ವಿಷಯಕ್ಕೆ ಹೋಗಿ

ಗುಬ್ಬಿ ಗೂಡು ಮತ್ತು ಅನಾಥ ಮರಿ !



ಆಗ ನಾನು ಕುಂಬಳಗೊಡಿನ ಪೆಪ್ಸಿ ಕಂಪನಿಯ ಸಮೀಪ ಮನೆ ಮಾಡಿಕೊಂಡಿದ್ದೆ. ಆ ಮನೆಯ ಹೊರಗಿನ ಒಂದು ಮೂಲೆಯಲ್ಲಿ ಒಂದು ಜೋಡಿ ಗುಬ್ಬಿಗಳು ಗೂಡು ಮಾಡಿಕೊಂಡು ಇದ್ದವು. ಅವು ಮೊಟ್ಟೆ ಇಟ್ಟು ಮರಿಯನ್ನೂ ಮಾಡಿದವು. ಅದೇ ಸಮಯಕ್ಕೆ ಸರಿಯಾಗಿ ಹತ್ತಿರದಲ್ಲೆ ಇದ್ದ ನನ್ನ ಗೆಳೆಯನ ಮೆಯವರು ಅವರ ಗೋಡೌನ್‌ ಸ್ವಚ್ಚ ಮಾಡುವಾಗ ಅಲ್ಲಿಯೂ ಒಂದು ಗುಬ್ಬಿ ಗೂಡು ಇದ್ದು, ಅದರಲ್ಲೂ ಎರಡು ಮರಿಗಳು ಇದ್ದವು. ಆದರೆ ಅವರು ನೋಡದೇ ಎಳೆದು ಹಾಕಿದ್ದರಿಂದ ಬಿದ್ದು ಒಂದು ಮರಿ ಸತ್ತು ಹೋಗಿ ಮತ್ತೊಂದು ಮರಿ ಮಾತ್ರ ಉಳಿಯಿತು. ಅದನ್ನು ಅವನು ತಂದು ನನಗೆ ಕೊಟ್ಟ. ನಾನದನ್ನು ನಮ್ಮ ಮನೆಯಲ್ಲಿ ಇದ್ದ ಗುಬ್ಬಿ ಗೂಡಿನ ಒಳಗೆ ಇದನ್ನೂ ಬಿಟ್ಟೆ. ಮೂರೂ ಮರಿಗಳೂ ಒಂದೇ ತರ ಇದ್ದವು. ಮೂರೂ ಕಣ್ಣು ಕೂಡಾ ಬಿಟ್ಟಿರಲಿಲ್ಲ.

ಆದರೆ ಹೊರಗೆ ಹೋಗಿದ್ದ ತಾಯಿ ಗುಬ್ಬಿ ಬಂದು ತನ್ನ ಮರಿಗಳ ಜೊತೆ ಬೇರೆ ಮರಿಯೊಂದು ಇರುವುದನ್ನು ಹೇಗೋ ಗುರುತಿಸಿ ಅದನ್ನು ಎಳೆದು ಹೊರಗೆ ಹಾಕಿತು. ಅದು ಹೀಗೆ ಮಾಡಬಹುದು ಎಂದು ಮೊದಲೇ ಊಹಿಸಿದ್ದ ನಾನು ಆ ಗೂಡಿನ ನೇರಕ್ಕೆ ಗೋಣಿಚೀಲಗಳನ್ನೆಲಾ ಹಾಕಿ ಮೆತ್ತೆ ಮಾಡಿ ಇಟ್ಟಿದ್ದೆ, ಮರಿ ಬಿದ್ದರೂ ಏನೂ ಆಗಬಾರದು ಅಂತ. ತಾಯಿ ಗುಬ್ಬಿ ಹೊರಗೆ ಹೋದಾಗ ಮತ್ತೆ ಆ ಮರಿಯನ್ನು ಗೂಡಿನೊಳಗೆ ಬಿಟ್ಟರೂ ಮತ್ತೊಮ್ಮೆ ಬಂದಾಗ ಮತ್ತೆ ಹೊರಗೆ ತಳ್ಳಿತು.

