ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ಸೆಪ್ಟೆಂಬರ್, 2012 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

”ಕೂಲಿಗಾಗಿ ಕಾಳು’ ಯೋಜನೆಗೂ ಹಾಕುವರೇ ಕಲ್ಲು ?

ಹೀಗೊಂದು ಅನುಮಾನ ಕಾಡುತ್ತಿದೆ. ಏಕೆಂದರೆ ನಿನ್ನೆ ಸುವರ್ಣಾ ನ್ಯೂಸ್‌ನಲ್ಲಿನ ಒಂದು ಚರ್ಚೆ ನಡೆಯುತ್ತಿತ್ತು. ಅದು ಕೇಂದ್ರ ಸರ್ಕಾರವು ಅಡುಗೆ ಅನಿಲ ಸಿಲಿಂಡರ್‌ಗಳನ್ನು ವರ್ಷಕ್ಕೆ ಆರಕ್ಕೆ ಸೀಮಿತಗೊಳಿಸಿರುವುದರ ಬಗ್ಗೆ ನಡೆದಿತ್ತು. ಅದರಲ್ಲಿ ಭಾಗವಹಿಸಿದ ವ್ಯಕ್ತಿಯೊಬ್ಬರು ಹೇಳಿದ್ದು ವರ್ಷಕ್ಕೆ ಹನ್ನೆರಡು ಸಿಲಿಂಡರುಗಳನ್ನು ನೀಡಲೇ ಬೇಕು. ಅದಕ್ಕೆ ಹಣ ಬೇಕಾದರೆ ನರೇಗಾ (ಕೂಲಿಗಾಗಿ ಕಾಳು ಯೋಜನೆ) ವನ್ನು ತೆಗೆದು ಹಾಕಿ ಆ ಹಣದಿಂದ ನೀಡಬೇಕು, ಕೂಲಿಗಾಗಿ ಕಾಳು ಯೋಜನೆಯಲ್ಲಿ ಕೂಲಿಗಳಿಗೆ 100 ರೂ ಹೋದರೆ 20 ರೂಪಾಯಿ ಮಧ್ಯವರ್ತಿ ಜೇಬು ಸೇರುತ್ತಿದೆ. ಅಲ್ಲದೇ ಇದರಿಂದ ಹೊಲಗಳಲ್ಲಿ ದುಡಿಯಲು ಕೂಲಿಗಳೇ ಸಿಗುತ್ತಿಲ್ಲ. ಎಂದರು.  ಅನಿಲ ಸಿಲಿಂಡರ್ ವಿಷಯಕ್ಕೆ ಬಂದರೆ ಅದನ್ನು ಉಪಯೋಗಿಸುತ್ತಿರುವುದು ಬಹುತೇಕ ಮಧ್ಯಮ ಮತ್ತು ಧನಿಕ ವರ್ಗ. ಬಡವರು, ಕಡು ಬಡವರು ಇಂದಿಗೂ ಸೌದೆ, ಸೀಮೆಣ್ಣೆಯನ್ನೇ ನಂಬಿಕೊಂಡಿದ್ದಾರೆ. ಮಧ್ಯಮ ವರ್ಗದ ಒಂದು ಸಾಧಾರಣ ಕುಟುಂಬಕ್ಕೆ ವರ್ಷಕ್ಕೆ 6 ಸಿಲಿಂಡರ್ ಅಡುಗೆ ಮಾಡಿಕೊಳ್ಳಲು ಸಾಕು. ಸ್ನಾನಕ್ಕೆ ನೀರು ಕಾಯಿಸಲೂ ಅದನ್ನೇ ಬಳಸಿದರೆ ಸಾಕಾಗುವುದಿಲ್ಲ. ಆದರೆ ಸರ್ಕಾರ ಸಬ್ಸಿಡಿ ಕೊಡುವುದು ಅಡುಗೆ ಮಾಡಿಕೊಳ್ಳಲಿಕ್ಕೇ ಹೊರತೂ ಪ್ರಜೆಗಳು ಬಿಸಿಬಿಸಿ ನೀರು ಸ್ನಾನ ಮಾಡಿ ಹಾಯಾಗಿರಲಿ ಎಂದೇನಲ್ಲ. ಪ್ರಜೆಗಳ ಎಲ್ಲಾ ಬೇಡಿಕೆಯನ್ನೂ ನೀಡಲು ಯಾವ ಸರ್ಕಾರದಿಂದಲೂ ಸಾಧ್ಯವಿಲ್ಲ. ಮಿತ ಬಳಕೆಯನ್ನು ಸಾರ್ವಜನಿಕರೂ ಸ್ವಲ್ಪ ರೂಢಿಸಿಕೊಂಡರೆ

