ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

2011 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಕನ್ನಡ ಅಕ್ಷರ ಓದುವ ತಂತ್ರಾಂಶ

ಯಾರಿಗಾದರೂ ಕನ್ನಡ ಅಕ್ಷರಗಳನ್ನು ಓದಲು ಬರುತ್ತಿಲ್ಲ ಎಂದಾದರೆ ಅವರಿಗಾಗಿ ಈ ತಂತ್ರಾಂಶ : http://espeak.sourceforge.net/test/latest.html ಇದು ಕನ್ನಡ ಯೂನೀಕೋಡ್ ಹಾಗೂ ಆಂಗ್ಲ ಅಕ್ಷರಗಳಲ್ಲಿರುವ ಕನ್ನಡ ಪದಗಳನ್ನು ಓದಿ ಹೇಳುತ್ತದೆ. ಈ ತಂತ್ರಾಂಶವನ್ನು ಪ್ರತಿಷ್ಠಾಪಿಸುವಾಗ speaking name ಎಂದು ಕೇಳುವಲ್ಲಿ kn ಎಂದು ನಮೂದಿಸಿಕೊಳ್ಳಬೇಕು.

ಹಾಸ್ಯ ವಲಯ

ಗುಂಡ : ನ್ಮಮ ಕಚೇರಿಯಲ್ಲಿ ಅವಸರದ ಕೆಲಸಗಳನ್ನೆಲ್ಲಾ ನಮ್ಮ ಬಾಸ್ ಮಾಡ್ತಾರೆ. ಗೆಳೆಯ : ಹಾಗಾದರೆ ಅವಸರವಿಲ್ಲದ ಕೆಲಸಗಳನ್ನ ಎಲ್ಲಾ ನೀನು ಮಾಡ್ತೀಯಾ ? ಗುಂಡ : ಇಲ್ಲ, ನಾನು ಅವುಗಳನ್ನು ಮಾಡದೇ ಹಾಗೇ ಬಿಡುವುದರಿಂದ ನಂತರ ಅವು ಅವಸರದ ಕೆಲಸಗಳಾಗುತ್ತವೆ. ಆಗ ಅವನ್ನೂ ನಮ್ಮ ಬಾಸ್ ಮಾಡುತ್ತಾರೆ. *** ಹೆಂಡತಿ : ರೀ, ನಿಮ್ಮ ಗೆಳೆಯ ಚೂರೂ ಚೆನ್ನಾಗಿಲ್ಲದ ಹುಡುಗಿಯನ್ನ ಮದುವೆ ಆಗ್ತಿದಾನೆ. ನೀವಾದ್ರೂ ಸ್ವಲ್ಪ ತಿಳಿ ಹೇಳೋದಲ್ವ ? ಗಂಡ : ನಾನ್ಯಾಕೇ ಹೇಳಲಿ ? ನಾನು ಮದ್ವೆ ಆಗುವಾಗ ಅವನೇನು ಹೇಳಿದ್ನಾ ? *** ಗಂಡ : ನಿನ್ನ ಹಿಂಸೆ ತಡಿಯೋಕ್ ಆಗ್ತಿಲ್ಲ. ಸ್ವಾಮೀಜ ಆಗೋಣ ಅಂತ ಇದೀನಿ. ಹೆಂಡತಿ : ಆ ರೀತಿ ಬೇಗನೆ ಹಣ ಮಾಡಿ ಅಂತ ತಾನೇ ನಾನು ಹಿಂಸೆ ಮಾಡ್ತಿರೋದು.

ಮಡಮಡೆಸ್ನಾನ ನಿಷೇಧಿಸಿದರೆ ತಪ್ಪೇನಿಲ್ಲ !

ಇತ್ತೀಚಿಗೆ ಬಹು ಚರ್ಚಿತವಾಗುತ್ತಿರುವ ವಿಷಯ ಕುಕ್ಕೆ ಸುಬ್ರಮಣ್ಯದ ಮಡೆಸ್ನಾನದ್ದು. ಯಾರೋ ಉಂಡ ಎಂಜಲೆಲೆ ಮೇಲೆ ಇನ್ಯಾರೋ ಬಿದ್ದು ಉರುಳಾಡುವುದೇ ಹೇಯ. ಇದರಲ್ಲಿ ಮೇಲ್ಜಾತಿ ಕೆಳಜಾತಿ ಬೇಧ ನೋಡುವ ಅಗತ್ಯ ಇಲ್ಲ. ಮಾಡುತ್ತಿರುವ ಕೃತ್ಯ ಮಾತ್ರ ಅಕ್ಷಮ್ಯ. ಇದನ್ನು ಕೆಲ ಭಟ್ಟಂಗಿಗಳು ಸಮರ್ಥಿಸುತ್ತಿರುವುದು ಖೇದಕರ. ಈ ಎಂಜಲೆಲೆ ಸ್ನಾನವನ್ನು ಸಮರ್ಥಿಸಿಕೊಳ್ಳಲು ನೂರಾರು ವರ್ಷಗಳ ಆಚರಣೆ ಅನ್ನುವುದನ್ನು ಬಿಟ್ಟರೆ ಬೇರೆ ಯಾವುದೇ ಕಾರಣವಿಲ್ಲ. ಅದೊಂದೇ ಒಂದು ಮೂರ್ಖ ಆಚರಣೆಗೆ ನೆಪವಾಗುವುದಾದರೆ ನಮ್ಮ ದೇಶ ಪರಕೀಯರ ಭಾವನೆಯಲ್ಲಿ ಹೇಗಿದೆಯೋ ಹಾಗೇ ಉಳಿದು ಹೋಗುತ್ತದೆ. ಇದನ್ನು ಮಾಡುತ್ತಿರುವ ಮಲೆಕುಡಿಯರು "ಕಷ್ಟ ಹಾಗೂ ರೋಗ ನಿವಾರಣೆಯಾಗುತ್ತದೆ" ಎಂದು ತಪ್ಪಾಗಿ ನಂಬಿಕೊಂಡಿದ್ದಾರೆ. ಹೀಗೆ ನಂಬಿಸಿದವರು ಮೇಲ್ಜಾತಿಯವರೇ ಇರಬೇಕು ಎಂದು ಯಾರ ಮೇಲೋ ಗೂಬೆ ಕೂರಿಸುವ ಅಗತ್ಯ ಈಗ ಇಲ್ಲ. ಆಗಬೇಕಾಗಿರುವುದು ಒಂದು ಅನಿಷ್ಟ ಆಚರಣೆಯ ನಿವಾರಣೆ. ಈ ಆಚರಣೆಗೆ ಯಾವುದೇ ವೈಜ್ಞಾನಿಕ ಕಾರಣಗಳೂ ಇಲ್ಲ. ಮೇಲಾಗಿ ಇದನ್ನು ಆಚರಿಸುತ್ತಿರುವ ಮಲೆಕುಡಿಯರು ಅನಕ್ಞರಸ್ತರು. ಇವರನ್ನು ಇದರಿಂದ ದೂರ ಮಾಡಬೇಕಾದುದು ಸರ್ಕಾರದ ಧರ್ಮ. ಆದರೆ ಜಾತೀವಾದವನ್ನು ಪೋಷಿಸಿಕೊಂಡೇ ಬರುವ ನಮ್ಮ ಹಾಳು ರಾಜಕಾರಣಿಗಳು "ಮಡೆಸ್ನಾನಕ್ಕೆ ಯಾರದೂ ಒತ್ತಾಯವಿಲ್ಲ. ಹಾಗಾಗಿ ಅದನ್ನು ನಿಷೇಧಿಸುವ ಅಗತ್ಯ ಇಲ್ಲ" ಎಂದು ಬುರುಡೆ ಬಿಡುತ್ತಿದ್ದಾರೆ. ಒತ್ತಾಯವಿಲ

ನಿನ್ನ ಸ್ನೇಹ

ಒಂಟಿತನದ ಬರುಡು ಜೀವನವ ಹಸನು ಮಾಡಿದಂತ ನಿನ್ನ ಸ್ನೇಹ ಹೊಸ ಚೈತನ್ಯ ಮೂಡಿ ಪ್ರಪುಲ್ಲವಾದಂತೆ ಭಾಸ ಒಳಗೇ ರಾಚಿಕೊಂಡಿರುವ ಕತ್ತಲನ್ನು ಹೊಡೆದೋಡಿಸಿದಂತೆ ಜಗತ್ತಿನ ಎಲ್ಲಾ ಬಣ್ಣಗಳ ಬೆಳಕನ್ನು ಎಳೆದು ತಂದಂತೆ ಬದುಕಿನ ತುಂಬಾ ಸುಂದರತೆಯನ್ನು ತುಂಬಿದೆ ಹಿಂದಿರುಗಿ ನೋಡಿದರೆ ಜೀವನದಿ ಮೆಲುಕು ಹಾಕಿ ಮೆಲ್ಲಲು ಮಧುರ ಸವಿ ಕ್ಷಣಗಳ ನೀಡಿದೆ ನಿನ್ನ ಜೊತೆ ಹೃದಯ ಒಡ್ಡು ಒಡೆದ ನದಿಯಂತೆ ಜೀಕುವ ಉಯ್ಯಾಲೆಯಂತೆ ಚಿಮ್ಮುವ ಕಾರಂಜಿಯಂತೆ ಪ್ರತಿ ಮುಂಜಾವಿನ ಬೆಳಗು ಹೊಸತರಂತೆ ಹೂನಗೆ ನಕ್ಕು ನಲಿದು ಪಿಸುದನಿಯಲಿ ಉಲಿದಂತೆ. - ಸವಿತ

ಪೀಠ ಇಷ್ಟೊಂದು ಘಾಟಾ ?

ಜ್ಞಾನಪೀಠ ಬಂದಿದ್ದು ಕಂಬಾರರಿಗಾದರೆ ಅದರಿಂದ ತಲೆ ಬಿಸ ಮಾಡಿಕೊಂಡಿರುವ ವ್ಯಕ್ತಿಗಳೇ ಬೇರೆಯವರು. ಕನ್ನಡಕ್ಕೆ ಎಂಟನೇ ಜ್ಞಾನಪೀಠ ಪ್ರಶಸ್ತಿ ಬಂತು ಎಂದು ನಾವು ಖುಷಿ ಪಡುವ ಹೊತ್ತಿಗೇ ಅದರಲ್ಲೊಂದು ಕಿಡಿ ಮತ್ತು ಹೊಗೆ ಶುರುವಾಗಿ ಕನ್ನಡ ಸಾಹಿತ್ಯ ಲೋಕವನ್ನು ಮಸುಕಾಗಿಸುತ್ತಿರುವುದು ವಿಪರ್ಯಾಸ. ಪೀಠ ಬಂದ ಖುಷಿಯಲ್ಲಿ ಕಂಬಾರರಿದ್ದರೆ ಭೈರಪ್ಪರಿಗೆ ಎಲ್ಲಿ ಬಂದು ಬಿಡುತ್ತೋ ಅನ್ನುವ ಆತಂಕದಲ್ಲಿ ಅನೇಕರಿರುವಂತೆ ತೋರುತ್ತಿದೆ. ಕಂಬಾರರಿಗೆ ಪ್ರಶಸ್ತಿ ಕೊಟ್ಟಿದ್ದಕ್ಕೇ ಪಾಟೀಲ ಪುಟ್ಟಪ್ಪ ಗರಮ್ ಆಗಿ ಮೊದಲಿಗೆ ತಲ್ಲಣ ಉಂಟು ಮಾಡಿದರು. "ಹೋಗಿ ಹೋಗಿ ಇವರಿಗೆ ಕೊಡೋದಾ ?" ಎಂಬ ಪಾಪುರವರ ಪಾಪದ ಮಾತಲ್ಲಿ ತನಗೆ ಬರಲಿಲ್ಲ ಅನ್ನುವ ನೋವಿತ್ತೋ, ಅಥವಾ ಕಂಬಾರರಿಗೆ ಬಂದೋಯ್ತಲ್ಲ ಅನ್ನುವ ಹೊಟ್ಟೆಕಿಚ್ಚು ಇತ್ತೋ ಗೊತ್ತಾಗಲಿಲ್ಲ. ಆದರೆ ಅಗ್ನಿ ಶ್ರೀಧರ‍್ ಮತ್ತು ನಿಡುಮಾಮಿಡಿ ಸ್ವಾಮೀಜಿಗಳಂತವರು ಜ್ಞಾನಪೀಠ ಹೊತ್ತು ತಂದ ಕಂಬಾರರ ತಲೆಯನ್ನು ನೇವರಿಸುವುದು ಬಿಟ್ಟು ಬೈರಪ್ಪರ ಜುಟ್ಟು ಹಿಡಿದು ಅಲ್ಲಾಡಿಸ ಹೊರಟಿದ್ದು ಅತಿರೇಕವೆನ್ನಿಸದಿರದು. ಹೇಳಿ ಕೇಳಿ ಅದು ಖಾಸಗಿ ಸಂಸ್ಥೆ ನೀಡುವ ಒಂದು ಪ್ರಶಸ್ತಿ. ಅದನ್ನು ಅವರಿಗೆ ಕೊಡಬಾರದು, ಇವರು ಸತ್ತ ನಂತರ ಬೇಕಾದರೆ ಕೊಡಲಿ ಎಂದೆಲ್ಲಾ ಹೇಳಿದ್ದು ಸರಿಯಲ್ಲ. ಪ್ರಶಸ್ತಿಯ ಬಗ್ಗೆ ಈಗಾಗಲೇ ಲಾಬಿಯ ಕಳಂಕ ತಟ್ಟಿರುವುದೇನೋ ಹೌದು. ಹಾಗಂತ ಅವರೇನೂ ಕಣ್ಣು ಮುಚ್ಚಿಕೊಂಡು ಪ್ರಶಸ್ತಿ ನೀಡುತ್ತಾರೆಯೇ ? ನೂರಕ್ಕೆ

ಕೊನೆಗೂ ಜೈಲು ಸೇರಿದ ಮಹಾಭ್ರಷ್ಟ !