ಬೇರೆ ದಾರಿ ಕಾಣದೇ ಅನಾಥ ಮರಿಯನ್ನು ತಂದು ಮನೆಯ ಒಳಗೆ ಒಂದು ಮೂಲೆಯಲ್ಲಿ ಗೂಣಿಚೀಲವನ್ನೇ ಗೂಡಿನಂತೆ ಮಾಡಿ ನೀರು ಕುಡಿಸಿ ಮರಿಯನ್ನು ಅಲ್ಲಿ ಬಿಟ್ಟೆ. ಆದರೆ ಆ ಮರಿ ಒಂದೇ ಸಮನೆ ಚಿಂವ್ ಚಿಂವ್‌ ಎಂದು ಕೂಗು ಹಾಕುತ್ತಿತ್ತು.

ಏನೂ ಮಾಡಲೂ ತೋಚದೇ ನನ್ನಷ್ಟಕ್ಕೆ ನಾನು ಪುಸ್ತಕ ಓದುತ್ತ ಕುಳಿತಿದ್ದೆ. ಈ ಅನಾಥ ಮರಿಯ ಕೂಗನ್ನು ಕೇಳಿದ ಹೊರಗಿನ ಗುಬ್ಬಿ ನಿಧಾನಕ್ಕೆ ಒಳಗೆ ಬಂದು ಈ ಮರಿಯನ್ನು ನೋಡಿಕೊಂಡು ಹಾರಿ ಹೋಯ್ತು. ಮತ್ತೆ ಸ್ವಲ್ಪ ಹೊತ್ತಿಗೆ ಹೊರಗಿನಿಂದ ಹಾರಿ ಬಂದು ಮರಿಯ ಬಳಿ ಹೋಯ್ತು. ನೋಡಿದರೆ ತಾಯಿ ಗುಬ್ಬಿಯ ಬಾಯಲ್ಲಿ ಒಂದು ಹುಳವಿದೆ ! ಅದನ್ನು ಈ ಮರಿಗೆ ತಿನ್ನಿಸಿ ಮತ್ತೆ ಹಾರಿ ಹೋಯ್ತ. ಆಮೇಲೆ ಗೂಡಿನ್ಲಿನ ತನ್ನ ಮಾರಿಗಳಿಗೆ ಆಹಾರ ತಂದು ಕೊಡುವುದರ ಜೊತೆಗೆ ಈ ಮರಿಗೂ ಆಹಾರ ತಂದು ಕೊಡಲು ಶುರು ಮಾಡಿತು. ಒಂದೆರಡು ದಿನ ಕಳೆದಾಗ ಈ ಮರಿಯನ್ನು ಈಗ ಅದು ತನ್ನ ಮರಿಯಂತೆಯೇ ಸ್ವೀಕರಿಸಿದೆ ಎಂದು ತಿಳಿದುಕೊಂಡ ನಾನು ಮತ್ತೆ ಇದನ್ನು ಆ ಗೂಡಿನಲ್ಲಿ ಬಿಟ್ಟೆನು. ಗೂಡಿಗೆ ಮರಳಿದ ತಾಯಿ ಗುಬ್ಬಿ ಅದನ್ನು ಒಪ್ಪದೇ ಮತ್ತೆ ಎಳೆದು ಹೊರಗೆ ಹಾಕಿತು. ಸರಿ ಎಂದು ತಂದು ಗೋಣಿಚೀಲದ ಗೂಡಿನಲ್ಲೇ ಆ ಮರಿಯನ್ನು ಬಿಟ್ಟೆ. ಆ ತಾಯಿ ಗುಬ್ಬಿ ಆಹಾರ ಕೊಡುವುದನ್ನು ಮುಂದುವರಿಸಿತು. ಯಾಕೆ ತನ್ನ ಗೂಡಿನಲ್ಲಿ ಈ ಅನಾಥ ಮರಿಯನ್ನು ಸೇರಿಸಲಿಲ್ಲ ಅನ್ನೋದು ನನಗೆ ಗೊತ್ತಾಗಲಿಲ್ಲ. ಆದರೆ ಈ ಮರಿಯ ಕೂಗಾಟ ಕೇಳಿ ಆಹಾರ ತಂದು ಕೊಡುವುದನ್ನು ಮಾತ್ರ ಅದು ಬಿಡಲಿಲ್ಲ.

