ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

2013 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಅ‘ಳ‘ಬೇಡ, ಕ‘ಳ‘ವ‘ಳ‘ ಬೇಡ, ಸ್ಯಾಮ್‌ಸಂಗ್‌ನವರಿಗೆ ಕನ್ನಡ ‘ಳ‘ ಬೇಡ !

'ಪಾಪಿ ಸಮುದ್ರಕ್ಕೆ ಹಾರಿದರೂ ಮೊಣಕಾಲುದ್ದ ನೀರು' ಅನ್ನೋ ಮಾತು ಅಂತೂ ಧೃಡವಾಯ್ತು. ಕಾರಣ ಇಷ್ಟೇ, ಮೊಬೈಲ್‌ನಲ್ಲಿ ಕನ್ನಡ ಬರೆಯಬೇಕೆಂಬ ನನ್ನ ಬಹುದಿನಗಳ ಕನಸು ಕನಸಾಗಿಯೇ ಇತ್ತು. ಆರ್ಥಿಕ ಸಂಕಷ್ಟದಿಂದಾಗಿ ಒಂದು ಉತ್ತಮ ಸ್ಮಾರ್ಟ್‌‌ಫೋನ್ ಕೊಂಡು ಸ್ನೇಹಿತರಿಗೆ ಕನ್ನಡದಲ್ಲಿ ಸಂದೇಶ ರವಾನಿಸಿ ಖುಷಿ ಪಡುವ ದಿನವು ದೂರವೇ ಇದ್ದವು. ಒಂದು ದಿನ ಅವಸರದಲ್ಲಿ ಹೋಗಿ ಎಲ್‌ಜಿ ಸ್ಮಾರ್ಟ್‌‌ಫೋನ್ ಒಂದನ್ನು ಕೊಂಡು ತಂದೆ. ಕೊಂಡು ತಂದಿದ್ದು ಅವಸರದಲ್ಲಾದ್ದರಿಂದ ಅದರಲ್ಲಿ ಕನ್ನಡ ಇದೆಯೇ, ಅದಕ್ಕೆ ಕನ್ನಡ ಕಲಿಸಬಹುದೇ ಎಂಬುದನ್ನೆಲ್ಲಾ ಯೋಚಿಸಿರಲೇ ಇಲ್ಲ. ನನ್ನ ಅದೃಷ್ಟವೂ ನೆಟ್ಟಗಿರಲಿಲ್ಲ ಅಂತ ಕಾಣುತ್ತೆ. ನಾನು ತಂದ ಎಲ್‌.ಜಿ ಇ-೪೦೦ ಹ್ಯಾಂಡ್‌ಸೆಟ್‌ನಲ್ಲಿ ಕನ್ನಡ ಇರುವುದಂತಿರಲಿ ಅದಕ್ಕೆ ಕನ್ನಡ ತುಂಬುವುದೂ ಸಾಧ್ಯವಿರಲಿಲ್ಲ. ಇದರಿಂದ ತುಂಬಾ ನಿರಾಶಿತನಾದೆ. ಸ್ನೇಹಿತರು 'ಸ್ಯಾಮ್‌ಸಂಗ್ ಗೆಲಾಕ್ಸಿ' ತಗೊ, ಅದು ಕನ್ನಡ ಚೆನ್ನಾಗಿ ಬೆಂಬಲಿಸುತ್ತದೆ ಎಂದರು. ಅಂದಿನಿಂದ ಒಂದು ಸ್ಯಾಮ್‌ಸಂಗ್ ಸ್ಮಾರ್ಟ್‌‌ಫೋನ್ ಪಡೆಯಲೇ ಬೇಕೆಂದು ಸಿದ್ಲಿಂಗು ತರ ದುಡ್ಡು ಹೊಂದಿಸತೊಡಗಿದೆ. ಕೊನೆಗೂ ಸತತ ಆರು ಮಾಸದ ಪರಿಶ್ರಮದ ನಂತರ ಸ್ಯಾಮ್‌ಸಂಗ್ ಗೆಲಾಕ್ಸಿ ಪಡೆಯುವ ಮಟ್ಟಕ್ಕೆ ಬಂದೆ ಅಂತ ಆಯ್ತು. ನಾನು ಹೊಂದಿಸಿದ ಕೆಲವೇ ಸಾವಿರ ರೂಪಾಯಿಗೆ ಸ್ಯಾಮ್‌ಸಂಗ್ ಗೆಲಾಕ್ಸಿ ಟ್ರೆಂಡ್ ಎಂಬ ಮೊಬೈಲ್ ಸೂಕ್ತ ಅನ್ನಿಸಿತು. ಇದರ ಬಗ್ಗೆ  ಅಂತರ್ಜಾಲದಲ್ಲಿ ಸಿ

ಸಲಿಂಗ ಕಾಮ ಶಿಕ್ಷೆ ಕೊಡುವಂತಾ ತಪ್ಪಾ ?

'ಸಲಿಂಗ ಕಾಮ ಶಿಕ್ಷಾರ್ಹ ಅಪರಾಧ!' ಅಂತ ಸುಪ್ರೀಂ ಕೋರ್ಟು ತೀರ್ಪು ಬರೆಯುವುದರೊಂದಿಗೆ  ಅಷ್ಟೊಂದು ಬಹಿರಂಗವಾಗಿರದಿದ್ದ ಸಲಿಂಗ ಕಾಮದ ವಿಷಯ ಬಯಲಿಗೆ ಬಿದ್ದಿದೆ. ಸಲಿಂಗ ಕಾಮವೆಂದರೆ ಹೆಸರೇ ಹೇಳುವಂತೆ ಗಂಡು ಗಂಡಿನೊಂದಿಗೆ ಹಾಗೂ ಹೆಣ್ಣು ಹೆಣ್ಣಿನೊಂದಿಗೆ ಸಲ್ಲಾಪ ನಡೆಸುವ ಮೂಲಕ ಕಾಮವನ್ನು ಹಂಚಿಕೊಳ್ಳೂವುದು, ಹಾಗೂ ತೀರಿಸಿಕೊಳ್ಳುವುದು. ಇದು ಕೆಲವರಿಗೆ ಅಸಹ್ಯ ಅನ್ನಿಸಿದರೂ, ತಪ್ಪು ಅನ್ನಿಸಿದರೂ, ಸುಪ್ರೀಂ ಕೋರ್ಟು 'ಒದ್ದು ಜೈಲಿಗೆ ಹಾಕಿ' ಅಂದರೂ ಇದನ್ನು ಮಾಡಿಕೊಳ್ಳುವವರನ್ನು ತಡೆಯಲಾದೀತೆ ? ಏಕೆಂದರೆ ದ್ವಿಲಿಂಗಿಗಳ ಸಲ್ಲಾಪದಂತೆಯೇ ಸಲಿಂಗಿಗಳ ಸಲ್ಲಾಪ ಸಹ ಬಹುತೇಕ ನಾಲ್ಕು ಗೋಡೆಗಳ ನಡುವೆಯೇ ನಡೆಯುವ ಕ್ರಿಯೆಯಲ್ಲವೆ ? ಕಾರಣವೇನು ? ಈ ಲೋಕದ ಪ್ರತಿ ಜೀವಿಯೂ ಒಂದಲ್ಲ ಒಂದು ರೀತಿಯಲ್ಲಿ ಕಾಮವನ್ನು ವ್ಯಕ್ತ ಪಡಿಸುವುದನ್ನು ಕಾಣುತ್ತೇವೆ. ಕಾಮದ ಪರಿಮಾಣ ಹೆಚ್ಚು ಕಡಿಮೆ ಇರಬಹುದೇ ಹೊರತೂ ಅದು ಇಲ್ಲವೇ ಇಲ್ಲ ಎಂದು ಹೇಳಲಾಗದು. ಜೀವಿಗಳ ವಂಶೋದ್ದಾರಕ್ಕೆ ಕಾಮ ಪ್ರಮುಖ ಪಾತ್ರ ವಹಿಸುತ್ತದೆ. ಪ್ರಾರಂಭದಲ್ಲಿ ಕಾಮವು ಪ್ರಕೃತಿದತ್ತವಾಗಿ ಶುರುವಾಗಿದ್ದೇ ವಂಶೋದ್ದಾರಕ್ಕಾಗಿ. ಮಾನವ ನಾಗರಿಕತೆಗೆ ಕಾಲಿಟ್ಟ ನಂತರ ಹೆಚ್ಚು ಹೆಚ್ಚು ಸುಖಗಳನ್ನು ಅರಸತೊಡಗಿದ. ಅವುಗಳಲ್ಲಿ ಸುಲಭಕ್ಕೆ ಸಿಕ್ಕಿದ್ದೇ ಕಾಮ. ಏಕೆಂದರೆ ಇದನ್ನು ಹುಡುಕಿಕೊಂಡು ಬೇರೆಲ್ಲೋ ಕಾಡು ಮೇಡು ಅಲೆಯುವ ಅಗತ್ಯ ಇರಲೇ ಇಲ್ಲವಲ್ಲ ?! ತನ್ನೊಳಗೇ ಹುಟ್ಟಿಕೊಳ್ಳುತ್ತಿ