ಕರ್ನಾಟಕ ಕಂಡ ಮಹಾ ಭ್ರಷ್ಟ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಕೊನೆಗೂ ಜೈಲು ಮುದ್ದೆ ಮುರಿಯಲು ಹೋಗುವ ಮೂಲಕ ರಾಜ್ಯಕ್ಕೆ ಆಶಾಕಿರಣ ಮೂಡಿಸಿದ್ದಾರೆ. ಇವರ ರೈತಪರ ಹೋರಾಟವನ್ನು ನೋಡಿ ಮೆಚ್ಚಿದ ಜನತೆ ಕುಮಾರಸ್ವಾಮಿಯನ್ನು ಮೂಲೆಗೆಸೆದು ಮುಖ್ಯಮಂತ್ರಿ ಗಾದಿ ಮೇಲೆ ಕೂರಿಸಿದ್ದೇನೋ ಸರಿ. ಆದರೆ ಅದರ ನಂತರ ಈ ಮನುಷ್ಯ ಬದಲಾದ ಪರಿ ನೋಡಿದರೆ ಊಸರವಳ್ಳಿಯೂ ನಾಚಿಕೊಳ್ಳುತ್ತೆ. ಅಂತಹ ಹೋರಾಟದ ಹಿನ್ನೆಲೆಯ ವ್ಯಕ್ತಿ ಇವರೇನಾ ? RSS ನಿಂದ ಬಂದವರು ಇವರೇನಾ ಅನ್ನಿಸಿದ್ದು ಸುಳ್ಳಲ್ಲ. ಅಧಿಕಾರಕ್ಕೆ ಬರುತ್ತಿರುವಂತೆಯೇ ಶೋಭಾಳನ್ನು ಬಗಲಲ್ಲಿಟ್ಟುಕೊಂಡು ಮಾಡಬಾರದ ಅನಾಚಾರಕ್ಕಿಳಿದ ಯಡ್ಡಿ ಫಕತ್ತು ನುಂಗಲು ಕುಳಿತುಬಿಟ್ಟರು. ಅಭಿವೃದ್ಧಿಯ ಹೆಸರಲ್ಲಿ ತಾವು ಮತ್ತು ತಮ್ಮ ಕುಟುಂಬವನ್ನು ಅಭಿವೃದ್ದಿ ಮಾಡಿಕೊಂಡರು. ಇದಕ್ಕೆ ತಮ್ಮ ಜಾತಿಯನ್ನು ಕೋಟೆಯನ್ನಾಗಿ ಬಳಸಿಕೊಂಡರು. ಇದಕ್ಕಾಗಿ ಐನಾತಿ ಸ್ವಾಮೀಜಿಗಳಿಗೆ ಕೋಟ್ಯಾಂತರ ರೂಪಾಯಿ ಬಿಟ್ಟಿ ಹಣ ನೀಡಿ ಜಾತಿಯ ಜನರನ್ನು ಏಮಾರಿಸಲು ಉಪಯೋಗಿಸಿಕೊಂಡರು. ಇಂತಹ ಹಲಾಲುಖೋರ ಯಡಿಯೂರಪ್ಪ ಕೊನೆಗೂ ಜೈಲೂಟ ಉಣ್ಣಲು ಕಂಬಿ ಹಿಂದೆ ಚಕ್ಕಳಮಕ್ಕಳ ಹಾಕಿರುವುದು ಉಳಿದ ರಾಜಕಾರಣಿಗಳಿಗೆ, ಮುಖ್ಯಮಂತ್ರಿಗಳಿಗೆ ಪಾಠವಾಗಲಿ. ನ್ಯಾಯಾಲಯಕ್ಕೆ ಒಂದು ಧನ್ಯವಾದಗಳು. ಇಂತಹ ನೀತಿಗೆಟ್ಟ ಜಾತೀವಾದಿ ಹಲಾಲುಟೋಪಿ ರಾಜಕಾರಣಿ ಹಿಂದೆ ಬಂದಿರಲಿಲ್ಲ, ಮುಂದೆಯೂ ಬರುವುದು ಬೇಡ. ಹಾಗೆಯೇ ಕೇವಲ ಜಾತಿ ಕಾರಣಕ್ಕೆ ಭ್ರಷ್ಟರನ್ನೂ ಬೆಂಬಲಿಸುವ ಮಠಾಧೀಶರಿಗ

ಮತ್ತೆ ಮತ್ತೆ ಮರಳುವ ಪ್ರೇಮ

ಪ್ರೀತಿಸೋದು ಕುಡಾ ಒಂದು ಲೆಕ್ಕಾಚಾರ. ಅದಕ್ಕೂ ಒಂದು ರೀತಿ ನೀತಿಯಿದೆ. ಕಂಡ ಕಂಡವರನ್ನೆಲ್ಲಾ ಪ್ರೀತಿಸಲು-ಪ್ರೇಮಿಸಲು ಸಾಧ್ಯವಿಲ್ಲ. ಪ್ರೇಮ ಹೇಳದೇ ಸಂಭವಿಸಿಬಿಡಹುದು. ಕೇಳದೇ ಬರಬಹುದು ಕೆಲವರು ಬೆನ್ನು ಬಿದ್ದು ಹೋಗಿ ಪ್ರೀತಿಸಬಹುದು. ಕೆಲವರ ಬೆನ್ನು ಬಿದ್ದು ಪ್ರೀತಿಯೇ ಬರಬಹುದು. ಆದರಿಂದ ಪ್ರೀತಿಸುವವರಿಗಾಗಿ ಈ ಲೇಖನ. ಹರೆಯದಲ್ಲಿ ಹಂದಿಯೂ ಚೆಂದ ! ಒಮ್ಮೆ ಹಂದಿ ಫಾರಂಗೆ ಹೋಗಿ ನೋಡಿ. ಅಲ್ಲಿ ಮರಿ ಹಂದಿಗಳಿರುತ್ತವೆ. ಮುದಿ ಹಂದಿಗಳೂ ಇರುತ್ತವೆ. ಜೊತೆಗೆ ಇಲ್ಲಿ ಹರೆಯದ ಹಂದಿಗಳೂ ಇರುತ್ತವೆ. ನಿಮ್ಮ ಗಮನವನ್ನು ಸೆಳೆಯುವವೇ ಅವಲ್ಲವೇ? ಆಹಾ! ಎಷ್ಟು ಸೊಕ್ಕಿವೆ ಅನ್ನಿಸದಿರದು. ಹರೆಯ ಹಂದಿಗೇ ಅಂತಹ ಸೊಗಸನ್ನು ಕೊಡುತ್ತವೆಂದರೆ ಹುಡುಗರ, ಹುಡುಗಿಯರ ಪಾಡೇನು? ಆದ್ದರಿಂದ ಪ್ರೀತಿ-ಪ್ರೇಮ ಸೊಕ್ಕು, ಸೌಂದರ್ಯ ಮನುಷ್ಯ ಮಾತ್ರನಿಗೇ ಇರುವುದು ಎಂಬ ಜಂಬ ಬೇಡ. ಹಂದಿ, ಕಾಗೆಗಳೂ ಪ್ರೀತಿಸುತ್ತವೆಂಬುದು ನೆನಪಿರಲಿ. ಪ್ರೀತಿಸುವವರು ತಾವೇ ಗಂಧರ್ವರೆಂದೋ, ದೇವತೆಗಳೆಂದೋ ಅಂದುಕೊಳ್ಳುವುದು ಮಾಮೂಲು. ಇದೊಂದು ಸಹಜ ಗುಣ.  ಎಲ್ಲಾ ಜೀವರಾಶಿಯೂ ಪ್ರೀತಿಸುತ್ತವೆ ಹಾಗೂ ಪ್ರೀತಿಸಲ್ಪಡುತ್ತವೆ. ಇದೊಂದು ಪ್ರಕೃತಿ ನಿಯಮ ಎಂಬ ವಿಷಯ ನೆನಪಿನಲ್ಲಿಸಿಕೊಂಡು ಪ್ರೀತಿಸುವ ಗೋಜಿಗೆ ಹೋಗಬಹುದು. ದೇಹವೇ ಕಾರಣ ಪ್ರೀತಿಗೆ ಮನಸ್ಸು ಒಂದು ಕಾರಣ. ಹಾಗೆಯೇ ದೇಹವೂ ಮತ್ತೊಂದು ಕಾರಣ. ಪ್ರೀತಿಯಲ್ಲಿ ಮನಸ್ಸು ಭಾಗವಹಿಸುತ್ತದೆ. ಪ್ರೇಮದಲ್ಲಿ ಮನಸ್ಸಿನ ಜೊತೆಗೆ ದೇಹ. ಆ ಬೆ

ನಿಖಿತಾಗೆ ನಿಷೇಧ ... ಇದ್ಯಾವ ನ್ಯಾಯ ?

"ನಟ ದರ್ಶನ್ ಕುಟುಂಬದಲ್ಲಿ ಬಿರುಕು ಬರಲು ನಟಿ ನಿಖಿತಾ ಕಾರಣ" ಎಂಬ ಕಾರಣ ನೀಡಿರುವ ಕನ್ನಡ ಚಲನಚಿತ್ರ ನಿರ್ಮಾಪಕರ ಸಂಘ ಆಕೆಯನ್ನು ಮೂರು ವರ್ಷ ಕನ್ನಡ ಚಿತ್ರರಂಗದಿಂದ ನಿಷೇಧಿಸಿ "ಮುಲ್ಲಾ ಕಾನೂನು" ಜಾರಿಗೊಳಿಸಿದೆ. ಇಂತಹ ತೀರ್ಪು ನೀಡಲು ಇವರು ಬಳಸಿದ ಮಾನದಂಡಗಳು ಯಾವುವು ಅನ್ನುವುದು ತಿಳಿದು ಬಂದಿಲ್ಲ. ಆದರೆ ನಮ್ಮಲ್ಲೇಳುವ ಪ್ರಶ್ನೆಗಳಿಗೆ ಇವರಲ್ಲಿ ಉತ್ತರವಿಲ್ಲ. * ದರ್ಶನ್ ಜೊತೆ ನಿಖಿತಾಳೇ ಗೆಳೆತನ ಬೆಳೆಸಿದಳು ಎಂದು ಇವರಿಗೆ ಹೇಗೆ ತಿಳಿಯಿತು ? ದರ್ಶನ್ ಸ್ವತಃ ತಾನೇ ಅವಳನ್ನು ಬುಟ್ಟಿಗೆ ಹಾಕಿಕೊಂಡಿರುವ ಸಾಧ್ಯತೆ ಇದೆಯಲ್ಲ? ಹಾಗಿದ್ದರೆ ದರ್ಶನ್‌ಗೆ ಶಿಕ್ಷೆ ಏನು ? ದರ್ಶನ್ ತಾನೇ ನಿಖಿತಾಳನ್ನು ಬುಟ್ಟಿಗೆ ಹಾಕಿಕೊಂಡಿದ್ದರೆ ಮುಂದೆ ಅವಳಿಲ್ಲದಿದ್ದರೆ ಇನ್ನೊಬ್ಬಳನ್ನು ಇಟ್ಟುಕೊಳ್ಳುವುದಿಲ್ಲ ಅಂತ ಏನು ಗ್ಯಾರಂಟೀ ? * ದರ್ಶನ್ - ವಿಜಯಲಕ್ಷ್ಮಿ ಯರದ್ದು ಕುಟುಂಬ ಕಲಹ. ಅದರ ಬಗ್ಗೆ ತೀರ್ಪು ನೀಡಲು ಇವರಿಗೆ ಏನು ಅಧಿಕಾರವಿದೆ ? ಇವರಿಗೆ ವಿಜಯಲಕ್ಷ್ಮಿ ಅವರೇನಾದರೂ ದೂರು ನೀಡಿದ್ದರೆ ? * ದರ್ಶನ್ - ನಿಖಿತಾ ಇಬ್ಬರೂ ಸೇರಿ ತಪ್ಪು ಮಾಡಿರುವಾಗ ಒಬ್ಬಳಿಗೆ ಶಿಕ್ಷೆ ನೀಡಿದರೆ ಹೇಗೆ ? ಇಬ್ಬರನ್ನೂ ನಿಷೇಧಿಸಬೇಕಾಗಿತ್ತಲ್ಲವೇ ? ಒಂದು ಕಣ್ಣಿಗೆ ಬೆಣ್ಣೆ, ಇನ್ನೊಂದು ಕಣ್ಣಿಗೆ ಸುಣ್ಣ ಬಳಿದಂತೆ ಆಗಲಿಲ್ಲವೇ ? * ಅವರಿಬ್ಬರ ನಡುವೆ ಸಂಬಂಧ ಇದ್ದುದೇ ಹೌದಾದರೆ ಆಕೆಯನ್ನು ನಿಷೇಧಿಸಿದರೆ ಏನುಪಯೋಗ ? ಅವಳು ನಟಿಸದಿದ್

ಜನಲೋಕ್‌ಪಾಲ್ ದೀವಿಗೆ !

ಗೆಳೆಯರೇ..... ಗೆಳೆಯರೇ.... ಭಾರತದ ಪ್ರೀತಿವೆತ್ತ ಸ್ನೇಹ ಬಂಧು ಮಿತ್ರರೆ | ಬನ್ನಿ ಹೆಗಲ ಕೊಡುವ ನಮ್ಮ ಅಣ್ಣನೊಡನೆ ಇಂದು ಬನ್ನಿ ದೇಶಕ್ಕಾಗಿ ಮೀಸಲಿಡುವ ರಕ್ತ ಬಿಂದು || ದೇಶಕ್ಕಿಂದು ಅಂಟಿರುವ ಭ್ರಷ್ಟಾಚಾರ ಕೊಂದು ಬಲವಾದ ಹೆಜ್ಜೆ ಇಟ್ಟು ನಾವು ನಡೆವ ಮುಂದು || ರಕ್ತ ಸುರಿಸಿ ಪ್ರಾಣ ತೆತ್ತು ಪಡೆದರು ಸ್ವಾತಂತ್ರ್ಯ ಅವರ ಋಣದ ಸಮಾದಿ ಮೇಲೆ ಆಯ್ತು ಗಣತಂತ್ರ || ಆಳುತಿರುವ ದೊರೆಗಳಿಗೆ ದುಡ್ಡಿನದೇ ಮಂತ್ರ ಅಧೋಗತಿಗೆ ಇಳಿದ ದೇಶ ಆಯ್ತು ಅತಂತ್ರ || ಅಣ್ಣನಿಗೆ ತಮ್ಮನಾಗಿ ನಮ್ಮ ಸಂತೋಷ್ ಹೆಗಡೆ ಅರವಿಂದ ಕೇಜ್ರಿವಾಲ ಅವರ ಜೊತೆಗೆ ನಡಿಗೆ || ಘರ್ಜಿಸಿದ ದೇಶಪ್ರೇಮಿ ಕಿರಣ್ ಬೇಡಿ ಇಹರು ಸ್ವಾಮಿ ಅಗ್ನಿವೇಶರೊಡನೆ ಶಾಂತಿಭೂಷಣ್ ತ್ರಯರು || ಕಡು ಬಡವರು ಅರೆ ಹೊಟ್ಟೆಗೆ ಪ್ರಾಣ ನೀಗುತಿಹರು ಕಡು ಭ್ರಷ್ಟರು ನಮ್ಮನಾಳಿ ಕೇಕೆ ಹಾಕುತಿಹರು || ನಾವು ಬೀಳಲಾರೆವಿಂದು ರಾತ್ರಿ ಕಂಡ ಬಾವಿಗೆ ಅಣ್ಣ ತಂಡ ತಂದಿವುದು ಜನಲೋಕ್‌ಪಾಲ್ ದೀವಿಗೆ || --------------------------------------------------- ಇಂದು [27.08.2011] ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ನೆರೆದಿದ್ದ ಸುಮಾರು ನಾಲ್ಕೈದು ಸಾವಿರ ಅಣ್ಣಾ ಬೆಂಬಲಿಗರ ಎದುರು ಈ ಹಾಡನ್ನು ಸ್ವತಃ ನಾನೇ ಹಾಡಿದೆ. ಆ ಸಂದರ್ಭದಲ್ಲಿ ನಿವೃತ್ತ ನ್ಯಾಯಮೂರ್ತಿ ಶ್ರೀ ಸಂತೋಷ್ ಹೆಗಡೆ ಅವರೂ ಅಲ್ಲಿ ಉಪಸ್ಥಿತರಿದ್ದರು. ತುಂಬಾ ಖುಷಿಯಾಯ್ತು.