ಈ ನಡುವೆ ಈ ಅನಾಥ ಮರಿ ಸ್ವಲ್ಪ ದಿನದಲ್ಲಿ ಖಾಯಿಲೆ ಬಿದ್ದು ಒಂದೆರಡು ದಿನಕ್ಕೇ ಸತ್ತೂ ಹೋಯಿತು. ಆ ಮರಿ ಸತ್ತ ಒಂದೆರಡು ದಿನಗಳ ವರೆಗೆ ತಾಯಿ ಗುಬ್ಬಿ ಒಳಗೆ ಬಂದು ಅನಾಥ ಮರಿ ಇದ್ದ ಜಾಗವನ್ನು ನೋಡಿಕೊಂಡು ಹೋಗುತ್ತಿತ್ತು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಗುರುವಿನಂತಹ ಆಂಟಿಯಿರಬೇಕು

ಎಲ್ಲರಿಗೂ ಅಂಥಹ ಆಂಟಿ ಸಿಕ್ಕಿಬಿಡುತ್ತಾರೆನ್ನಲಾಗದು. ಆದರೂ ಸಿಕ್ಕಿವರೇ ಅದೃಷ್ಟವಂತರು. ಆಂಟಿಯೆಂದರೆ `ಚಿಕ್ಕಮ್ಮ' ಎಂದು ಆರ್ಥ. ಅಂದರೆ ಅಮ್ಮನಿಗೇ ಸಮಾನ. ಆದರೆ ಆಂಟಿ ನೀಡುವ ಪ್ರೀತಿ. ವಿಶ್ವಾಸ ವಿಭಿನ್ನ. ಆಂಟಿ ಎಂಬುದರ ಅರ್ಥ ಚಿಕ್ಕಮ್ಮನೇ ಆದರೂ ಎಲ್ಲರಿಗೂ ಚಿಕ್ಕಮ್ಮ ಇರುವ ಸಂದರ್ಭ ಕಡಿಮೆ. ಇದ್ದರೂ ನಾವು ಬಯಸುವಂತಹ ದೇವರಂತಹ ಅಥವಾ ಗುರುವಿನಂತಹ ಆಂಟಿಯಾಗಿರಲೂ ಸಾಧ್ಯವಿಲ್ಲ. ಆಗ ಬೇರೆ ಯಾರೋ ಒಬ್ಬರು ಆ ಜಾಗಕ್ಕೆ ಬಂದರೆ ಉತ್ತಮ. ಆದರಲ್ಲೂ ಟೀನೇಜ್ನ ಹುಡುಗ ಹುಡುಗಿಯರಿಗೆ ಅಪ್ಯಾಯಮಾನಳಾದ ಒಬ್ಬ ಆಂಟಿ ಇರಲೇಬೇಕು. ಆಕೆಗೆ ಮೂವತ್ತರಿಂದ ನಲವತ್ತು ವರ್ಷ ವಯಸ್ಸಿರಬೇಕು. ಅಂದಾಗ ಮದುವೆಯಾಗಿರುತ್ತದೆ. ಮತ್ತು ಹೆಚ್ಚು ಕಡಿಮೆ ಟೀನೇಜು ಪ್ರವೇಶಿಸುವ ಅಥವಾ ಪ್ರವೇಶಿಸಿರುವ ಮಕ್ಕಳಿರುತ್ತಾರೆ. ಗೆಳೆತನದ ಅನುಭವದ ಜೊತೆಗೆ ತಾಯ್ತನದ ಅನುಭವವೂ ಇರುತ್ತದೆ. ಆಕೆಯ ಮೇಲೆ ಗೌರವವೂ ಮೂಡುತ್ತದೆ. ಅವರು ನಮ್ಮನ್ನು ಪ್ರೀತಿಸುತ್ತಾಳೆ. ಒಳ್ಳೆಯ ಗುಣಗಳನ್ನು ಹೇಳಿಕೊಡುತ್ತಾಳೆ. ತಪ್ಪು ಮಾಡಿದಾಗ ಖಂಡಿಸುತ್ತಾಳೆ, ಜೋಕು ಹೇಳಿದಾಗ ನಕ್ಕು ಪ್ರೋತ್ಸಾಹಿಸುತ್ತಾಳೆ. ಅಲ್ಪಸ್ವಲ್ಪ ಪೋಲಿತನಗಳನ್ನೂ ಸಹಿಸುತ್ತಾಳೆ. ಹೆಚ್ಚಾದರೆ ತಿವಿದು ಬುದ್ಧಿ ಕಲಿಸುತ್ತಾಳೆ. ಹೆಚ್ಚಾಗಿ ಸ್ವಂತ ಚಿಕ್ಕಮ್ಮನಿಲ್ಲದೇ ಹೋದಾಗ ಗೆಳೆಯ ಗೆಳತಿಯರ ತಾಯಿ ಈ ಪಾತ್ರ ವಹಿಸಬಲ್ಲರು. ಬಾಲ್ಯದಲ್ಲಿ ನಮ್ಮನ್ನು ಎತ್ತಿ ಮುದ್ದಾಡಿದ ಪಕ್ಕದ ಮನೆ ಆಂಟಿ ಈ ಸ್ಥಾನ ತುಂಬಲು ತೀರಾ ಯೋಗ್ಯ. ಈ ಆ...

