ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ಮಾರ್ಚ್, 2011 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಮನದನ್ನೆ !

ಮನದಾಳ ಮನದನ್ನೆ ಮನದಲ್ಲಿ ನಿನ್ನನ್ನೇ ನೆನೆ ನೆನೆದು ಮನವಿಲ್ಲಿ ! ಮರವಾಗೆ ಫಲವೆಲ್ಲಿ ? ಹಸಿರಾದ ಮನವೆಲ್ಲಿ ? ಉಸಿರಾದ ನೀನೆಲ್ಲಿ ? ಕೆಸರಾದ ಜಗದಲ್ಲಿ ಕೊಸರಾಡೆ ಕಮಲಕ್ಕೆ ನಿಡಿದಾದ ಉಸಿರಲ್ಲೆ ಬಡವಾದೆ ನಾನಿಲ್ಲಿ ! ನೀನೆಲ್ಲಿ ? ನೀನೆಲ್ಲಿ ?

ಈ ಹುಡುಗಿಯರೇ ಹೀಗೆ !

ಬೆಟ್ಟದ ಬದಿಯಿಂದ ಮುಂಜಾನೆಯ ರವಿ ಇಣುಕಿದಂತೆ ಕಿಟಕಿ ಹಿಂದಿನ ಕಂಗಳು, ಕಂಡೂ ಕಾಣದ ಮುಂಗುರುಳು ಗಲಗಲ ಬಳೆಯ ತರಂಗ ಕಿಲಕಿಲ ನಗುವಿನಂತರಂಗ, ಎದುರು ಬರಲಾರರು ಚೆಲುವೆಯರು ಬಂದರೂ ಬಹು ಲಾಸ್ಯ ಲಜ್ಜೆ ಇಡುತಲಿ ಒಂದೊಂದೇ ಹೆಜ್ಜೆ ಮುಗಿಲಿಂದ ಬರಗಾಲದಿ ಮಳೆ ಹನಿ ಬಿಸಿ ನೆಲಕ್ಕೆ ಎಣಿಸಿ ಮುತ್ತಿಕ್ಕಿದಂತೆ ! ಕಿರು ಹಣತೆ ಉರಿಯಂತೆ ತುಟಿ ರಂಗು ಪತಂಗ ಹಾರಿದಂತೆ ತೆಳು ಸೆರಗು ಕಾವ್ಯದೊಡತಿಯರು, ಮೌನವೇ ಮಾತು. ಅರೆಕ್ಷಣದಿ ಸೃಷ್ಟಿಸಿ ಕಲ್ಪಾನಾ ಲೋಕ ನಗ್ನ ಬಿಂಬ ತೋರಿ ತೆರೆವರು ಪ್ರೇಮಲೋಕ ಒಮ್ಮೆ ಧಾರಾಳ ದಮಯಂತಿ ಮಗದೊಮ್ಮೆ ಮುನಿದ ಮಗುವಂತೆ ಅಲ್ಲಿ ಪ್ರೇಮ ಪ್ರೀತಿಯನ್ನರಸುವ ಹುಡುಗನ ನಿರಂತರ ಬೇಟೆ ! ಅರಿವಾಗುವ ಮುನ್ನವೇ ಮಾನಸಿಕ ಪತ್ನಿಯಾಗಿರುತ್ತಾಳೆ, ಛೇಧಿಸಿ ಹೃದಯ ಕೋಟೆ.

ಭೀತಿ ಹುಟ್ಟಿಸುವ ಜ್ಯೋತಿಷಿಗಳಿಗೆ ಶಿಕ್ಷೆ ಏಕಿಲ್ಲ?