ಸೋಲು ಗೆಲುವಿನ ಬದುಕಿನಲ್ಲಿ ಕಲ್ಪನೆ ಮತ್ತು ವಾಸ್ತವ

ನಮ್ಮ ಜೀವನದಲ್ಲಿ ಸೋಲೆಂಬುದು ಎಷ್ಟು ಸಹಜವೋ ಅದರಂತೆಯೇ ಪ್ರತಿ ಸೋಲಿನ ನಂತರವೂ ನಾವು ಒಬ್ಬಂಟಿಯಾಗಿಯೇ ಉಳಿದಿರುತ್ತೇವೆಂಬುದೂ ಕೂಡ ನಿಜ. `ಸೋಲು ಎಂಬ ಒಂದು ಅಗೋಚರ ಪ್ರಕ್ರಿಯೆ ಗೆಲುವಿಗಿಂತಲೂ ತುಂಬಾ ಬಿರುಸು ಹಾಗೂ ಶಕ್ತಿಶಲಿಯಾದುದು. ಹಾಗೂ ತೀರಾ ಕಹಿಕಹಿ. ಆ ಕಹಿಯ ಘಾಟು ನಾವು ತಾಳಿಕೊಳ್ಳುವುದಂತಿರಲಿ, ನಮ್ಮ ಗೆಳಯ ಗೆಳತಿಯರೇ ತಾಳಲಾಗದೇ ಮೂಗು ಮುರಿದು ನಮ್ಮಿಂದ ನಾಜೂಕಾಗಿ ಜಾರಿ ದೂರಾಗಿ ಬಿಡುವ ಸಂಭವವವೂ ಇರುತ್ತದೆ. (ಒಬ್ಬಿಬ್ಬರು ಉತ್ತಮ ಸ್ನೇಹಿತು ಉಳಿದರೆಂದರೆ ಅದೇ ನಮ್ಮ ಪುಣ್ಯ) ಜೀವನದಲ್ಲಿ ಮನುಷ್ಯನಿಗೆ ಅತಿ ದೊಡ್ಡದೆನ್ನಬಹುದುದಾದ ಸೋಲೊಂದು ಬಂದು ಅಪ್ಪಳಿಸಿತೆಂದರೆ ಅದರ ನಂತರ ಮನಸ್ಸು ಸಾಂತ್ವನ ಬಯಸುತ್ತದೆ. ಮತ್ತು ಸೋಲಿನಿಂದ ಎದ್ದು ಮತ್ತೊಂದು ಗೆಲುವಿಗೆ ಅಣಿಯಾಗಬೇಕು. ಹೆಚ್ಚಿನ ಸಂದರ್ಭಗಳಲ್ಲಿ ಮುಂದಿನ ಗೆಲುವನ್ನು ನಿಶ್ಚಯಿಸುವ ಭರದಲ್ಲಿ ಹಠಕ್ಕೆ ಬೀಳುವ ಮನಸ್ಸು ಯೋಜನೆಗೆ ಬದಲಾಗಿ `ಕನಸು ಎಂಬ ರತ್ನಮಾಳಿಗೆ ಹೊಕ್ಕು ಬಿಟ್ಟಿತೆಂದರೆ ಗತಿ? ಮುಂದಿನ `ಯಶಸ್ಸು ಎಂಬ ಕಲ್ಪನೆಯನ್ನು ಅದೆಷ್ಟು ಸುಂದರವಾಗಿ ಕಟ್ಟಿಕೊಳ್ಳುತ್ತೇವೆ? ಮುಂದೆ ಅದೇನೋ ದೊಡ್ಡದೊಂದು ಯಶಸ್ಸು ನಮಗಾಗಿಯೇ ರತ್ನಗಂಬಳಿ ಹಾಸಿ ಕಾದಿರುವಂತೆ ಕಲ್ಪಿಸಿಕೊಳ್ಳುತ್ತೇವೆ. ಈ ಕಲ್ಪನೆ ಅಥವಾ ಕನಸು ನಮ್ಮನ್ನು ಮತ್ತೊಂದು ಸೋಲಿಗೆ ದೂಡುವ ಅವಕಾಶ ಕೂಡಾ ಇರುತ್ತದೆ. ಈ ಸಮುಯದಲ್ಲಿ ಕೊಂಚವಾರದೂ ವಾಸ್ತವನವನ್ನು ವಿವೇಚಿಸದೇ ಹೋದರೆ ಬದುಕಿಗೆ ಮತ್ತೊಂದು `ಹೊಡ್ತ ಗ್ಯಾರಂಟಿ.

ಕತ್ತಿ ಜಳಪಿಸುವರೇ ಶಿವರಾಜ್ ಪಾಟೀಲ್ ?

ವೆಂಕಟಾಚಲಯ್ಯನವರು ಬರುವ ವರೆಗೆ ನಮ್ಮ ರಾಜ್ಯದಲ್ಲಿ ಲೋಕಾಯುಕ್ತ ಸಂಸ್ಥೆ ಇರುವುದೇ ಹೆಚ್ಚಿನವರಿಗೆ ತಿಳಿದಿರಲಿಲ್ಲ.  ವೆಂಕಟಾಚಲಯ್ಯನವರ ನಂತರ ಬಂದ ಸಂತೋಷ್ ಹೆಗಡೆಯವರು ಯಾರ ಮುಲಾಜನ್ನೂ ನೋಡದೇ ದೊಡ್ಡ ದೊಡ್ಡ ತಿಮಿಂಗಿಲಗಳನ್ನೇ ಹೆಡೆಮುರಿ ಕಟ್ಟಿದರು. ಇವರಿಂದಾಗಿ "ಕರ್ನಾಟಕ ಲೋಕಾಯುಕ್ತ" ದೇಶದಲ್ಲೇ ನಂ 1 ಆಯ್ತು. ಸಿಬಿಐ ಸಹ ತನ್ನ ವಾರ್ಷಿಕ ಮೀಟಿಂಗ್‌ನಲ್ಲಿ ತನಿಖಾ ಮಾದರಿಗೆ ಕರ್ನಾಟಕ ಲೋಕಾಯುಕ್ತದ ತನಿಖಾ ರೀತಿಯ ಮಾದರಿಯನ್ನು ಅಳವಡಿಸಿಕೊಳ್ಳಲು ಚರ್ಚೆ ನಡೆಸಿದರು. ಈಗ ಬಿಹಾರ್‌ನ ಮುಖ್ಯಮಂತ್ರಿ ನಿತೀಶ್‌ಕುಮಾರ‍್ ತಮ್ಮ ರಾಜ್ಯದ ಲೋಕಾಯುಕ್ತಕ್ಕೆ ಕಾಯಕಲ್ಪ ಕಲ್ಪಿಸಿ ಕೊಡಲು ಸಂತೋಷ್ ಹೆಗಡೆಯವರಿಗೆ ಆಹ್ವಾನ ನೀಡಿದ್ದಾಗಿ ಸುದ್ದಿ ಇದೆ. ಹೊಸ ಲೋಕಾಯುಕ್ತರಾದ ಶ್ರೀ ಶಿವರಾಜ್‌ ಪಾಟೀಲ್ ಅವರು ಸಂತೋಷ್ ಹೆಗಡೆಯವರಿಗಿಂತಲೂ ಹೆಚ್ಚು ಅಥವಾ ಕಡೇ ಪಕ್ಷ ಅವರಷ್ಟಾದರೂ ಖಡಕ್ ಆಗಿ ಕಾರ್ಯ ನಿರ್ವಹಿಸಬೇಕಾಗಿದೆ. ಅವರ ವೈಖರಿ ನೋಡಿದರೆ ರಾಜ್ಯದ ಜನತೆಗೆ ನಿರಾಶೆ ಮಾಡಲಾರರು ಎಂದೇ ತೋರುತ್ತಿದೆ. ಏಕೆಂದರೆ ಗಣಿ ವರದಿಯಲ್ಲಿ ಯಡ್ಡಿಗೆ ಹೆಗಡೆಯವರು ವಿವರಣೆ ಕೇಳದಿರುವುದು ತಪ್ಪೇನಲ್ಲ, ಕೇಳಲೇಬೇಕಾದ ಅಗತ್ಯ ಇಲ್ಲ ಎಂದು ಹೆಗಡೆಯವರ ಕ್ರಮವನ್ನು ಸಮರ್ಥಿಸಿದ್ದಾರೆ. ಭ್ರಷ್ಟರ ಪಾಲಿಗೆ ಇವರೂ ಸಹ ದುಸ್ವಪ್ನವಾಗಲಿ... ಇವರಿಗೆ ನಮ್ಮ ಬೆಂಬಲ ಸದಾ ಇರುತ್ತದೆ.

ಶಿಕ್ಷಣದ ಬಗೆಗಿನ ನುಡಿಮುತ್ತುಗಳು

* ನಿಜವಾದ ಶಿಕ್ಷಣವೆಂದರೆ ಮಾನವೀಯತೆಯ ವಿಕಾಸ. - ಸ್ವಾಮಿ ವಿವೇಕಾನಂದರು . * ಸಚ್ಛಾರಿತ್ರ್ಯದ ಬೆಳವಣಿಗೆಯೇ ಶಿಕ್ಷಣದ ಆರಂಭ. - ಮಾಹಾತ್ಮ ಗಾಂಧೀಜಿ. * ಶಿಕ್ಷಣ ಪ್ರತಿ ವ್ಯಕ್ತಿಯಲ್ಲಿ ಪರಿಪೂರ್ಣತೆಯನ್ನು ತರಬೇಕು.  ಜೀವನದಲ್ಲಿ ಮುನ್ನಡೆಸುವ ಸಾಮಥ್ರ್ಯ ನೀಡಬೇಕು. -    ಜಿಡ್ಡು ಕೃಷ್ಣಮೂರ್ತಿ . * ದೈಹಿಕ, ಮಾನಸಿಕ ಹಾಗೂ ಆಧ್ಯಾತ್ಮಿಕ ಪ್ರಗತಿಗೆ ಇಂಬು ಕೊಡದ ಶಿಕ್ಷಣ ಅಪೂರ್ಣ. - ಡಾ. ಎಸ್. ರಾಧಾಕೃಷ್ಣನ್. * ಶಿಕ್ಷಣವೆಂದರೆ, ಪುಸ್ತಕದ ಜ್ಞಾನವೇ ಮಾತ್ರ ಅಲ್ಲ.  ಸಂಸಾರ, ಮನುಷ್ಯ ಮತ್ತು ಕಾರ್ಯ ಕಲಾಪಗಳ ಪರಸ್ಪರ ಸಂಯೋಗವೇ ಶಿಕ್ಷಣ. -    ಬರ್ಕ. * ಜೀವನವೇ ಶಿಕ್ಷಣ, ಶಿಕ್ಷಣವೇ ಜೀವನ. - ಜಾನ್ ಟ್ಯೂಯ್ಲಿ. * ಸಮನ್ವಯತೆ, ಸಮತೋಲನ, ಉಪಯುಕ್ತತೆ,  ಪರಿಪೂರ್ಣತೆ, ಆನಂದದಾಯಕ ಹಾಗೂ ನೈಸರ್ಗಿಕತೆಯೇ ಶಿಕ್ಷಣದ ಗುಣಗಳು. - ರೂಸೋ. * ಶಿಕ್ಷಣವು ಧಾರ್ಮಿಕ ವಿಚಾರಗಳ ಸಮನ್ವಯವಾದಾಗಲೇ ಪೂರ್ಣವಾಗುವುದು. - ಅಜ್ಞಾತ. * ನಡತೆ ಬೋಧಿಸುವ ಶಿಕ್ಷಣ, ಮನುಷ್ಯತ್ವ ತೋರದ ವಿಜ್ಞಾನ, ಇವೆರಡೂ ಅಪಾಯಕಾರಿ ಮತ್ತು ಉಪಯೋಗವಿಲ್ಲದವು. - ನೀತಿವಚನ . * ಶಿಕ್ಷಣವೇ ಜೀವನದ ಬೆಳಕು - ಗೊರೂರು * ಶಿಕ್ಷಣವು ಮನುಷ್ಯನನ್ನು ಶ್ರೇಷ್ಠ ನಾಗರಿಕನನ್ನಾಗಿ ಮಾಡುತ್ತದೆ. - ಡಾ: ಎಸ್. ರಾಧಾಕೃಷ್ಣನ್. * ಮನುಷ್ಯರಲ್ಲಿ ಪರಿಪೂರ್ಣತೆಯನ್ನು ಹಿಗ್ಗಿಸುವದೇ ಶಿಕ್ಷಣ - ವಿವೇಕಾನಂದ. * ವಿದ್ಯೆ ಗುರುಗಳ ಗುರು - ಭ್ರತೃ ಹರಿ. * ವಿದ್ಯೆಯಿಂದಲೇ ಮನುಷ್ಯನಿಗೆ ಸುಖ, ಭೋಗ, ಧನ,

ಭ್ರಷ್ಟಾಚಾರದ ಸುಳಿಯಲ್ಲಿ ಬಡ ಭಾರತ

ಭಾರತಕ್ಕೆ ಉತ್ತಮ ಭವಿಷ್ಯವಿಲ್ಲ ಅನ್ನೋದು ಪದೇ ಪದೇ ಸಾಬೀತಾಗುತ್ತಾ ಬಂದಿದೆ. ಎಲ್ಲೋ ಒಮ್ಮೊಮ್ಮೆ ಮಿಂಚಿನಂತೆ ಉದಯಿಸುವ ಆಶಾಕಿರಣಗಳು ಸ್ವಲ್ಪ ಸಮಯದಲ್ಲೇ ಭ್ರಷ್ಟ ಮೋಡದ ಸುಳಿಗೆ ಸಿಲುಕಿ ಜನರ ಎದುರಿನಿಂದ ಕಾಣೆಯಾಗುತ್ತಿರುವುದನ್ನು ಕಾಣುತ್ತಲೇ ಬಂದಿದ್ದೇವೆ. ಅಣ್ಣಾ ಹಜಾರೆ, ಸಂತೋಷ್ ಹೆಗಡೆ ಮುಂತಾದ ನಕ್ಷತ್ರಗಳು ಆಗಾಗ ಉದಯಿಸಿದರೂ ಸಹ ಅವರ ವರ್ಚಸ್ಸು ಮತ್ತು ಪ್ರಾಮಾಣಿಕತೆಯನ್ನು ಈ ಭಂಡ ರಾಜಕಾರಣಿಗಳು ಹೊಸಕಿ ಹಾಕುತ್ತಿದ್ದಾರೆ. ರಾಜಕಾರಣಿಗಳು ಮಾತ್ರವಲ್ಲ, ಅಧಿಕಾರಿಗಳೂ ಭ್ರಷ್ಟರಾಗಿದ್ದಾರೆ. ಬರೇ ರಾಜಕಾರನಿಗಳನ್ನ ದೂರಿ ಪ್ರಯೋಜನವಿಲ್ಲ ಅನ್ನುವವರಿದ್ದಾರೆ. ಅದು ನಿಜ ಕೂಡಾ. ಆದರೆ ಆ ಅಧಿಕಾರಿಗಳನ್ನು ಕೊಬ್ಬಲು ಬಿಟ್ಟಿದ್ದು ಮಾತ್ರ ಇದೇ ರಾಜಕಾರಣಿಗಳೇನೆ. ರಾಜಕಾರಣಿಗಳು ಸರಿಯಾಗಿದ್ದರೆ ಅಧಿಕಾರಿಗಳನ್ನು ನಿಯಂತ್ರಿಸುವುದು ಕಷ್ಟದ ಕೆಲಸವೇನಲ್ಲ. ಮುಖ್ಯವಾಗಿ ಅಧಿಕಾರಿಗಳು ರಾಜಕಾರಣಿಗಳಷ್ಟು ಭ್ರಷ್ಟರಲ್ಲ. ಅವರಿಗೆ ಕೆಲಸದ ಭಯವಿರುತ್ತದೆ. ಕೆಲಸ ಕಳೆದುಕೊಂಡರೆ ಬದುಕೋದು ಕಷ್ಟ ಎಂಬ ಅರಿವಿರುತ್ತದೆ. ಆದರೆ ರಾಜಕಾರಣಿಗಳಿಗೆ ಯಾವ ಭಯವೂ ಇಲ್ಲ. ಒಮ್ಮೆ ಸೋತರೂ ಮತ್ತೊಮ್ಮೆ ಗೆದ್ದು ಬರಬಹುದು ಎಂಬ ನಂಬಿಕೆ ಅವರಿಗಿದೆ. ಯಡಿಯೂರಪ್ಪನಂತವರ ಕೃಪಾಕಟಾಕ್ಷವಿದ್ದರೆ ಸೋತರೂ ಸೋಮಣ್ಣನಂತೋರು ಮಂತ್ರಿ ಆಗ್ತಾರೆ. ಭಂಡ ರಾಜಕಾರಣಿಗಳಿಗೆ ಇನ್ನೇನು ಬೇಕು ? ಹೀಗಾಗಿ ಇಂದು ಹಗರಣಗಳ ಮೇಲೆ ಹಗರನಗಳು ನಡೆಯುತ್ತಿವೆ. ಒಂದಾದ ನಂತರ ಮತ್ತೊಂದರಂತೆ ಸಾವಿರಾರು ಕೋಟ

ಲೋಕಾಯುಕ್ತಕ್ಕೂ ವಕ್ಕರಿಸುತ್ತಿದೆ ಜಾತಿ ಪಿಡುಗು.

