ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ಡಿಸೆಂಬರ್, 2012 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಸಹೋದರಿ ನಿರ್ಭಯ ದಾಮಿನಿಗೆ ಶ್ರದ್ಧಾಂಜಲಿ

ಕೊನೆಗೂ ಆಹುಡುಗಿ ಬದುಕಲೇ ಇಲ್ಲ, ದೆಹಲಿಯಲ್ಲಿ ಅತ್ಯಾಚಾರಕ್ಕೊಳಗಾದ ನಿರ್ಭಯ ದಾಮಿನಿ ಕೊನೆಗೂ ಸಾವನ್ನಪ್ಪಿದ್ದಾಳೆ. ಆದರೆ ಆಕೆಯನ್ನು ಬರ್ಭರವಾಗಿ ಅತ್ಯಾಚಾರವೆಸಗಿ ವಿಕೃತ ಆನಂದ ಪಟ್ಟ ಕದೀಮರು ಜೈಲಲ್ಲಿ ಆರಾಮಾಗಿದ್ದಾರೆ. ಇನ್ನು ನ್ಯಾಯಾಲಯದ ವಿಚಾರಣೆ ಅದೆಷ್ಟು ದಿನ ಎಳೆದಾಡುತ್ತೋ ? ಎಷ್ಟು ಜನರಿಗೆ ಘನ ನ್ಯಾಯಾಲಯ ಜಾಮೀನು ಕೊಟ್ಟು ಕಳಿಸುತ್ತೋ ? ಶಿಕ್ಷೆಯಾದರೂ ಅದೆಷ್ಟು ವರ್ಷ ಜೈಲಲ್ಲಿದ್ದಾರು ? ಈಗ ಭಾರತದ ಜೈಲಲ್ಲಿರುವುದು ಶಿಕ್ಷೆ ಅಂತ ಯಾರು ಹೇಳುತ್ತಾರೆ ? ಹೆಚ್ಚೆಂದರೆ ಜೀವಾವಧಿ ಶಿಕ್ಷೆಯಾಗಬಹುದು. ಎಂಟತ್ತು ವರ್ಷ ಜೈಲಲ್ಲಿದ್ದು ಹೊರ ಬಂದರೆ ಮುಗಿಯಿತು. ಮತ್ತೆ ಆರಾಮಾಗಿ ಜೀವನ ಕಳೆಯಬಹುದು. ಸತ್ತವಳು ಹೋದಳು ಅಷ್ಟೇ ಎಂದು ನಾವೂ ಸುಮ್ಮನಾಗುತ್ತೇವೆ. ಇದು ಮೊದಲಲ್ಲ, ಎಲ್ಲಾ ಕೆಟ್ಟ ಘಟನೆಗಳಂತೆಯೇ ಇದು ಕೊನೆಯಾಗುವುದೂ ಇಲ್ಲ. ಮತ್ತೆ ಮತ್ತೆ ಅತ್ಯಾಚಾರಗಳು, ಕೊಲೆಗಳು ನಡೆಯುತ್ತಲೇ ಇರುತ್ತವೆ. ನಾವು ಟಿವಿಯಲ್ಲಿ, ಪತ್ರಿಕೆಯಲ್ಲಿ ಸುದ್ದಿ ನೋಡಿ ಸುಮ್ಮನಗುತ್ತೇವೆ. ಬಿಡು, ನಮ್ಮೆನೆ ಹುಡುಗಿ ಅಲ್ಲವಲ್ಲ ಅಂದುಕೊಳ್ಳುವವರೆ ಹೆಚ್ಚು. ಆದರೆ ಇದೇ ಘಟನೆ ಸೌದಿ ಅರೇಬಿಯಾದಲ್ಲಿ ನಡೆದಿದ್ದರೆ ? ಅಪರಾಧಿಗಳನ್ನು ಇಷ್ಟರಲ್ಲೇ ಬೀದಿಯಲ್ಲಿ ನಿಲ್ಲಿಸಿ ಕಲ್ಲು ಹೊಡೆದು ಸಾಯಿಸಿರುತ್ತಿದ್ದರು... ಆದರೆ ಇದು ಭಾರತ... ನಾವು ಎಲ್ಲವನ್ನೂ ಸಹಿಸಿಕೊಳ್ಳುವಂತಹವರು. ನಮ್ಮಲ್ಲಿ ಶಿಕ್ಷೆ ಆಗುವುದಾದರೂ ಹೇಗೆ ? ನಮ್ಮ ರಾಜಕಾರಣಿಗಳೇ ಹಲವರು ಅತ್ಯಾಚಾರವೆಸಗಿ ಅ

ಕರ್ನಾಟಕವೇನು ರಾಮರಾಜ್ಯವಾಗಿದೆಯೇ ಪ್ರತಾಪ್‌ಸಿಂಹ ?

