ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ಅಕ್ಟೋಬರ್, 2014 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಕಪ್ಪುಹಣದ ಚೆಂಡು ಸುಪ್ರೀಂ ಅಂಗಳದಲ್ಲಿ

​ 'ವಿದೇಶಿ ಬ್ಯಾಂಕ್‌ಗಳಲ್ಲಿ ಕಪ್ಪು ಹಣ ಇರಿಸಿದವರ ಎಲ್ಲಾ ಹೆಸರುಗಳನ್ನು ತನಗೊಪ್ಪಿಸುವಂತೆಯೂ, ತಾನೇ ತನಿಖೆ ನಡೆಸಿ ಕಪ್ಪು ಹಣವಿದ್ದರೆ ವಾಪಸ್ಸು ತರುವುದಾಗಿಯೂ, ಕೇಂದ್ರ ಸರ್ಕಾರದ ಮೇಲೆ ಯಾವುದೇ ನಂಬಿಕೆ ಉಳಿದಿಲ್ಲ ಎಂಬುದಾಗಿಯೂ' ನಿನ್ನೆ ಸುಪ್ರೀಂ ಕೋರ್ಟ್‌ ಆದೇಶಿಸುವುದರೊಂದಿಗೆ ಕಪ್ಪು ಹಣವನ್ನು ತಂದು ಮತ ಹಾಕಿದವರಿಗೆ ನ್ಯಾಯ ಒದಗಿಸಿ, ವಿರೋಧಿಸಿದವರ ಬಾಯನ್ನೂ ಮುಚ್ಚಿಸಬಹುದಾಗಿದ್ದ ಸುವರ್ಣಾವಕಾಶವನ್ನು ಬಿಜೆಪಿ (ಮುಖ್ಯವಾಗಿ ಮೋದಿ) ಕಳೆದುಕೊಂಡರು. ಲಪಡಾ ಬಾಬಾನೊಬ್ಬ ನಗೆಪಾಟಲಿಗೂ ಈಡಾದುದು ಈಗ ಇತಿಹಾಸ. ಯುಪಿಎ ಸಹ ಕಪ್ಪು ಹಣ ತರುವ ಪ್ರಯತ್ನವನ್ನು (ಪ್ರಾಮಾಣಿಕ ಅನ್ನಲಾಗದಿದ್ದರೂ) ಶುರು ಮಾಡಿತ್ತು. ಆದರೆ ಎನ್‌ಡಿಎ ಕೂಡಾ ಯುಪಿಎ ಗಿಂತ ಹೆಚ್ಚಿನದನ್ನಾಗಲೀ ಭಿನ್ನವಾಗಿಯಾಗಲೀ ಮಾಡಲಿಲ್ಲ. ಇದರಿಂದಾಗಿ ಪ್ರಜೆಗಳಂತೆಯೇ ನ್ಯಾಯಾಲಯ ಸಹ ಮುನಿಸುಗೊಂಡಿರುವುದು ಸ್ಪಷ್ಟ. ಇಂದಿನಿಂದ ಕಪ್ಪು ಹಣದ ಚೆಂಡು ನ್ಯಾಯಾಲಯದ ಅಂಗಳದಲ್ಲಿರಲಿದೆ. ಇನ್ಮುಂದೆ ಕಪ್ಪು ಹಣ ಬರುವುದಾಗಲೀ, ಬಾರದಿರುವುದಾಗಲೀ ನಡೆದರೆ ಅದಕ್ಕೆ ಕಾರಣ ನ್ಯಾಯಾಲಯವಾಗಿರುತ್ತದೆಯೇ ಹೊರತೂ ಮೋದಿ/ಬಿಜೆಪಿ ಅಲ್ಲ. ಒಂದು ವೇಳೆ ನ್ಯಾಯಾಲಯವು ತನಿಖೆ ನಡೆಸಿ ಕಪ್ಪುಹಣ ತಂದುಬಿಟ್ಟರೆ ಮೋದಿ ಭಕ್ತರು ಯಥಾ ಪ್ರಕಾರ ಮೋದಿಯ ಗುಣಗಾನ (ಸುಳ್ಳು) ಮಾಡಿ ಮುಗ್ದರನ್ನು 'ಇದು ಮೋದಿಯೇ ತಂದಿದ್ದು' ಎಂದು ನಂಬಿಸಲೂಬಹುದು. ಆದರೆ ಪ್ರಜ್ಞಾವಂತರೆಲ್ಲರಿಗೂ (ಇಷ್ಟು ದಿನ ಮೋದಿಯನ್ನು

ಅಣ್ಣನ ಸಾವನ್ನು ಬದಿಗಿಟ್ಟು ಸತ್ಯಾಗ್ರಹದಲ್ಲಿ ತೊಡಗಿದವರು....

