆರೆ ಭೂಮಿಯ ದಾರಿಯಾಗಿದೆ. ಬೂದು ಬಣ್ಣದ ಚಕ್ರ ಸೂರ್ಯನ ಸುತ್ತ ಸರಿಯಾದ ಅಳತೆಯ ವೃತ್ತವಾಗಿದೆ. ಈ ಚಿತ್ರವನ್ನು ನೋಡಿದಾಗ ನಮಗೆ ಭೂಮಿ ವರ್ಷಕ್ಕೆ ಒಂದೇ ಸಲ ಸೂರ್ಯನಿಗೆ ಹತ್ತಿರಾಗುತ್ತದೆ ಎಂಬುದು ಅರ್ಥವಾಗುತ್ತದೆ. ​​[ಚಿತ್ರ ೨]

ಸೂರ್ಯಮಂಡಲದ ಸರಿಯಾದ ಗಾತ್ರ ಮತ್ತು ದೂರವನ್ನು ಚಿತ್ರಗಳಲ್ಲಿ ತೋರಿಸಲು ಸಾಧ್ಯವಿಲ್ಲ !

​ ಸೂರ್ಯಮಂಡಲದ (solar system) ಚಿತ್ರಗಳಲ್ಲಿ ಸೂರ್ಯ ಮತ್ತು ಗ್ರಹಗಳ ನಡುವಿನ ದೂರವನ್ನು ಅವುಗಳ ಗಾತ್ರಕ್ಕೆ ತಕ್ಕಂತೆ ಸರಿಯಾದ ಪ್ರಮಾಣದಲ್ಲಿ ತೋರಿಸಿರುವುದಿಲ್ಲ. ಏಕೆಂದರೆ ಅದು ಸಾಧ್ಯವೂ ಆಗುವುದಿಲ್ಲ. ಏಕೆಂದರೆ ಸೂರ್ಯನ ಬೃಹತ್‌ ಗಾತ್ರವನ್ನು ಕೇವಲ ಒಂದು ಸೆಂಟಿ ಮೀಟರಿಗೆ ಕುಗ್ಗಿಸಿದರೂ ಸೂರ್ಯನಿಂದ ಸರಿಯಾದ ಪ್ರಮಾಣದ ದೂರದಲ್ಲಿ ಭೂಮಿಯನ್ನು ತೋರಿಸಬೇಕಾದರೆ ಕನಿಷ್ಟ ಮೂರು ಮೀಟರ್‌ ಅಗಲದ ಹಾಳೆ ಬೇಕು. ಆದರೂ ಆಗ ಭೂಮಿಯನ್ನು ಒಂದು ಚಿಕ್ಕ ಚುಕ್ಕೆಯ ಮೂಲಕ ಮಾತ್ರ ತೋರಿಸಲು ಸಾಧ್ಯ. ಹೀಗೆ ಸೂರ್ಯ ಮತ್ತು ಗ್ರಹಗಳ ನಡುವಿನ ಅಗಾಧ ಗಾತ್ರದ ಮತ್ತು ದೂರದ ವ್ಯತ್ಯಾಸವಿರುವುದರಿಂದ ಸೂರ್ಯಮಂಡಲದ ಯಾವ ಚಿತ್ರವೂ ಪರಿಪೂರ್ಣವಲ್ಲ. ಉದಾಹರಣೆಗೆ ಸೂರ್ಯ ಒಂದು ಪುಟ್‌ಬಾಲ್‌ ಗಾತ್ರದಲ್ಲಿ ಇದ್ದಾನೆಂದುಕೊಂಡರೆ : ಸೂರ್ಯನಿಗೆ ಅತಿ ಹತ್ತಿರವಿರುವ ಬುಧ ಗ್ರಹವು ಸುಮಾರು ಮೂವತ್ತು ಅಡಿ ದೂರದಲ್ಲಿ ಇರುತ್ತದೆ. ಅದೇ ರೀತಿ ಉಳಿದ ಗ್ರಹಗಳು ಈ ಕೆಳ ಕಂಡಂತೆ ಸೂರ್ಯನಿಂದ ದೂರ ಇರಬೇಕಾಗುತ್ತದೆ... ಶುಕ್ರ : ೫೭ ಅಡಿ  ಭೂಮಿ : ೭೮ ಅಡಿ  ಮಂಗಳ : ೧೨೦ ಅಡಿ  ಗುರು : ೪೦೫ ಅಡಿ ಉಳಿದಂತೆ ಶನಿ, ಯೂರೆನಸ್‌ಗಳನ್ನು ದಾಟಿ ನೆಪ್ಚೂನ್‌ ನೋಡಿದರೆ ಸೂರ್ಯನಿಂದ ಸಾವಿರ ಅಡಿಗಿಂತಲೂ ದೂರ ಇರುತ್ತದೆ.  ಹೀಗೆ ಒಂದು ಸಾವಿರ ಅಡಿಯ ಸೂರ್ಯ ಮಂಡಲವನ್ನು ಕುಗ್ಗಿಸಿ ೧೫ ಇಂಚಿಗೆ (ಕಾಗದದ ಗಾತ್ರಕ್ಕೆ) ಇಳಿಸಿದರೆ ಸೂರ್ಯನೇ ಒಂದು ಚುಕ್ಕೆಯಾಗುತ್ತಾನೆ, ಮತ್ತು ಉಳಿದ ಯಾವ ಗ್ರಹಗಳೂ ಕಾ