ದೈವಜ್ಞರು ತಂದಿಟ್ಟ ಪಜೀತಿ!

ಇದು ನಿನ್ನೆ ತಾನೆ ನಡೆದ ಘಟನೆ. ನನ್ನ ಆತ್ಮೀಯ ಸ್ನೇಹಿತನೊಬ್ಬ ಸ್ವಲ್ಪ ಆರ್ಥಿಕ ತೊಂದರೆಯಲ್ಲಿ ಸಿಕ್ಕಿ ಹಾಕಿಕೊಂಡಿದ್ದಾನೆ. ಆತನ ಸಂಬಂಧಿಕರು ಯಾರೋ ಪರಿಹಾರಕ್ಕಾಗಿ ಹಿರಿಯ ಆಧ್ಯಾತ್ಮಿಕವಾದಿಯಾದ ದೈವಜ್ಞ ಬಿರುದಾಂಕಿತ ಶ್ರೀ ಸೋಮಯಾಜಿಯವರ ಬಳಿ ಹೋಗಿ ಸಲಹೆ ಕೇಳುವಂತೆ ತಿಳಿಸಿದ್ದಾರೆ. ಅದರ ಪ್ರಕಾರ ನನ್ನ ಸ್ನೇಹಿತ ಮತ್ತು ಅವನ ಪತ್ನಿ ನಿನ್ನೆ ಇವರ ಬಳಿ ತೆರಳಿದ್ದಾರೆ. ಸಮಸ್ಯೆಯನ್ನು ಪೂರ್ತಿ ಆಲಿಸಿದ ಬಳಿಕ ಅವರು ನನ್ನ ಸ್ನೇಹಿತನಿಗೆ ಅವನ ಪತ್ನಿಯ ಎದುರೇ ಹೇಳಿದ್ದು "ನಿಮಗೆ ಈಗ ಅಥವಾ ಹಿಂದೆ ಬೇರೆ ಹೆಣ್ಣಿನೊಂದಿಗೆ ಸಂಬಂಧ ಇದ್ದುದರಿಂದ ಆಕೆಯ ಶಾಪ ತಟ್ಟಿದೆ. ಆ ಕಾರಣದಿಂದಲೇ ನೀವು ಸಮಸ್ಯೆಯಲ್ಲಿ ಸಿಕ್ಕಿ ಹಾಕಿಕೊಂಡಿದ್ದೀರ. ಇದರ ಪರಿಹಾರಕ್ಕೆ ಒಂದು ಪೂಜೆ ಮಾಡಬೇಕು." ಎಂದು. ನನ್ನ ಆ ಸ್ನೇಹಿತನನ್ನು ನಾನು ಹತ್ತು ವರ್ಷದಿಂದ ತೀರಾ ಹತ್ತಿರದಿಂದ ಬಲ್ಲೆ. ಆತನ ಖಾಸಗಿ ವಿಷಯ ಎಲ್ಲವೂ ನನಗೆ ಗೊತ್ತು. ಆತನಿಗೆ ಯಾವ ಹೆಣ್ಣಿನ ಸಂಬಂಧವೂ ಇರಲಿಲ್ಲ ಮತ್ತು ಇಲ್ಲ. ಅವರು ಇಂತಹ ಸುಳ್ಳು ಹೇಳುವ ಅಗತ್ಯ ಇರಲಿಲ್ಲ. ಒಂದು ವೇಳೆ ಅಂತಹುದೊಂದು ಸಂಬಂಧ ಇತ್ತು ಎಂದೇ ಭಾವಿಸಿದರೂ ಹಿರಿಯರಾದ ಸೋಮಯಾಜಿಯವರು ಅದನ್ನು ಆತನ ಪತ್ನಿಯ ಎದುರೇ ಹೇಳುವ ಅಗತ್ಯ ಏನಿತ್ತು ? ( ನಿಜಕ್ಕೂ ಗೆಳೆಯನ ಪತ್ನಿ ಗಂಡನ ಮೇಲೆ ಮುನಿಸಿಕೊಂಡಿದ್ದಾರೆ ) ಸಮಸ್ಯೆಯನ್ನು ಬಗೆ ಹರಿಸಿ ಎಂದು ಇಂತವರ ಬಳಿ ತೆರಳಿದರೆ ಹೊಸ ಸಮಸ್ಯೆಯನ್ನು ಹುಟ್ಟು ಹಾಕಿ ಕಳಿಸ್ತಾರಲ್ಲ...

