ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ಜುಲೈ, 2014 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಬಿಜೆಪಿಯವರು ದೇವರಲ್ಲ, ಕಾಂಗ್ರೆಸ್‌ನವರು ರಾಕ್ಷಸರಲ್ಲ

​ ಬಿಜೆಪಿಯ ಭಟ್ಟಂಗಿಗಳು 'ಕಾಂಗ್ರೆಸ್‌ನಿಂದ ಏನೂ ಅಭಿವೃದ್ದಿ ಆಗಿಲ್ಲ' ಎಂದು ಹೇಳುತ್ತಾ ಮತ್ತೊಂದು ಕಾಂಗ್ರೆಸ್ ವಿರೋಧಿ ಸಮೂಹ ಸನ್ನಿ ಸೃಷ್ಟಿಸುತ್ತಿದ್ದಾರೆ, ಅಥವಾ ಈಗಾಗಲೇ ಸೃಷ್ಟಿಸಿದ್ದಾರೆ. ಕಾಂಗ್ರೆಸ್‌ನಿಂದ ಅಭಿವೃದ್ದಿಯೇ ಆಗಿಲ್ಲ ಅನ್ನೋದನ್ನ ಒಪ್ಪಲು ಸಾಧ್ಯವೇ ?  ಖಂಡಿತಾ ಬೇಕಾದಷ್ಟು ಕೆಲಸಗಳಾಗಿವೆ.  ನಮ್ಮ ಹಳ್ಳಿಯಲ್ಲಿ ಅವರು ಶಾಲೆಯನ್ನು ತೆರೆಯದೇ ಹೋಗಿದ್ದರೆ ನಾನಿವತ್ತು ನಮ್ಮ ತಂದೆ ತಾಯಿಯಂತೆ ನಮ್ಮೂರಿನ ಧನಿಕರ ಮನೆ ಸೆಗಣಿ ಬಳಿದುಕೊಂಡು ಜೀವಿಸಬೇಕಾಗಿತ್ತು! ನನಗಿಂತಾ ಹಿಂದಿನವರು ಕಲಿಯುವ ಅವಕಾಶವಿಲ್ಲದೇ ಆ ಕೆಲಸ ಮಾಡಿಕೊಂಡಿದ್ದಾರೆ. ಅಂದು ಐದನೇ ತರಗತಿ ವರೆಗೆ ಮಾತ್ರ ಇದ್ದ ಶಾಲೆಯಲ್ಲಿ ಏಳನೇ ತರಗತಿ ವರೆಗೂ ಅವಕಾಶ ಕಲ್ಪಿಸಿದಾಗ ಅದೇ ಊರಿನ ಮೇಲ್ವರ್ಗದ ಧನಿಕರು ಶಾಲೆಗೆ ಬೀಗ ಜಡಿದು ಉಪಾಧ್ಯಾಯರಿಗೆ 'ನಮ್ಮ ಅನುಮತಿ ಇಲ್ಲದೇ ಹೇಗೆ ಏಳನೇ ತರಗತಿ ವರೆಗೂ ಪಾಠ ಮಾಡ್ತೀರಿ ?' ಎಂದು ಧಮಕಿ ಹಾಕಿದ್ದನ್ನ ನಾನಿನ್ನೂ ಮರೆತಿಲ್ಲ. ಈ ಊರಿನ ಬಡ ಮಕ್ಕಳೆಲ್ಲಾ ಹೆಚ್ಚು ಓದುತ್ತಾ ಹೋದಂತೆ ತಮ್ಮ ಮನೆ-ತೋಟದ ಕೆಲಸಕ್ಕೆ ಕೂಲಿಗಳ ಬರ ಏರ್ಪಡುತ್ತದೆ ಎಂಬ ಆತಂಕ ಅಂದೇ ಅವರನ್ನು ಕಾಡಿತ್ತು! ಕಾಂಗ್ರೆಸ್ ಸರ್ಕಾರ ಸರ್ಕಾರಿ ಬಸ್ ಸೇವೆಯನ್ನು ನಮ್ಮ ಕುಗ್ರಾಮಗಳವರೆಗೂ ನೀಡದೇ ಹೋಗಿದ್ದರೂ ಸಹ ನನ್ನ ವಿಧ್ಯಾಭ್ಯಾಸ ಏಳನೇ ತರಗತಿಗೇ ಕೊನೆಯಾಗಿರುತ್ತಿತ್ತು. ಇಂತಹ ಅನೇಕ ಸವಲತ್ತುಗಳನ್ನು ಪಡೆದು ಬೆಳೆದ ನಾನು ಕಾಂಗ್ರೆಸ್‌ನಿಂದ

ಅತ್ಯಾಚಾರ ಮಾಡಿದರೆ ಸರಿ ಹೋಗುತ್ತದೆ !?