ಆಫ್ರಿಕಾದವರೆಲ್ಲಾ ಬಡವರಲ್ಲ !!

​ ನಮ್ಮಲ್ಲಿ ಕೆಲವರಿಗೆ ಆಫ್ರಿಕಾದ ದೇಶದಿಂದ ಬಂದಿರುವ ವಿದ್ಯಾಥಿಗಳ ಬಗ್ಗೆ ಒಂದು ಒಳ್ಳೆಯ ಭಾವನೆ ಇದೆ. ಇದಕ್ಕೆ ಕಾರಣ ಆಫ್ರಿಕಾ ಖಂಡ ಬಡತನದಿಂದ ಕೂಡಿದ್ದು ಅಲ್ಲಿಂದ ಬರುವ ಇವರುಗಳು ಬಡವರು. ಪಾಪ, ವಿದ್ಯಾರ್ಜನೆಗಾಗಿ ಇಷ್ಟು ದೂರ ಬಂದಿರುವ ಇಂತಹ ಬಡವರಿಗೆ ಏನೂ ತೊಂದರೆ ಆಗಬಾರದು ಎಂಬ ಭಾವನೆ ಹಲವರದು. ಆದರೆ ಒಂದು ವಿಷಯವನ್ನು ನೀವು ಗಮನಿಸಿದಂತಿಲ್ಲ. ಈ ಬಡ ವಿದ್ಯಾರ್ಥಿಗಳು ಯಾವ ಕಾಲೇಜಿನಲ್ಲಿ ಓದುತ್ತಿರುವರೋ ಆ ಕಾಲೇಜಿನಲ್ಲಿ ನಮ್ಮ ರಾಜ್ಯದ ಬಡವರಂತಿರಲಿ, ಮಧ್ಯಮ ವರ್ಗದವರೂ ಸೀಟು ಪಡೆಯುವುದು ಕಷ್ಟ! ದುಬಾರಿ ಬೆಲೆಯ ಇಂತಹ ಕಾಲೇಜುಗಳಲ್ಲಿ ದೂರದ ದೇಶದಿಂದ ಬಂದು ಓದುವ ಇವರು ಖಂಡಿತಾ ಬಡವರಲ್ಲವೇ ಅಲ್ಲ. ಇವರೆಲ್ಲಾ ಆ ದೇಶಗಳಲ್ಲಿನ ಧನಿಕರ ಮಕ್ಕಳು. (ಅವು ಬಡ ರಾಷ್ಟ್ರಗಳಾದರೂ ಅಲ್ಲಿಯೂ ಧನಿಕರಿದ್ದಾರೆ, ಅಲ್ಲಿನ ಬಡ ಮಧ್ಯಮ ವರ್ಗದವರ‍್ಯಾರಿಗೂ ಭಾರತಕ್ಕೆ ಬಂದು ಓದುವಷ್ಟು ಶಕ್ತಿ ಇಲ್ಲ.) ದುಡ್ಡಿರುವ ಭಾರತೀಯರು ಹೇಗೆ UK, US ಮುಂತಾದೆಡೆ ಹೋಗಿ ಓದುತ್ತಾರೋ ಹಾಗೆಯೇ ಆಫ್ರಿಕಾದ ಧನಿಕರ ಮಕ್ಕಳು ಭಾರತದಂತಹ ದೇಶಗಳನ್ನು ಹುಡುಕಿಕೊಂಡು ಬರುತ್ತಾರೆ. ಕಲಿಯುವ ನೆಪದಲ್ಲಿ ನಮ್ಮಲ್ಲಿಗೆ ಬಂದಿರುವ ಇವರಲ್ಲಿ ಬಹುತೇಕರು ದುಡ್ಡಿನಿಂದ ಕೊಬ್ಬಿದ್ದು ಮಾಡಬಾರದ ಎಲ್ಲವನ್ನೂ ಮಾಡುತ್ತಾ ಉಡಾಫೆಯ ಜೀವನ ಸಾಗಿಸುತ್ತಾ ಇದ್ದಾರೆ. ದುಡ್ಡಿನ ಮದದಲ್ಲಿ ನಮ್ಮವರು ಹೇಗೆ ಅಹಂಕಾರದಲ್ಲಿ ಮೆರೆಯುತ್ತಾರೋ ಹಾಗೆಯೇ ಇವರ ಕತೆಯೂ ಕೂಡಾ.  ಇಂತಹ ಧನಿಕ ಕ್ರಿಮಿಗಳಿಗೆ ಬಡವರ