ಪ್ಲಾಸ್ಟಿಕ್ ಕೊಟ್ಟೆಗಳನ್ನು ಸಂಗ್ರಹಿಸಿ ಮರುಬಳಕೆ ಮಾಡಿರಿ

ಪ್ಲಾಸ್ಟಿಕ್ ಕೊಟ್ಟೆಗಳನ್ನು ಸಂಗ್ರಹಿಸಿ ಮರುಬಳಕೆ ಮಾಡಿರಿ ಬೆಂಗಳೂರಿನಲ್ಲಿ ಕಸದ ಸಮಸ್ಯೆ ವಿಪರೀತ. ಹೀಗೇ ಕಸದ ವಿಲೇವಾರಿಯನ್ನು ಸರಿಯಾಗಿ ಮಾಡದೇ ಹೋದರೆ ಬೆಂಗಳೂರು ಸಹ ಚೆನ್ನೈ, ಮುಂಬೈ ರೀತಿ ಗಬ್ಬು ನಾರಲು ಶುರುವಾಗುತ್ತದೆ. ಕಸದಿಂದ ರಸ ಮಾಡಲು ಮಹಾನಗರ ಪಾಲಿಕೆಯವರಿಗೆ ಸಾಧ್ಯವಿಲ್ಲವಾದರೂ ಕಸದಿಂದ ವಿದ್ಯುತ್ ಆದರು ಮಾಡಬಹುದಿತ್ತು. ಅದಕ್ಕೆಲ್ಲಾ ಇಚ್ಚಾಶಕ್ತಿ ಬೇಕು. ಅದನ್ನು ನಮ್ಮ ಅಧಿಕಾರಿಗಳಿಂದ, ಕಾರ್ಪೋರೇಟರುಗಳಿಂದ ಅಪೇಕ್ಷಿಸಿದರೆ ತಪ್ಪಾಗುವುದೇನೋ. ಅಥವಾ ಅದಕ್ಕೂ ಕಸದ ಮಾಫಿಯಾ ಅಡ್ಡಗಾಲು ಹಾಕಿದೆಯೋ ಎಂಬ ಅನುಮಾನ ಬೇರೆ! ಮಹಾನಗರ ಪಾಲಿಕೆಯ ಮಂಗಾಟ ಅತ್ಲಾಗಿರಲಿ, ಸಾರ್ವಜನಿಕರಾದ ನಾವು ಕಸದ ಸಮಸ್ಯೆಯನ್ನು ಎಷ್ಟು ಗಂಭೀರವಾಗಿ ಪರಿಗಣಿಸಿದ್ದೇವೆ ಎಂಬುದೆ ಈಗಿನ ಪ್ರಶ್ನೆ. ನವ್ಯಾರೂ ಕಸದ ಬಗ್ಗೆ ಗಮನ ಹರಿಸಿಯೇ ಇಲ್ಲ. ಹಾಗೇನಾದರೂ ನಮ್ಮ ಗಮನ ಕಸದ ಬಗ್ಗೆ ಇದ್ದರೆ, ಪಾಲಿಕೆಯ ಕಸದ ವಾಹನ ಎಷ್ಟೊತ್ತಿಗೆ ಬರುತ್ತೆ.. ಎನ್ನುವುದರ ಬಗ್ಗೆ ಮಾತ್ರ. ಕಸದ ವಾಹನ ಬಂದು ಅದನ್ನು ಸಾಗ ಹಾಕಿದರೆ ಮುಗಿಯಿತು. ನಂತರ ನಮಗೇನೂ ಚಿಂತೆ ಇಲ್ಲ. ಆ ಕಸವನ್ನು ಎಲ್ಲಿ ತೆಗೆದುಕೊಂಡು ಹೋಗಿ ಹಾಕುತ್ತಾರೆ ಎಂಬುದರ ಅರಿವೂ ನಮಗಿಲ್ಲ. ಕಸದ ನಿಯಂತ್ರಣದ ಮಾತು ದೂರವೇ ಉಳಿಯಿತು. ನಾನು ಚೆನ್ನೈಯನ್ನು ಚೆನ್ನಾಗಿ ನೋಡಿದ್ದೇನೆ. ಅಲ್ಲಿಗೆ ಹೋಲಿಸಿದರೆ ಕಸ ವಿಲೇವಾರಿಯಲ್ಲಿ ಬೆಂಗಳೂರು ಪಾಲಿಕೆ ಹತ್ತು ಪಟ್ಟು ಮೇಲು. ಆದರೂ ನಮ್ಮಲ್ಲಿ ಅನೇಕ ಮನೆಯವರು ಆಗಾಗ ಕಸವನ್ನು ಒಂದ