​ ಒಬ್ಬರು ಒಂದು ಪ್ರಬಲ ಹೋರಾಟವನ್ನು ಕೆಲವೇ ಸಮಾನ ಮನಸ್ಕರ ಜೊತೆಗೂಡಿ ಶುರು ಮಾಡುತ್ತಾರೆ. ಅದು ಸರ್ಕಾರಕ್ಕೂ ಬಿಸಿ ಮುಟ್ಟಿಸುವಂತಾ ಹೋರಾಟ. ಧರಣಿ ಸತ್ಯಾಗ್ರಹ ಶುರುವಾಗುತ್ತದೆ. ನಾಲ್ಕೈದು ದಿನ ಕಳೆದರೂ ಸರ್ಕಾರದಿಂದ ಯಾವ ಪ್ರತಿಕ್ರಿಯೆಯೂ ಬರುವುದಿಲ್ಲ. ಹಾಗೆಯೇ ಒಂದು ದಿನ ಬೆಳಗ್ಗೆ ಏಳುವಾಗ ಒಂದು ಸುದ್ದಿ ಬರುತ್ತದೆ... ಅದು ಅವರ ಒಡಹುಟ್ಟಿದ ಅಣ್ಣ ನಿದನರಾಗಿರುವ ಸುದ್ದಿ!  ಸಾವಿನ ಮನೆಗೆ ಹೋಗುವುದಾದರೆ ತಮ್ಮದೇ ನೇತೃತ್ವದ ಧರಣಿ ಸತ್ಯಾಗ್ರಹಕ್ಕೆ ಗೈರಾಗಬೇಕು. ಏನು ಮಾಡುವುದೆಂದು ಯೋಚಿಸಿದ ಅವರು ಬೇಗನೆ ತಯಾರಾಗಿ ಹೊರಡುತ್ತಾರೆ... ಸತ್ಯಾಗ್ರಹದ ಸ್ಥಳಕ್ಕೆ.  ತಮ್ಮ ಪತ್ನ ಮಗನನ್ನು ತಮ್ಮ ಅಣ್ಣನ ಮನೆಗೆ ಕಳಿಸಿ ಎಂದಿನಂತೆ ಧರಣಿಯಲ್ಲಿ ಪಾಲ್ಗೊಳ್ಳುತ್ತಾರೆ. ಅಣ್ಣ ಸತ್ತ ವಿಷಯವನ್ನೂ ಸಹ ಉಳಿದವರಿಗ್ಯಾರಿಗೂ ಹೇಳದೇ ದುಃಖ ನುಂಗಿಕೊಂಡು ಸತ್ಯಾಗ್ರಹ ಮುಂದುವರಿಯುತ್ತದೆ... ಸುಮಾರು ನಕವತ್ತು ದಿನಗಳ ವರೆಗೆ! ಇವರ ನ್ಯಾಯ ನಿಷ್ಠುರ ಶಾಂತಿಯುತ ಹೋರಾಟಕ್ಕೆ ಸರ್ಕಾರ ಮಣಿಯುತ್ತದೆ. ಆಗ ತಮ್ಮೊಂದಿಗೆ ಭಾಗವಹಿಸಿದ ಹೋರಾಟಗಾರರಿಗೆ ತಮ್ಮ ಅಣ್ಣ ಸತ್ತು ಹೋಗಿರುವ ದುಃಖಕರ ವಿಷಯವನ್ನು ತಿಳಿಸುತ್ತಾರೆ! ನೆನಪಿರಲಿ, ಇದು ಯಾವುದೋ ಹಳೆಯ ಕಾಲದ ಘಟನೆ ಅಲ್ಲ. ನಮ್ಮ ನಿಮ್ಮ ನಡುವೆಯೇ ಇರುವ ನ್ಯಾಯ ನಿಷ್ಟುರ ವ್ಯಕ್ತಿಯೊಬ್ಬರ ವಿಷಯ. ಅವರೇ 'ಭೂಕಬಳಿಕೆ ವಿರೋಧಿ ಹೋರಾಟ'ವನ್ನು ಪ್ರಾರಂಭಿಸಿ, ಸರ್ಕಾರದಿಂದ ಹೊಸ ಕಾನೂನು ಮತ್ತು ಪ್ರತ್ಯೇಕ ನ್ಯಾಯಾಲಯ