ಧನ್ಯವಾದಗಳು ‘ಪ್ರಜಾವಾಣಿ ಮೆಟ್ರೋ‘

ಪ್ರಜಾವಾಣಿ ಪತ್ರಿಕೆಯ ಮೆಟ್ರೋ ಪುರವಣಿಯ ಇಂದಿನ ಸಂಚಿಕೆಯ ಮೂರನೆ ಪುಟದಲ್ಲಿ ನನ್ನ ಬ್ಲಾಗ್ ಬಗ್ಗೆ ಲೇಖನ ಪ್ರಕಟವಾಗಿದೆ. ನಾನಿಲ್ಲಿ ಅನೇಕ ಋಣಾತ್ಮಕ ವಿಷಯಗಳ ಬಗ್ಗೆ ಬರೆದರೂ 'ಸಾಕ್ಷಿ'ಯವರು ಮತ್ರ ಬ್ಲಾಗ್ ಬಗ್ಗೆ ಧನಾತ್ಮಕವಾಗಿಯೇ ಬರೆದಿದ್ದಾರೆ. ಇದಕ್ಕಾಗಿ ಲೇಖಕರು ಹಾಗೂ ಪ್ರಜಾವಾಣಿಗೆ ನನ್ನ ಧನ್ಯವಾದಗಳು. ಈ ಲೇಖನದಲ್ಲಿ ಎರಡು ವಿಷಯಗಳ ಪ್ರಸ್ತಾಪದ ಬಗ್ಗೆ ಕೊಂಚ ವಿವರಣೆ ಕೊಡಬೇಕು ಅನ್ನಿಸಿದೆ. ಮೊದಲನೆಯದು 'ಬ್ಲಾಗ್ ಶೀರ್ಷಿಕೆಯ ಲಾಲಿತ್ಯಕ್ಕೆ ವಿರುದ್ಧವಾಗಿ ಶ್ರೀಪತಿ ಅವರು ಸಮಕಾಲೀನ ಸಂಗತಿಗಳನ್ನು ಗಟ್ಟಿ ದನಿಯಲ್ಲಿ ಚರ್ಚಿಸಿರುವುದು ಬ್ಲಾಗ್‌ನ ವಿಶೇಷ.' ಎಂದು ಸಾಕ್ಷಿಯವರು ಹೇಳಿದ್ದಾರೆ. ನಿಜ, 'ಪಿಸುಮಾತು' ಹೆಸರಿಗೂ ನಾನು ಬರೆಯುತ್ತಿರುವ ವಿಷಯಗಳಿಗೂ ಬಹಳಷ್ಟು ವೈರುಧ್ಯವಿದೆ. ಪಿಸುಮಾತು ಹೆಸರಿನ ಮಾಸ ಪತ್ರಿಕೆ ಶುರು ಮಾಡಿದಾಗಿನಿಂದ (೨೦೦೪) ಈ ಹೆಸರು ನನ್ನೊಂದಿಗೆ ತಳಕು ಹಾಕಿಕೊಂಡಿದೆ. ಅದರಿಂದ ಬಿಡಿಸಿಕೊಳ್ಳಲು ಆಗಿಲ್ಲ. ಮೊದಲಿಗೆ ಈ ಬ್ಲಾಗ್ ಶುರು ಮಾಡುವಾಗ ಕಥೆ, ಕವನ, ಲಘು ಲೇಖನಗಳನ್ನೇ ಬರೆಯಬೇಕು ಅಂತ ಅಂದುಕೊಂಡಿದ್ದೆ. ಆದರೆ ಈ ಸಮಾಜದ ಕ್ರೂರತೆಗಳನ್ನು, ವಂಚನೆಗಳನ್ನ ನೋಡುತ್ತಾ ನೋಡುತ್ತಾ ಋಣಾತ್ಮಕ ವಿಷಯಗಳನ್ನ ಬರೆಯದೇ ಇರಲು ಆಗಲಿಲ್ಲ. ಅಂತಹ ವಿಷಯಗಳಿಗಾಗಿ ಮತ್ತೊಂದು ಬ್ಲಾಗ್ ರಚಿಸುವ ಯೋಚನೆ ಬಂದರೂ 'ಆಗಿದ್ದಾಗ್ಲಿ, ಓದೋದು ಓದ್ತಾರೆ, ಬಿಡೋರು ಬಿಡ್ತಾರೆ' ಎಂಬ ಉಡಾಪೆಯಿಂದಲೇ ಇದ

ಜನರ ಹೃದಯ ಸಿಂಹಾಸನವೇರದ ರಾಜ !