* ದಿನಕರ, ಮಂಗಳೂರು [ ಕೃಪೆ : ದಟ್ಸ್ ಕನ್ನಡ ವಾರ್ತೆ ] ಸೂಪರ್ ಮೂನ್, ಜಪಾನಿನ ಭೂಕಂಪ, ಸುನಾಮಿ ಕೆಲವು ತಥಾಕಥಿತ ಜ್ಯೋತಿಷಿಗಳಿಗೆ ಸುಗ್ಗಿಯ ಸಂಭ್ರಮ ಒದಗಿಸಿದೆ. ಏನೋ ಅನಾಹುತ ಸಂಭವಿಸುವುದೆಂದು ಈ ತಥಾಕಥಿತ ಜೋತಿಷಿಗಳು ಜನರನ್ನು ಭೀತಿಗೆ ತಳ್ಳುತ್ತಿದ್ದಾರೆ. ಟಿವಿ ಮಾಧ್ಯಮಗಳೂ ಇಂತಹ ಕಪಟ ಜ್ಯೋತಿಷಿಗಳಿಗೆ ವೇದಿಕೆಯೊದಗಿಸುತ್ತ ಜನರ ಭೀತಿ ಹೆಚ್ಚಿಸುತ್ತಿವೆ. (ನೈಜ, ಪ್ರಾಮಾಣಿಕ ಜ್ಯೋತಿಷಿಗಳ ಬಗ್ಗೆ ನನ್ನ ತಕರಾರಿಲ್ಲ. ಅವರು ಹೀಗೆ ಮೇಲೆ ಬಿದ್ದು ಪ್ರಚಾರ ಪಡೆಯಲು ಹಂಬಲಿಸುವುದೂ ಇಲ್ಲ) ದಢೂತಿ ಜ್ಯೋತಿಷಿ ಯೊಬ್ಬರಂತೂ ಟಿವಿಯಲ್ಲಿ ಕಾಣಿಸಿಕೊಂಡು ಜನರಲ್ಲಿ ಅನಗತ್ಯ ಭೀತಿ ಹರಡುತ್ತಿದ್ದಾರೆ. ಅವರ ಜಾಣ್ಮೆ ಎಷ್ಟಿದೆಯೆಂದರೆ ಅವರು ಮಾತನಾಡುವುದು ಅಡ್ಡಗೋಡೆಯ ಮೇಲೆ ದೀಪವಿಟ್ಟಂತೆ. ಭೂಕಂಪ, ಪ್ರವಾಹವೇ ಆಗುವುದೆಂದು ತಾನು ಹೇಳಲಾರೆ, ಆದರೆ ಏನೋ ಒಂದು ಆಗಲಿದೆ ಎಂದು ಅವರು ಹೇಳುತ್ತಾರೆ. ಮಾ.19ರಂದೇ ಸಂಭವಿಸುವುದೆಂದು ಹೇಳಲಾರೆ, ಮುಂದೆ ಯಾವಾಗಲೂ ಸಂಭವಿಸಬಹುದು ಎನ್ನುತ್ತಾರೆ.  ಮುಂದಕ್ಕೆ ಲಾರಿಯಡಿಗೆ ನಾಯಿ ಬಿದ್ದು ಸತ್ತರೂ 'ನೋಡಿ, ನಾನು ಹೀಗೆ ಹೇಳಿರಲಿಲ್ಲವೆ ' ಎಂದು ಅವರು ಹೇಳಿದರೂ ಹೇಳಿಯಾರೆ. ಹಿಂದೊಮ್ಮೆ ಇದೇ ರೀತಿ ಟಿವಿ ಜ್ಯೋತಿಷಿಯೊಬ್ಬರು ಬಂಟ್ವಾಳಕ್ಕೆ ಬಂದಿದ್ದಾಗ ಮುಂದಿನ ತಿಂಗಳು ಇಂತಿಷ್ಟೇ ತಾರೀಕಿನಂದು ಪ್ರಳಯ ಸದೃಶ ಮಳೆ ಬಂದು ಬಂಟ್ವಾಳವು ಭೀಕರ ಪ್ರವಾಹಕ್ಕೆ ತುತ್ತಾಗಲಿದೆ ಎಂದು ಹೇಳಿಹೋಗಿದ್ದರು. ಆದರೆ ಅವರು ಹೇ