ಕತೆ - ಸೂರ್ಯಾವಸಾನ

​ ೨೦೧೨ನೇ ಇಸವಿ ಡಿಸೆಂಬರ್ ೨೧ ಅಂದು ಖಗೋಳ ಶಾಸ್ತ್ರದ ವಿಜ್ಞಾನಿಗಳೆಲ್ಲಾ ದಿಗಿಲುಗೊಂಡು ಗರಬಡಿದವರಂತೆ ಕುಳಿತುಬಿಟ್ಟಿದ್ದರು. ಅದಕ್ಕೆ ಬೃಹತ್ ಕಾರಣವೇ ಇತ್ತು ಉರಿಯುತ್ತಿರುವ ಗೋಲ ಸೂರ್ಯನಲ್ಲಿ ದಿಢೀರ್ ಬದಲಾವಣೆಗಳು ಕಂಡು ಬಂದಿದ್ದವು. ಸೂರ್ಯನಲ್ಲಿ ನಡೆಯುತ್ತಿದ್ದ ರಾಸಾಯನಿಕ ಪ್ರಕ್ರಿಯೆಗಳು ಅದು ಹೇಗೋ ಉಲ್ಟಾ ಆಗಿ ಸೂರ್ಯ ತಣ್ಣಗಾಗತೊಡಗಿದ್ದ ! ಅವನ ಸಾವು ನಿಶ್ಚಯವಾಗಿ ಕೆಲವೇ ದಿನಗಳಲ್ಲಿ ಬ್ಲಾಕ್ ಹೋಲ್ ಆಗಲಿದ್ದ! ಸಾವಿರಾರು ವರ್ಷಗಳಲ್ಲಿ ನಡೆಯಬೇಕಾದ ಈ ಕ್ರಿಯೆ ಕೆಲವೇ ದಿನಗಳಲ್ಲಿ ಉಚ್ಚ ಘಟ್ಟವನ್ನು ತಲುಪಿದ್ದಕ್ಕೂ, ಇನ್ನು ಕೆಲವೇ ದಿನಗಳಲ್ಲಿ ಸೂರ್ಯ ಪೂರ್ತಿ ಇಲ್ಲವಾಗಿ ಬಿಡುವುದಕ್ಕೂ ಕಾರಣವನ್ನೇ ಕಂಡುಹಿಡಿಯಲಾಗದೆ ವಿಲವಿಲನೆ ಒದ್ದಾಡುತ್ತಿದ್ದರು ವಿಜ್ಞಾನಿಗಳು!  ಕಾರಣವನ್ನು ಕಂಡು ಹಿಡಿದರೆ ಅದನ್ನು ತಡೆಯುವುದಕ್ಕೂ ದಾರಿ ಹೊಳೆಯಬಹುದೆಂಬುದು ಅವರ ಆಶಯವಾಗಿತ್ತು. ಆ ಕಾರಣಗಳನ್ನೆಲ್ಲಾ ಸರಿಯಾಗಿ ಕಂಡುಕೊಳ್ಳದೆ ಜನರಿಗೆ ವಿಷಯವನ್ನು ಮುಂದೊಡ್ಡುವಂತೆಯೂ ಇಲ್ಲ.  ಈ ನಡುವೆ ಯಾವುದೋ ದೇಶದ ಇನ್ಯಾವುದೋ ಒಬ್ಬ ಅನಾಮಧೇಯ ವಿಜ್ಞಾನಿ ಸೂರ್ಯನು ದಿನೇ ದಿನೇ ಕುಂದುತ್ತಿದ್ದಾನೆ! ಕೆಲವೇ ದಿನಗಳಲ್ಲಿ ಸೂರ್ಯನ ಸಾವು ನಿಶ್ಚಿತ! ಹಾಗೆ ನಡೆದು ಹೋದರೆ ನಮ್ಮ ಸಾವು ನಿಶ್ಚಿತ! ಏಕೆಂದರೆ ಸೂರ್ಯನ ಗುರುತ್ವ ಬಲದಲ್ಲೇ ಈ ನಮ್ಮ ಭೂಮಿ ನಿಂತಿದೆ. ಸೂರ್ಯನೇ ಇಲ್ಲವೆಂದ ಮೇಲೆ ಭೂಮಿ ಬಿದ್ದು ಹೋಗುತ್ತದೆ. ಅಥವಾ ಸೂರ್ಯನ ಅಗಾಧ ಗುರುತ್ವ ಬಲಕ್ಕೆ ಒಳಗಾಗಿ ಸರ್

ಅತಿಥಿ ಸತ್ಕಾರ ಮತ್ತು ಬಡತನ !