ಪತ್ರಿಕೋದ್ಯಮ ಒಂದು ನ್ಯಾಯಾಲಯದಂತೆ ವರ್ತಿಸಬೇಕು. ಪತ್ರಕರ್ತರಾದವರು ನ್ಯಾಯಾಧೀಶರಾಗಿ ವರ್ತಿಸಬೇಕು. ಆದರೆ ಕನ್ನಡದ ಖ್ಯಾತ ಪತ್ರಕರ್ತರೆನ್ನಿಸಿಕೊಂಡ ಕೆಲವರು ಮಾಡುತ್ತಿರುವುದೇ ಬೇರೆ. ಹೀಗಾಗಿ ಯಾರನ್ನೂ ನಂಬುವಂತಿಲ್ಲ. ಕನ್ನಡಪ್ರಭದ ಅಂಕಣಕಾರ ಪ್ರತಾಪ್‌ಸಿಂಹ ಕೂಡಾ ಇದೇ ಸಾಲಿಗೆ ಸೇರ್ಪಡೆಯಾಗಿರುವುದು ದುರಂತ. ಇವರು ಬಾಯಿ ಬಿಟ್ಟರೆ ಹಿಂದು-ಹಿಂದುತ್ವ ಎಂದು ಬಡಬಡಿಸುತ್ತಾರೆ. ಆದರೆ ಹಿಂದು ಮೇಲ್ವರ್ಗದವರ ಉಡಾಳತನದ ಬಗ್ಗೆ ಎಂದೂ ಅಂಕಣ ಬರೆಯುವುದಿಲ್ಲ. ಇಂದಿನ ತಮ್ಮ "ಬೆತ್ತಲೆ ಪ್ರಪಂಚ"ದಲ್ಲಿ ದೆಹಲಿಯಲ್ಲಿ ನಡೆದ ಅತ್ಯಾಚಾರದ ವಿಷಯ ಎತ್ತಿಕೊಂಡು ಕೇಂದ್ರದ ಕಾಂಗ್ರೆಸ್ ಸರ್ಕಾರವನ್ನು ಟೀಕಿಸಿದ್ದಾರೆ. ಕೇಂದ್ರವನ್ನು ಟೀಕಿಸಿದ್ದರಲ್ಲಿ ಯಾವ ತಪ್ಪೂ ಇಲ್ಲ, ಆದರೆ ಅದರ ಹಿಂದಿರುವ ಉದ್ದೇಶ, ಒಂದು ಕಣ್ಣಿಗೆ ಬೆಣ್ಣೆ-ಒಂದು ಕಣ್ಣಿಗೆ ಸುಣ್ಣ ಎನ್ನುವಂತಹ ಇವರ ಮನೋಭಾವ ಖಂಡನೀಯ. ಇವರ ಲೇಖನದಲ್ಲಿ ಎಲ್ಲೂ ಆ ಅತ್ಯಾಚಾರವನ್ನು ಖಂಡಿಸುವ ಒಂದೇ ಒಂದು ಪದವಿಲ್ಲ! ಬದಲಿಗೆ ಇವರು ಖಂಡಿಸುವುದು ಕೇವಲ ಎಬಿವಿಪಿ ಹೋರಾಟಗರರನ್ನು ಕೇಂದ್ರವು ಸರಿಯಾಗಿ ನಡೆಸಿಕೊಳ್ಳದಿರುವುದನ್ನು ಮಾತ್ರ ! ಆದರೆ ಅದೇ ಹೋರಾಟಗಾರರ ಹೊಡೆತಕ್ಕೆ ಸಿಕ್ಕು ಸತ್ತ ಪೊಲೀಸ್ ಪೇದೆ ಇವರಿಗೆ ಲೆಕ್ಕಕ್ಕಿಲ್ಲ!  "ಡೆಲ್ಲಿಯಲ್ಲಿ ಇಬ್ಬರೇ ಸೇಫ್! ಸೋನಿಯ ಮತ್ತು ಶೀಲಾ" ಎನ್ನುವ ಇವರಿಗೆ ಕರ್ನಾಟಕದಲ್ಲಿ ಎಲ್ಲಾ ಹುಡುಗಿಯರೂ ಸೇಫ್ ಅನ್ನಿಸಿರಬೇಕು. ಕರ್ನಾಟಕದಲ್ಲಿ ಅತ್ಯ

ಆಸ್ತಿ ನೋಂದಣಿಗೆ ಯಾಕೆ ಅಷ್ಟೊಂದು ವೆಚ್ಚ ?

