ವಿಷಯಕ್ಕೆ ಹೋಗಿ

ಹೆಣ್ಣಿನ ಕಣ್ಣು : ಸುಂದರವಷ್ಟೇ ಅಲ್ಲ... ಸೂಕ್ಷ್ಮವೂ ಹೌದು


ಮಹಿಳೆಯರ ಕಣ್ಣು ಪುರುಷರ ಕಣ್ಣಿಗಿಂತಲೂ ತುಂಬಾ ಸೂಕ್ಷ್ಮ. ಅವರು ಎದುರಿನ ವ್ಯಕ್ತಿಗಳ ಭಾವನೆಗಳನ್ನು ಬರಿಯ ನೋಟವೊಂದರಿಂದಲೇ ತಿಳಿದುಕೊಂಡು ಬಿಡುತ್ತಾರೆ. ಇದು ಪುರುಷರಿಂದ ಅಸಾಧ್ಯ. ಕಣ್ಣು ಮಾತ್ರವಲ್ಲದೇ ಸ್ತ್ರೀಯರ ಎಲ್ಲಾ ಗ್ರಹಣೇಂದ್ರಿಯಗಳೂ ಸಹ ತುಂಬಾ ಸೂಕ್ಷ್ಮ ಸಂವೇದಿಗಳೆಂಬುದರಲ್ಲಿ ಎರಡು ಮಾತಿಲ್ಲ !

ಅದಕ್ಕಾಗಿಯೆ ಹುಡುಗಿಯರೊಂದಿಗೆ ವ್ಯವಹರಿಸುವಾಗ ಹುಡುಗರು ತುಂಬಾ ಎಚ್ಚರಿಕೆಯಿಂದಿರಬೇಕಾಗುತ್ತದೆ. ಏಕೆಂದರೆ ಹುಡುಗನ ಮನದಲ್ಲೇಳುವ ಕಾಮನೆಗಳನ್ನೆಲ್ಲಾ ಹುಡುಗಿ ಅವನ ಮುಖಭಾವದಿಂದಲೇ ಗ್ರಹಿಸಿಬಿಡುವ ಸಾಮಥ್ರ್ಯ ಹೊಂದಿದ್ದಾಳೆ. ತನ್ನೊಂದಿಗೆ ಸ್ನೇಹದಿಂದ ವತರ್ಿಸುವ ಹುಡುಗನನ್ನೂ, ಸ್ನೇಹದ ನೆಪದಲ್ಲಿ ಪ್ರೇಮ ವ್ಯಕ್ತಪಡಿಸುವ ಹುಡುಗನನ್ನೂ ಹುಡುಗಿಯೊಬ್ಬಳು ಬಹುಬೇಗನೆ ಗುರುತಿಸಿಬಿಡುತ್ತಾಳೆ. ಆದರೂ ಕೆಲವು ಹುಡುಗಿಯರು ತಿಳಿದೂ ತಿಳಿಯದಂತಿರುತ್ತಾರೆ. ಅದಕ್ಕೆ ಕಾರಣವೇನೆಂದರೆ ಮುಂದೇನು ಮಾಡಬೇಕೆಂಬುದು ಅವರಿಗೆ ತೋಚುವುದಿಲ್ಲ. ವಿವೇಚನೆಗಿಂತಾ ಭಾವನೆಗೇ ಹೆಚ್ಚು ಮಹತ್ವ ಕೊಡುತ್ತಾರವರು. ಆ ಹುಡುಗನೊಂದಿಗಿನ ಸ್ನೇಹವನ್ನು ಕಳೆದುಕೊಳ್ಳಲಿಚ್ಚಿಸುವುದಿಲ್ಲ. ಈ ಎಲ್ಲಾ ಕಾರಣಗಳಿಂದಾಗಿಯೇ ಹುಡುಗಿಯೊಬ್ಬಳು ಹುಡುಗನೊಂದಿಗಿನ ತನ್ನ ಸ್ನೇಹವನ್ನು ಮುರಿದುಕೊಂಡಳೆಂದರೆ ಅದಕ್ಕೆ ಕಾರಣ ಹೆಚ್ಚಾಗಿ ಅವನೇ ಆಗಿರುತ್ತಾನೆ.