ನಿನ್ನೆ ತೀರಿಕೊಂಡ ಮೈಸೂರು ರಾಜವಂಶದ ಕೊನೆಯ ಕುಡಿ ಶ್ರೀಕಂಠದತ್ತ ಒಡೆಯರ‍್ ಅವರಿಗೆ ನನ್ನ ಶ್ರದ್ದಾಂಜಲಿಗಳಿವೆ. ಒಬ್ಬ ವ್ಯಕ್ತಿ ತೀರಿಕೊಂಡಾಗಲೂ ಅವರ ಬಗ್ಗೆ ಋಣಾತ್ಮಕವಾಗಿ ಯೋಚಿಸಬಹುದಾ ? ಬರೆಯಬಹುದಾ ? ಅಂತ ಕೇಳಬಹುದು. ಧನಾತ್ಮಕವಾಗಿ ಯೋಚಿಸಲು ಯಾವುದೇ ವಿಷಯವನ್ನು ಬಿಟ್ಟು ಹೋಗದ ವ್ಯಕ್ತಿಯ ಬಗ್ಗೆ ಋಣಾತ್ಮಕ ಯೋಚನೆಗಳೇ ಬರುವುದು. ನಿಜ, ಎಲ್ಲಾ ವ್ಯಕ್ತಿಗಳಲ್ಲೂ ಅದರಲ್ಲೂ ಮೇಲ್ಮಟ್ಟದ ವ್ಯಕ್ತಿಗಳ ಜೀವನವನ್ನು ಅವಲೋಕಿಸಿದಾಗ ಅವರೆಷ್ಟೇ ಉತ್ತಮ ಜೀವನ ನಡೆಸಿದ್ದರೂ ಕೆಲವೊಂದು ತಪ್ಪುಗಳು ಇರಲೂ ಬಹುದು. ಆದರೆ ಅವುಗಳನ್ನು ಮರೆಸಿ ಹಾಕುವಷ್ಟು ಉತ್ತಮ ಸಾಧನೆ/ಕೆಲಸಗಳನ್ನು ಅವರು ಮಾಡಿದ್ದಾಗ ಮಾತ್ರ ಅವರ ಬಗ್ಗೆ ಧನಾತ್ಮಕವಾಗಿ ಮಾತನಾಡಲು ಸಾಧ್ಯ.  ಆದರೆ ಶ್ರೀಕಂಠದತ್ತರು ಅಂತಹ ಯಾವ ಘನಾಂಧಾರಿ ಕೆಲಸ ಮಾಡಿದ್ದಾರೆ ? ಇಂದಿನ ಪತ್ರಿಕೆಗಳನ್ನ ಹೊರಳಿಸಿದಾಗ ಒಬ್ಬ ಹಳ್ಳಿಯ ಕ್ರಿಕೆಟಿಗ 'ಒಂದು ಬಾರಿ ಚೆನ್ನೈಗೆ ನಮ್ಮೊಟ್ಟಿಗೇ ಬಂದರು, ಚೆನ್ನಾಗಿ ಬೆರೆತು ಮಾತನಾಡಿದರು' ಅನ್ನುವ ಒಂದಂಶವನ್ನು ಬಿಟ್ಟರೆ ಬೇರ‍್ಯಾವ ಸಮಾಜಮುಖಿ ಕೆಲಸಗಳನ್ನು ಮಾಡಿರುವ ಮಾಹಿತಿಯೂ ಸಿಗಲಿಲ್ಲ. ಅದರ ಬಗ್ಗೆ ಈ ಹಿಂದೆ ಸುದ್ದಿ ಬಂದುದರ ಬಗ್ಗೆಯೂ ನನಗೆ ತಿಳಿದಿಲ್ಲ. ಇರುವಷ್ಟು ದಿನವೂ ರಾಜವೈಭೋಗ ಅನುಭವಿಸುತ್ತಾ, ಅರಮನೆಯನ್ನು ಉಳಿಸಿಕೊಳ್ಳಲು ಸರ್ಕಾರದೊಂದಿಗೆ ಕಿತ್ತಾಡುತ್ತಾ, ತಮಗೆ ಸಂಬಂಧವೇ ಇಲ್ಲದ ಕರ್ನಾಟಕ ಕ್ರಿಕೆಟ್‌ ಮಂಡಳಿಯ ಅಧಿಕಾರವನ್ನು ಅನುಭವಿಸುತ್ತಾ,

6-5=2

ಇದೀಗ 6-5=2 ಚಿತ್ರ ನೋಡಿ ಬಂದೆ. ಕನ್ನಡದ ಮಟ್ಟಿಗೆ ಅತ್ಯತ್ತಮ ಪ್ರಯತ್ನ. ವಿಶಿಷ್ಟ ಚಲನಚಿತ್ರಗಳನ್ನು ಆಯ್ದು ನೋಡ ಬಯಸುವ ನನ್ನಂತವರಿಗೆ ಪ್ರಿಯವಾಗುವ ಚಿತ್ರ.  ೨೦೧೦ರಲ್ಲಿ ಗುಂಡ್ಯ ಅರಣ್ಯದಲ್ಲಿ ಟ್ರೆಕ್ಕಿಂಗ್ ಹೋದ ಮೂವರು ಮಳೆಯ ಕಾರಣಕ್ಕೆ ದಾರಿ ತಪ್ಪಿಸಿಕೊಂಡು ಹೊರ ಬರಲಾರದೇ ಆಹಾರವಿಲ್ಲದೇ ಕಾಡಿನೊಳಗೇ ಸಾವನ್ನಪ್ಪಿದ್ದರು. ಈ ಸತ್ಯ ಘಟನೆಯನ್ನು ಇಟ್ಟುಕೊಂಡು ಚಲನಚಿತ್ರಕ್ಕೆ ಬೇಕಾದಂತೆ ಮೂವರನ್ನು ಆರು ಜನರನ್ನಾಗಿಸಿ ಈ ಚಿತ್ರವನ್ನು ನಿರ್ದೇಶಿಸಿದವರ ಜಾಣ್ಮೆಯನ್ನು ಮೆಚ್ಚಲೇ ಬೇಕು. ಮೃತರಾದವರಲ್ಲಿ ಒಬ್ಬನಾದ ರಮೇಶ್ ಎಂಬಾತನ ಕ್ಯಾಮೆರಾ ದೊರೆತಿದ್ದು ಅದನ್ನೇ ಚಿತ್ರ ಮಂದಿರದಲ್ಲಿ ಪ್ರದರ್ಶಿಸಲಾಗುತ್ತಿದೆ ಎಂಬ ಒಕ್ಕಣೆಯೊಂದಿಗಿನ ಭಿತ್ತಿಪತ್ರಗಳ ಆಕರ್ಷಣೆ, ಹಾಗೂ ರೋಮಾಂಚನಗೊಳಿಸುವ ಟ್ರೈಲರ್‌ಗಳ ವಿಶೇಷವೇ ನಮ್ಮನ್ನು ಚಿತ್ರಮಂದಿರಕ್ಕೆ ಸೆಳೆಯುವಲ್ಲಿ ಯಶಸ್ವಿಯಾಗುತ್ತದೆ. ತೆರೆಮರೆಯಲ್ಲೇ ಚಿತ್ರತಂಡ ! ಕಾಂಜಿಪೀಂಜಿ ಚಿತ್ರಗಳನ್ನು ನಿರ್ದೇಶಿಸುವ ಕೆಟ್ಟ ನಿರ್ದೆಶಕರೆಲ್ಲಾ ಹಾಡುಗಳನ್ನು ಅರ್ಧಕ್ಕೆ ನಿಲ್ಲಿಸಿ ಅದರಲ್ಲಿ ತಮ್ಮ ಹೆಸರು ದೊಡ್ಡದಾಗಿ ತೋರಿಸುವ ಈ ಕಾಲದಲ್ಲೂ 6-5=2 ಚಿತ್ರತಂಡದ ಪ್ರಮುಖರ ಹೆಸರನ್ನೂ ಪ್ರಚಾರ ಮಾಡದೇ ತಮ್ಮ ವೃತ್ತಿಪ್ರೀತಿಯನ್ನು ಮೆರೆದಿರುವುದು ಮತ್ತೊಂದು ವಿಶೇಷ.  ಈ ಚಿತ್ರದ ಪ್ರಕಾರ ಮೃತ ರಮೇಶನ ಕ್ಯಾಮೆರಾದಲ್ಲಿ ಸಿಕ್ಕ ವೀಡಿಯೋವನ್ನೇ ಸಂಕಲನ ಮಾಡಿ ಚಿತ್ರಮಂದಿರದಲ್ಲಿ ತೋರಿಸಲಾಗುತ್ತಿದೆ.

ಹೆಗ್ಗಾಲ್ ಅಣಬೆಯ ಕಟ್ಟುಮಟ್ಲೆಯ ಘಮ!

