ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ಜನವರಿ, 2013 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಅಲ್ಲಾ ಕೊಟ್ಟರೂ ಮುಲ್ಲಾ ಬಿಡ !

ತಮಿಳುನಾಡಿನ ಕುತಂತ್ರಿಗಳು ಕಮಲಹಾಸನರ "ವಿಶ್ವರೂಪಂ" ಚಿತ್ರಕ್ಕೂ ಕೊಕ್ಕೆ ಹಾಕಿ ಕೇಕೆ ಹಾಕಿದ್ದಾರೆ. ಅದು ಭಯೋತ್ಪಾದನೆಯ ವಿಷಯವನ್ನು ಒಳಗೊಂಡಿದೆ ಅನ್ನುವುದು ಕುಮಾರಿ (?!) ಜಯಲಲಿತ ಸರ್ಕಾರ ನೀಡಿರುವ ಕಾರಣವಾದರೂ ಅದರ ಹಿಂದಿನ ನಿಗೂಢ ವಿಷಯಗಳು ಬೇರೆಯೇ ಇವೆ.  ಭಯೋತ್ಪಾದನೆಯ ವಿಷಯವಿರುವುದಕ್ಕೂ ಮುಸ್ಲಿಮರಿಗೂ ಏನು ಸಂಬಂಧ ? ದೇಶದಲ್ಲಿ ಅಷ್ಟೇ ಅಲ್ಲದೇ ಪ್ರಪಂಚದಲ್ಲೆಲ್ಲಾ ಭಯೋತ್ಪಾದನೆ ಹರಡಿರುವುದು ಸುಳ್ಳೇ ? ತಮಿಳು ಭಯೋತ್ಪಾದನೆ ಈ ಕುಮರಿಯನ್ನೇ ಉಡಾಯಿಸುವಷ್ಟು ಬೆಳೆದಿದ್ದರಿಂದಲೇ ಅಲ್ಲವೇ ಈಕೆ ಝಡ್ + ಕಾವಲು ಹಾಕಿಸಿಕೊಂಡಿದ್ದು?  ವಿಶ್ವರೂಪಂ ಚಿತ್ರವು ತಯಾರಾಗುತ್ತಲೇ ಕಮಲ್ ಒಂದು ವಿವಾದವನ್ನು ಮೈಮೇಲೆಳೆದುಕೊಂಡಿದ್ದರು. ಅದು ಹಂಚಿಕೆ ವಿವಾದ. ಏರ್‌ಟೆಲ್ ನವರಿಗೆ ಚಿತ್ರದ ಸ್ಯಾಟಲೈಟ್ ಬಿತ್ತರಣೆ ಹಕ್ಕನ್ನು ಮಾರಿಕೊಂಡಿದ್ದು ತಮಿಳುನಾಡಿನ ಚಿತ್ರ ವಿತರಕರ ಕಣ್ಣು ಕೆಂಪಾಗಿಸಿತ್ತು. ಆದರೆ ಅವರಿಗೆ ಕಮಲ್ ಬಗ್ಗಿರಲಿಲ್ಲ. ಆದನ್ನೇ ನೆಪವಾಗಿಟ್ಟುಕೊಂಡ ವಿತರಕ ಮಹಾಷಯರು ಈಗ ಜಯಾ ಮೂಲಕ ಮುಸ್ಲಿಮರ ಭಾವನೆಗೆ ಧಕ್ಕೆಯಾಗುತ್ತದೆ ಎಂಬ ಕಪೋಲಕಲ್ಪಿತ ವದಂತಿಯನ್ನು ಹರಿಯ ಬಿಟ್ಟು ಚಿತ್ರ ಬಿಡುಗಡೆಯನ್ನು ಮುಂದೂಡಿದ್ದಾರೆ. ಮುಸ್ಲಿಂ ಮತಗಳ ಬೇಟೆಯ ಚಿಕ್ಕ ಅವಕಾಶವನ್ನೂ ಕಳೆದುಕೊಳ್ಳಲಿಚ್ಚಿಸದ ಲಜ್ಜೆಗೆಟ್ಟ ರಾಜಕಾರಣಿಗಳಿಗೆ ಇಂತಹ ಸುವರ್ಣಾವಕಾಶ ಸಿಕ್ಕರೆ ಕೇಳಬೇಕೆ?  ಈಗ ನಡೆದಿರುವುದೂ ಅದೇನೆ. ಇಲ್ಲವೆಂದರೆ ಸೆನ್ಸಾರ‍್ ಮ

ಪಾಕಿಸ್ತಾನಕ್ಕೆ ಬುದ್ಧಿ ಕಲಿಸೋದು ಹೇಗೆ ?