ಈ ಭಂಡ ಯಡ್ಡಿ ಕರ್ನಾಟಕವನ್ನು ಬರ್ಬಾದು ಮಾಡದೇ ಹೋಗಲ್ಲ ಅನ್ನಿಸ್ತಿದೆ. ಲೋಕಾಯುಕ್ತ ಹೆಗಡೆಯವರು ಈತನಿಗೆ ಮಗ್ಗುಲ ಮುಳ್ಳಾಗಿದ್ದರು. ಅವರ ಅಧಿಕಾರಾವಧಿ ಇನ್ನೇನು ಮುಗಿಯುತ್ತಿದೆ ಅಂತ ಖುಷಿ. ಹಾಗೆಯೇ ಮುಂದಿನ ಲೋಕಾಯುಕ್ತರನ್ನಾಗಿ ತನ್ನ ಜಾತಿಯವರನ್ನೇ ನೇಮಿಸಲು ಎಲ್ಲಾ ಸಿದ್ದತೆ ಮಾಡಿಕೊಂಡಿದ್ದಾರೆ ಯಡಿಯೂರಪ್ಪ. ತಮ್ಮದೇ ಜಾತಿಯ ಲೋಕಾಯುಕ್ತರಿದ್ದರೆ ಅವರು ತಮ್ಮ ಮಾತು ಕೇಳಿಲ್ಲ ಅಂದರೂ ತಾವು ದುಡ್ಡು ಕೊಟ್ಟು ಸಾಕುತ್ತಿರುವ ಯಾವುದಾದರೂ ಸ್ವಾಮೀಜಿ ಕಡೆಯಿಂದ ಒತ್ತಡ ತಂದು ಕೇಳುವಂತೆ ಮಾಡಬಹುದು ಅನ್ನುವ ಲೆಕ್ಕಾಚಾರ ಯಡ್ಡಿಯದು.

ಭಾರತ ಕಾಯೋ ಅಣ್ಣಾ... ನೀನೇ ಜನ ಲೋಕಪಾಲ !

ಭ್ರಷ್ಟಾಚಾರದ ವಿರುದ್ಧ ಧ್ವನಿ ಎತ್ತಿ ಇದೀಗ ವಿಜಯದ ಹಾದಿಯಲ್ಲಿ ಮುನ್ನಡೆಯುತ್ತಿರುವ ಅಣ್ಣಾ ಹಜಾರೆಯವರಿಂದಾಗಿ ಮುಳುಗುತ್ತಿದ್ದ ದೇಶಕ್ಕೆ ಕೊನೆಗೂ ಒಂದು ಹುಲ್ಲುಕಡ್ಡಿಯ ಆಸರೆ ದೊರೆತಂತಾಗಿದೆ. ಸಾವಿರಾರು ಕೋಟಿಹ ಹಗರಣಗಳನ್ನು ತಡೆದುಕೊಂಡೂ ನಮ್ಮ ದೇಶ ಉಸಿರಾಡುತ್ತಿರುವುದೇ ಒಂದು ಪವಾಡವಾಗಿತ್ತು. ಅತ್ತ ದೇಶವನ್ನು ಅವರು ಕೊಳ್ಳೆ ಹೊಡೆಯುತ್ತಿದ್ದರೆ ಇತ್ತ ರಾಜ್ಯವನ್ನು ಇವರು ದೋಚುತ್ತಿದ್ದಾರೆ. ಆದರೆ ಸಾಮಾನ್ಯ ಜನತೆ ಮಾತ್ರ ಏನೂ ಮಾಡಲಾಗದೇ ರಾಜಕಾರಣಿಗಳ, ಅಧಿಕಾರಿಗಳ ವೈಭೋಗವನ್ನು ನೋಡಿ ವಿಲವಿಲ ಒದ್ದಾಡುವುದಷ್ಟೇ ಕೆಲಸವಾಗಿತ್ತು. ಇತ್ತೀಚಿಗೆ ಜನರೂ ಸಹ ಭ್ರಷ್ಟಾಚಾರಕ್ಕೆ ಎಷ್ಟು ಒಗ್ಗಿ ಹೋಗಿದ್ದರೆಂದರೆ ಪರಮ ಭ್ರಷ್ಟ ಮುಖ್ಯಮಂತ್ರಿಯನ್ನೂ ಸಹ ಸಮರ್ಥಿಸಿಕೊಳ್ಳುವ ಮಟ್ಟಿಗೆ ಜನರ ಮನಸ್ಸು ಒಗ್ಗಿ ಹೋಗಿತ್ತು. ಇತ್ತೀಚಿನ ದಿನಗಳಲ್ಲಂತೂ ಹಗರಣಗಳದ್ದೇ ಸರಮಾಲೆ. ರಾಜ್ಯದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ನೂರು ಇನ್ನೂರು ಕೋಟಿಗಳನ್ನು ನುಂಗಿ ನೀರು ಕುಡಿಯುತ್ತಿದ್ದರೆ ಅತ್ತ ಸೋನಿಯಾ ಗ್ಯಾಂಗ್ ಸಾವಿರಾರು ಕೋಟಿಗಳನ್ನು ನುಂಗಿ ನೀರೂ ಕುಡಿಯದೇ ಅರಗಿಸಿಕೊಳ್ಳುವ ತಾಕತ್ತನ್ನು ಹೊಂದಿತ್ತು. ಆದುದರಿಂದಲೇ ರಾಜ್ಯ ಮತ್ತು ಕೆಂದ್ರ ಸರ್ಕಾರಗಳೆರಡೂ ಮೇಲಿಂದ ಮೇಲೆ ಹಗರಣಗಳನ್ನು ಮಾಡುತ್ತಲೇ ಸಾಗಿದ್ದವು. ಆದರ್ಶ ಹಗರಣ, ಕಾಮನ್ವೆಲ್ತ್, 2ಜಿ ಹೀಗೆ ಸಾವಿರಾರು ಕೋಟಿಗಳ ಸರಮಾಲೆ ಸಾಗಿತ್ತು. ಇವೆಲ್ಲಾ ತಮ್ಮ ಮೂಗಿನ ಕೆಳಗೇ ನಡೆಯುತ್ತಿದ್ದರೂ ಸಹ ಸೋನಿಯಾ ಮತ್ತು

ಇಸ್ಕಾನ್ ಎಂಬ ಶಾಪಿಂಗ್ ಮಾಲ್

ಮೊನ್ನೆ ಇಸ್ಕಾನ್ ದೇವಸ್ಥಾನಕ್ಕೆ ಗೆಳೆಯರೊಂದಿಗೆ ಅನಿವಾರ್ಯವಾಗಿ ಹೋಗಬೇಕಾಗಿ ಬಂತು. ದ್ವಾರದಲ್ಲೇ ಮೆಟೆಲ್ ಡಿಟೆಕ್ಟರ್‌ನಿಂದ ಪರಿಶೀಲನೆ ನಂತರ ಒಳ ಪ್ರವೇಶಿಸಿ, ಮುಂದೆ ನಡೆದಾಗ ಒಬ್ಬರು ಕರೆದು ನಾಲ್ಕೈದು ಜನರಿಗಾಗಿ ಇರುವ ಟಿಕೇಟೊಂದರ "ಆಫರ‍್" ಬಗ್ಗೆ ಹೇಳಿದರು. ನಂತರ ಒಳಗೆ ಹೋದಾಗ ಅಲ್ಲಲ್ಲಿ "ಜೇಬುಗಳ್ಳರಿದ್ದಾರೆ ಎಚ್ಚರಿಕೆ" ಎಂಬ ಫಲಕ ಕಾಣಿಸಿತು. ದೇವರ ದಶ್ನ ಮುಗಿಸಿ ಹೊರ ಬರುತ್ತಿರುವಾಗ ಎದುರಾಯ್ತು, ಜನ ಜಂಗುಳಿಯ ಒಂದು ವರಾಂಡ. ಅದು ಥೇಟ್ ಚಿಕ್ಕದೊಂದು ಮಾಲ್‌ನಂತೆಯೇ ಇತ್ತು. ಅಲ್ಲಿ ಬಗೆ ಬಗೆಯ ಖಾದ್ಯಗಳನ್ನು ಮಾರುತ್ತಿದ್ದರು. ಬೇಕರಿ ಇತ್ತು. ಪಾನೀಪೂರಿಯಿಂದ ಹಿಡಿದು ತಂಪು ಪಾನೀಯಗಳ ವರೆಗೆ ಎಲ್ಲಾ ದೊರೆಯುತ್ತಿದ್ದವು. ಅವುಗಳನ್ನು ಜನ ಮುಗಿಬಿದ್ದು ಖರೀದಿಸಿ ತಿನ್ನುತ್ತಿದ್ದರು. ಜಾಗವೇ ಇರದಷ್ಟು ಜನ ಸಂದಣಿ. ಅದು ದೇವಸ್ಥಾನದ ಆವರಣ ಅನ್ನುವ ಯಾವ ಛಾಯೆಯೂ ಅಲ್ಲಿರಲಿಲ್ಲ. ಯಾವುದೋ ಫುಟ್‌ಪಾತ್ ಹೋಟೆಲುಗಳ ಸಂದಿಯಲ್ಲಿ ನಾವಿರುವಂತೆ ಕಂಡು ಬಂತು. ಮೇಲಾಗಿ ಅಲ್ಲಿ ಯಲ್ಲಾ ವಸ್ತುಗಳ ಬೆಲೆಯೂ ತುಂಬಾ ದುಬಾರಿಯಾಗಿದೆ. ಅಲ್ಲಿಂದ ತಪ್ಪಿಸಿಕೊಂಡು ಆ ಆವರಣದಿಮದ ಹೊರಗೆ ಬಂದಾಗ ಉಚಿತವಾಗಿ ಬಿಸಿಬೇಳೆ ಬಾತ್ ವಿತರಿಸುತ್ತಿದ್ದರು. ಒಳಗೆ ಹಣ ತೆತ್ತು ಹೊಟ್ಟೆ ತುಂಬಿಸಿಕೊಂಡು ಬಂದಿರುವ ಬಹುತೇಕ ಮಂದಿ ಇಲ್ಲಿ ಇದನ್ನು ಪಡೆಯುತ್ತಿರಲಿಲ್ಲ. ಅಂತೂ ಹೊರಗೆ ಬಂದಾಗ ಮೂಡಿದ ಒಂದೇ ಪ್ರಶ್ನೆ ... "ಆ ಜೇಬುಗಳ್ಳರು ಯಾರು

ಅನ್ಯಾಯದ ಪರ ನ್ಯಾಯವಾದಿಗಳು ?

ಒಬ್ಬ ವ್ಯಕ್ತಿ ಅಪರಾಧಿ ಎಂದು ತಿಳಿದ ನಂತರವೂ ಅವನ ಪರವಾಗಿ ನಿಂತು ನ್ಯಾಯವಾದಿಗಳು ನ್ಯಾಯಾಲಯದಲ್ಲಿ ವಾದಾಡುವುದು ತಪ್ಪಲ್ಲವೇ? ಇದೊಂದು ಸಂದೇಹ ಹಲವರನ್ನು ಕಾಡದಿರದು. ಒಬ್ಬ ವ್ಯಕ್ತಿ ವಕೀಲರೊಬ್ಬರ ಬಳಿ ಬಂದು `ತಾನೊಂದು ಕೊಲೆ ಮಾಡಿರುವುದಾಗಿ ತಿಳಸಿ ತನ್ನ ಪರವಾಗಿ ನ್ಯಾಯಾಲಯದಲ್ಲಿ ವಾದಾಡಬೇಕೆಂದು ಕೇಳಿದರೆ ಅವನು ಕೊಲೆ ಮಾಡಿರುವುದು ತಿಳಿದೂ ನ್ಯಾಯವಾದಿ ಅವನ ಪರ ವಹಿಸಬಹುದೇ? ಅದು ಎಷ್ಟರ ಮಟ್ಟಿಗೆ ಸರಿ? ಅದು `ನ್ಯಾಯ' ಹೇಗಾಗುತ್ತದೆ? ಅವರು ನ್ಯಾಯವಾದಿ ಹೇಗಾಗುತ್ತಾರೆ? ಎಂಬ ಪ್ರಶ್ನೆ ಪಾಮರರಾದ ನಮ್ಮನ್ನು ಕಾಡದಿರದು. ಇಂತಹ ಪ್ರಶ್ನೆಗೆ ಕೊಂಚ ಸಮಾಧಾನಕರ ಪರಿಹಾರ ನೀಡುವ ಪ್ರಯತ್ನ ಈ ಲೇಖನ. ಇಲ್ಲಿ ನ್ಯಾಯವಾದಿಗಳ `ಕರ್ತವ್ಯ' ಮಾತ್ರ ಪ್ರಧಾನವಾಗುತ್ತದೆ. ಹಾಗೆಯೇ ಅವರು ನ್ಯಾಯವಾದಿಗಳಾಗಿದ್ದರೂ ಸಹ ಕೆಲವೊಂದು ನಿಯಮಗಳನ್ನು ಪಾಲಿಸಬೇಕಾಗುತ್ತದೆ. ಅಂದರೆ ಒಬ್ಬ ವ್ಯಕ್ತಿ ಬಂದು `ನಾನೊಂದು ಕೊಲೆ ಮಾಡಿದ್ದೇನೆ. ನನ್ನ ಪರವಾಗಿ ವಾದ ಮಾಡಬೇಕು'. ಎಂದು ಕೇಳಿಕೊಂಡರೆ ನ್ಯಾಯವಾದಿ ಯಾವ ಕಾರಣಕ್ಕೂ ಅವನನ್ನು `ಅಪರಾಧಿ' ಎಂದು ಪರಿಗಣಿಸುವಂತಿಲ್ಲ. ಉದಾ: ಮುಂಬೈ ದಾಳಿಕೋರ ಕಸಬ್ ಪರವಾಗಿ ಸಹ ಒಬ್ಬರು ನ್ಯಾಯವಾದಿ ನ್ಯಾಯಾಲಯದಲ್ಲಿ ವಾದ ಮಂಡಿಸಿದರು. ಅವನು ಅಪರಾಧಿ ಎಂದು ದೇಶಕ್ಕೆಲ್ಲಾ ತಿಳಿದಿದ್ದರೂ ಸಹ ಅವನ ಪರವಾಗಿ ಒಬ್ಬ ನ್ಯಾಯವಾದಿ ವಾದಿಸಲೇ ಬೇಕಾಗಿತ್ತು. ನಮ್ಮ ದೇಶದ ಕಾನೂನು ಇರುವುದೇ ಹಾಗೆ. ಏಕೆಂದರೆ ಅದನ್ನು ತೀರ್ಮಾನಿಸಬ