ಸೂಪರ್ ಮೂನ್’ ಅಪಾಯಕಾರಿಯಲ್ಲ

ಮೊದಲಿಗೆ ಜಪಾನ್'ನ ಭೂಕಂಪ ಮತ್ತು ಅದರಿಂದ ಉಂಟಾದ ತ್ಸುನಾಮಿಯ ಅವಘಡದಲ್ಲಿ ಮಡಿದ ಸಾವಿರಾರು ಜನರಿಗೆ ಶ್ರದ್ಧಾಂಜಲಿ ಅರ್ಪಿಸೋಣ. ಲೆಕ್ಕಕ್ಕೆ ಸಿಗದಿರುವಷ್ಟು ಜನರ ಮರಣ, ಸಮುದ್ರದ ಅಲೆಗಳಲ್ಲಿ ಕೊಚ್ಚಿಹೋದ ಬದುಕು, ಕುಟುಂಬದವರನ್ನು, ಬಂಧುಗಳನ್ನು, ಸ್ನೇಹಿತರನ್ನು ಕಳೆದುಕೊಂಡ ನತದೃಷ್ಟರ ದುಖಃದ ಜೊತೆಗೆ ನಾವು ಭಾಗಿಯಾಗೋಣ. ಇವಿಷ್ಟೇ ಅಲ್ಲದೇ ಸ್ಫೋಟಗೊಂಡ ಪರಮಾಣು ಸ್ಥಾವರ, ಬೆಂಕಿಯ ಅನಾಹುತಗಳು, ಇವೆಲ್ಲವುಗಳಿಂದ ಪುಟ್ಟರಾಷ್ಟ್ರ ಜಪಾನ್ ಆದಷ್ಟು ಬೇಗ ಚೇತರಿಸಿಕೊಳ್ಳಲಿ ಎಂದು ಆಶಿಸೋಣ.   ಇವೆಲ್ಲವುಗಳ ಹಿಂದೆ ಕೇಳಿ ಬರುತ್ತಿರುವ ವಿದ್ಯಮಾನ ಇದೇ ತಿಂಗಳ 19ರಂದು ಸಂಭವಿಸಲಿರುವ 'ಸೂಪರ್ ಮೂನ್'. ಏನಿದು ಸೂಪರ್ ಮೂನ್?   ನಮಗೀಗ ತಿಳಿದಿರುವಂತೆ ನಮ್ಮ ಗೆಲಾಕ್ಸಿಯಲ್ಲಿ ಎಲ್ಲಾ ನಕ್ಷತ್ರಗಳು ಗೆಲಾಕ್ಸಿಯ ಕೇಂದ್ರದ ಸುತ್ತ, ಗ್ರಹಗಳು ನಕ್ಷತ್ರಗಳ ಸುತ್ತ, ಆ ಗ್ರಹಗಳನ್ನು ಕೆಲವು ಉಪಗ್ರಹಳು ಸುತ್ತುತ್ತಾ ಎಲ್ಲವೂ ಸತತ ಚಲನೆಯಲ್ಲಿವೆ. ನಮ್ಮ ಸೌರವ್ಯೂಹದ ಮಟ್ಟಿಗೆ ಹೇಳುವುದಾದರೆ ಸೂರ್ಯನ ಸುತ್ತ ಪ್ರಮುಖವಾಗಿ ಎಂಟು ಗ್ರಹಗಳು, ಕುಬ್ಜಗ್ರಹಗಳು (Dwarf Planets – Pluto ಈಗ ಒಂದು ಕುಬ್ಜಗ್ರಹ ಪಟ್ಟಿಯಲ್ಲಿರುವ ಗ್ರಹ), ಧೂಮಕೇತುಗಳು, ಅನೇಕ ಕ್ಷುದ್ರಗ್ರಹಗಳು (ಮಂಗಳ ಮತ್ತು ಗುರು ಗ್ರಹದ ನಡುವೆ ಇರುವ ಪಟ್ಟಿ), ಸುತ್ತುತ್ತಿವೆ. ಆದರೆ ಇವುಗಳ ಕಕ್ಷೆಗಳೆಲ್ಲಾ ವೃತ್ತಾಕಾರವಾಗಿಲ್ಲ. ಹೆಚ್ಚಿನವು ದೀರ್ಘವೃತ್ತಾಕಾರದ

ಹೊಗಳು ಭಟ್ಟರ ಪಡೆ ಕಟ್ಟಲು ಹೊರಟ ವಿಶ್ವೇಶ್ವರ ಭಟ್ಟರು !