ಮೊದಲನೆಯದಾಗಿ ಅದು ಬುದ್ಧಿ ಕಲಿಯುವ ದೇಶವೇ ಅಲ್ಲ. ಹಾಗಂತ ತೀರ್ಮಾನಿಸಬಹುದಾದರೂ ಅದಕ್ಕೊಂದು ಬುದ್ಧಿ ಕಲಿಸದೇ ಹೋದರೆ ನಮಗೆ ಅಪಾಯ ತಪ್ಪಿದ್ದಲ್ಲ. ಆದರೆ ಸಮಸ್ಯೆ ಇರುವುದು ಪಾಕಿಸ್ತಾನಕ್ಕೆ ಬುದ್ಧಿ ಕಲಿಸುವುದಾದರೂ ಹೇಗೆ ? ಹಿಂದೆ ಇಲಿಗಳೆಲ್ಲಾ ಸೇರಿಕೊಂಡು ಬೆಕ್ಕಿಗೆ ಗಂಟೆ ಕಟ್ಟಿದ್ದವಂತೆ. ಆದರೆ ಈಗ ಭಾರತದಂತ ಬೆಕ್ಕೇ ಪಾಕಿಯಂತಹ ಇಲಿಗೆ ಗಂಟೆ ಕಟ್ಟುವುದು ಹೇಗಪ್ಪಾ ಎಂದು ಯೋಚಿಸುವಂತಾಗಿದೆ. ಇದು ದುರಂತ. ಅದೊಂತರ ಮಡಿಲೊಳಗಿನ ಗೊಣಗಲು ಮುಳ್ಳಿನ ಪೊದೆಯಂತೆ, ನಾವು ಅಲ್ಲಾಡಿದರೂ ಚುಚ್ಚುತ್ತೆ, ಅದೇ ಅಲ್ಲಡಿದರೂ ಚುಚ್ಚುತ್ತೆ. ಪಕ್ಕದ ಮನೆಯಲ್ಲೆ ಹುಚ್ಚು ಮುಂಡೇಮಕ್ಕಳಿದ್ದರೆ ಎಷ್ಟು ತೊಂದರೆಯೋ ಅಷ್ಟೇ ತೊಂದರೆ ಈ ಪಾಕಿಸ್ತಾನದಿಂದ. ಸಧ್ಯಕ್ಕೆ ಕಾಶ್ಮೀರ ಭಯೋತ್ಪಾದನೆ ಕಡಿಮೆ ಆಗಿದೆ. ಅಲ್ಲಿ ವಿರೋಧದ ನಡುವೆಯೂ ಮಿಲಿಟರಿ ಬಿಗಿಗೊಂಡದ್ದು ಒಂದು ಕಾರಣವಾದರೆ ಅಫ್ಘನಿಸ್ತಾನದ ಭಯೋತ್ಪಾದಕರನ್ನು ಅಮೆರಿಕ ಬಗ್ಗು ಬಡಿದದ್ದೂ ಕಾರಣವಿರಬಹುದು. ಆದರೂ ಗಡಿಯಲ್ಲಿನ ತಂಟೆ ಇನ್ನೂ ನಿಂತಿಲ್ಲ.  ಪಾಕಿಸ್ತಾನವು ಭಾರತದೊಂದಿಗೆ ಕಾಲು ಕೆರೆದು ಜಗಳ ತೆಗೆಯುವುದಕ್ಕೆ ಹಲವಾರು ಕಾರಣವಿದೆ. ತನಗೆ ಒಳಗೊಳಗೆ ತುರಿಕೆಯಾದಾಗೆಲ್ಲ ಅದನ್ನು ತುರಿಸಿಕೊಳ್ಳುವುದನ್ನು ಯಾರೂ ನೋಡಬಾರದು ಎಂಬ ಕಾರಣಕ್ಕೆ ಅದು ಇತ್ಲಾಗೆ ಒಂದು ಕಲ್ಲು ಎಸೆದು ಪ್ರಪಂಚದ ದಿಕ್ಕು ತಪ್ಪಿಸುವ ಯತ್ನವನ್ನು ಮಾಡುತ್ತಲೇ ಬರುತ್ತಿದೆ. ಅದು ಅದರ ಕರ್ಮ, ಆದರೆ ಅದರಿಂದ ತೊಂದರೆಗೆ ಒಳಗಾಗುತ್ತಿರುವುದು ಮ

ಜಿಮೈಲ್‌ನಲ್ಲಿ ಅನಗತ್ಯ ಮಿನ್ನಂಚೆಗಳನ್ನು ಸ್ಪಾಮ್‌ಗೆ ಕಳಿಸುವುದು ಹೇಗೆ ?