ಮೇಲಿನ ವಾಕ್ಯದಲ್ಲಿ ಮಲೆನಾಡಿನ ಹೊರತಾದ ಜನರಿಗೆ ಎರಡು ಪದಗಳು ಹೊಸತೆನಿಸಬಹುದು. ಮೊದಲನೆಯದು ಹೆಗ್ಗಾಲ್ ಹಾಗೂ ಎರಡನೆಯದು ಕಟ್ಟುಮಟ್ಲೆ.  ಹೆಗ್ಗಾಲ್ ಅಣಬೆ ಇದೊಂದು ಜಾತಿಯ ಅಣಬೆ ಮಾತ್ರ. ಮಲೆನಾಡಿನ ಕಾಡು ಮೇಡುಗಳಲ್ಲಿ ಮಳೆಗಾಲದ ಶುರುವಿಗೆ ಗುಡುಗು ಸಿಡಿಲು ಬಂದಾಗ ಭೂಮಿಯಿಂದ ಏಳುವ ಅಣಬೆಗಳಲ್ಲಿ ಹೆಗ್ಗಾಲ್ ಹೆಸರಿನ ಅಣಬೆ ತುಂಬಾ ಪ್ರಸಿದ್ಧ. ಕಾರಣ ಇದು ತುಂಬಾ ರುಚಿ. ಇದರ ಎದುರು ಪೇಟೆಯಲ್ಲಿ ಸಿಗುವ ಎಲ್ಲಾ ಅಣಬೆಗಳನ್ನೂ ನಿವಾಳಿಸಬೇಕು.  ಇವು ಎಲ್ಲೆಂದರಲ್ಲಿ ವಿನಾಕಾರಣ ಹುಟ್ಟುವುದಿಲ್ಲ. ಇವುಗಳಿಗೆ ನಿರ್ದಿಷ್ಟ ಸ್ಥಳವಿರುತ್ತದೆ. ಅಲ್ಲಿ ಮಾತ್ರ ಮುಂಗಾರು ಶುರವಾಗುವಾಗ ಸಿಡಿಲಬ್ಬರ ಇರುವ ಒಂದು ನಿರ್ದಿಷ್ಟ ದಿನ ಬೆಳ ಬೆಳಗ್ಗೆ ನೂರಾರು ಅಣಬೆಗಳು ಹಿಂದಿನ ವರ್ಷ ಹುಟ್ಟಿದ ಸ್ಥಳದಲ್ಲೇ ಹುಟ್ಟುತ್ತವೆ. ಇವುಗಳ ಆಯಸ್ಸು ಕಡಿಮೆ. ಹುಟ್ಟಿದ ದಿನವೇ ನಾವು ನೋಡಿ ಕಿತ್ತು ತಂದು ಸಾರು, ಪಲ್ಯ ಮಾಡಿ ಸೇವಿಸಬೇಕು. ಒಂದು ದಿನ ಕಳೆದರೂ ಅವು ಬಾಡುತ್ತವೆ. ಅದರಲ್ಲೂ ಹುಟ್ಟಿದ ದಿನ ಬೆಳಗ್ಗೆ ಮೊಳಕೆ ರೂಪದಲ್ಲಿದ್ದರೆ ಸಂಜೆಯ ಹೊತ್ತಿಗೆ ಪೂರ್ತಿ ಅರಳಿ ನಿಂತಿರುತ್ತವೆ. ಸಂಜೆಯೊಳಗೆ ಕೀಳದೇ ಹೋದರೆ ವ್ಯರ್ಥವಾದಂತೆಯೆ.  ನಾನು ಶಾಲೆಗೆ ಹೋಗುತ್ತಿದ್ದ ಸಮಯದಲ್ಲಿ ನಮ್ಮ ಮನೆಯ ಆಜುಬಾಜಿನಲ್ಲಿ, ಶಾಲೆಗೆ ಹೋಗುವ ಕಾಡು ದಾರಿಯಲ್ಲಿ ಈ ಅಣಬೆಗಳು ಏಳುವ ಅನೇಕ ಜಾಗಗಳನ್ನು ಗುರುತಿಸಿ ಇಟ್ಟಿದ್ದೆ. ಪ್ರತಿ ವರ್ಷ ಮಳೆಗಾಲದ ಶುರುವಿನಲ್ಲಿ ರಾತ್ರಿ ಗುಡುಗು ಸಿಡಿಲು ಹೆ

ಎಟಿಎಂ ನಲ್ಲಿ ಈ ವ್ಯವಸ್ಥೆ ಮಾಡಿದರೆ ಉತ್ತಮ

ಎಟಿಎಂನಲ್ಲಿ ಹಣ ದರೋಡೆಗಳು ಹೆಚ್ಚುತ್ತಿವೆ. ಬೆದರಿಸಿ ಎಟಿಎಂನಿಂದ ಹಣ ಪಡೆಯುವಾಗ ಏನು ಮಾಡಬೇಕು ? ಪಿನ್ ಸಂಖ್ಯೆಯನ್ನು ತಿರುಗಾಮುರುಗಾ ಹಾಕಿದರೆ ಇದು ಪೊಲೀಸ್‌ಗ್ ಸಂದೇಶ ರವಾನಿಸುತ್ತೆ ಎಂದು ಕೆಲವರು ಹೇಳುತ್ತಾರೆ. ಆದರೆ ಅದು ನಿಜವಲ್ಲದಿರಬಹುದು. ಆದರೆ ಇಂತಹುದೊಂದು ವ್ಯವಸ್ಥೆ ಖಂಡಿತಾ ಅಗತ್ಯವಿದೆ ಅಲ್ಲವೆ. ನನಗೆ ಅನ್ನಿಸಿದ್ದು ಪಿನ್ ಜೊತೆ ಇನ್ನೊಂದು ಎಮರ್ಜೆನ್ಸಿ ಸಂಖ್ಯೆಯನ್ನು ನಮ್ಮ ಖಾತೆಗೆ ಸೆಟ್ ಮಾಡಿಕೊಳ್ಳುವ ವ್ಯವಸ್ಥೆಯನ್ನು ಮಾಡಿ ಕೊಡಬೇಕು. ಅಂದರೆ ಎಟಿಎಂ ನಲ್ಲಿ ಆ ಸಂಖ್ಯೆಯನ್ನು ಒತ್ತಿದರೆ ನಮ್ಮ ಖಾತೆ ಲಾಕ್ ಆಗಿ ಹಣ ಬರಬಾರದು, ಬದಲಿಗೆ 'ನಿಮ್ಮ ಖಾತೆಯಲ್ಲಿ ಹಣವಿಲ್ಲ' ಎಂಬ ಸಂದೇಶವನ್ನು ತೋರಿಸಬೇಕು. ಒಮ್ಮೆ ಹೀಗೆ ಲಾಕ್ ಆದರೆ ನಾವು ನಮ್ಮ ಬ್ಯಾಂಕ್‌ಗೇ ಹೋಗಿ ಅದನ್ನು ಸರಿಪಡಿಸಿಕೊಳ್ಳುವಂತಿರಬೇಕು. ಹೀಗಾದರೆ ಕೊಂಚ ಅನುಕೂಲವಾಗಬಹುದು ಅನ್ನೋದು ನನ್ನ ಯೋಚನೆ.

ಮಳೆ ಜಿನುಗು

ಮಳೆ ಜಿನುಗೆ, ತೊಟ್ಟಿಕ್ಕಿ ತೊಟ್ಟಿಕ್ಕಿ ತಟ್ಟಿ ತಟ್ಟಿ ನನ್ನ ನೆನಪ  ಮೇಲೆಬ್ಬಿಸಿದೆಯಾ ? ಕಲ್ಲು ಕಟ್ಟಿ  ಮನದ ಪಾಳು ಬಾವಿಯಲಿ ಮುಳುಗಿಸಿದ ಮುಳ್ಳು ಹೂಗಿಡಳ  ಅರಳಿಸಿದೆಯಾ ? ಬೇಡವೆಂದು ಬಿಸುಟ ಬಳ್ಳಿಯ ಬೇರಿಗೆ ನೀರಾಗಿ ಬೇಗುದಿಯ ಕೊನರು ನೀ ಬರಿಸಿದೆಯಾ ? ಜಿನುಗದಿರು ಮಳೆಯೆ, ಜೇನು ಹುಟ್ಟು ಘಾತಗೊಂಡಂತೆ ಕೈ-ನಾಲಿಗೆಯೊಡ್ಡಿ ರುಚಿ ನೋಡುವ ತವಕವಿಲ್ಲದ ಭೂಮಿಗೆ !

ಧರ್ಮಸ್ಥಳದ ಸುತ್ತ, ಅನುಮಾನಗಳ ಹುತ್ತ !!