ನೀವೆಂತಾ ಅದೃಷ್ಟವಂತರು,

ನನ್ನ ಕವನದ ಹಾವಳಿ ನಿಮ್ಮ ಕಿವಿಗಳಿಗಿಲ್ಲ ನಾ ಬರೆದ ಕವನಗಳ ಯಾರೂ ಹಾಡುವುದಿಲ್ಲ ಕರ್ಣ ಕಠೊರವಾಗಿ ಉಚ್ಚರಿಸುವುದಿಲ್ಲ ಗೊಣಗುವಂತೆ ಯಾರೂ ಗುನುಗುಟ್ಟುವುದಿಲ್ಲ ಏಕೆಂದರೆ ಮನಕ್ಕೆ ನಾಟುವಂತೆ ನಾ ಬರೆಯುವುದಿಲ್ಲ ಒಮ್ಮೆ ಓದಿದರೆ ಮತ್ತೊಮ್ಮೆ ಕಣ್ಣು ಹಾಯಿಸುವ ತವಕ ತರುವುದಿಲ್ಲ ಮಗದೊಮ್ಮೆ ಓದುವ ಸಂಕಷ್ಟ ನಿಮಗಿಲ್ಲ ಮರೆತು ಹೋಯಿತೆಂಬ ನೋವ ನಾ ಕೊಡುವುದಿಲ್ಲ ಏಕೆಂದರೆ ನೆನಪಲ್ಲುಳಿವ ಕವನ ನಾ ಬರೆಯುವುದೇ ಇಲ್ಲ ಬದುಕಿನ ನೂರು ನೋವ ಅರುಹಿ ತಲ್ಲಣಗೊಳಿಸುವುದಿಲ್ಲ ಪ್ರೇಮ ಪುರಾಣ ಕೊರೆದು ನಿಮ್ಮ ತಲೆ ತಿನ್ನುವುದಿಲ್ಲ ಸುಖದ ಸುಪ್ಪತ್ತಿಗೆಯ ಸವಿಗನಸ ಬಿತ್ತುವುದಿಲ್ಲ ಕಾಮ ಕ್ರೋಧದ ಗಂದ ಗಾಳಿಯ ಕವನಗಳಿಲ್ಲ ಏಕೆಂದರೆ ನನಗಾವ ಭಾವನೆಗಳೂ ಇಲ್ಲ.

ನಿನ್ನ ಸ್ನೇಹ

ಒಂಟಿತನದ ಬರುಡು ಜೀವನವ ಹಸನು ಮಾಡಿದಂತ ನಿನ್ನ ಸ್ನೇಹ ಹೊಸ ಚೈತನ್ಯ ಮೂಡಿ ಪ್ರಪುಲ್ಲವಾದಂತೆ ಭಾಸ ಒಳಗೇ ರಾಚಿಕೊಂಡಿರುವ ಕತ್ತಲನ್ನು ಹೊಡೆದೋಡಿಸಿದಂತೆ ಜಗತ್ತಿನ ಎಲ್ಲಾ ಬಣ್ಣಗಳ ಬೆಳಕನ್ನು ಎಳೆದುತಂದಂತೆ ಬದುಕಿನ ತುಂಬಾ ಸುಂದರತೆಯನ್ನು ತುಂಬಿದೆ ಹಿಂದಿರುಗಿ ನೋಡಿದರೆ ಜೀವನದಿ ಮೆಲುಕು ಹಾಕಿ ಮೆಲ್ಲಲು ಮಧುರ ಸವಿ ಕ್ಷಣಗಳ ನೀಡಿದೆ ನಿನ್ನ ಜೊತೆ ಹೃದಯ ಒಡ್ಡು ಒಡೆದ ನದಿಯಂತೆ ಜೀಕುವ ಉಯ್ಯಾಲೆಯಂತೆ ಚಿಮ್ಮುವ ಕಾರಂಜಿಯಂತೆ ಪ್ರತಿ ಮುಂಜಾವಿನ ಬೆಳಗು ಹೊಸತರಂತೆ ಹೂನಗೆ ನಕ್ಕು ನಲಿದು ಪಿಸುದನಿಯಲಿ ಉಲಿದಂತೆ. - ಸವಿತ ಸದಾನಂದನ್  

ಯಾವ ನಾಣ್ಯ ಯಾವ ಊರಿನಲ್ಲಿ ತಯಾರಾಗಿದೆ ?

ನಮ್ಮ ದೇಶದಲ್ಲಿ ನಾಣ್ಯಗಳು ನಾಲ್ಕು ಕಡೆಗಳಲ್ಲಿ ತಯಾರಾಗುತ್ತವೆ. ೧. ದೆಹಲಿ ೨. ಮುಂಬೈ ೩. ಹೈದರಾಬಾದ್ ೪. ಕೋಲ್ಕತ್ತಾ ಯಾವ ನಾಣ್ಯ ಯಾವ ಊರಿನಲ್ಲಿ ತಯಾರಾಗಿದೆ ಎಂದು ಕೂಡಾ ಕಂಡು ಹಿಡಿಯಬಹುದು. ಯಾವುದೇ ನಾಣ್ಯದಲ್ಲಿರುವ ಇಸವಿಯ ಕೆಳಗೆ ಚಿಕ್ಕ ಚಿಹ್ನೆಯ ಮೂಲಕ ಇದನ್ನು ತೋರಿಸಲಾಗಿರುತ್ತದೆ. ಅದು ಈ ಕೆಳಗಿನಂತಿರುತ್ತದೆ. ೧. ದೆಹಲಿ = ಒಂದು ಚುಕ್ಕೆ ೨. ಮುಂಬೈ = ವಜ್ರ ದ ಚಿಹ್ನೆ ೩. ಹೈದರಾಬಾದ್ = ನಕ್ಷತ್ರ ೪. ಕೋಲ್ಕತ್ತಾ = ಏನೂ ಇರುವುದಿಲ್ಲ.

ಯಡಿಯೂರಪ್ಪನವರ ಢೋಂಗಿ "ಜನತಾ ದರ್ಶನ"

ನಾಚಿಕೆ ಆಗಲ್ವ ಯಡಿಯೂರಪ್ಪ ನಿಮಗೆ ?

"ಇಲ್ಲ" ಅಂತೀರಾ ಅಂತ ಗೊತ್ತು. ಆದ್ರೂ ಕೇಳದೇ ವಿಧಿ ಇಲ್ಲ ನೋಡಿ. ಈ ರಾಜಕಾರಣ ಅಂದರೇನೇ ಮೂರೂ ಬಿಟ್ಟವರ ಸ್ವರ್ಗ ಅನ್ನೋದು ಎಲ್ಲರಿಗೂ ತಿಳಿದಿರುವ ವಿಷಯವೇ. ಆದರೂ ನಿಮ್ಮನ್ನು ಮೆಚ್ಚಲೇ ಬೇಕು. ಯಾಕೆ ಗೊತ್ತಾ ? ನಾಚಿಕೆ, ಮಾನ, ಮರ್ಯಾದೆಗಳು ಇಲ್ಲದಿದ್ದರೂ ಇವೆಯೆಂಬಂತಾದರೂ ನಟಿಸುವ ರಾಜಕಾರಣಿಗಳ ಮಧ್ಯೆ "ಅವ್ಯಾವೂ ನನಗಿಲ್ಲ ಕಣ್ರೀ? ಏನ್ರೀ ಈವಾಗ?" ಅಂತ ರಾಜಾರೋಷವಾಗಿ ಕುರ್ಚಿ ಹಿಡಿದು ಕುಳಿತಿದ್ದೀರಲ್ಲ... ಅದಕ್ಕೆ. ಆರೋಪಗಳು ರಾಜಕಾರಣಿಗಳ ಮೇಲೊಂದೇ ಅಲ್ಲ. ಹಳ್ಳಿಯ ಮುಗ್ದ ಜನರ ಮೆಲೂ ಆಗಾಗ ಬರುತ್ತಲೇ ಇರುತ್ತವೆ. ಆಗ ಅವರು ಆಣೆ-ಪ್ರಮಾಣ ಮಾಡುವುದು ಸಾಧಾರಣ ವಿಷಯ. ಏಕೆಂದರೆ ಅವರಿಗೆ ಕೋರ್ಟು-ಕಚೇರಿ ಸುತ್ತುವುದು ಸಾಧ್ಯವಿಲ್ಲ. ದೇವರ ಮೇಲೆ ಅಪಾರ ನಂಬಿಕೆ. ಅದೇನಿದ್ದರೂ ದೇವರು ನೋಡಿಕೊಳ್ಳಲಿ ಎಂದು ಆಣೆ ಮಾಡುತ್ತಾರೆ. ಹಾಗಂತೆ ಅದನ್ನು ಕಂಡವರ ದುಡ್ಡಲ್ಲಿ ಜಾಹೀರಾತು ನೀಡಿ ಎಲ್ಲರಿಗೂ ತಿಳಿಸುವುದಿಲ್ಲ. ತಮ್ಮ ಆಪ್ತೇಷ್ಟರಲ್ಲಿ ಹೇಳಿಕೊಂಡು ಮಾಡುತ್ತಾರೆ. ಅದು ಅವರ ಪರಿಮಿತಿ. ಆದರೆ ರಾಜ್ಯದ ಮುಖ್ಯಮಂತ್ರಿಯಾಗಿ ನಿಮಗೇನಾಗಿದೇರಿ ದಾಡಿ ? ಕುಮಾರಸ್ವಾಮಿ ಸುಳ್ಳು ಹೇಳುತ್ತಿದ್ದರೆ, ವೃಥಾ ಆರೋಪ ಮಾಡುತ್ತಿದ್ದರೆ ಅವರ ಮೇಲೆ ಕಾನೂನು ಕ್ರಮ ಕೈಗೊಳ್ಳಲು ಹಿಂಜರಿಕೆ ಯಾಕೆ ? ಅವರು ಬಹಿರಂಗ ಮಾಡುತ್ತಿರುವ ದಾಖಲೆಗಳು ನಕಲಿ ಆಗಿದ್ದರೆ ಮಾನನಷ್ಟ ಮೊಖದ್ದಮೆ ಹೂಡಬಹುದಲ್ಲ? ಜಾಹೀರಾತಿಗೆ ಸರ್ಕಾರದ ಬೊಕ್ಕಸದಿಂದ ಕೋಟಿ ಕಳೆಯುವ

ಕೊಟ್ಟಿದ್ದು ತನಗೆ ಬಚ್ಚಿಟ್ಟಿದು ಪರರಿಗೆ...

ಒಮ್ಮೆ ಈ ಸಾಲನ್ನೂ ಸತ್ತು ಹೋಗಿರುವ ಸಾಯಿಬಾಬರನ್ನೂ ಯೋಚಿಸಿ ನೋಡಿ. ಅವರಿಗೆ ಈ ಸಾಲು ಎಷ್ಟೊಂದು ಸೂಕ್ತವಾಗಿದೆ ಎಂದು ತಿಳಿಯುತ್ತದೆ. ಅವರು ತಾವು ಗಳಿಸಿದ ಹಣದಲ್ಲಿ ಸ್ವಲ್ಪ ಭಾಗವನ್ನು ಪುಟ್ಟಪರ್ತಿ ಹಾಗೂ ಸುತ್ತಮುತ್ತಲಿನ ತಾಲ್ಲೂಕುಗಳ ಕುಡಿವ ನೀರು ಸರಬರಾಜಿಗೆ, ಆಸ್ಪತ್ರೆಗೆ ವಿನಿಯೋಗಿಸಿದರು. ಅದನ್ನು ಇನ್ನು ನೂರು ವರ್ಷ ಕಳೆದರೂ ಜನ ನೆನಪಿಸಿಕೊಂಡು ಅವರನ್ನು ಸ್ಮರಿಸುತ್ತಾರೆ. ಅಂದರೆ ಅದು ಅವರು "ಕೊಟ್ಟದ್ದು." ಇನ್ನೊಂದು ಕಡೆ ಸಾವಿರಾರು ಕೋಟಿ ಮೌಲ್ಯದ ಹಣ, ಒಡವೆಗಳನ್ನು ಬಚ್ಚಿಟ್ಟಿದ್ದರು. ಅದು ಈಗ ಕಂಡವರ ಪಾಲಾಗುತ್ತಿರುವುದನ್ನು ಮಾಧ್ಯಮಗಳಲ್ಲಿ ನೋಡುತ್ತಿದ್ದೇವೆ. ಹೀಗಾಗಿ "ಕೊಟ್ಟಿದ್ದು ತನಗೆ ಬಚ್ಚಿಟ್ಟಿದು ಪರರಿಗೆ" ಸಾಲುಗಳು ಎಷ್ಟೊಂದು ಅರ್ಥಗರ್ಭಿತ ಎನ್ನಿಸದಿರದು.