ನೀವು ಉಪಯೋಗಿಸುವ ಮಿನ್ನಂಚೆ (ಮೈಲ್) ಒಳ ಪೆಟ್ಟಿಗೆಗೆ ದಿನವೂ ಬೇಡವಾದ ಮಿನ್ನಂಚೆಗಳು ಬಂದು ಬೀಳುತ್ತಿವೆಯೆ ? ಇದು ಸಾಧಾರಣವಾಗಿ ಎಲ್ಲರೂ ಅನುಭವಿಸುವ ಸಂಕಷ್ಟ. ತಿಳಿದೋ ತಿಳಿಯದೆಯೋ ಯಾವುದಾದರೂ ಸಾಮಾಜಿಕ ಜಾಲತಾಣದಲ್ಲಿ "ನೋಟಿಫಿಕೇಷನ್"ಗಳನ್ನು ಸಕ್ರಿಯಗೊಳಿಸಿರುತ್ತೇವೆ. ಫೇಸ್‌ಬುಕ್‌ನಲ್ಲಂತೂ ಇದು ಸರ್ವೇ ಸಾಮಾನ್ಯ. ಅಲ್ಲಿ ಯಾವುದಾದರೂ ಒಂದು ಗುಂಪಿಗೆ ನೀವು ಸೇರಿಕೊಂಡರೂ ಮುಗೀತು, ಮಿನ್ನಂಚೆಗಳ ದಂಡೇ ಬಂದು ನಿಮ್ಮನ್ನು ಗುಂಪಲ್ಲಿ ಗೋವಿಂದ ಮಾಡಿ ಬಿಡಬಹುದು. ಅಲ್ಲಿ ಪ್ರತಿಯೊಂದು ಹೊಸ ಗೋಡೆ ಬರಹ ಬಂದಾಗ ಅಥವಾ ಪ್ರತಿಕ್ರಿಯೆ ಬಂದಾಗ ಅವು ನಮ್ಮ ಮಿನ್ನಂಚೆಗೆ ಬಂದು ಬೀಳತೊಡಗುತ್ತವೆ. ಹೀಗಾದಾಗ ನಿಜವಾಗಿಯೂ ನಮಗೆ ಬೇಕಾದ ಅತ್ಯಗತ್ಯ ಮಿನ್ನಂಚೆಯನ್ನೂ ಸಹ ಹುಡುಕಬೇಕಾದ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಇದಕ್ಕೆ ಪರಿಹಾರವೇನು ? ಇದಕ್ಕೆ ಪರಿಹಾರ ಇಲ್ಲದಿಲ್ಲ. ಮೊದಲನೇ ಪರಿಹಾರ ಆಯಾ ಸಾಮಾಜಿಕ ತಾಣಗಳಲ್ಲೇ ಕಂಡೂ ಕಾಣದಂತೆ ಸೂಚನಾ ಮಿನ್ನಂಚೆಗಳನ್ನು ತಡೆಯುವ ಅವಕಾಶವನ್ನು ನೀಡಿರುತ್ತಾರೆ. ಉದಾ : ಫೇಸ್‌ಬುಕ್ಕಿನ ಗುಂಪುಗಳ ಪುಟದಲ್ಲಿ ಬಲಭಾಗದ ಮೇಲ್ಗಡೆ "Notification" ಎಂಬ ಒಂದು ಗುರುತು ಇದೆ. ಅದರಲ್ಲಿ Notification ಗಳನ್ನು OFF ಮಾಡಲು ಸಹ ಅವಕಾಶವಿದೆ. ಹಾಗೆ ಮಾಡಿದರೆ ಅಲ್ಲಿಂದ ಬರುವ ಸಾವಿರಾರು ಮಿನ್ನಂಚೆಗಳು ಬರುವುದಿಲ್ಲ. ಆದರೂ ಫೇಸ್‌ಬುಕ್‌ನ ಇತರೆ ವಿಷಯಗಳು ನಮ್ಮ ಮಿನ್ನಂಚೆಗೆ ಬಂದೇ ಬರುತ್ತವೆ. ಅವು ನಿಮಗೆ

ತಾಳ ತಪ್ಪಿದ ಮೋಹನ ಭಾಗವತಿಗೆ !