ನಾಲ್ಕು ಎರಡು ಸಾಲಿನ ಕತೆಗಳು

1. ಕಾಡಿನಲ್ಲಿ ದಾರಿ ಕಾಣದೇ ಅತ್ತಿತ್ತ ಅಲೆದಾಡುತ್ತಿದ್ದವನ ಪಕ್ಕದಲ್ಲೇ ಒಂದು ಕಾರು ಬಂದು ನಿಂತಿತು. ಅದರಿಂದ ಇಣುಕಿದ ಸುಂದರ ಯುವತಿ "ಬನ್ನಿ ಡ್ರಾಪ್ ಮಾಡ್ತೀನಿ" ಎಂದು ಉಲಿದಳು. ಸಂತೋಷದಿಂದ ಹತ್ತಿ ಕುಳಿತ.... ಮರುಕ್ಷಣವೇ ಎಚ್ಚರಾಗಿ ಹೋಯ್ತು. 2. "ನೀನು ತುಂಬಾ ಸುಂದರಿ" "ನೀನು ತುಂಬಾ ತುಂಟ" 3."ನಿನಗೆ ವಯಸ್ಸಾಯ್ತು ಕಣೆ" "ನಿಮಗೆ ಕೈಲಾಗಲ್ಲ" 4. ಆತ ತಡವರಿಸಿ ತಡವರಿಸಿ "ಐ ಲವ್ ಯೂ" ಅಂದ. ಆಕೆ ತಡವರಿಸದೇ ನುಡಿದಳು.. "ನೀನು ಇನ್ನೂ ಶುರುನಲ್ಲೇ ಇದೀಯಲ್ಲೋ" 5. ನೀರಿನಲ್ಲಿ ಮೀನಿನ ಹೆಜ್ಜೆ ಗುರುತನ್ನು ಹುಡುಕುತ್ತಾ ಹೊರಟ ಅವನಿಗೆ ಅವಳು ಅವನ ಹೃದಯದೊಳಗೆ ಬಂದು ಹೋದ ಗುರುತು ಕಾಣಿಸಲೇ ಇಲ್ಲ. 6. "ಹೆಣ್ಣೇ ಆದರೂ ಈ ಸಲ ಭ್ರೂಣ ಹತ್ಯೆ  ಮಾಡಿಸುವುದು ಬೇಡ" ಅವರು ಮಾತಾಡಿಕೊಂಡರು. ಆದರೆ ಅದೇಕೋ ಅವಳ ಮುಟ್ಟು ನಿಲ್ಲಲೇ ಇಲ್ಲ. 7. "ಅಮ್ಮಾ... ಯಾವ ಸೀಮೆಯ ರಾಜಕುಮಾರ ಬಂದು ಕರೆದರೂ ನಾ ನಿನ್ನ ಬಿಟ್ಟು ಹೋಗಲಾರೆ" ಅಂದಿದ್ದ ಮಗಳು ಗಮಾರನೊಬ್ಬನ ಪ್ರೇಮಕ್ಕೆ ಸಿಲುಕಿ ಓಡಿ ಹೋದಳು. 8. ಜೀವನದಲ್ಲಿ ಏನೂ ಸಾಧಿಸಲಾಗದೆ ಅವನು ಜಿಗುಪ್ಸೆಗೊಂಡು ಕಾಡಿಗೆ ಹೋಗಿ ದೊಡ್ಡ ಮರವೊಂದಕ್ಕೆ ಹಗ್ಗ ಕಟ್ಟಿ ನೇಣು ಹಾಕಿಕೊಂಡ. ಹಗ್ಗ ತುಂಡಾದ ಕಾರಣ ಸಾವನ್ನೂ ಸಾಧಿಸಲಾಗೆದೇ ಮನೆಗೆ ಹಿಂದಿರುಗಿದ. 9. ಎರಡು ಸಾಲಿನ ಕಥೆ ಹೇಳ...