ಮಾನ ಹೋದರೂ ಪ್ರಮಾಣ ಬಿಡೆವು - ಕುಮ್ಮಿ | ಯಡ್ಡಿ

ನಿನ್ನೆ ಯಡಿಯೂರಪ್ಪನವರು ಕುಮಾರಸ್ವಾಮಿಗೆ ಬರೆದ ಬಹಿರಂಗ ಪತ್ರಕ್ಕೆ ಆದ ಖರ್ಚು ( ಪತ್ರಿಕೆಗಳ ಜಾಹೀರಾತು ಶುಲ್ಕ ) ಸುಮಾರು ಒಂದು ಕೋಟಿ. ಇದು ರಾಜ್ಯದ ಬೊಕ್ಕಸದಿಂದ ನೀಡಲಾಗಿದೆ. ಅಲ್ಲಾ ಇವರ ವೈಯಕ್ತಿಕ ತೀಟೆಗೆ ಸಿಗೋದು ಸಾರ್ವಜನಿಕರ ಹಣವೇನಾ ? ಕುಮಾರಸ್ವಾಮಿಗೆ ಒಂದು ರಿಜಿಸ್ಟರ‍್ ಪೋಸ್ಟ್ ಮಾಡಿದ್ದರಾಗುತ್ತಿರಲಿಲ್ಲವೇ ? ಅಥವಾ ಸಾವಿರ ರೂಪಾಯಿಯಲ್ಲಿ ಒಂದು ಪತ್ರಿಕಾ ಘೋಷ್ಠಿ ನಡೆಸಬಹುದಿತ್ತು. ಯಡ್ಡಿ ಆಹ್ವಾನವನ್ನು ಕುಮ್ಮಿಯೂ ಒಪ್ಪಿಕೊಂಡಿದ್ದಾರೆ. ಇದೇ ತಿಂಗಳ ೨೭ಕ್ಕೆ ಇಬ್ಬರೂ ಧರ್ಮಸ್ಥಳ ತೆರಳಿ ಅಲ್ಲಿ ಪರಸ್ಪರ ಪ್ರಮಾಣ ಮಾಡುತ್ತಾರಂತೆ. "ಯಡ್ಡಿ ಪರವಾಗಿ ತಮಗೆ ಕರೆ ಮಾಡಿದ ಲೇಹರ್‌ಸಿಂಗ್ ಸಹ ಬಂದು ಪ್ರಮಾಣ ಮಾಡಬೇಕು." ಎಂದು ಕುಮ್ಮಿ ಹೇಳಿದ್ದಾರೆ. ಅಂದು ಏನಾಗುತ್ತೋ ಗೊತ್ತಿಲ್ಲ. ಒಂದು ವೇಳೆ ಇಬ್ಬರೂ ಪ್ರಮಾಣ ಮಾಡಿದರು ಅಂತಲೇ ಇಟ್ಟುಕೊಳ್ಳೋಣ. ಆಗ ಸುಳ್ಳು ಹೇಳಿದ್ದು ಯಾರು ಎಂದು ದೇವರಿಗೆ ತಿಳಿಯಬಹುದೇನೋ... ಜನರಿಗೆ ಹೇಗೆ ತಿಳಿಯುತ್ತೆ. ಮತ್ತೆ ಇವರಿಬ್ಬರೂ ಪರಸ್ಪರ ದೋಶಾರೋಪ ಮಾಡಿಕೊಳ್ಳುತ್ತಾ ಕಾಲಹರಣ ಮಾಡುತ್ತಾರೆ ಅಷ್ಟೇ. ಇದಕ್ಕೆ ಕೊನೆ ಇಲ್ಲವೇ ?

ವೈಯಕ್ತಿಕ ತೀಟೆಗೆ ಸರ್ಕಾರಿ ಹಣ ಪೋಲು

ಇಂದು ಎಲ್ಲಾ ಪತ್ರಿಕೆಗಳಲ್ಲು ಒಂದು ಕಾಲು ಪುಟದ ಜಾಯೀರಾತು. ಅದು ಮುಖ್ಯಮಂತ್ರಿ ಯಡಿಯೂರಪ್ಪನವರು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಗೆ ಹಾಕಿದ ನೇರ ಸವಾಲು. ಅದೇನು ಅಂದ್ರೆ ಕುಮಾರಸ್ವಾಮಿಯವರು ಕಳೆದ ಕೆಲವು ದಿನಗಳಿಂದ ಯಡ್ಡಿ ಮೇಲೆ ಹಲವಾರು ಆಪಾದನೆ ಮಾಡುತ್ತಾ ಬಂದಿದ್ದಾರೆ. ಈ ಜಾಹೀರಾತಿನಲ್ಲಿ ಯಡ್ಡಿ "ಅವುಗಳೆಲ್ಲಾ ಶುದ್ಧ ಸುಳ್ಳು, ಬೇಕಾದರೆ ಧರ್ಮಸ್ಥಳದಲ್ಲಿ ಬಂದು ಇಬ್ಬರೂ ಪ್ರಮಾಣ ಮಾಡೋಣ. ಬರುತ್ತೀರಾ ? " ಎಂದು ಸವಾಲು ಹಾಕಿದ್ದಾರೆ. ಅದಕ್ಕೆ ಕುಮ್ಮಿ ಹೋಗ್ತಾರೋ ಬಿಡ್ತಾರೋ ಗೊತ್ತಿಲ್ಲ. ( ಯಡ್ಡಿ ಹಗರಣಗಳ ನೇರ ಮಾತುಕತೆಗೆ ಆರ್‌ಎಸ್‌ಎಸ್‌ ನೇತಾರರೊಂದಿಗೆ ಬರುವಂತೆ ಕುಮ್ಮಿ ಹಾಕಿದ ಸವಾಲನ್ನು ಯಡ್ಡಿ ಸ್ವೀಕರಿಸಿಲ್ಲ. ಅದಕ್ಕೆ ಉತ್ತರವನ್ನೂ ಕೊಟ್ಟಿಲ್ಲ. ) ಆದರೆ ಯಡ್ಡಿಯ ಈ ವೈಯಕ್ತಿಕ ತೀಟೆಗೆ ಸರ್ಕಾರಿ ಹಣ ಪೋಲು ಮಾಡುವ ಅಗತ್ಯ ಏನಿತ್ತು ? ಏಕೆಂದರೆ ಇವರು ಸವಾಲು ಹಾಕಿದ ಜಾಹೀರಾತು ಕರ್ನಾಟಕ ಸರ್ಕಾರದ ವಾರ್ತಾ ಇಲಾಖೆಯಿಂದ ಬಂದಿದೆ. ನೇರವಾಗಿ ಕುಮ್ಮಿಗೇ ಒಂದು ಕರೆ ಮಾಡಿ ಹೇಳಬಹುದಿತ್ತು. ಅಥವಾ ರಿಜಿಸ್ಟರ‍್ ಪೋಸ್ಟ್‌ನಲ್ಲಿ (೪೦ ರೂ ಖರ್ಚು) ಕಳಿಸಿದ್ದರೆ ಆಗಿತ್ತು. ಇನ್ನೂ ಬೇಕಾದರೆ ೫೦೦ ರೂ ಖರ್ಚು ಮಾಡಿ ಒಂದು ಪತ್ರಿಕಾ ಘೋಷ್ಠಿ ನಡೆಸಿದ್ದರೂ ಸಾಕಿತ್ತು. ಎಲ್ಲಾ ಪತ್ರಿಕೆಗಳಲ್ಲೂ ಸುದ್ದಿ ಬರುತ್ತಿತ್ತು. ಹೀಗೆ ಲಕ್ಷಾಂತರ ರೂಪಾಯಿ ದುಂದು ವೆಚ್ಚ ಮಾಡಬೇಕಿತ್ತಾ ? ಗಮನಿಸಿದ್ದೀರಾ ? ಇತ್ತೀಚಿಗೆ ಎಲ್ಲಾ ಪತ್ರಿಕೆ

ಬಂದರೂ ಲಕ್ಷ... ಬರದಿರಲಿ ನಿರ್ಲಕ್ಷ್ಯ !

ಒಂದು ದಿನ ನಾವು ಮೂವರು ಗೆಳೆಯರು ತಮಿಳುನಾಡಿನ ಕೃಷ್ಣಗಿರಿ ಎಂಬಲ್ಲಿನ ಒಂದು ಹಳ್ಳಿಗೆ ಪರಿಚಯದವನೊಬ್ಬನ ಮದುವೆಗೆಂದು ಅನಿವಾರ್ಯವಾಗಿ ರಾತ್ರಿ ಪ್ರಯಾಣ ಹೊರಟಿದ್ದೆವು. ರಾತ್ರಿ ಸುಮಾರು ಒಂದು ಗಂಟೆ ಹೊತ್ತಿಗೆ ರಸ್ತೆ ಪಕ್ಕದ ಟೀ ಅಂಗಡಿಯಲ್ಲಿ ಟೀ ಕುಡಿಯಲು ನಿಂತಿದ್ದೆವು. ಅಲ್ಲಿಗೆ ತಮಿಳುನಾಡು ಪೊಲೀಸರೂ ಆಗಮಿಸಿದರು. ಕರ್ನಾಟಕದ ಕಾರು ನೋಡಿ ಏನಾದರೂ ಮಾಮೂಲು ಸಿಗಬಹುದೇನೋ ಎಂದುಕೊಂಡು ನಮ್ಮಲ್ಲಿ ನಾನಾ ರೀತಿಯ ಪ್ರಶ್ನೆ ಕೇಳತೊಡಗಿದರು. ಅದೇ ಸಮಯಕ್ಕೆ ಅಲ್ಲೊಬ್ಬ ಬೈಕ್ನಲ್ಲಿ ರಕ್ತಸಿಕ್ತ ದೇಹದೊಂದಿಗೆ ಆಗಮಿಸಿದನು. ಅವನ ಬೆನ್ನಿನಲ್ಲಿ ಮಚ್ಚಿನಿಂದ ಹೊಡೆದ ಗಾಯಗಳು ತುಂಬಾ ಇದ್ದವು. ಅವನು ಅದು ಹೇಗೆ ಬೈಕ್ ಓಡಿಸಿಕೊಂಡು ಬಂದನೋ ತಿಳಿಯದು. ರಕ್ತ ದಾರಾಕಾರವಾಗಿ ಸೋರುತ್ತಿತ್ತು. ಪೊಲೀಸರನ್ನು ಕಂಡೊಡನೆಯೇ ಬೈಕ್ ನಿಲ್ಲಿಸಿ ಸಹಾಯ ಮಾಡಿ, ನನಗೆ ಗೊತ್ತಿರುವವರೇ ಆ ಬೆಟ್ಟಕ್ಕೆ ಉಪಾಯವಾಗಿ ಕರೆದೊಯ್ದು ಮಚ್ಚಿನಿಂದ ಹೊಡೆದರು. ಹೇಗೋ ತಪ್ಪಿಸಿಕೊಂಡು ಬಂದೆ. ಮೊದಲು ನನ್ನನ್ನು ಆಸ್ಪತ್ರೆಗೆ ಸೇರಿಸಿ. ನಾಳೆ ಎಲ್ಲಾ ನಿಮಗೆ ವಿವರವಾಗಿ ಹೇಳಿ ದೂರು ಬರೆದು ಕೊಡುತ್ತೇನೆ ಎಂದನವ. ಆದರೆ ನಮ್ಮನ್ನು ವಿಚಾರಿಸುತ್ತಿದ್ದ ಎಸ್ಐ ಪಿಸಿಗಳಿಗೆ ಅವನ ಬೈಕ್ ಸ್ಟಾಟರ್್ ಮಾಡಿ ಬಿಡ್ರೋ, ಆಸ್ಪತ್ರೆಗೆ ಸೇರಿಕೊಳ್ಳಲಿ. ಬೆಳಗ್ಗೆ ಬದುಕಿದ್ರೆ ಹೋಗಿ ನೋಡ್ಕೊಳ್ಳೊಣ ಎಂದು ಹೇಳಿ ನಮ್ಮ ವಿಚಾರಣೆ ಮುಂದುವರಿಸಿದ. ಪಿಸಿಗಳು ಹಾಗೆಯೇ ಮಾಡಿದರು. ಪೊಲೀಸರ ನಿಷ್ಕಾರುಣೆ ಒಂದೆಡೆಯಾಗಿ

'ಜೈಲ್‌ಭರೋಗೆ ಸಿದ್ದರಾಗಿ' - ಅಣ್ಣಾ ಹಜಾರೆ

ನಿನ್ನೆ ಬೆಂಗಳೂರಿನ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಅಣ್ಣಾ ಹಜಾರೆ ಅವರ ಮತ್ತು ಸಂಗಡಿಗರ ಬಹಿರಂಗ ಸಭೆ ಇತ್ತು. ಅಣ್ಣಾ ಅವರೊಂದಿಗೆ ಅರವಿಂದ್ ಕೇಜ್ರೀವಾಲ್, ಸ್ವಾಮಿ ಅಗ್ನಿವೇಶ್ ಮತ್ತು ಕಿರಣ್ ಬೇಡಿ ಮತ್ತು ಮಾಸ್ಟರ‍್ ಹಿರಣ್ಯಯ್ಯ ಅವರು ಭಾಗವಹಿಸಿದ್ದರು. ಇವರೆಲ್ಲರ ಮಾತುಗಳು ದೇಶಭಕ್ತಿಯನ್ನು ಬಡಿದೆಬ್ಬಿಸಿದಂತಿದ್ದವು. ಆದರೆ ಈ ಬಹಿರಂಗ ಸಭೆಗೆ ಆಗಮಿಸಿದ ಜನಸಂಖ್ಯೆ ಅಷ್ಟೇನೂ ಖುಷಿ ಪಡುವಂತಿರಲಿಲ್ಲ. ದೇಶದ ಪ್ರಮುಖ ಸಮಸ್ಯೆಯಾದ "ಭ್ರಷ್ಟಾಚಾರ"ದ ಬಗ್ಗೆ ಜನ ನೀರಸ ಪ್ರತಿಕ್ರಿಯೆ ತೋರಿದ್ದು ಭಾರತದ ದುರ್ದೈವವೇ ಸರಿ. ಆದರೂ ಅಲ್ಲಿ ಎರಡು ಸಾವಿರಕ್ಕೂ ಹೆಚ್ಚು ಜನರು ಯಾವುದೇ ಆಮಿಷವಿಲ್ಲದೇ ಆಗಮಿಸಿದ್ದರು ಎಂಬುದೇ ಸಂತೋಷದ ವಿಷಯ. ಕಿರಣ್ ಬೇಡಿಯವರ ಮಾತುಗಳು ವಜ್ರದ ಹರಳಿನಷ್ಟು ಮೊನಚಾಗಿದ್ದವು. ಅರವಿಂದ್ ಕೇಜ್ರೀವಾಲ್ ಅವರು ಜನಲೋಕಪಾಲ ಮಸೂದೆಯ ಬಗ್ಗೆ ವಿವರಿಸಿದರು. ಹಿರಣ್ಯಯ್ಯನವರು ತಮ್ಮ "ಲಂಚಾವತಾರ" ನಾಟಕದ ಹಿನ್ನೆಲೆಯನ್ನು ಮತ್ತು ಅದರಿಂದ ತಮಗೆ ಎದುರಾದ ಕಷ್ಟಗಳನ್ನು ವಿವರಿಸಿದರು. ಆಗಸ್ಟ್ ೧೫ರೊಳಗೆ ಜನಲೋಕಪಾಲ್ ಮಸೂದೆಯನ್ನು ಸಂಸತ್ತು ಅಂಗೀಕರಿಸದೇ ಹೋದರೆ ಮತ್ತೆ ತಾವು ಜಂತರ‍್ ಮಂತರ್‌ನಲ್ಲಿ ಆಮರಣಾಂತ ಉಪವಾಸ ಕೂರುವುದಾಗಿಯೂ, ಆಗ ದೇಶವಾಸಿಗಳು ಎಲ್ಲೆಡೆ "ಜೈಲ್ ಭರೋ" ಚಳುವಳಿ ಪ್ರಾರಂಭಿಸಬೇಕು ಎಂದು ಅಣ್ಣಾ ಕರೆ ಕೊಟ್ಟರು. ಈ ಸಭೆಗೆ ಸಂತೋಷ್ ಹೆಗಡೆಯವರು ಬಾರದಿದ್ದುದು ಹಲವರಿಗೆ ಬೇಸರ ಮ