"ಭಾರತಕ್ಕಿಂತಲೂ ಇಂಡಿಯಾದಲ್ಲೇ ಅತ್ಯಾಚಾರಗಳು ಹೆಚ್ಚು" ಎನ್ನುವ ಮೂಲಕ ನಿರಾಧಾರ ಸುಳ್ಳೊಂದನ್ನು ತೇಲಿ ಬಿಟ್ಟು ಪರಿಹಾಸ್ಯಕ್ಕೀಡಾಗಿದ್ದಾರೆ RSS ಮುಖಂಡ ಮೋಹನ್ ಭಾಗವತ್. ಜನರಿಗೆ ಸುಳ್ಳನ್ನು ಸತ್ಯವೆಂದು ನಂಬಿಸುವ ಕಲೆ ಇವರಿಗೆಲ್ಲಾ ಚೆನ್ನಾಗಿ ಕರಗತವಾಗಿದೆ. ಆದರೂ ಈ ಬಾರಿ ಯಾಕೋ ಎಡವಿದ್ದಾರೆ. ಕಾರಣ ಜನರು ಮೊದಲಿನಷ್ಟು ದಡ್ಡರಾಗಿ ಉಳಿದಿಲ್ಲ ಅನ್ನುವುದು ಬಹುಶಃ ಇವರಿಗೆ ಅರ್ಥವಾಗಿಲ್ಲದಿರಬಹುದು.  ಭಾರತ ಮತ್ತು ಇಂಡಿಯಾ ಎಂದು ದೇಶವನ್ನು ಎರಡು ಭಾಗ ಮಾಡುವುದೇ ಒಂದು ಅಪದ್ಧ. ಇವರ ಪ್ರಕಾರ ಅವೆರಡಕ್ಕೂ ಅದೇನು ವ್ಯತ್ಯಾಸವಿದೆಯೋ ಗೊತ್ತಿಲ್ಲ. ಬಹುಶಃ ಆಧುನಿಕತೆಯ ಭಾರತ "ಇಂಡಿಯ"ವಾಗಿಯೂ, ಇನ್ನೂ ಹಿಂದುಳಿದಿರುವ (ಗ್ರಾಮೀಣ) ಇಂಡಿಯವು ಭಾರತವಾಗಿಯೂ ಇವರಿಗೆ ಕಂಡಿರಬಹುದು. ಹೇಗೆ ನೋಡಿದರೂ ಅಪ್ಪ ನೆಟ್ಟ ಆಲದ ಮರಕ್ಕೇ ನೇಣು ಹಾಕಿಕೊಂಡು ಜನ ಸಾಯಲಿ ಎಂಬುದಷ್ಟೇ ಇದರ ತಾತ್ಪರ್ಯವಾದೀತು. ಏಕೆಂದರೆ ಜನರುಅಭಿವೃದ್ದಿಗೆ ಆಧುನಿಕತೆ ಬೇಕೇ ಬೇಕು. ಅತ್ಯಂತ ಮಿತಿ ಮೀರಿರುವ ಭಾರತದ ಜನಸಂಖ್ಯೆಯನ್ನು ಗಣನೆಗೆ ತೆಗೆದುಕೊಂಡರೆ ಆಧುನಿಕತೆ ಇಲ್ಲದ ಭಾರತ ಇವರು ಹೇಳುವ ಭಾರತವಾಗಿಯೂ ಉಳಿಯದೇ ಭಿಕ್ಷುಕರ ನಾಡಾದೀತು. ಅಥವಾ ಮತ್ತೊಮ್ಮೆ ಪರಕೀಯರ ಸೊತ್ತಾಗಬಹುದು (ಈಗ ರಾಜಕಾರಣಿಗಳ ಸೊತ್ತಾಗಿರುವುದು ವಿಪರ್ಯಾಸ).  ಗ್ರಾಮೀಣತನವೇ ಇವರು ಹೇಳುವ ಭಾರತ ಎಂದಾದರೆ ಭಾಗವತರು ಇಡೀ ಇಂಡಿಯಾದ ಜನರ ಕಿವಿ ಮೇಲೆ ದೊಡ್ಡ ದಾಸವಾಳದ ಹೂವನ್ನೇ

ಓವೈಸಿ ಎಂಬಂತಹ ಅತೃಪ್ತ ಆತ್ಮಗಳ ಬಗ್ಗೆ...

