ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ಜೂನ್, 2014 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಬಡ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಸಿದ್ದರಾಮಯ್ಯ ಮಾಡಿದ ಅನ್ಯಾಯ !

​ ಸಿದ್ದರಾಮಯ್ಯ ಸರ್ಕಾರ ಮತ್ತೊಂದು ಬಡವರ ವಿರೋಧಿ ನಿರ್ಣಯ ಜಾರಿ ಮಾಡಿದೆ. ಅದೇನೆಂದರೆ ಶೇ. ೨೫% ರಷ್ಟು ಅಲ್ಪ ಸಂಖ್ಯಾತ ಮಕ್ಕಳಿದ್ದರೂ ಸಾಕು, ಆ ಶಾಲೆ/ಕಾಲೇಜಗೆ 'ಅಲ್ಪ ಸಂಖ್ಯಾತರ ಶಿಕ್ಷಣ ಸಂಸ್ಥೆ' ಎಂದು ಮಾನ್ಯತೆ ನೀಡುವುದು. (ಈ ಹಿಂದೆ ಈ ಮಾನ್ಯತೆ ಪಡೆಯಲು ಕನಿಷ್ಟ ಶೇ. ೭೫% ರಷ್ಟು ಅಲ್ಪ ಸಂಖ್ಯಾತ ಮಕ್ಕಳಿರಬೇಕಿತ್ತು). ಈ ನಿಯಮ ಮೇಲ್ನೋಟಕ್ಕೆ ಅಲ್ಪ ಸಂಖ್ಯಾತರ ಪರ ಅನ್ನಿಸಿದರೂ ದೊಡ್ಡ ನಷ್ಟ ಅಲ್ಪ ಸಂಖ್ಯಾತ ಬಡವರಿಗೇ ಆಗುತ್ತದೆ. ಉದಾ : ಖಾಸಗಿ ಶಿಕ್ಷಣ ಸಂಸ್ಥೆಗಳೆಲ್ಲಾ ದುಡ್ಡಿಗಾಗಿಯೇ ನಡೆಯುತ್ತಿರುವಂತಹವು ಎಂದು ಎಲ್ಲರಿಗೂ ತಿಳಿದಿರುವ ವಿಷಯವೇ ಆಗಿದೆ. ಒಂದು ಶಾಲೆಯ ವಿದ್ಯಾರ್ಥಿಗಳ ಸಾಮರ್ಥ್ಯ ೧೦೦ ಎಂದು ಇಟ್ಟುಕೊಳ್ಳೋಣ. ಈ ಶೈಕ್ಷಣಿಕ ವರ್ಷದಲ್ಲಿ ಆ ಶಾಲೆಗೆ ಕನಿಷ್ಟ ೨೫ ಅಲ್ಪ ಸಂಖ್ಯಾತ ವಿದ್ಯಾರ್ಥಿಗಳು ಸೇರಿದರೂ ಸಾಕು. ಆ ಸಂಸ್ಥೆಯು 'ತಾನು ಅಲ್ಪ ಸಂಖ್ಯಾತ ಶಿಕ್ಷಣ ಸಂಸ್ಥೆ' ಎಂದು ಪ್ರಮಾಣ ಪತ್ರ ಪಡೆಯಬಹುದು. ಅವರು ಆ ಪ್ರಮಾಣ ಪತ್ರ ಪಡೆಯುವುದರಿಂದ ಬಡವರಿಗಾಗುವ ನಷ್ಟ ಏನು ? ಅದು ವಿಷಯ. ಒಂದು ಸಂಸ್ಥೆ ಈ ಪ್ರಮಾಣ ಪತ್ರ ಪಡೆದ ನಂತರ ಅದು 'ಸಮಾನ ಶಿಕ್ಷಣ ಹಕ್ಕು' ಆರ್‌.ಟಿ.ಇ. ನಿಂದ ಹೊರಗುಳಿಯುತ್ತದೆ. ಅಂದರೆ ಮೇಲ್ಕಂಡ ಶಾಲೆಗೆ ಕನಿಷ್ಟ ೨೫ ಧನಿಕರ ಮಕ್ಕಳು ಸಿಕ್ಕರೆ ಸಾಕು, (ಅದೇನೂ ದೊಡ್ಡ ವಿಷಯವಲ್ಲ) ನಂತರ ಬಡ ಮಕ್ಕಳನ್ನು (ಅವರು ಅಲ್ಪಸಂಖ್ಯಾತರಿದ್ದರೂ) ಪ್ರವೇಶ ನಿರಾಕರಿಸಬಹುದು! ಏಕೆಂದರೆ

ಸಾಲದ ಮಾಹಿತಿ ನೀಡಲಿ !

​ಹೊಸ ಸರ್ಕಾರಗಳು ಬಂದಾಗೆಲ್ಲಾ ಹೇಳುವ ಒಂದೇ ಮಾತು... "ಹಳೆ ಸರ್ಕಾರ ಮಾಡಿ ಹೋದ ಸಾಲದ ಹೊರೆ ತುಂಬಾ ಇದೆ. ಹಾಗಾಗಿ ಬೆಲೆ ಏರಿಕೆ ಅನಿವಾರ್ಯ!"  ಇನ್ನೈದು ವರ್ಷದ ನಂತರ ಮತ್ತೊಂದು ಸರ್ಕಾರ ಬಂದರೆ ಅವರು ಹೇಳುವುದೂ ಇದನ್ನೇ.  ಅದಕ್ಕಾಗಿ ಈ ಸಲ ಕೇಂದ್ರ ಸರ್ಕಾರ ಒಂದು ಕೆಲಸ ಮಾಡಲಿ. ಭಾರತದ ಸಾಲ ಎಷ್ಟಿದೆ ? ಯಾವ ಯಾವ ರಾಜ್ಯಗಳ ತಲೆ ಮೇಲೆ ಎಷ್ಟಿದೆ ? ಅದು ಯಾವ ಯಾವ ದೇಶದ್ದು ? ಯಾವ ಇಲಾಖೆಗೆ ಸಂಬಂಧಿಸಿದ್ದು ಎಂಬುದನ್ನೆಲ್ಲಾ ಜನರಿಗೆ ತಿಳಿಸಲಿ. ಹಾಗೆಯೇ ಆರು ತಿಂಗಳಿಗೊಮ್ಮೆ ಅಥವಾ ವರ್ಷಕ್ಕೊಮ್ಮೆ ಅದು ಎಷ್ಟು ತೀರಿತು, ಅಥವಾ ಎಷ್ಟು ಹೆಚ್ಚಾಯ್ತು ಎಂಬುದನ್ನೂ ತಿಳಿಸಲಿ. ಆಗ ಮಾತ್ರ ಇವರ ಅಭಿವೃದ್ದಿಯ ನಿಜವಾದ ತಿರುಳು ತಿಳಿಯಲು ಸಾಧ್ಯ. ಸಾಲ ತಂದು ರೋಡು ಮಾಡಿ, ಅಭಿವೃದ್ದಿ ಮಾಡಿದೆವು ಅಂತ ಬೊಂಗು ಬಿಡೋದು ಬೇಡ. ಆಮೇಲೆ ದೇಶದ ಆದಾಯವೆಲ್ಲಾ ಬಡ್ಡಿ ಕಟ್ಟೋಕೇ ಸಾಕಾಗಲ್ಲ !