ಹೆಣ್ಣಾದವಳು ತನ್ನ ಸುತ್ತ ಮುತ್ತಲಿನ ಆಗು ಹೋಗುಗಳನ್ನೆಲ್ಲ ತುಂಬಾ ಸೂಕ್ಷ್ಮವಾಗಿ, ಅಷ್ಟೇ ವಿವರವಾಗಿ ಗ್ರಹಿಸುತ್ತಾಳೆ. ಗಂಡ ತಡವಾಗಿ ಮನೆಗೆ ಬರುತ್ತಿದ್ದರೆ ಅದಕ್ಕೆ ಕಾರಣ ನಿಜಗಾಗಿಯೂ ಕಛೇರಿ ಕೆಲಸವೇ ಅಥವಾ `ಬೇರೆಯೇ? ಎಂಬುದು ಅವಳಿಗೆ ಶೇಕಡಾ ಐವತ್ತರಷ್ಟು ಕರಾರುವಕ್ಕಾಗಿ ತಿಳಿದುಹೋಗುತ್ತದೆ. ಗೆಳೆಯ - ಗೆಳತಿಯರ ವರ್ತನೆಯ ಹಿಂದಿರುವ ಕಾರಣಗಳನ್ನೂ ಗ್ರಹಿಸಿಬಿಡುತ್ತಾಳೆ. ಹಾಗಾಗಿಯೇ ಹುಡುಗನೊಬ್ಬನಿಗೆ ತನ್ನ ಗೆಳೆಯ ಅರ್ಥವಾಗದೇ ಹೋದರೂ ಸಹ ಹುಡುಗಿಯರಿಗೆ ತಮ್ಮ ಗೆಳತಿಯರು ಸಂಪೂರ್ಣ ಅರ್ಥವಾಗಿ ಹೋಗಿರುತ್ತಾರೆ. ಹಾಗೆಯೆ ಸ್ತ್ರೀಯರು ತಮ್ಮ ಮಕ್ಕಳ ಒಳ ಅಂತರಂಗಗಳನ್ನು ತನಗರಿವಿಲ್ಲದೆಯೇ ತಿಳಿದುಕೊಂಡುಬಿಡುತ್ತಾಳೆ. ವಯಸ್ಸಿಗೆ ಬಂದ ಮಗ ಸಿಗರೇಟು ಕಲಿತಿದ್ದು, ಮಗಳು ಪ್ರೇಮ ಪಾಶಕ್ಕೆ ಸಿಲುಕಿರುವುದು ಮುಂತಾದ ವಿಷಯಗಳೆಲ್ಲಾ ಮೊದಲು ತಿಳಿಯುವುದು ತಾಯಿಗೇ !

ಕಣ್ಣಿನ ರಚನೆ ಹೀಗಿದೆ


ಮಾನವನ ದೇಹದಲ್ಲಿ ಕಣ್ಣುಗಳ ರಚನೆ ತುಂಬಾ ಸೂಕ್ಷ್ಮವಾದುದು. ಕಣ್ಣು ಎಂದರೆ ಅದರಲ್ಲಿ ಟಿ.ವಿ.ಕ್ಯಾಮೆರಾದಲ್ಲಿರುವಷ್ಟೇ ಸೂಕ್ಷ್ಮ ಜೀವ ಭಾಗಗಳಿರುತ್ತವೆ. ಎದುರಲ್ಲಿ ಪಾರದರ್ಶಕ ಮಸೂರವಿದೆ. ಅದು ದೃಷ್ಟಿಯನ್ನು ಬೇಕಾದ ವಸ್ತುವನ್ನು ನಿಲುಕಿಸಿಕೊಳ್ಳಲು ದಪ್ಪ ಹಾಗೂ ಕಿರಿದಾಗುತ್ತಿರುತ್ತದೆ. ಅದರ ಹಿಂದೆ ಒಂದು ಪಾಪೆ ಇದೆ. ಅದು ಬೆಳಕಿನ ಸಾಂದ್ರತೆಗೆ ತಕ್ಕಂತೆ ವರ್ತಿಸುತ್ತದೆ. ಅಂದರೆ ಪ್ರಕಾಶಮಾನವಾದ ಪ್ರದೇಶಕ್ಕೆ ನೋಟ ಬೀರಿದಾಗ ಅದು ಮುಚ್ಚಿಕೊಂಡು ಬೇಕಾದಷ್ಟು ಬೆಳಕು ಮಾತ್ರ ಒಳ ಪ್ರವೇಶಿಸುವಂತೆ ಮಾಡುತ್ತದೆ. ಕತ್ತಲೆಯ ಪ್ರದೇಶಕ್ಕೆ ಬಂದಾಗ ದೊಡ್ಡದಾಗಿ ತೆರೆದುಕೊಂಡು ಹೆಚ್ಚು ಬೆಳಕು ಒಳಗೆ ಬರುವಂತೆ ಮಾಡುತ್ತದೆ. ಕಣ್ಣಿನ ಹಿಂಭಾಗದ ಒಳ ಗೋಡೆಯಲ್ಲಿ ರೆಟಿನಾ ಎಂಬ ಭಾಗವಿದೆ. ಇದುವೇ ತನ್ನ ಮೇಲೆ ಬಿದ್ದ ಬಿಂಬವನ್ನು ಕರಾರುವಕ್ಕಾಗಿ ಗುರ್ತಿಸಿ ಅದರ ಸಂದೇಶವನ್ನು ಮೆದುಳಿಗೆ ಕಳಿಸುವ ಭಾಗ.