ಮೊನ್ನೆ ಗೆಳೆಯರೊಟ್ಟಿಗೆ ಮಾತಾಡುತ್ತಿರುವಾಗ ಒಬ್ಬ ಗೆಳೆಯ "ಆಸ್ತಿಯ ನೋಂದಣಿ ಮಾಡುವಾಗ ಸುಮಾರು ೧೬ % ಸರ್ಕಾರಕ್ಕೆ ಪಾವತಿ ಮಾಡಬೇಕು. ಇದು ಯಾವ ನ್ಯಾಯ ?" ಎಂದು ಕೇಳಿದ. ಎಲ್ಲರೂ ಅದಕ್ಕೆ ಹೋಗುಟ್ಟಿ ಸರ್ಕಾರದ ಮೇಲೆ ಕೆಂಟ ಕಾರಿದರು,  "ನಿನ್ನ ಆಸ್ತಿಯ ನಿಜವಾದ ಮೌಲ್ಯವನ್ನು ಸರ್ಕಾರಕ್ಕೆ ತಿಳಿಸುತ್ತೀಯ ? ಎಲ್ಲದಕ್ಕೂ ೧೬% ದಂತೆ ಪಾವತಿ ಮಾಡುತ್ತೀಯ?" ಎಂದು ನಾನು ಕೇಳಿದೆ. "ಇಲ್ಲ, ಅವರು ಹಾಗೆ ೧೬% ಪಡೆಯುವ ಕಾರಣಕ್ಕೇ ಆಸ್ತಿಯ ಮೌಲ್ಯವನ್ನು ಕಡಿಮೆ ಹೇಳಬೇಕಾಗಿದೆ. ಎಲ್ಲರೂ ಇದಕ್ಕಾಗಿಯೇ ಆಸ್ತಿ ಮೌಲ್ಯವನ್ನು ಕಡಿಮೆ ತೋರಿಸುತ್ತಾರೆ" ಎಂದು ಹೇಳಿದ ಗೆಳೆಯ. "ಒಂದು ವೇಳೆ ಸರ್ಕಾರದವರು ಕೇವಲ ೨ ಅಥವಾ ೩% ರಷ್ಟು ಮಾತ್ರ ಪಡೆಯುವಂತಿದ್ದರೆ ನೀನು ನಿನ್ನ ಆಸ್ತಿಯ ಸರಿಯಾದ ಮೌಲ್ಯವನ್ನು ತೋರಿಸುತ್ತಿದ್ದೆಯಾ ? ಒಂದು ವೇಳೆ ನೀನು ತೋರಿಸಿದರೂ ಎಲ್ಲ ಸಾರ್ವಜನಿಕರೂ ಪ್ರಾಮಾಣಿಕವಾಗಿ ತೋರಿಸುತ್ತಿದ್ದರೇ ?" ಎಂದು ಮತ್ತೆ ಕೇಳಿದೆ. ಅದಕ್ಕವನು "ಇಲ್ಲ, ನೀನು ಹೇಳಿದ್ದು ಸರಿ, ಯಾರೂ ಹಾಗೆ ಮಾಡುವುದಿಲ್ಲ" ಎಂದ. "ಅದಕ್ಕಾಗಿಯೆ ಸರ್ಕಾರದವರು ಅಷ್ಟೊಂದು ವಸೂಲಿ ಮಾಡುತ್ತಿದ್ದಾರೆ!" ಎಂದೆ. ಅವನು ಸುಮ್ಮನಾದ.

ಕನ್ನಡಪ್ರಭದವ್ರು ಹೇಳ್ತಾರೆ... ವೀಕೆಂಡ್‌ಗೆ ತಮಿಳು, ತೆಲುಗು, ಇಂಗ್ಲಿಷ್ ಸಿನೆಮಾ ನೋಡಿ !!!