ಗುರುವಿನಂತಹ ಆಂಟಿಯಿರಬೇಕು

ಎಲ್ಲರಿಗೂ ಅಂಥಹ ಆಂಟಿ ಸಿಕ್ಕಿಬಿಡುತ್ತಾರೆನ್ನಲಾಗದು. ಆದರೂ ಸಿಕ್ಕಿವರೇ ಅದೃಷ್ಟವಂತರು. ಆಂಟಿಯೆಂದರೆ `ಚಿಕ್ಕಮ್ಮ' ಎಂದು ಆರ್ಥ. ಅಂದರೆ ಅಮ್ಮನಿಗೇ ಸಮಾನ. ಆದರೆ ಆಂಟಿ ನೀಡುವ ಪ್ರೀತಿ. ವಿಶ್ವಾಸ ವಿಭಿನ್ನ. ಆಂಟಿ ಎಂಬುದರ ಅರ್ಥ ಚಿಕ್ಕಮ್ಮನೇ ಆದರೂ ಎಲ್ಲರಿಗೂ ಚಿಕ್ಕಮ್ಮ ಇರುವ ಸಂದರ್ಭ ಕಡಿಮೆ. ಇದ್ದರೂ ನಾವು ಬಯಸುವಂತಹ ದೇವರಂತಹ ಅಥವಾ ಗುರುವಿನಂತಹ ಆಂಟಿಯಾಗಿರಲೂ ಸಾಧ್ಯವಿಲ್ಲ. ಆಗ ಬೇರೆ ಯಾರೋ ಒಬ್ಬರು ಆ ಜಾಗಕ್ಕೆ ಬಂದರೆ ಉತ್ತಮ. ಆದರಲ್ಲೂ ಟೀನೇಜ್ನ ಹುಡುಗ ಹುಡುಗಿಯರಿಗೆ ಅಪ್ಯಾಯಮಾನಳಾದ ಒಬ್ಬ ಆಂಟಿ ಇರಲೇಬೇಕು. ಆಕೆಗೆ ಮೂವತ್ತರಿಂದ ನಲವತ್ತು ವರ್ಷ ವಯಸ್ಸಿರಬೇಕು. ಅಂದಾಗ ಮದುವೆಯಾಗಿರುತ್ತದೆ. ಮತ್ತು ಹೆಚ್ಚು ಕಡಿಮೆ ಟೀನೇಜು ಪ್ರವೇಶಿಸುವ ಅಥವಾ ಪ್ರವೇಶಿಸಿರುವ ಮಕ್ಕಳಿರುತ್ತಾರೆ. ಗೆಳೆತನದ ಅನುಭವದ ಜೊತೆಗೆ ತಾಯ್ತನದ ಅನುಭವವೂ ಇರುತ್ತದೆ. ಆಕೆಯ ಮೇಲೆ ಗೌರವವೂ ಮೂಡುತ್ತದೆ. ಅವರು ನಮ್ಮನ್ನು ಪ್ರೀತಿಸುತ್ತಾಳೆ. ಒಳ್ಳೆಯ ಗುಣಗಳನ್ನು ಹೇಳಿಕೊಡುತ್ತಾಳೆ. ತಪ್ಪು ಮಾಡಿದಾಗ ಖಂಡಿಸುತ್ತಾಳೆ, ಜೋಕು ಹೇಳಿದಾಗ ನಕ್ಕು ಪ್ರೋತ್ಸಾಹಿಸುತ್ತಾಳೆ. ಅಲ್ಪಸ್ವಲ್ಪ ಪೋಲಿತನಗಳನ್ನೂ ಸಹಿಸುತ್ತಾಳೆ. ಹೆಚ್ಚಾದರೆ ತಿವಿದು ಬುದ್ಧಿ ಕಲಿಸುತ್ತಾಳೆ. ಹೆಚ್ಚಾಗಿ ಸ್ವಂತ ಚಿಕ್ಕಮ್ಮನಿಲ್ಲದೇ ಹೋದಾಗ ಗೆಳೆಯ ಗೆಳತಿಯರ ತಾಯಿ ಈ ಪಾತ್ರ ವಹಿಸಬಲ್ಲರು. ಬಾಲ್ಯದಲ್ಲಿ ನಮ್ಮನ್ನು ಎತ್ತಿ ಮುದ್ದಾಡಿದ ಪಕ್ಕದ ಮನೆ ಆಂಟಿ ಈ ಸ್ಥಾನ ತುಂಬಲು ತೀರಾ ಯೋಗ್ಯ. ಈ ಆ

ಸುಳ್ಳು ಹೇಳದೋರ್ ಯಾರ್ ಅವ್ರೇ ?

ವೈದ್ಯರೊಂದಿಗೆ ಮತ್ತು ನ್ಯಾಯವಾದಿಯೊಂದಿಗೆ ಸುಳ್ಳು ಹೇಳಬಾರದು ಎಂಬ ನಾಣ್ಣುಡಿ ಇದೆ. ಆದರೆ ಜನ ಎಲ್ಲರೊಂದಿಗೂ ಸುಳ್ಳು ಹೇಳಿ ದಕ್ಕಿಸಿಕೊಳ್ಳುತ್ತಾರೆ. ಸುಳ್ಳುಗಾರರನ್ನು ಜನರು ಬೈಯ್ಯುತ್ತಾರೆ. ಹೀಯಾಳಿಸುತ್ತಾರೆ; ಕೀಳಾಗಿ ಕಾಣುತ್ತಾರೆ. ಅವರನ್ನು ನಂಬದಿರುವಂತೆ ಬೇರೆಯವರಿಗೆ ಸಲಹೆ ನೀಡುತ್ತಾರೆ; ಹಣ ಮುಂತಾದ ಕೆಲ ವಿಚಾರಗಳಲ್ಲಂತೂ ಸುಳ್ಳು ಹೇಳುವವರನ್ನು ಯಾರೂ ನಂಬುವುದೇ ಇಲ್ಲ. ವಿಚಿತ್ರವೆಂದರೆ  ಎಲ್ಲರೂ ಒಂದಿಲ್ಲೊಂದು ಸಮಯದಲ್ಲಿ ಸುಳ್ಳು ಹೇಳಿಯೇ ಇರುತ್ತಾರೆ. ಅದು ಉತ್ತಮ ಕಾರಣಕ್ಕೇ ಇರಬಹುದು ಅಥವಾ ಕೃತ್ರಿಮ ಕಾರಣಕ್ಕೇ ಇರಬಹುದು, ಆದರೆ ಸುಳ್ಳು ಮಾತ್ರ ಸರ್ವಾಂತರ್ಯಾಮಿ ! ನಾವು ಯಾವುದಾದರೂ ಸಂದಿಗ್ಥ ಪರಿಸ್ಥಿತಿಯಲ್ಲಿ ಸಿಕ್ಕಿಕೊಂಡಿರುತ್ತೇವೆ. ಆದರಿಂದ ಪಾರಾಗಲು ಯಾವ ದಾರಿಯೂ ತೋರದಿದ್ದಾಗ ತಟ್ಟನೆ ಒಂದು ಪರಮ ಸುಳ್ಳನ್ನು ಹೇಳಿದರೆ ಆ ತಾಪತ್ರಯದಿಂದ ಪಾರು! ಸುಳ್ಳು ಹೇಳಿದರೂ ನಂಬುವಂತಿಬೇಕೆಂದು ಸುಳ್ಳಿನ ಪರ ವಹಿಸುವವರೂ ಇದ್ದಾರೆ. ಸತ್ಯದ ತಲೆ ಮೇಲೆ ಹೊಡೆದಂತೆ ಇವರು ಸುಳ್ಳು ಹೇಳಬಲ್ಲರು. ಕೆಲವರು ಬಾಯಿ ಬಿಟ್ಟರೆ ಬರುವುದೆಲ್ಲಾ ಸುಳ್ಳೇ ಆಗಿದ್ದರೆ, ಇನ್ನು ಕೆಲವರು ಬಾಯಿ ಬಿಡುವ ಮೊದಲೇ ತಿಳಿದು ಹೋಗುತ್ತದೆ, ಏನೋ ಮಹಾನ್ ಸುಳ್ಳು ಹೇಳಲಿದ್ದಾನೆ ಎಂದು. ಸುಳ್ಳು ಹೇಳಿಕೊಂಡೇ ಕೆಲವರು ಜೀವನ ಸಾಗಿಸುವವರೂ ಇದ್ದಾರೆ. ಕೆಲವರು ತಾವು ಹೇಳುವ ಸುಳ್ಳನ್ನು ಎದುರಿನವರು ನಂಬಲಿ ಎಂದು ಈ ವಿಷಯ ದೇವರಾಣೆ ಸತ್ಯ ಎಂದೋ, ತಾಯಿ ಮೇಲಾಣೆ ಎಂದ

ನಾಲ್ಕು ಎರಡು ಸಾಲಿನ ಕತೆಗಳು

1. ಕಾಡಿನಲ್ಲಿ ದಾರಿ ಕಾಣದೇ ಅತ್ತಿತ್ತ ಅಲೆದಾಡುತ್ತಿದ್ದವನ ಪಕ್ಕದಲ್ಲೇ ಒಂದು ಕಾರು ಬಂದು ನಿಂತಿತು. ಅದರಿಂದ ಇಣುಕಿದ ಸುಂದರ ಯುವತಿ "ಬನ್ನಿ ಡ್ರಾಪ್ ಮಾಡ್ತೀನಿ" ಎಂದು ಉಲಿದಳು. ಸಂತೋಷದಿಂದ ಹತ್ತಿ ಕುಳಿತ.... ಮರುಕ್ಷಣವೇ ಎಚ್ಚರಾಗಿ ಹೋಯ್ತು. 2. "ನೀನು ತುಂಬಾ ಸುಂದರಿ" "ನೀನು ತುಂಬಾ ತುಂಟ" 3."ನಿನಗೆ ವಯಸ್ಸಾಯ್ತು ಕಣೆ" "ನಿಮಗೆ ಕೈಲಾಗಲ್ಲ" 4. ಆತ ತಡವರಿಸಿ ತಡವರಿಸಿ "ಐ ಲವ್ ಯೂ" ಅಂದ. ಆಕೆ ತಡವರಿಸದೇ ನುಡಿದಳು.. "ನೀನು ಇನ್ನೂ ಶುರುನಲ್ಲೇ ಇದೀಯಲ್ಲೋ" 5. ನೀರಿನಲ್ಲಿ ಮೀನಿನ ಹೆಜ್ಜೆ ಗುರುತನ್ನು ಹುಡುಕುತ್ತಾ ಹೊರಟ ಅವನಿಗೆ ಅವಳು ಅವನ ಹೃದಯದೊಳಗೆ ಬಂದು ಹೋದ ಗುರುತು ಕಾಣಿಸಲೇ ಇಲ್ಲ. 6. "ಹೆಣ್ಣೇ ಆದರೂ ಈ ಸಲ ಭ್ರೂಣ ಹತ್ಯೆ  ಮಾಡಿಸುವುದು ಬೇಡ" ಅವರು ಮಾತಾಡಿಕೊಂಡರು. ಆದರೆ ಅದೇಕೋ ಅವಳ ಮುಟ್ಟು ನಿಲ್ಲಲೇ ಇಲ್ಲ. 7. "ಅಮ್ಮಾ... ಯಾವ ಸೀಮೆಯ ರಾಜಕುಮಾರ ಬಂದು ಕರೆದರೂ ನಾ ನಿನ್ನ ಬಿಟ್ಟು ಹೋಗಲಾರೆ" ಅಂದಿದ್ದ ಮಗಳು ಗಮಾರನೊಬ್ಬನ ಪ್ರೇಮಕ್ಕೆ ಸಿಲುಕಿ ಓಡಿ ಹೋದಳು. 8. ಜೀವನದಲ್ಲಿ ಏನೂ ಸಾಧಿಸಲಾಗದೆ ಅವನು ಜಿಗುಪ್ಸೆಗೊಂಡು ಕಾಡಿಗೆ ಹೋಗಿ ದೊಡ್ಡ ಮರವೊಂದಕ್ಕೆ ಹಗ್ಗ ಕಟ್ಟಿ ನೇಣು ಹಾಕಿಕೊಂಡ. ಹಗ್ಗ ತುಂಡಾದ ಕಾರಣ ಸಾವನ್ನೂ ಸಾಧಿಸಲಾಗೆದೇ ಮನೆಗೆ ಹಿಂದಿರುಗಿದ. 9. ಎರಡು ಸಾಲಿನ ಕಥೆ ಹೇಳ

ಸ್ನೇಹದ ಸವಿ ಜೇನು !

ಮನದ ಹರುಷಕೆ ಹೊಸ ರಾಗ ಹೊಸೆದೆ ಮನಸನಿಟ್ಟು ಕನಸ ಕಟ್ಟಿದೆ ಮುಂಗುರುಳಲ್ಲಿ ಮೋಹ ತುಂಬಿ ನಕ್ಕೆ ಮಾಡಿಕೊಳ್ಳಲಿಲ್ಲ ಸ್ನೇಹಕ್ಕೆ ಕೊಂಚವೂ ಧಕ್ಕೆ ಮಮತೆಯ ನಲ್ನುಡಿಯೇ ನಿನ್ನಾಭರಣ ಮಾತೆಯ ಮಡಿಲಂತೆ ನಿನ್ನಂತಕರಣ ಮಡಿಲಲ್ಲಿ ಮುದುಡುವ ಮಗುವಿನಾ ಪರಿ ಅಪ್ಪುಗೆಯಲ್ಲಿ ಗೆಳೆತನದ ತಿಳಿ ನೀರ ಝರಿ ಮುದ್ದಿಸಿ ಹಣೆಗೆ ಮುತ್ತಿಟ್ಟ ಗಳಿಗೆ ನೀ ನೆನೆದಿದ್ದೆ ನನ್ನ ಸ್ನೇಹ ಜಡಿ ಮಳೆಗೆ ಗೆಳೆತನದ ಮಳೆಗಾಲ ಮುಗಿಯಲೇ ಬೇಕು ಅಗಲುವಿಕೆಯ ಬಿರು ಬೇಸಗೆ ಸಹಿಸಲೇ ಬೇಕು ಅಕ್ಕರೆಯ ಸವಿ ನೆನಪು ಮೆಲುಕುತ್ತಿರೋಣ ಆತ್ಮೀಯ ಆರ್ಧತೆ ಸಲಹುತ್ತಿರೋಣ

ಚುನಾವಣೆಗೆ ನಿಂತ ಸ್ಪರ್ಧಿಗಳು ಯಾರೂ ಅರ್ಹರಲ್ಲದೇ ಹೋದರೆ ಏನು ಮಾಡಬೇಕು ?