ನೂರಾರು ವರ್ಷಗಳಿಂದಲೂ ಜನರ ಭಕ್ತಿ ಭಾವಕ್ಕೆ ಹೆಸರಾದ ಕ್ಷೇತ್ರ ಧರ್ಮಸ್ಥಳ. ಅಂದಿನಿಂದ ಇಂದಿನವರೆಗೂ ಜನರು ಭಯ-ಭಕ್ತಿಯಿಂದ ಶ್ರೀ ಮಂಜುನಾಥ ಸ್ವಾಮಿಯ ಕ್ಷೇತ್ರಕ್ಕೆ ನಡೆದುಕೊಳ್ಳುತ್ತಾ ಬಂದಿದ್ದಾರೆ. ನಂಬಿದ ಯಾರನ್ನೂ ಮಂಜುನಾಥ ಕೈ ಬಿಡಲಾರ ಎಂಬ ಬಲವಾದ ನಂಬಿಕೆ ಈಗಲೂ ಇದೆ. ಜನರಿಗೆ ಮಂಜುನಾಥನ ಮೇಲೆ ಎಷ್ಟು ಭಯ-ಭಕ್ತಿಯಿದೆಯೋ ಅಷ್ಟೇ ಗೌರವ ಕ್ಷೇತ್ರದ ಧರ್ಮದರ್ಶಿಯಾದ ವೀರೇಂದ್ರ ಹೆಗ್ಗಡೆಯವರ ಮೇಲೂ ಇದೆ. ಜನರ ನಂಬಿಕೆಗೆ ಚ್ಯುತಿ ಬರುವಂತೆ ಅವರೂ ಸಹ ಎಂದೂ ನಡೆದುಕೊಂಡವರಲ್ಲ. ಹಾಗೆಯೆ ಕ್ಷೇತ್ರದ ಅಭಿವೃದ್ದಿಯ ಜೊತೆಗೆ ಶ್ರೀ ಧರ್ಮಸ್ಥಳ ಗ್ರಾಮೀಣಾಭಿವೃದ್ದಿ ಯೋಜನೆಯನ್ನು ರೂಪಿಸಿ ಆ ಮೂಲಕ ಕರ್ನಾಟಕದ ಸಾವಿರಾರು ಹಳ್ಳಿಗಳ ಲಕ್ಷಾಂತರ ಬಡ ಜನರಿಗೆ, ಅದರಲ್ಲೂ ಮುಖ್ಯವಾಗಿ ಬಡ ಮಹಿಳೆಯರಿಗೆ ಅನುಕೂಲವಾಗುವಂತೆ ಮಾಡಿದ್ದಾರೆ. ಇವೆಲ್ಲಾ ಪ್ರಶ್ನಾತೀತ ವಿಷಯಗಳು.  ಆದರೆ ಅದೇ ಮಂಜುನಾಥನ ಕ್ಷೇತ್ರದಲ್ಲಿ ನಡೆದ ಸೌಜನ್ಯ ಎಂಬ ಕಾಲೇಜು ವಿದ್ಯಾರ್ಥಿನಿಯ ಬರ್ಬರ ಅತ್ಯಾಚಾರ ಹಾಗೂ ಕೊಲೆ ಒಂದಿಷ್ಟು ಅನುಮಾನ, ಅಸಮದಾನಗಳನ್ನು ಸ್ಥಳೀಯರಲ್ಲೇ ಹುಟ್ಟು ಹಾಕಿರುವುದಂತೂ ನಿಜ. ಒಂದು ನೆನಪಿರಲಿ, ಈ ಲೇಖನದ ಉದ್ದೇಶ ಧರ್ಮಸ್ಥಳದ ಅಥವಾ ವೀರೇಂದ್ರ ಹೆಗ್ಗಡೆಯವರ ತೇಜೋವಧೆ ಮಾಡುವ ಅಥವಾ ಅವರ ಗೌರವಕ್ಕೆ ಧಕ್ಕೆ ತರುವದಲ್ಲ. ಈ ಲೇಖನದಲ್ಲಿ ಧರ್ಮಸ್ಥಳದ ಹಾಗೂ ಹೆಗ್ಗಡೆಯವರ ಹೆಸರುಗಳನ್ನು ಬಳಸಿಕೊಂಡಿರುವುದಕ್ಕೆ ಕಾರಣ ಈ ಪ್ರಕರಣ ನಡೆದಿರುವುದು ಧರ್ಮಸ್ಥಳದಲ್ಲಿಯೇ ಆಗಿರುವ

ಮಾಂಸ-ಮದ್ಯ ಮತ್ತು ವೈಷ್ಣವ ದೀಕ್ಷೆ !

ಕುರುಬರು ಮಾಂಸ-ಮದ್ಯ ಬಿಟ್ಟು ಬಂದರೆ ತಾನು ವೈಷ್ಣವ ದೀಕ್ಷೆ ನೀಡಲು ತಯಾರು ಎಂದು ಉಡುಪಿಯ ಶುದ್ಧ ಬ್ರಾಹ್ಮಣ ಪೇಜಾವರ ತುದಿಗಾಲಲ್ಲಿ ನಿಂತು ದೀಪಾವಳಿ ಧಮಾಕದ ಕೊಡುಗೆಯನ್ನು ಈ ಬಾರಿ ಕುರುಬರಿಗೆ ನೀಡಿದ್ದಾರೆ. ಇದನ್ನು ಕೇಳಿದ ಕುರುಬರು ಪೇಜಾವರರ ಮತ್ತೊಂದು ಬಣ್ಣದ ಮಾತನ್ನು ನಂಬದೇ ಪೆಕಪೆಕ ನಕ್ಕು ಹಬ್ಬಕ್ಕೆ ಕುರಿ ಮಾಂಸ ತರಲು ಹೊರಟಾಗಿದೆ.  ಮೊದಲಿಗೆ ಪೇಜಾವರರ ರಾಜಕೀಯ, ಜಾತೀಯ ಮನಸ್ಥಿತಿಯನ್ನು ಬಲ್ಲವರ‍್ಯಾರೂ ಇದನ್ನು ಗಂಭೀರವಾಗಿ ತೆಗೆದುಕೊಳ್ಳುವ ಗೋಜಿಗೇ ಹೋಗಿಲ್ಲ. ಆದರೆ ಪೇಜಾವರ ಎಂದರೆ ಒಂದೇ ಕಲ್ಲಲ್ಲಿ ಎರಡ್ಮೂರು ಹಕ್ಕಿ ಬೀಳಬಹುದೇನೋ ಎಂದು ಉಡುಪಿಯಲ್ಲಿ ಕುಳಿತೇ ವಿಧಾನ ಸೌಧಕ್ಕೆ ಕಲ್ಲು ಎಸೆಯಬಹುದಾದ ಚಾಲಾಕಿ ಮನುಷ್ಯ! ಅವರ ಇತ್ತೀಚಿನ ಹೇಳಿಕೆ ಕುರುಬರಿಗೆ ದೀಕ್ಷೆ ಎಂಬುದು ಸಾಣೆ ಹಿಡಿದ ನುಣುಪಾದ ಕಲ್ಲು ಮಾತ್ರ. ಇಷ್ಟಕ್ಕೂ ಇಷ್ಟು ದಿನದ ಇವರ ದಲಿತೋದ್ಧಾರ ಕಾರ್ಯಕ್ರಮ ಎಲ್ಲಿವರೆಗೆ ಬಂತು ಅನ್ನುವುದು ತಿಳಿದು ಬಂದಿಲ್ಲ. ಮೂರ್ನಾಲ್ಕು ಬಾರಿ ದಲಿತರ ಕೇರಿಗೆ ಪ್ರವಾಸ ಹೋಗಿ ಬಂದ ಇವರಿಗೆ ಅದರಿಂದ ಯಾವ ಲಾಭವೂ ಗಿಟ್ಟಲಿಲ್ಲ. ದಲಿತರಿಗೂ ಒಳಿತಾಗಲಿಲ್ಲ. ಅತ್ತ ದಲಿತರೂ ಉದ್ಧಾರವಾಗಲಿಲ್ಲ, ಇತ್ತ ಮಠವೂ ದಲಿತರಿಗೆ ಬಾಗಿಲು ತೆರೆಯಲಿಲ್ಲ. ಅದೊಂದಿಷ್ಟು ಚಮತ್ಕಾರ ನಡೆಸಿದಂತೆ ಮಾಡಿ ದಲಿತರ ಪ್ರೀತಿ ಗಳಿಸುವ ನಾಟಕವಾಡಿ ಸುಮ್ಮನಾದರು. ಈಗ ಕುರುಬರ ಮೇಲೆ ಪ್ರೀತಿ ಉಕ್ಕಿ ಹರಿದಿದೆ. ಅದು ಎಷ್ಟು ದಿನ ಉಕ್ಕುತ್ತೋ ಶ್ರೀಕೃಷ್ಣ ಪರಮಾತ್ಮನೇ ಬ

