ಪ್ರೀತಿಸೋದು ಕುಡಾ ಒಂದು ಲೆಕ್ಕಾಚಾರ. ಅದಕ್ಕೂ ಒಂದು ರೀತಿ ನೀತಿಯಿದೆ. ಕಂಡ ಕಂಡವರನ್ನೆಲ್ಲಾ ಪ್ರೀತಿಸಲು-ಪ್ರೇಮಿಸಲು ಸಾಧ್ಯವಿಲ್ಲ. ಪ್ರೇಮ ಹೇಳದೇ ಸಂಭವಿಸಿಬಿಡಹುದು. ಕೇಳದೇ ಬರಬಹುದು ಕೆಲವರು ಬೆನ್ನು ಬಿದ್ದು ಹೋಗಿ ಪ್ರೀತಿಸಬಹುದು. ಕೆಲವರ ಬೆನ್ನು ಬಿದ್ದು ಪ್ರೀತಿಯೇ ಬರಬಹುದು. ಆದರಿಂದ ಪ್ರೀತಿಸುವವರಿಗಾಗಿ ಈ ಲೇಖನ. ಹರೆಯದಲ್ಲಿ ಹಂದಿಯೂ ಚೆಂದ ! ಒಮ್ಮೆ ಹಂದಿ ಫಾರಂಗೆ ಹೋಗಿ ನೋಡಿ. ಅಲ್ಲಿ ಮರಿ ಹಂದಿಗಳಿರುತ್ತವೆ. ಮುದಿ ಹಂದಿಗಳೂ ಇರುತ್ತವೆ. ಜೊತೆಗೆ ಇಲ್ಲಿ ಹರೆಯದ ಹಂದಿಗಳೂ ಇರುತ್ತವೆ. ನಿಮ್ಮ ಗಮನವನ್ನು ಸೆಳೆಯುವವೇ ಅವಲ್ಲವೇ? ಆಹಾ! ಎಷ್ಟು ಸೊಕ್ಕಿವೆ ಅನ್ನಿಸದಿರದು. ಹರೆಯ ಹಂದಿಗೇ ಅಂತಹ ಸೊಗಸನ್ನು ಕೊಡುತ್ತವೆಂದರೆ ಹುಡುಗರ, ಹುಡುಗಿಯರ ಪಾಡೇನು? ಆದ್ದರಿಂದ ಪ್ರೀತಿ-ಪ್ರೇಮ ಸೊಕ್ಕು, ಸೌಂದರ್ಯ ಮನುಷ್ಯ ಮಾತ್ರನಿಗೇ ಇರುವುದು ಎಂಬ ಜಂಬ ಬೇಡ. ಹಂದಿ, ಕಾಗೆಗಳೂ ಪ್ರೀತಿಸುತ್ತವೆಂಬುದು ನೆನಪಿರಲಿ. ಪ್ರೀತಿಸುವವರು ತಾವೇ ಗಂಧರ್ವರೆಂದೋ, ದೇವತೆಗಳೆಂದೋ ಅಂದುಕೊಳ್ಳುವುದು ಮಾಮೂಲು. ಇದೊಂದು ಸಹಜ ಗುಣ. ಎಲ್ಲಾ ಜೀವರಾಶಿಯೂ ಪ್ರೀತಿಸುತ್ತವೆ ಹಾಗೂ ಪ್ರೀತಿಸಲ್ಪಡುತ್ತವೆ. ಇದೊಂದು ಪ್ರಕೃತಿ ನಿಯಮ ಎಂಬ ವಿಷಯ ನೆನಪಿನಲ್ಲಿಸಿಕೊಂಡು ಪ್ರೀತಿಸುವ ಗೋಜಿಗೆ ಹೋಗಬಹುದು. ದೇಹವೇ ಕಾರಣ ಪ್ರೀತಿಗೆ ಮನಸ್ಸು ಒಂದು ಕಾರಣ. ಹಾಗೆಯೇ ದೇಹವೂ ಮತ್ತೊಂದು ಕಾರಣ. ಪ್ರೀತಿಯಲ್ಲಿ ಮನಸ್ಸು ಭಾಗವಹಿಸುತ್ತದೆ. ಪ್ರೇಮದಲ್ಲಿ ಮನಸ್ಸಿನ ಜೊತೆಗೆ ದೇಹ. ಆ ಬೆ
ಮನಸು ಹೃದಯಗಳ ಸವಿಮಾತು............