ಸ್ಪರ್ಧೆಯಲ್ಲಿರುವ ಯಾವುದೇ ವ್ಯಕ್ತಿ ಉತ್ತಮ ಅಲ್ಲ ಅನ್ನಿಸಿದರೆ "ಋಣಾತ್ಮಕ ಮತ" ನೀಡುವ ಮೂಲಕ ಎಲ್ಲರನ್ನೂ ತಿರಸ್ಕರಿಸಬಹುದು. ಈ ರೀತಿಯ nagative vote ಗಳಿಗೆ ತುಂಬಾ ಪ್ರಾಮುಖ್ಯತೆ ಇದೆ. ಅದೇನೆಂದರೆ ಚುನಾವಣೆಯಲ್ಲಿ ಯಾರು ಗೆದ್ದಿರುತ್ತಾನೋ ಅವನಿಗೂ ಮತ್ತು ಎರಡನೇ ಸ್ಥಾನ ಪಡೆದಾತನಿಗೂ ಇರುವ ಮತಗಳ ವ್ಯತ್ಯಾಸಕ್ಕಿಂತಲೂ ಹೆಚ್ಚು nagative vote ಗಳು ಬಂದಿದ್ದರೆ ಆ ಕ್ಷೇತ್ರದ ಚುನಾವಣೆ ರದ್ದಾಗುತ್ತದೆ, [ ಉದಾ : ಗೆದ್ದ ವ್ಯಕ್ತಿ ಪಡೆದ ಮತಗಳು = 10,000 ಎರಡನೇ ಸ್ಥಾನದ ವ್ಯಕ್ತಿ ಪಡೆದ ಮತಗಳು = 9,500 ಇಬ್ಬರ ಮತಗಳ ನಡುವಿನ ವ್ಯತ್ಯಾಸ = 500 ಒಂದು ವೇಳೆ nagative ಮತಗಳು = 500 ಆಗಿದ್ದರೆ ಈ ಚುನವಣೆ ರದ್ದಾಗುತ್ತದೆ. ] ಮರು ಚುನಾವಣೆ ನಡೆಯುತ್ತದೆ. ಆ ಮರು ಚುನಾವಣೆಯಲ್ಲಿ ರದ್ದಾದ ಚುನಾವಣೆಗೆ ಸ್ಪರ್ಧಿಸಿದ್ದ ಯಾವುದೇ ವ್ಯಕ್ತಿ ಸ್ಪರ್ಧಿಸಲು ಅವಕಾಶ ಇರುವುದಿಲ್ಲ. ಅಷ್ಟೇ ಅಲ್ಲ, ಅವರು ಮುಂದಿನ ಐದು ವರ್ಷ ಯಾವುದೇ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ಇಲ್ಲ. nagative vote ಗಳನ್ನು ಹೆಚ್ಚಾಗಿ ಮಾಡುವುದರಿಂದ ರಾಜಕೀಯ ಪಕ್ಷಗಳಿಗೆ / ವ್ಯಕ್ತಿಗಳಿಗೆ ಬುದ್ದಿ ಕಲಿಸಬಹುದು. ಒಂದು ಕ್ಷೇತ್ರದಲ್ಲಿ ಈ ರೀತಿ ನಡೆದರೆ ಅವರು ಆ ಚುನಾವಣೆಗೆ ಸುರಿದ ಹಣ ವ್ಯರ್ಥವಾಗುತ್ತದೆ, ಮತ್ತು ಐದು ವರ್ಷ ಚುನವಣೆಗೆ ಸ್ಪರ್ಧಿಸುವಂತಿಲ್ಲ. ಇದರಿಂದ ಪಕ್ಷಗಳು ಆದಷ್ಟೂ ಪ್ರಾಮಾಣಿಕರನ್ನು ದಕ್ಷರನ್ನು ಸ್ಪರ್ಧಿಸುವಂತೆ ಮಾಡಬೇಕಾಗುತ್ತದೆ.

ಅಣ್ಣಾ ಹಜಾರೆ ಹೋರಾಟ ; ಜನಶಕ್ತಿಗೆ ಸಂದ ಜಯ !

"ಜನಲೋಕಪಾಲ್" ಮಸೂದೆಗಾಗಿ ನವದೆಹಲಿಯ ಜಂತರ‍್ಮಂತರ್‌ನಲ್ಲಿ ಉಪವಾಸ ಸತ್ಯಾಗ್ರಹ ಕುಳಿತು ಕೊನೆಗೂ ವಿಜಯ ಸಾಧಿಸಿದ ಅಣ್ಣಾ ಹಜಾರೆಯವರಿಗೆ ನಾವು ಧನ್ಯವಾದ ಅರ್ಪಿಸಲೇ ಬೇಕು. ದೇಶಾಧ್ಯಂತ ಜನರ ಬೆಂಬಲ ಅವರಿಗೆ ದೊರಕಿತು. ಇದು ಭ್ರಷ್ಟಾಚಾರಕ್ಕೆ ಜನ ಎಷ್ಟೊಂದು ಬೇಸತ್ತಿದ್ದಾರೆ ಎಂಬುದನ್ನು ತೋರಿಸಿತು. ಇನ್ನೊಂದು ಸಂತೋಷದ ಸಂಗತಿ ಎಂದರೆ ಜನಲೋಕಪಾಲ್‌ನ ಜಂಟಿ ಸದನ ಸಮಿತಿಯಲ್ಲಿ ನಮ್ಮ ಹೆಮ್ಮೆಯ ಲೋಕಾಯುಕ್ತ ಸಂತೋಷ್ ಹೆಗಡೆಯವರೂ ಸಹ ಇದ್ದಾರೆ. ಅಲ್ಲದೇ ಹೆಸರು ಕೆಡಿಸಿಕೊಳ್ಳದ ರಾಜಕಾರಣಿ ವೀರಪ್ಪ ಮೊಯಿಲಿ ಸಹ ಇದ್ದಾರೆ. ಜನಲೋಕಪಾಲ್ ಕಾನೂನು ಪ್ರಕಾರ ಪ್ರಧಾನ ಮಂತ್ರಿಯನ್ನೂ ಸಹ ವಿಚಾರಣೆ ನಡೆಸುವ ಅಧಿಕಾರ ಲೋಕಪಾಲರಿಗೆ ಇರುತ್ತದೆ. ಇದೊಂದು ಉತ್ತಮ ಬೆಳವಣಿಗೆ. ಅದೇ ರೀತಿ ಮುಖ್ಯಮಂತ್ರಿಯನ್ನೂ ವಿಚಾರಣೆ ನಡೆಸುವ ಅಧಿಕಾರ ಲೋಕಾಯುಕ್ತಕ್ಕೆ ಕೊಡಬೇಕು. ಅದಕ್ಕಾಗಿಯೂ ನಾವು ಹೋರಾಟ ಮಾಡಬೇಕಾಗಿದೆ. ಮುಖ್ಯವಾಗಿ ಯುವ ಜನತೆ ಎಚ್ಚೆತ್ತುಕೊಂಡರೆ ಇದೂ ಸಹ ಸಾಧ್ಯ ಎನ್ನಬಹುದು. ಇಲ್ಲಿ ಗಮನಿಸಬೇಕಾದ ಅಂಶ ಯಡ್ಡಿ - ಅಶೋಕ್‌ರಂತಹ ಗೋಸುಂಬೆಗಳು "ಹಜಾರೆಯವರ ಹೋರಾಟಕ್ಕೆ ನಮ್ಮದೂ ಬೆಂಬಲವಿದೆ" ಎಂದು ಹೇಳಿದ್ದಾರೆ. ಆದರೆ ತಮ್ಮ ಕಾಲ ಬುಡದಲ್ಲೇ ಲೋಕಾಯುಕ್ತಕ್ಕೆ ಅಧಿಕಾರ ಕೊಡುತ್ತಿಲ್ಲ. ಇಂತಹ ನಾಚಿಗೆ ಗೆಟ್ಟ ರಾಜಕಾರಣಿಗಳನ್ನು ಮೊದಲು ಒದ್ದು ಓಡಿಸಬೇಕಾಗಿದೆ.

ಮನದನ್ನೆ !

ಮನದಾಳ ಮನದನ್ನೆ ಮನದಲ್ಲಿ ನಿನ್ನನ್ನೇ ನೆನೆ ನೆನೆದು ಮನವಿಲ್ಲಿ ! ಮರವಾಗೆ ಫಲವೆಲ್ಲಿ ? ಹಸಿರಾದ ಮನವೆಲ್ಲಿ ? ಉಸಿರಾದ ನೀನೆಲ್ಲಿ ? ಕೆಸರಾದ ಜಗದಲ್ಲಿ ಕೊಸರಾಡೆ ಕಮಲಕ್ಕೆ ನಿಡಿದಾದ ಉಸಿರಲ್ಲೆ ಬಡವಾದೆ ನಾನಿಲ್ಲಿ ! ನೀನೆಲ್ಲಿ ? ನೀನೆಲ್ಲಿ ?

ಈ ಹುಡುಗಿಯರೇ ಹೀಗೆ !

ಬೆಟ್ಟದ ಬದಿಯಿಂದ ಮುಂಜಾನೆಯ ರವಿ ಇಣುಕಿದಂತೆ ಕಿಟಕಿ ಹಿಂದಿನ ಕಂಗಳು, ಕಂಡೂ ಕಾಣದ ಮುಂಗುರುಳು ಗಲಗಲ ಬಳೆಯ ತರಂಗ ಕಿಲಕಿಲ ನಗುವಿನಂತರಂಗ, ಎದುರು ಬರಲಾರರು ಚೆಲುವೆಯರು ಬಂದರೂ ಬಹು ಲಾಸ್ಯ ಲಜ್ಜೆ ಇಡುತಲಿ ಒಂದೊಂದೇ ಹೆಜ್ಜೆ ಮುಗಿಲಿಂದ ಬರಗಾಲದಿ ಮಳೆ ಹನಿ ಬಿಸಿ ನೆಲಕ್ಕೆ ಎಣಿಸಿ ಮುತ್ತಿಕ್ಕಿದಂತೆ ! ಕಿರು ಹಣತೆ ಉರಿಯಂತೆ ತುಟಿ ರಂಗು ಪತಂಗ ಹಾರಿದಂತೆ ತೆಳು ಸೆರಗು ಕಾವ್ಯದೊಡತಿಯರು, ಮೌನವೇ ಮಾತು. ಅರೆಕ್ಷಣದಿ ಸೃಷ್ಟಿಸಿ ಕಲ್ಪಾನಾ ಲೋಕ ನಗ್ನ ಬಿಂಬ ತೋರಿ ತೆರೆವರು ಪ್ರೇಮಲೋಕ ಒಮ್ಮೆ ಧಾರಾಳ ದಮಯಂತಿ ಮಗದೊಮ್ಮೆ ಮುನಿದ ಮಗುವಂತೆ ಅಲ್ಲಿ ಪ್ರೇಮ ಪ್ರೀತಿಯನ್ನರಸುವ ಹುಡುಗನ ನಿರಂತರ ಬೇಟೆ ! ಅರಿವಾಗುವ ಮುನ್ನವೇ ಮಾನಸಿಕ ಪತ್ನಿಯಾಗಿರುತ್ತಾಳೆ, ಛೇಧಿಸಿ ಹೃದಯ ಕೋಟೆ.

ಭೀತಿ ಹುಟ್ಟಿಸುವ ಜ್ಯೋತಿಷಿಗಳಿಗೆ ಶಿಕ್ಷೆ ಏಕಿಲ್ಲ?

* ದಿನಕರ, ಮಂಗಳೂರು [ ಕೃಪೆ : ದಟ್ಸ್ ಕನ್ನಡ ವಾರ್ತೆ ] ಸೂಪರ್ ಮೂನ್, ಜಪಾನಿನ ಭೂಕಂಪ, ಸುನಾಮಿ ಕೆಲವು ತಥಾಕಥಿತ ಜ್ಯೋತಿಷಿಗಳಿಗೆ ಸುಗ್ಗಿಯ ಸಂಭ್ರಮ ಒದಗಿಸಿದೆ. ಏನೋ ಅನಾಹುತ ಸಂಭವಿಸುವುದೆಂದು ಈ ತಥಾಕಥಿತ ಜೋತಿಷಿಗಳು ಜನರನ್ನು ಭೀತಿಗೆ ತಳ್ಳುತ್ತಿದ್ದಾರೆ. ಟಿವಿ ಮಾಧ್ಯಮಗಳೂ ಇಂತಹ ಕಪಟ ಜ್ಯೋತಿಷಿಗಳಿಗೆ ವೇದಿಕೆಯೊದಗಿಸುತ್ತ ಜನರ ಭೀತಿ ಹೆಚ್ಚಿಸುತ್ತಿವೆ. (ನೈಜ, ಪ್ರಾಮಾಣಿಕ ಜ್ಯೋತಿಷಿಗಳ ಬಗ್ಗೆ ನನ್ನ ತಕರಾರಿಲ್ಲ. ಅವರು ಹೀಗೆ ಮೇಲೆ ಬಿದ್ದು ಪ್ರಚಾರ ಪಡೆಯಲು ಹಂಬಲಿಸುವುದೂ ಇಲ್ಲ) ದಢೂತಿ ಜ್ಯೋತಿಷಿ ಯೊಬ್ಬರಂತೂ ಟಿವಿಯಲ್ಲಿ ಕಾಣಿಸಿಕೊಂಡು ಜನರಲ್ಲಿ ಅನಗತ್ಯ ಭೀತಿ ಹರಡುತ್ತಿದ್ದಾರೆ. ಅವರ ಜಾಣ್ಮೆ ಎಷ್ಟಿದೆಯೆಂದರೆ ಅವರು ಮಾತನಾಡುವುದು ಅಡ್ಡಗೋಡೆಯ ಮೇಲೆ ದೀಪವಿಟ್ಟಂತೆ. ಭೂಕಂಪ, ಪ್ರವಾಹವೇ ಆಗುವುದೆಂದು ತಾನು ಹೇಳಲಾರೆ, ಆದರೆ ಏನೋ ಒಂದು ಆಗಲಿದೆ ಎಂದು ಅವರು ಹೇಳುತ್ತಾರೆ. ಮಾ.19ರಂದೇ ಸಂಭವಿಸುವುದೆಂದು ಹೇಳಲಾರೆ, ಮುಂದೆ ಯಾವಾಗಲೂ ಸಂಭವಿಸಬಹುದು ಎನ್ನುತ್ತಾರೆ.  ಮುಂದಕ್ಕೆ ಲಾರಿಯಡಿಗೆ ನಾಯಿ ಬಿದ್ದು ಸತ್ತರೂ 'ನೋಡಿ, ನಾನು ಹೀಗೆ ಹೇಳಿರಲಿಲ್ಲವೆ ' ಎಂದು ಅವರು ಹೇಳಿದರೂ ಹೇಳಿಯಾರೆ. ಹಿಂದೊಮ್ಮೆ ಇದೇ ರೀತಿ ಟಿವಿ ಜ್ಯೋತಿಷಿಯೊಬ್ಬರು ಬಂಟ್ವಾಳಕ್ಕೆ ಬಂದಿದ್ದಾಗ ಮುಂದಿನ ತಿಂಗಳು ಇಂತಿಷ್ಟೇ ತಾರೀಕಿನಂದು ಪ್ರಳಯ ಸದೃಶ ಮಳೆ ಬಂದು ಬಂಟ್ವಾಳವು ಭೀಕರ ಪ್ರವಾಹಕ್ಕೆ ತುತ್ತಾಗಲಿದೆ ಎಂದು ಹೇಳಿಹೋಗಿದ್ದರು. ಆದರೆ ಅವರು ಹೇ