ಲೈಂಗಿಕ ವಸ್ತುಗಳ ನಿಷೇಧ ಯಾಕೆ ?

ಮೊದಲಿಗೆ ಈ ಲೈಂಗಿಕ ವಸ್ತುಗಳು ಎಂದರೆ ಏನು ಅಂತ ಸ್ವಲ್ಪ ಹೇಳಿ ಬಿಡ್ತೀನಿ. ಏಕೆಂದರೆ ನಮ್ಮ ದೇಶದಲ್ಲಿ ಲೈಂಗಿಕತೆಯ ಬಗ್ಗೆ ಮಾತಾಡಲಿಕ್ಕೇ ಹಿಂಜರಿಯುವ ಮಾನಸಿಕತೆಯಿರುವಾಗ ಎಷ್ಟೋ ಜನರಿಗೆ ಇದೆಂತಾ ವಸ್ತುಗಳು? ಎಂಬ ಅನುಮಾನವೂ ಮೂಡಬಹುದು.   ಲೈಂಗಿಕ ವಸ್ತುಗಳು ಅಥವಾ ಸಾಮಗ್ರಿಗಳು ಇವುಗಳನ್ನು ಇಂಗ್ಲೀಷಿನಲ್ಲಿ ಸೆಕ್ಸ್ ಟಾಯ್ಸ್ ಎಂದು ಕರೆಯುತ್ತಾರೆ. ಲೈಂಗಿಕತೆಗೆ ಸಂಬಂಧ ಪಟ್ಟಂತೆ ಉಪಯೋಗಿಸುವ ವಸ್ತುಗಳೆಲ್ಲಾ ಈ ಸಾಲಿಗೆ ಬರುತ್ತವೆ. ಬಹಳಷ್ಟು ಜನರು ಲೈಂಗಿಕ ವಿಷಯವೆಂದರೆ ಒಂದು ಕೋಣೆ, ಹಾಸಿಗೆ ಮತ್ತು ಸಂಗಾತಿ ಅಷ್ಟೇ ಎಂದುಕೊಂಡಿರಬಹುದು. ಆದರೆ ಅದನ್ನೂ ಮೀರಿದ ವಿಷಯಗಳು ನೂರಾರಿವೆ. ಅವುಗಳನ್ನು ಚರ್ಚಿಸುವುದೇ ಈ ಲೇಖನದ ಉದ್ದೇಶ. ಲೈಂಗಿಕ ಪರಿಕರಗಳ ಬಗ್ಗೆ ಸರಳವಾಗಿ ಹೇಳಬೇಕೆಂದರೆ ಬಹಳಷ್ಟು ಬಳಕೆಯಲ್ಲಿರುವ ಕಾಂಡೋಮ್ ಸಹ ಒಂದು ಲೈಂಗಿಕ ಪರಿಕರವೇ ಆಗಿದೆ. ಕಾಂಡೋಮ್ ಮೊದಲಿಗೆ ಗರ್ಭನಿರೋಧಕವಾಗಿ ಉಪಯೋಗಕ್ಕೆ ಬಂದಿತು. ನಂತರದ ದಿನಗಳಲ್ಲಿ ರೋಗ ನಿರೋಧಕವಾಗಿ ಹೆಚ್ಚು ಪ್ರಚಾರ ಹಾಗೂ ಉಪಯೋಗಕ್ಕೆ ಬಂತು. ಅದರ ತಯಾರಕರು ಕೂಡಾ ಸುಮ್ಮನಿರದೇ ಅದರ ಮೇಲೆ ಗೆರೆ, ಗುಳ್ಳೆ ಮುಂತಾದವುಗಳನ್ನು ಸೇರಿಸಿ ಲೈಂಗಿಕ ಸಂತೃಪ್ತಿಯನ್ನೂ ನೀಡುವ ವಸ್ತುವನ್ನಾಗಿ ರೂಪಿಸತೊಡಗಿದರು.  ಕಾಂಡೋಮ್ ಎಲ್ಲರಿಗೂ ಪರಿಚಯವಿರುವ ಒಂದು ಲೈಂಗಿಕ ಪರಿಕರ. ಅದಲ್ಲದೇ ಇನ್ನೂ ನೂರಾರು ಲೈಂಗಿಕ ಪರಿಕರಗಳು ಚಾಲ್ತಿಯಲ್ಲಿ ಇವೆ. ಇವುಗಳಲ್ಲಿ ಬಹಳಷ್ಟು ವಸ್ತುಗಳನ್ನು

ಪಾತಾಳ ಲೋಕದ ಸುಂದರಿ

ಹಿಂದೆ ವಿಮಾನವನ್ನು ಕಂಡು ಹಿಡಿಯಲು ರಾಜಾಧಿರಾಜರುಗಳೆಲ್ಲಾ ಪ್ರಯತ್ನಿಸಿದ್ದರಂತೆ. ಕೊನೆಗೆ ಕಂಡು ಹಿಡಿದವರು ರೈಟ್ ಸಹೋದರರು. ಈಗ ಬಾನಿನ ತುಂಬಾ ವಿಮಾನಗಳು ರೆಕ್ಕಿ ಬಿಚ್ಚಿಕೊಂಡು ಹಾರಾಡುತ್ತವೆ. ಅದೆಲ್ಲಾ ವೈಜ್ಞಾನಿಕತೆ ಬದಿಗಿರಲಿ. ನನ್ನಂತಹ ಬಡವನಿಗೂ ಬಾನಲ್ಲಿ ಹಾರುವ ಆಸೆ. ಆದರೆ ಹೇಗೆ? ವಿಮಾನವನ್ನೇರುವಷ್ಟು ಹಣವಿಲ್ಲ. ಹಾಗಾಗಿ ಹಳ್ಳಿಯಲ್ಲಿದ್ದುಕೊಂಡೇ ನನ್ನಾಸೆಯನ್ನು ಪೂರೈಸಿಕೊಳ್ಳಲು ಒಂದು ಉಪಾಯ ಮಾಡಿದೆ. ಅದೇನೆಂದರೆ ಬಿದಿರಿನ ತೆಳು ದರ್ಬೆಗಳನ್ನು ಕಟ್ಟಿ ದೊಡ್ಡದಾದ ಆಕಾಶಬುಟ್ಟಿಯೊಂದನ್ನು ತಯಾರಿಸಿದೆ. ಸುತ್ತಲೂ ಟಾರ್ಫಾಲಿನ್ ಬಿಗಿದು ಒಳಗೆ ಚಿಕ್ಕ ದೊಂದಿಯನ್ನು ಕಟ್ಟಿದೆ. ಒಂದು ದಿನ ಅದರಲ್ಲಿ ಹಾರಾಟ ನಡೆಸುವುದೆಂದು ನಿಶ್ಚಯಿಸಿದೆ. ನಿಗದಿತ ದಿನದಂದು ಹೊಸ ಬಟ್ಟೆ ಧರಿಸಿ ಸಿದ್ಧನಾದೆ. ಆಕಾಶಬುಟ್ಟಿಗೆ ಹಗ್ಗ ಕಟ್ಟಿ  ನಾನು ಕುಳಿತುಕೊಳ್ಳಲೂ ವ್ಯವಸ್ಥೆ ಮಾಡಿಕೊಂಡಿದ್ದೆ. ಜೊತೆಗೆ ಬೇಕಾಗುವ ಎಣ್ಣೆ ಎರಡು ಲೀಟರಿನಷ್ಟನ್ನು ಒಂದು ಕ್ಯಾನ್‌ನಲ್ಲಿ ಕಟ್ಟಿಕೊಂಡೆ. ಆಕಾಶಬುಟ್ಟಿಯ ತಳಭಾಗದಲ್ಲಿ ಮಾತ್ರ ಕೊಂಚ ಜಾಗ ತೆರೆದಿರುತ್ತದೆ. ಅದರ ಮೂಲಕ ಎಣ್ಣೆ ಹಾಕುವುದು. ಎಲ್ಲಾ ತಯಾರಾಗಿದೆಯೆಂದು ಖಾತರಿಯಾದ ಬಳಿಕ ದೊಂದಿಗೆ ಒಂದಿಷ್ಟು ಎಣ್ಣೆ ಹಾಕಿ ಬೆಂಕಿ ಹೊತ್ತಿಸಿದೆ. ಬೇಕಾಗುತ್ತದೆಯೆಂದು ಬೆಂಕಿ ಪೊಟ್ಟಣವನ್ನು ಸಹ ಇರಿಸಿಕೊಂಡೆ. ದೊಂದಿ ಚಿಕ್ಕದಾಗಿ ಆಕಾಶಬುಟ್ಟಿಯೊಳಗೆ  ಉರಿಯತೊಡಗಿತು.  ದೊಂದಿ ಉರಿದಂತೆಲ್ಲಾ ಆಕಾಶಬುಟ್ಟಿಯೊಳಗಿನ ಗಾಳಿ