​ ತೀರಾ ಬಡತನದಲ್ಲಿ ಹುಟ್ಟಿ ಬೆಳೆದವನು ನಾನು. ನಾನು ಹುಟ್ಟುವ ಮೊದಲು ನಮ್ಮ ತಂದೆ ತಾಯಿ ಎಷ್ಟೋ ಸಮಯ ಯಾರದೋ ಮನೆಯಿಂದ ತಂದ ಬಾಳೆ ಕಾಯಿಗಳನ್ನು ತಿಂದು ನೀರು ಕುಡಿದು ಹಸಿವು ನೀಗಿಸಿಕೊಂಡಿದ್ದಿದೆಯಂತೆ. ನಾನು ಹುಟ್ಟಿದ ವರ್ಷವೇ ನಮ್ಮಪ್ಪ ನಮ್ಮನೆ ಎದುರಿನ ಪಾಳು ಬಿದ್ದ ಒಂದಿಷ್ಟು ಜಾಗವನ್ನು ಕುಂಟೆ ಹೊಡೆದು ಭತ್ತ ಬೆಳೆದಿದ್ದನಂತೆ. ಹಾಗಾಗಿ ನಾನು ಹುಟ್ಟಿದ ನಂತರ ಊಟದ ಸಮಸ್ಯೆ ತಕ್ಕ ಮಟ್ಟಿಗೆ ಪರಿಹಾರವಾಯ್ತಂತೆ. ನಾನು ಚಿಕ್ಕ ಹುಡುಗನಾಗಿದ್ದಾಗ ನಮ್ಮ ಮನೆಯ ಗೋಡೆ ಮಣ್ಣು-ಇಟ್ಟಿಗೆಯದಾಗಿರಲಿಲ್ಲ, ಬದಲಿಗೆ ಅಡಿಕೆ ಹಾಳೆ ಮತ್ತು ದಬ್ಬೆಗಳಿಂದ ಮಾಡಿದ ತಟ್ಟಿಯಾಗಿತ್ತದು. ಅಡಿಕೆ ಸೋಗೆಯನ್ನೆ ಮಾಡಿಗೆ ಹೊದೆಸಲಾಗಿತ್ತು. ಎಷ್ಟೋ ಸಮಯ ನಾಯಿ, ಕೋಳಿ, ಹಾವುಗಳು ಸರಾಗವಾಗಿ ಮನೆಯೊಳಗೆ ಬಂದು ಬಿಡುತ್ತಿದ್ದವು.  ಸುಮಾರು ವರ್ಷದ ನಂತರ ಅಪ್ಪ ಮಣ್ಣಿನ ಗೊಡೆಯ ಮನೆ ಕಟ್ಟಿಸಿದ. ಅದಾದ ಸುಮರು ವರ್ಷಗಳ ನಂತರ ಮಾಡಿಗೆ ಹೆಂಚು ಬಂತು.  ಆಗೆಲ್ಲಾ ಗಂಜಿ ಊಟ ಸಾಧಾರಣವಾಗಿತ್ತು. ಹಬ್ಬಕ್ಕೆ ನುಚ್ಚಕ್ಕಿ ಹಾಗೂ ಬೆಲ್ಲದ ಪಾಯಸವೇ ಅದ್ಬುತ ಸಿಹಿ ಪದಾರ್ಥವಾಗುತ್ತಿತ್ತು. ಕೊನೆ ಕೊನೆಗೆ ಅಪ್ಪ ಬೇರೆಯವರ ಜಮೀನಿನಲ್ಲಿ ಅದ್ಯಾವುದೋ ಲೆಕ್ಕಾಚಾರದಲ್ಲಿ ಕಬ್ಬು ಬೆಳೆದು ಮನೆಗೆ ಬೆಲ್ಲ ಬರುವಂತಾಯ್ತು. ಆಲೆಮನೆ ಸಮಯದಲ್ಲಿ ಕಬ್ಬಿನ ರಸದಿಂದ ಮಣ್ಣಿ ಎಂಬ ಒಂದು ಬಗೆಯ ಮೈಸೂರ‍್ ಪಾಕ್‌ ತಯಾರಿಸುತ್ತಿದ್ದಳು ಅವ್ವ. ಗದ್ದೆಗಳನ್ನು ವಿಸ್ತರಿಸುತ್ತಾ ಹ

ಚಿಕ್ಕ-ಪುಟ್ಟ ಕಳ್ಳರು ಜೈಲಿಗೆ, ದೊಡ್ಡ ದೊಡ್ಡ ಕಳ್ಳರು ವಿಧಾನಸಭೆಗೆ ?!

