
[ಚಿತ್ರ ೧]
"ಭೂಮಿಯು ಸೂರ್ಯನನ್ನು ಮೊಟ್ಟೆಯಾಕಾರದಲ್ಲಿ ಸುತ್ತುತ್ತದೆ, ಬಾದಾಮಿ ಕಾಳಿನ ಆಕಾರದಲ್ಲಿ ಸುತ್ತುತ್ತದೆ" ಎಂಬುದನ್ನು ನಮ್ಮ ಪಾಠಗಳಲ್ಲಿ ಓದುತ್ತಾ ಬಂದಿದ್ದೇವೆ. ಕೆಲವು ಚಿತ್ರಗಳೂ [ಚಿತ್ರ ೧] ಇದನ್ನೇ ತೋರಿಸುತ್ತವೆ ಕೂಡಾ. ಭೂಮಿಯ ಸುತ್ತುವಿಕೆಯು ಸರಿಯಾದ ವೃತ್ತಾಕಾರದಲ್ಲಿ ಇಲ್ಲ ಅಂತ ಹೇಳಲು ವಿಜ್ಞಾನಿಗಳು ಮೊಟ್ಟೆ, ಬಾದಾಮಿಗಳನ್ನು ಉದಾಹರಿಸಿದರೋ ಅಥವಾ ವಿಜ್ಞಾನಿಗಳ ಮತ್ತು ಜನರ ನಡುವಿನವರು ಹಾಗೆ ಮಾಡಿದರೋ ಗೊತ್ತಿಲ್ಲ. ಆದರೆ ಭೂಮಿ ಮೊಟ್ಟೆಯಾಕಾರದಲ್ಲೋ, ಬಾದಾಮಿ ಆಕಾರದಲ್ಲೋ ಸೂರ್ಯನಿಗೆ ಸುತ್ತು ಹೊಡೆಯುವುದಿಲ್ಲ.
ಹಾಗೇನಾದರೂ ಮೊಟ್ಟೆಯಾಕಾರದಲ್ಲಿ ಸುತ್ತು ಹೊಡೆಯುತ್ತಿದ್ದಲ್ಲಿ ವರ್ಷಕ್ಕೆ ಎರಡು ಬಾರಿ ಬೇಸಗೆ ಕಾಲ ಬರಬೇಕಾಗಿತ್ತು. ಭೂಮಿಯ ಸೂರ್ಯನ ಸುತ್ತುವಿಕೆ ಸರಿಯಾಗಿ ವೃತ್ತಾಕಾರವಾಗಿ ಇಲ್ಲವಾದರೂ ಮೊಟ್ಟೆಯಾಕಾರದಲ್ಲೂ ಇಲ್ಲ. ಬದಲಿಗೆ ವೃತ್ತದಿಂದ ಸ್ವಲ್ಪ ಮಾತ್ರ ಉಬ್ಬಿದಂತಹ ಆಕಾರದಲ್ಲಿ ಸುತ್ತುತ್ತಿದೆ. (ಚಿತ್ರ ಚಿತ್ರ ೨ ನೋಡಿ)
ಚಿತ್ರದಲ್ಲಿ ಹಸಿರು ಗೆರೆ ಭೂಮಿಯ ದಾರಿಯಾಗಿದೆ. ಬೂದು ಬಣ್ಣದ ಚಕ್ರ ಸೂರ್ಯನ ಸುತ್ತ ಸರಿಯಾದ ಅಳತೆಯ ವೃತ್ತವಾಗಿದೆ. ಈ ಚಿತ್ರವನ್ನು ನೋಡಿದಾಗ ನಮಗೆ ಭೂಮಿ ವರ್ಷಕ್ಕೆ ಒಂದೇ ಸಲ ಸೂರ್ಯನಿಗೆ ಹತ್ತಿರಾಗುತ್ತದೆ ಎಂಬುದು ಅರ್ಥವಾಗುತ್ತದೆ.

ಕಾಮೆಂಟ್‌ಗಳು