ಬೆಂಗಳೂರು ಮಹಾನಗರ ಪಾಲಿಕೆಯ ಒತ್ತುವರಿ ಭೂಮಿ ತೆರವು ಯಾವಾಗ ?

ಪಾಲಿಕೆಯ ಸಾವಿರಾರು ಎಕರೆ ಭೂಮಿ ಬಲಾಢ್ಯರಿಂದ ಅತಿಕ್ರಮಣವಾಗಿದೆಯೆಂಬುದು ಅಂಗೈ ಹುಣ್ಣಿನಷ್ಟೇ ಸ್ಪಷ್ಟ. ಒತ್ತುವರಿಯಲ್ಲಿ ಜನಪ್ರತಿನಿಧಿಗಳ ಬೇನಾಮಿ ವಂಚನೆ ಇರದೆ ಇವೆಲ್ಲಾ ನಡೆಯಲು ಸಾಧ್ಯವಿಲ್ಲ. ನಗರದ ಕೆರೆ ಕುಂಟೆಗಳು, ರಾಜಕಾಲುವೆಗಳು, ಹಳೆಯ ಗುಂಡಿತೋಪು ಜಾಗ, ಉದ್ಯಾನವನ, ಸರ್ಕಾರಿ ಕಚೇರಿಗೆ ಸೇರಿದ ಭೂಮಿ,  ಶಾಲೆಗಳ ಆಟದ ಮೈದಾನವೂ ಸೇರಿದಂತೆ ಪಾಲಿಕೆಯ ಭೂಮಿ ಅಕ್ರಮ ಒತ್ತುವರಿಯಾಗಿವೆ. ಜಂಟಿ ಸದನ ಸಮಿತಿ ಅಧ್ಯಕ್ಷರಾಗಿದ್ದ ಎ.ಟಿ. ರಾಮಸ್ವಾಮಿ ಪಾಲಿಕೆ ವ್ಯಾಪ್ತಿಯ ಭೂ ಒತ್ತುವರಿ ಕುರಿತು ತನಿಖೆ ನಡೆಸಿ ಸರ್ಕಾರಕ್ಕೆ ವರದಿ ನೀಡಿದ್ದಾರೆ. ಪೂರಕ ದಾಖಲೆಗಳನ್ನು ಒದಗಿಸಿ ಭೂ ಒತ್ತುವರಿ ವಶಕ್ಕೆ ಶಿಫಾರಸು ಮಾಡಿರುತ್ತಾರೆ. ಆದರೆ ಈ ಸಂಬಂಧ ಪಾಲಿಕೆ ಆಡಳಿತ ದಿಟ್ಟ ಕ್ರಮಕ್ಕೆ ಮುಂದಾಗಿದೆ ನಿರ್ಲಕ್ಷ್ಯ ತೋರಿದೆ. ಅತಿಕ್ರಮಿತ ಭೂಮಿ ವಶಪಡಿಸಿಕೊಂಡರೆ ಪಾಲಿಕೆಗೆ ದೊಡ್ಡ ಮಟ್ಟದ ಆಸ್ತಿ ಉಳಿಯಲಿದೆ. ಆದಾಯಕ್ಕೂ ಮೂಲವಾಗಲಿದೆ.  ಈ ಬಗ್ಗೆ ಬಿಬಿಎಂಪಿ ಮೇಯರ್ ಅವರಿಗೆ ಚಿಂತಿಸಲು ಸಮಯವಿಲ್ಲದಾಗಿದೆ. ನಿರೀಕ್ಷಿತ ಸಾಧನೆ ತೋರದೆ ಅವರು ಸ್ಥಾನ ತ್ಯಜಿಸುವ ಚಿಂತೆ ಅವರದು. ಆಯುಕ್ತ ಎಂ.ಲಕ್ಷ್ಮೀನಾರಾಯಣ ಅವರು ಭೂ ಒತ್ತುವರಿ ಪ್ರಕರಣಗಳ ಬಗ್ಗೆ ಯಾವ ನಿರ್ಧಾರ ತಳೆಯುವರೋ ನೋಡಬೇಕಿದೆ. ಸತ್ಯ ನುಡಿದವರ ಮೇಲೆಯೇ ಗಧಾ ಪ್ರಹಾರ ! ಭೂಮಾಫಿಯಾದ ಕಬಂದ ಬಾಹುಗಳು ಎಷ್ಟು ಬಲಿಷ್ಟವಾಗಿವೆ ಎಂಬುದಕ್ಕೆ ಸತ್ಯ ನುಡಿದು ಈಗ ಸದನದ ಹಕ್ಕುಚ್ಯುತಿ ಎದುರಿಸುತ್ತಿರುವ ಪ್ರಾಮ

ಕುಸಿಯುತ್ತಿರುವ ಕನ್ನಡಿಗರ ಸಂಖ್ಯೆ!