​ ಬ್ರಾಹ್ಮಣರನ್ನು ಟೀಕಿಸಿದರು ಎಂಬ ಒಂದೇ ಕಾರಣಕ್ಕಾಗಿ ವಿಪ್ರನೊಬ್ಬ 'ನಿಮ್ಮಂತ ಮಹಿಳೆಯರ ಜುಟ್ಟು ಹಿಡಿದು ಅತ್ಯಾಚಾರ ಮಾಡಿದರೆ ಸರಿ ಹೋಗುತ್ತದೆ' ಎಂದು ಆದೇಶ ಹೊರಡಿಸಿದ್ದಾನೆ. ಅಲ್ಲಿಗೆ ಹೆಣ್ಣನ್ನು ಬೆಂಕಿಗೆ ಹಾಕುವಲ್ಲಿಂದ ಶುರುವಾದ ಹಿಂದೂ ಧರ್ಮ ಇದೀಗ ಅತ್ಯಾಚಾರ ಮಾಡಿಸುವಲ್ಲಿಗೆ ಬಂದು ನಿಂತಿದೆ ಎಂದಾಯ್ತು.  ಸಾವಿರಾರು ವರ್ಷಗಳಿಂದಲೂ ಭಾರತೀಯರನ್ನು ವಂಚಿಸುತ್ತಾ ಬಂದ ಪುರೋಹಿತ ವರ್ಗ, ತಮ್ಮ ಜಾತಿಯ ಮಹಿಳೆಯರನ್ನೂ ಬೆಂಕಿಗೆ ಹಾಕಿ ಸುಡುತ್ತಾ ಬಂದಿತ್ತು. ಇದಕ್ಕೆ ಅವರು ನೀಡಿದ ಸುಂದರವಾದ ಹೆಸರು 'ಸತಿ ಸಹಗಮನ ಪದ್ದತಿ'. ಗಂಡ ಸತ್ತಾಗ ತಾನಾಗಿಯೇ ಮಹಿಳೆ ಆತನ ಚಿತೆಗೆ ಹಾರಿ ಪ್ರಾಣ ಬಿಡುತ್ತಿದ್ದಳು ಎಂಬ ಕತೆಯನ್ನು ಇಂದಿಗೂ ಕಟ್ಟಿ ಹೇಳುವವರಿದ್ದಾರೆ. ಎಲ್ಲೋ ಅಲ್ಲೊಂದು ಇಲ್ಲೊಂದು ಇಂತಹ ಪ್ರಸಂಗಗಳು ನಡೆದಿಲ್ಲ ಎನ್ನಲಾರೆ. ಆದರೆ ಎಲ್ಲಾ ಹೆಣ್ಣುಗಳೂ ಈ ರೀತಿ ಗಂಡನ ಜೊತೆ ಪ್ರಾಣತ್ಯಾಗ ಮಾಡುತ್ತಾರೆದರೆ ನಂಬಲಾದೀತೆ ? ಇತ್ತೀಚಿಗೆ ಫೇಸ್‌ಬುಕ್‌ನಲ್ಲಿ ಒಬ್ಬಾಕೆ 'ಮೊದ ಮೊದಲು ಒತ್ತಾಯಪೂರ್ವಕವಾಗಿ ಬೆಂಕಿಗೆ ಹಾರಿಸಿರಬಹುದು, ನಂತರ ತಾವೇ ಇಷ್ಟ ಪಟ್ಟು ಬೆಂಕಿಗೆ ಹಾರಲು ಶುರು ಮಾಡಿರಬಹುದು' ಎಂದು ಬಡಬಡಿಸಿದ್ದರು ! ಇವರ ಗಂಡ ಸತ್ತಾಗ ಇವರೂ ಇಷ್ಟಪಟ್ಟು ಬೆಂಕಿಗೆ ಹಾರಿಬಿಡುತ್ತಾರೋ ಏನೋ. ಅಂದರೆ ಮೊದಲು ಒತ್ತಾಯಪೂರ್ವಕವಾಗಿ ಬೆಂಕಿಗೆ ಹಾಕಿದರು, ಬರ ಬರುತ್ತಾ ವಿಧವೆಯರಿಗೆ ಅದು ಅನಿವಾರ್ಯ ಆಯ್ತು! ಆದರೆ ಪುರೋ