"ಹದಿನೈದು ನಿಮಿಷ ಪೊಲೀಸರು ಸುಮ್ಮನಾಗಲಿ, ನಮ್ಮ ಹದಿನೈದು ಕೋಟಿ ಮುಸ್ಲಿಮರು ಹೇಗೆ ನೂರು ಕೋಟಿ ಹಿಂದುಗಳನ್ನು ಹೊಸಕಿ ಹಾಕುತ್ತಾರೆ ಎಂದು ನೋಡುತ್ತೀರಿ" ಎಂದು ಪರಮ ಅಪದ್ಧಕಾರಿಯಾಗಿ ಹಾಗೂ ಅಷ್ಟೇ ಆತಂಕಕಾರಿಯಾಗಿ ಹೇಳಿದವನು ಯಾರೋ ಭಯೋತ್ಪಾದಕರ ನಾಯಕನೋ ಅತವಾ ತಲೆ ಕೆಟ್ಟ ಮುಲ್ಲಾನೋ ಅಲ್ಲ. ಈತನೊಬ್ಬ ಜನ ನಾಯಕ ಹಾಗೂ ಈ ದೇಶದ ಸಂವಿಧಾನದ ಮೂಲಕ ಆರಿಸಿ ಬಂದಂತಹ ಶಾಸಕ ಕೂಡಾ. ಇಂತಹವನ ಬಾಯಿಂದ ಇಂತಹ ಆಣಿಮುತ್ತುಗಳು ಉದುರಿದ್ದು ಕಂಡು ಒಂದಿಷ್ಟು ಅಪ್ರಬುದ್ಧ ಮುಸ್ಲಿಂ ಜೀವಗಳು ಕೈ ತಟ್ಟಿ ಖುಷಿ ಪಟ್ಟಿರಲಿಕ್ಕೂ ಸಾಕು, ಹಾಗೆಯೇ ಹಿಂದುಗಳೋಳಗೆ ಸಾವಿರ ತೂತುಗಳಿದ್ದರೂ ಹಿಂದುಸ್ಥಾನ ಕಟ್ಟುತ್ತೇವೆಂದು ಬೊಗಳೆ ಬಿಡುತ್ತಾ ಕೆಳವರ್ಗದವರನ್ನು ಎಂಜಲೆಲೆ ಮೇಲೆ ಉರುಳಿಸಿ ಕುಷಿ ಪಡುವ ಹಲವು ಹಿಂದೂ ಮಹಾನುಭಾವರು "ಹೋ..." ಎಂದು ಹೋರಾಟಕ್ಕೆ ಅಣಿಯಾಗಿರಬಹುದು. ಓವೈಸಿಯಂತಹವರನ್ನು ಕೇವಲ ಧರ್ಮಾಂಧರು ಅನ್ನಲು ಸಾಧ್ಯವಿಲ್ಲ. ಎಕೆಂದರೆ ಎಷ್ಟೇ ಧರ್ಮಾಂಧನಾಗಿದ್ದರೂ ಸಹ ಕನಿಷ್ಟ ಜ್ಞಾನವಿರುವ ಎಂತಹವನಿಗಾದರೂ ತಿಳಿದಿರುವ ವಿಷಯ ಸಾವಿರಾರು ವರ್ಷಗಳಿಂದ ಸಾಧ್ಯವಾಗದಿರುವ ಹಿಂದುಗಳ ನಿರ್ನಾಮ ಹದಿನೈದು ನಿಮಿಷಗಳಲ್ಲಿ ಸಾಧ್ಯವಿಲ್ಲ ಎಂಬುದು. ವಾಸ್ತವವಾಗಿ ಹದಿನೈದು ನಿಮಿಷವಲ್ಲ, ಹದಿನೈದು ವರ್ಷ ಪೊಲೀಸರಿಲ್ಲದಿದ್ದರೂ ಸಹ ಓವೈಸಿಯಂತಹ ಮತಿಗೇಡಿಗಳ ಬಯಕೆ ನೆರವೇರದು. ಇಂತಹವರಿಂದ ಹೆಚ್ಚೆಂದರೆ ದೊಡ್ಡದೊಂದು ರಕ್ತಪಾತವನ್ನು ನಡೆಸಲು ಸಾಧ್ಯವಾಗಬಹುದ