ಅಪರೂಪಕ್ಕೆ ಪತ್ರ ಬರೆಯೋಣ ಅಂತ...

​ ದಾಳೇಗೌಡರ "ಪತ್ರ ಸಂಸ್ಕೃತಿ"ಯಲ್ಲಿ ಸಕ್ರಿಯನಾಗಿದ್ದ ಸಮಯದಲ್ಲಿ ವಾರಕ್ಕೆ ಕನಿಷ್ಟ ೧೫-೨೦ ಪತ್ರಗಳನ್ನಾದರೂ ಬೇರೆ ಬೇರೆ ಊರುಗಳಲ್ಲಿದ್ದ ಪತ್ರಮಿತ್ರರಿಗೆ ಬರೆಯುತ್ತಿದ್ದೆ. ನಮ್ಮ ಪಕ್ಕದ ಮನೆಯಲ್ಲೇ ಇದ್ದ H R Vastrad Vastrad ಅವರಿಗೂ ಬರೆಯುತ್ತಿದ್ದೆ. ಆಮೇಲಾಮೇಲೆ ಪತ್ರ ಬರೆಯುವ ಹವ್ಯಾಸ ಬಿಟ್ಟು ಹೋಯ್ತು.  ಇಂದು ತಿರುಗಾಡುತ್ತಾ ಹೋದಾಗ ಅಂಚೆ ಕಚೇರಿಯೊಂದು ಕಾಣಿಸಿದ್ದರಿಂದ ಹೋಗಿ ಎರಡು ಅಂಚೆ ಕಾರ್ಡುಗಳನ್ನು ಕೊಂಡು ತಂದೆ. ಅವನ್ನ ಯಾರಿಗೆ ಬರೆಯಬೇಕೋ ಗೊತ್ತಿಲ್ಲ. ಯಾರ ವಿಳಾಸವೂ ಈಗ ನನ್ನ ಬಳಿ ಇಲ್ಲ. ಅದರಲ್ಲಿ ಒಂದನ್ನು ನನಗೇ ಬರೆದುಕೊಂಡು ಅಂಚೆ ಇಲಾಖೆ ಸಕ್ರಿಯವಾಗಿದೆಯಾ ಅಂತ ಮೊದಲು ತಿಳಿದುಕೊಳ್ಳಬೇಕು. ಅದಕ್ಕೂ ಮೊದಲು ಅಂಚೆ ಡಬ್ಬಿಯೊಂದನ್ನು ಹುಡುಕಬೇಕು... ನೋಡೋಣ.