ನನಗೆ ಹೀಗನ್ನಿಸಿದ್ದು ಸುಳ್ಳಲ್ಲ. ಕನ್ನಡಪ್ರಭದ ಪ್ರಧಾನ ಸಂಪಾದಕರಾದ ವಿಶ್ವೇಶ್ವರ ಭಟ್ಟರು ಹಿಂದಿನ ವಿಜಯ ಕರ್ನಾಟಕ ತೊರೆದಾದ ನಂತರ ತಮ್ಮ ಬಿಡುವಿನ ಸಮಯದಲ್ಲಿ ಬಹುಶಃ ತಮ್ಮ ಬರವಣಿಗೆಯನ್ನು ಜಾರಿಯಲ್ಲಿಡಲು ಅಂತಲೇ ಇರಬಹುದು, ತಮ್ಮದೇ ಒಂದು ಜಾಲತಾಣ [ http://vbhat.in/ ] ಶುರು ಮಾಡಿದ್ದರು. ಅದು ಇಂದಿಗೂ ಚಾಲ್ತಿಯಲ್ಲಿದೆ. ಚೆನ್ನಾಗಿ ಬರೆಯುತ್ತಾರೆಂಬುದು ರಾಜ್ಯಕ್ಕೆಲ್ಲಾ ಗೊತ್ತಿದೆ. ಆದರೆ ಅವರ ಜಾಲತಾಣದಲ್ಲಿ ಅವರ ಲೇಖನ / ಬರಹಗಳನ್ನು ಹೊಗಳಿ ಪ್ರತಿಕ್ರಿಯೆ ನೀಡಿದರೆ, ಬೇರೆಯವರನ್ನು ತೆಗಳಿ ಪ್ರಶ್ನೆ ಕೇಳಿದರೆ ಅವೆಲ್ಲಾ ಅಲ್ಲಿ ಪ್ರಕಟವಾಗುತ್ತವೆ. [ ಕೇಳ್ರಪ್ಪೋ ಕೇಳಿಯಲ್ಲಿ ಬೇರೆಯವರ ತೆಗಳಿಕೆಯೇ ಮುಖ್ಯ ವಸ್ತು ] ಆದರೆ ಅಪ್ಪಿ ತಪ್ಪಿ ನೀವೇನಾದರೂ "ಭಟ್ರೇ ನಿಮ್ಮ ಈ ಲೇಖನ / ಬರಹ ನನಗೆ ಇಷ್ಟವಾಗಲಿಲ್ಲ" ಅಂತೇನಾದರೂ ಪ್ರತಿಕ್ರಿಯೆ ಕೊಟ್ಟರೆ ಅದನ್ನವರು ಪ್ರಕಟಿಸುವುದೇ ಇಲ್ಲ! ಇದು ನಾನು ಸ್ವತಃ ನೋಡಿರುವ ವಿಷಯ. ಅಂದರೆ ಇದರರ್ಥ ಭಟ್ಟರಿಗೆ ಬರೇ ಮುಖಸ್ತುತಿ ಮಾಡುವವರು ಬೇಕು, ವಿಮರ್ಶಿಸುವವರು ಬೇಕಾಗಿಲ್ಲ. ಇವರು ಬರೆಯುವುದೆಲ್ಲಾ ಎಲ್ಲರಿಗೂ ಇಷ್ಟವಾಗಬೇಕು ಅನ್ನುವುದು ಇವರ ಆಸೆಯೋ, ಅಥವಾ ತಮ್ಮ ಬರಹವನ್ನು ಇಷ್ಟ ಪಡದವರು ಬಾಯಿಯನ್ನೇ ಬಿಡಬಾರದು ಅನ್ನುವ ದುರಾಸೆಯೆಯೋ ಏನೋ. ಒಟ್ಟಿನಲ್ಲಿ ಭಟ್ಟರು ಹೊಗಳುಭಟ್ಟರ ಪಡೆ ಕಟ್ಟಲು ಹೊರಟಿದ್ದಾರೆಂದಾಯ್ತು.