​ ಭೂಕಬಳಿಕೆಯ ಭೀಕರತೆ ! ನೀವು ಭೀಕರ ಬರಗಾಲದ ಬಗ್ಗೆ, ಭೀಕರ ನೆರೆ ಹಾವಳಿ ಬಗ್ಗೆ, ಭೀಕರ ಭೂಕಂಪದ ಬಗ್ಗೆ ಕೇಳಿರಬಹುದು, ನೋಡಿರಲೂ ಬಹುದು.ಆದರೆ ಭೀಕರ ಭೂಕಬಳಿಕೆಯನ್ನು ಕೇಳಿದ್ದೀರಾ ? ನೋಡಿದ್ದೀರಾ ? ಇಂತಹುದೊಂದು ಭೀಕರ ಭೂಕಬಳಿಕೆ ನಮ್ಮ ನಿಮ್ಮ ನಡುವೆ ನಮ್ಮ ರಾಜ್ಯದಲ್ಲೇ ಯಾವ ಲಂಗು ಲಗಾಮು ಇಲ್ಲದೆ ಸಾಗಿದೆ. ಅದು ಅಂತಿಂತಹ ಭೂಕಬಳಿಕೆ ಅಲ್ಲ. ಇದರ ಮಾರುಕಟ್ಟೆ ಮೌಲ್ಯವನ್ನು ಲೆಕ್ಕ ಹಾಕಿದರೆ ಇಡೀ ದೇಶದಲ್ಲೇ ಇಷ್ಟೊಂದು ಮಟ್ಟದ ಹಗರಣ ನಡೆದಿಲ್ಲ ಎನ್ನಬಹುದು. ಆದರೂ ನಮ್ಮ ಸರ್ಕಾರ ಏನೂ ಆಗಿಲ್ಲ ಎಂಬಂತೆ ತಣ್ಣಗಿದೆ. ಏಕೆಂದರೆ ಭೂಕಬಳಿಕೆ ಮಾಡಿರುವವರು ಸಾಧಾರಣ ವ್ಯಕ್ತಿಗಳಲ್ಲ. ಸರ್ಕಾರವನ್ನು ತಮ್ಮ ಕಪಿ ಮುಷ್ಠಿಯಲ್ಲಿ ಹಿಡಿದಿಟ್ಟುಕೊಳ್ಳಬಲ್ಲಂತ ಬಿಲ್ಡರ್‌ಗಳು, ರಾಜಕಾರಣಿಗಳು, ವಾಣಿಜ್ಯೋಧ್ಯಮಿಗಳು ಮತ್ತು ಹಿರಿಯ ಅಧಿಕಾರಿಗಳೆಲ್ಲಾ ಇದರಲ್ಲಿ ಭಾಗಿಯಾಗಿದ್ದಾರೆ. ಹಾಗಾಗಿ ಭೂಕಬಳಿಕೆಯನ್ನು ತಡೆಯಲು ನೂರೆಂಟು ವಿಘ್ನಗಳು. ಕಬಳಿಕೆಗೊಂಡ ಭೂಮಿಯನ್ನು ಮರಳಿ ಪಡೆಯಲಿಕ್ಕೇ ಸಾಧ್ಯವಾಗದಂತೆ ಭದ್ರ ಕೋಟೆಯನ್ನು ನಿರ್ಮಿಸಿಕೊಳ್ಳಲಾಗಿದೆ. ಇದೊಂದು ಮಹಾ ಮಾರಿಯಾಗಿ ದೇಶವನ್ನೇ ವ್ಯಾಪಿಸುತ್ತಿದೆ. ದೇಹವನ್ನು ಒಳಗಿಂದೊಳಗೇ ತಿನ್ನುವ ಗ್ಯಾಂಗ್ರಿನ್ ರೋಗದಂತೆ ಇದು ಹರಡುತ್ತಿದೆ. ಇದು ಈಗಾಗಲೇ ರಾಜ್ಯದ, ಮುಖ್ಯವಾಗಿ ಬೆಂಗಳೂರು ನಗರದ ಸುತ್ತ ಮುತ್ತಲಿನ ಭೂಮಿಯನ್ನು ನುಂಗಿದೆ. ಇದನ್ನು ಈಗಲೇ ಸರಿ ಪಡಿಸಿ ಸರ್ಕಾರವು ತನ್ನ ಭೂಮಿಯನ್ನು ಮರಳಿ ಹಿಂಪಡೆಯದೇ ಹೋದರೆ ಮ