ಇಂದಿನ ಕನ್ನಡಪ್ರಭದ ನಾಲ್ಕನೇ ಪುಟವನ್ನು ನೋಡಿ ಅಚ್ಚರಿಯಾಯ್ತು. ಕಾರಣ, ಒಂದು ಕಾಲದಲ್ಲಿ ಕನ್ನಡದ ಕಾಳಜಿಯಲ್ಲಿ ಮುನ್ನೆಲೆಯಲ್ಲಿ ಇದ್ದ ಕನ್ನಡಪ್ರಭ ಯಾವ ಮಟ್ಟಕ್ಕೆ ಇಳಿಯಿತು ಎನ್ನಿಸಿತು.  ನಾಲ್ಕನೇ ಪುಟದಲ್ಲಿ "ವೀಕೆಂಡ್‌ ಗೈಡ್" ಎನ್ನುವ ಆಂಗ್ಲ ತಲೆಬರಹದೊಂದಿಗೆ ಯಾವನೋ ತಲೆ ಕೆಟ್ಟ ಉಪ ಸಂಪಾದಕನೊಬ್ಬ ನೀಡಿರುವ ಮಾಹಿತಿ ಈ ಪತ್ರಿಕೆಯನ್ನು ಕ್ಷಮಿಸುವಂತಿಲ್ಲ. ಇದರಲ್ಲಿ ವೀಕೆಂಡ್ ಆಚರಿಸಲು ಕೆಲವೊಂದು ಮಾಹಿತಿ ನೀಡಿದ್ದಾರೆ. ಅವುಗಳಲ್ಲಿ "ಚಿತ್ರದರ್ಶಿನಿ" ಎಂಬ ವಿಭಾಗದಲ್ಲಿ ತೆಲುಗು, ತಮಿಳು ಹಾಗೂ ಇಂಗ್ಲಿಷ್‌ನ ಕೆಲವೊಂದು ಚಿತ್ರಗಳ ವಿವರದೊಂದಿಗೆ ಅವು ಯಾವ ಚಿತ್ರಮಂದಿರಗಳಲ್ಲಿ ಪ್ರದರ್ಶಿತವಾಗುತ್ತಿವೆ ಎಂಬ ಮಾಹಿತಿಯೂ ಇದೆ. ಆದರೆ ಹುಡುಕಿದರೆ ಕನ್ನಡದ ಯಾವುದೇ ಚಿತ್ರದ ಮಾಹಿತಿ ಇಲ್ಲ! ಸಂಗೊಳ್ಳಿ ರಾಯಣ್ಣ, ಎದೆಗಾರಿಕೆ ಮುಂತಾದ ಅನೇಕ ಉತ್ತಮ ಕನ್ನಡ ಚಿತ್ರಗಳು ನಗರದಲ್ಲಿ ಪ್ರದರ್ಶಿತವಾಗುತ್ತಿರುವಾಗ ಕನ್ನಡವನ್ನುಳಿದು ಬೇರೆ ಭಾಷೆಯ ಚಿತ್ರಗಳಿಗೆ ಕನ್ನಡಿಗರನ್ನು ಕಳಿಸುವ ಅಜ್ಞಾನ ಬಹುಶಃ ಕನ್ನಡಪ್ರಭದವರಿಗೆ ಮಾತ್ರ ಇರಬಹುದೇನೋ. ಇಂದು ಆಂಗ್ಲ ಪತ್ರಿಕೆಗಳೂ ಸಹ ಉತ್ತಮ ಕನ್ನಡ ಚಿತ್ರಗಳು ಬಂದಾಗ ಅವುಗಳ ಬಗ್ಗೆ ಉತ್ತಮವಾಗಿ ಲೇಖನ ಬರೆದು ಕನ್ನಡಕ್ಕೆ ಮನ್ನಣೆ ನೀಡುತ್ತಿರುವಾಗ ಕನ್ನಡದ್ದೇ ಹೆಸರಿನ ಈ ಪತ್ರಿಕೆ ಭಟ್ಟರ ಪಡೆಯೊಂದಿಗೆ ಕುಲಗೆಟ್ಟು ಹೋಗುತ್ತಿರುವುದಕ್ಕೆ ನಾಚಿಕೆಯಾಗುತ್ತಿದೆ.