ಎಟಿಎಂನಲ್ಲಿ ಹಣ ದರೋಡೆಗಳು ಹೆಚ್ಚುತ್ತಿವೆ. ಬೆದರಿಸಿ ಎಟಿಎಂನಿಂದ ಹಣ ಪಡೆಯುವಾಗ ಏನು ಮಾಡಬೇಕು ? ಪಿನ್ ಸಂಖ್ಯೆಯನ್ನು ತಿರುಗಾಮುರುಗಾ ಹಾಕಿದರೆ ಇದು ಪೊಲೀಸ್‌ಗ್ ಸಂದೇಶ ರವಾನಿಸುತ್ತೆ ಎಂದು ಕೆಲವರು ಹೇಳುತ್ತಾರೆ. ಆದರೆ ಅದು ನಿಜವಲ್ಲದಿರಬಹುದು. ಆದರೆ ಇಂತಹುದೊಂದು ವ್ಯವಸ್ಥೆ ಖಂಡಿತಾ ಅಗತ್ಯವಿದೆ ಅಲ್ಲವೆ.
ನನಗೆ ಅನ್ನಿಸಿದ್ದು ಪಿನ್ ಜೊತೆ ಇನ್ನೊಂದು ಎಮರ್ಜೆನ್ಸಿ ಸಂಖ್ಯೆಯನ್ನು ನಮ್ಮ ಖಾತೆಗೆ ಸೆಟ್ ಮಾಡಿಕೊಳ್ಳುವ ವ್ಯವಸ್ಥೆಯನ್ನು ಮಾಡಿ ಕೊಡಬೇಕು. ಅಂದರೆ ಎಟಿಎಂ ನಲ್ಲಿ ಆ ಸಂಖ್ಯೆಯನ್ನು ಒತ್ತಿದರೆ ನಮ್ಮ ಖಾತೆ ಲಾಕ್ ಆಗಿ ಹಣ ಬರಬಾರದು, ಬದಲಿಗೆ 'ನಿಮ್ಮ ಖಾತೆಯಲ್ಲಿ ಹಣವಿಲ್ಲ' ಎಂಬ ಸಂದೇಶವನ್ನು ತೋರಿಸಬೇಕು. ಒಮ್ಮೆ ಹೀಗೆ ಲಾಕ್ ಆದರೆ ನಾವು ನಮ್ಮ ಬ್ಯಾಂಕ್‌ಗೇ ಹೋಗಿ ಅದನ್ನು ಸರಿಪಡಿಸಿಕೊಳ್ಳುವಂತಿರಬೇಕು.
ಹೀಗಾದರೆ ಕೊಂಚ ಅನುಕೂಲವಾಗಬಹುದು ಅನ್ನೋದು ನನ್ನ ಯೋಚನೆ.
ಕಾಮೆಂಟ್‌ಗಳು