ನಂಬಿದರೆ ನಂಬಿ, ಬಿಟ್ಟರೆ ಬಿಡಿ.... ಕನ್ನಡಿಗರು ಕಾಣೆಯಾಗುತ್ತಿದ್ದಾರೆ. ಅರ್ಥಾತ್ ಕನ್ನಡಿಗರ ಸಂಖ್ಯೆ ನಿಧಾನ ಗತಿಯಲ್ಲಿ ಕುಸಿಯುತ್ತಿದೆ. ದೇಶದ ಅತಿ ದೊಡ್ಡ ಸಮಸ್ಯೆ ಜನಸಂಖ್ಯಾ ಸ್ಪೋಟ ಎಂದು ಹಿಂದಿನಿಂದಲೂ ಕೇಳುತ್ತಾ ಬಂದಿದ್ದೇವೆ. ಆದರೆ ನಂಬಿ, ಕನ್ನಡಿಗರ ಸಮಸ್ಯೆ ಜನಸಂಖ್ಯಾ ಕುಸಿತ! ದೇಶದ ಹೆಸರಲ್ಲಿ ದೇಶನಾಯಕರೆನ್ನಿಸಿಕೊಂಡ ಹಿಂದಿ ಧೂರ್ತರು ನಮಗೆ ನೀಡಿದ ಬಳುವಳಿ ಇದು. ನಂಬಲು ಕಷ್ಟವೇ ? ಲೇಖನವನ್ನು ಓದುತ್ತಾ ಹೋಗಿ. ಇಡಿಯ ದೇಶ ಒಂದು ಎಂದು ಹೇಳುತ್ತಿರುವವರಿಗೆ ಕನ್ನಡಿಗರು ಇದ್ದರೇನು ಬಿಟ್ಟರೇನು ಎಂಬ ಮನಸ್ಥಿತಿ ಇರಬಹುದು. ಹಾಗಾಗಿಯೇ ಏನೋ ಇಡಿಯ ದೇಶಕ್ಕೂ ಒಂದೇ ರೀತಿಯ ಟಿ.ಎಫ್.ಆರ್. (ಟೋಟಲ್ ಫರ್ಟಿಲಿಟಿ ರೇಟ್) ಪ್ರಮಾಣವನ್ನು ನಿಗದಿ ಮಾಡಿದರು. ಆದರೆ ಈಗಾಗಲೆ ನಿಗದಿತ ಟಿ.ಎಫ್.ಆರ್. ಸಾಧಿಸಿರುವ ಕರ್ನಾಟಕದಂತಹ ರಾಜ್ಯಕ್ಕೆ ಇಡೀ ದೇಶದ ಟಿ.ಎಫ್.ಆರ್. ಅನ್ನೇ ಮತ್ತೆ ಹೇರಿರುವ ಮೂಲಕ ಕನ್ನಡಿಗರನ್ನು ನಿರ್ಮೂಲನೆ ಮಾಡಲು ಕೇಂದ್ರ ಹೊಂಚು ಹಾಕಿರುವಂತಿದೆ.  ಟಿ.ಎಫ್.ಆರ್. ಅಂದರೇನು ? ಟೋಟಲ್ ಫರ್ಟಿಲಿಟಿ ರೇಟ್ ಅಥವಾ ರಿಪ್ಲೇಸ್‌ಮೆಂಟ್ ರೇಟ್ ಅನ್ನುವುದು ಯಾವುದೆ ಒಂದು ಸಮಾಜದಲ್ಲಿ ಹೆಣ್ಣೊಬ್ಬಳಿಗೆ ಆಕೆಯ ಜೀವಿತಾವಧಿಯಲ್ಲಿ ಹುಟ್ಟುವ ಸರಾಸರಿ ಮಕ್ಕಳ ಸಂಖ್ಯೆಯಾಗುತ್ತದೆ. ಇನ್ನೂ ವಿವರಿಸಿ ಹೇಳಬೇಕೆಂದರೆ ಒಂದು ಕುಟುಂಬದಲ್ಲಿ ಗಂಡ-ಹೆಂಡತಿಯರಿದ್ದಾರೆ ಅಂದುಕೊಳ್ಳೋಣ. ಅಂದರೆ ಆ ಕುಟುಂಬದ ಜನಸಂಖ್ಯೆ ೨ ಎಂದಾಯ್ತು. ಅವರ ಸಾವಿನ ನಂತರವೂ

ಕಥೆ - ಸವಿ ನೆನಪುಗಳು ಬೇಕು

ಚಾಲುಕ್ಯ ವೈಭವದ ಬಾದಾಮಿ ಬೆಟ್ಟದ ಮಗ್ಗುಲನ್ನು ತೀಡಿಕೊಂಡು ಪಶ್ಚಿಮದ ಗಾಳಿ ರೊಂಯ್ಯನೆ ಬೀಸುತ್ತಿತ್ತು. ಅದರ ರಭಸಕ್ಕೆ ಅವಳ ಅಮೋಘ ಕೇಶರಾಶಿ ಮುಂಗಾರು ಹನಿ ಸುರಿಸಲು ಮಲೆನಾಡಿನತ್ತ ಹೊರಟ ಕರಿ ಮೇಘದಂತೆ ಚಿಲ್ಲನೆ ಚಿಮ್ಮುತ್ತಲಿದ್ದರೆ, ಪಿನ್ ಹಾಕಿದ್ದರೂ ಜರುಗುವ ಸೀರೆಯ ಸೆರಗು ಅದೀಗ ಬೆಳೆದಿದ್ದ ಮೊಲೆಗಳ ಗಾತ್ರವನ್ನು ರವಿಕೆಯೊಳಗಿಂದಲೇ ಪ್ರದರ್ಶಿಸುತ್ತಲಿತ್ತು. ಅದರ ಪರಿವೇ ಆಕೆಗಿರಲಿಲ್ಲ. ಅವಳ ಕೈಲೊಂದು ಪತ್ರಿಕೆಯಿದೆ. ಅದರಲ್ಲಿರುವ ಕಥೆಯೊಂದನ್ನು ಬರೆದವನು ಪಕ್ಕದಲ್ಲೇ ಕುಳಿತಿದ್ದಾನೆ. ವಿಶೇಷವೆಂದರೆ ಆ ಕಥೆಯೊಳಗಿನ ಎರಡು ಪ್ರೇಮಿಗಳು ಅವರೇ ಆಗಿದ್ದಾರೆ! ಬಾದಾಮಿ ಬೆಟ್ಟದ ಮೇಲಿನ ಗುಹಾಂತರ ದೇವಾಲಯದ ಶಿಲ್ವಕಲೆ ಕಾಲದ ಹೊಡೆತಕ್ಕೆ ಸಿಕ್ಕು ಮಸುಕಾಗುತ್ತಿದೆ. ಅವುಗಳೆದುರಿನ ಕಲ್ಲು ಬೆಂಚಿನ ಮೇಲೆ ಥೇಟು ಶಿಲೆಯಂತೆಯೇ ಕುಳಿತಿದ್ದಾಳೆ ಸುಜಾತ. ಆಕೆಯ ಪಕ್ಕದಲ್ಲಿ  ಕುಳಿತ ಜಗದೀಶನ ದೃಷ್ಟಿ ಒಮ್ಮೆ ಅವಳ ಮುಗ್ಧ ಮೊಗದಲ್ಲಿ ಹುದುಗಿರುವ ತಲ್ಲಣವನ್ನು ಹುಡುಕುತ್ತದೆ. ಮತ್ತೊಮ್ಮೆ ಅಕೆಯ ಕೈಲಿರುವ ಪತ್ರಿಕೆಯನ್ನು ನೋಡುತ್ತಾನೆ. ಇನ್ನೊಮ್ಮೆ ಕಳ್ಳ ನೋಟದಲ್ಲಿ ಗಾಳಿಯ ನೆವಕ್ಕೆ ಗೋಚರಿಸುವ ಆಕೆಯ ಪುಟ್ಟ ಮೊಲೆಗಳ ಗಾತ್ರವನ್ನು ಸವಿಯುತ್ತಾದೆ. ಆದರೆ ಮುಂದೆ....? ಅದುವೇ ತಲ್ಲಣ ಅವನನ್ನು ಕಾಡುತ್ತದೆ. ಯಾರು ಯಾರೋ ಪ್ರವಾಸಿಗರು, ವಿದೇಶೀಯರು ತಮ್ಮಷ್ಟಕ್ಕೆ ತಾವೇ ಮಾತನಾಡಿಕೊಳ್ಳುತ್ತ ಚಲಿಸುತ್ತಿದ್ದಾರೆ. ಪ್ರೇಮಿಗಳೆದೆಯಲ್ಲಿಯೇ ಲಕ್ಷಾಂತರ ಮಾತುಗಳು