ಹೊಸ ಸರ್ಕಾರಗಳು ಬಂದಾಗೆಲ್ಲಾ ಹೇಳುವ ಒಂದೇ ಮಾತು... "ಹಳೆ ಸರ್ಕಾರ ಮಾಡಿ ಹೋದ ಸಾಲದ ಹೊರೆ ತುಂಬಾ ಇದೆ. ಹಾಗಾಗಿ ಬೆಲೆ ಏರಿಕೆ ಅನಿವಾರ್ಯ!"
ಇನ್ನೈದು ವರ್ಷದ ನಂತರ ಮತ್ತೊಂದು ಸರ್ಕಾರ ಬಂದರೆ ಅವರು ಹೇಳುವುದೂ ಇದನ್ನೇ.
ಅದಕ್ಕಾಗಿ ಈ ಸಲ ಕೇಂದ್ರ ಸರ್ಕಾರ ಒಂದು ಕೆಲಸ ಮಾಡಲಿ. ಭಾರತದ ಸಾಲ ಎಷ್ಟಿದೆ ? ಯಾವ ಯಾವ ರಾಜ್ಯಗಳ ತಲೆ ಮೇಲೆ ಎಷ್ಟಿದೆ ? ಅದು ಯಾವ ಯಾವ ದೇಶದ್ದು ? ಯಾವ ಇಲಾಖೆಗೆ ಸಂಬಂಧಿಸಿದ್ದು ಎಂಬುದನ್ನೆಲ್ಲಾ ಜನರಿಗೆ ತಿಳಿಸಲಿ. ಹಾಗೆಯೇ ಆರು ತಿಂಗಳಿಗೊಮ್ಮೆ ಅಥವಾ ವರ್ಷಕ್ಕೊಮ್ಮೆ ಅದು ಎಷ್ಟು ತೀರಿತು, ಅಥವಾ ಎಷ್ಟು ಹೆಚ್ಚಾಯ್ತು ಎಂಬುದನ್ನೂ ತಿಳಿಸಲಿ. ಆಗ ಮಾತ್ರ ಇವರ ಅಭಿವೃದ್ದಿಯ ನಿಜವಾದ ತಿರುಳು ತಿಳಿಯಲು ಸಾಧ್ಯ. ಸಾಲ ತಂದು ರೋಡು ಮಾಡಿ, ಅಭಿವೃದ್ದಿ ಮಾಡಿದೆವು ಅಂತ ಬೊಂಗು ಬಿಡೋದು ಬೇಡ. ಆಮೇಲೆ ದೇಶದ ಆದಾಯವೆಲ್ಲಾ ಬಡ್ಡಿ ಕಟ್ಟೋಕೇ ಸಾಕಾಗಲ್ಲ !

ಕಾಮೆಂಟ್‌ಗಳು