ರೆಟಿನಾ ರಚನೆ


ಇದರಲ್ಲಿ ಸಾವಿರದ ಮುನ್ನೂರು ಕೋಟಿ `ಪೋಟೋ ರಿಸೆಪ್ಟರ್ಸ್' ಎಂಬ ಕಣಗಳಿರುತ್ತವೆ. ಇವಿಷ್ಟೂ ತಮ್ಮ ಮೇಲೆ ಬೀಳುವ ಬೆಳಕು ಹಾಗೂ ಕತ್ತಲಷ್ಟನ್ನೇ ಗ್ರಹಿಸುತ್ತವೆ. ಇದರ ಆಧಾರದಲ್ಲೇ ಮೆದುಳು ವಸ್ತುವಿನ ಆಕಾರ, ಗಾತ್ರ, ದೂರವನ್ನು ಅಂದಾಜು ಮಾಡುವುದು. ಅದಲ್ಲದೆ, ಅದೇ ರೆಟಿನಾದಲ್ಲಿ ಏಳುನೂರು ಕೋಟಿ `ಕೋನ್' ಕಣಗಳಿರುತ್ತವೆ. ಇವುಗಳ ಕೆಲಸ ಬಣ್ಣಗಳನ್ನು ಗುರ್ತಿಸುವುದು! ಮನುಷ್ಯನ ದೇಹದ ಎಕ್ಸ್ ಕ್ರೋಮೋಸೋಮ್ ಈ ಕಣಗಳನ್ನು ಉತ್ಪಾದಿಸುತ್ತದೆ. ಈಗ ಸ್ವಲ್ವ ಜನನದ ವಿಷಯವನ್ನು ನೆನಪು ಮಾಡಿಕೊಳ್ಳಿ. ಗಂಡಿನಿಂದ ಬರುವ `ವೈ ಕ್ರೋಮೋಸೋಮ್' ಹೆಣ್ಣಿನಲ್ಲಿರುವ `ಎಕ್ಸ್ ಕ್ರೋಮೋಸೋಮಿ'ನೊಂದಿಗೆ ಬೆರೆತಾಗ ಗಂಡು ಮಗುವಾಗುತ್ತದೆ. ಗಂಡಿನಿಂದಲೂ `ಎಕ್ಸ್ ಕ್ರೋಮೋಸೋಮ್' ಬಂದಿತೆಂದರೆ ಖಂಡಿತಾ ಹೆಣ್ಣು ಮಗುವೇ ಹುಟ್ಟುವುದು. ಏಕೆಂದರೆ ಹೆಣ್ಣಿನಲ್ಲಿ `ವೈ ಕ್ರೋಮೋಸೋಮ್' ಗಳಿರುವುದಿಲ್ಲ. ಆಕೆಯಲ್ಲಿರುವ ಎರಡು ಕ್ರೋಮೋಸೋಮ್‌ಗಳೂ ಸಹ `ಎಕ್ಸ್' ಆಗಿರುತ್ತವೆ. ಅಂತಹ `ಎಕ್ಸ್ ಕ್ರೋಮೋಸೋಮ್' ಕಣ್ಣಿನ ರೆಟಿನಾದಲ್ಲಿರುವ `ಕೋನ್' ಗಳನ್ನು ಉತ್ವಾದಿಸುತ್ತಾದ್ದರಿಂದ ಒಂದೇ `ಎಕ್ಸ್ ಕ್ರೋಮೋಸೋಮ್' ಹೊಂದಿರುವ ಗಂಡಸರಿಗಿಂತಲೂ, ಎರಡು `ಎಕ್ಸ್ ಕ್ರೋಮೋಸೋಮ್' ಗಳನ್ನು ಹೊಂದಿರುವ ಹೆಂಗಸರ ಕಣ್ಣಿನಲ್ಲಿ ಕೋನ್‌ಗಳ ಸಂಖ್ಯೆ ವಿಪರೀತವಾಗಿರುತ್ತದೆ. ಹಾಗಾಗಿಯೇ ಅವರು ಬಣ್ಣಗಳನ್ನು ನಿಖರವಾಗಿ ವಿವರವಾಗಿ, ಪ್ರತ್ಯೇಕವಾಗಿ ಗುರ್ತಿಸಬಲ್ಲರು!

ಹೆಂಗಸರು ಸೀರೆ ಆರಿಸುವುದೇಕೆ ನಿಧಾನ ಗೊತ್ತಾ ?


ಏಕೆಂದರೆ ಅವರಿಗೆ ಅತಿ ಸೂಕ್ಷ್ಮ ವರ್ಣಗಳೂ ನಿಖರವಾಗಿ ಗೋಚರಿಸುವುದರಿಂದ ! ಇದರಿಂದಾಗಿಯೇ ಯಾವುದನ್ನು ಆಯ್ಕೆ ಮಾಡುವುದೆಂಬ ಗೊಂದಲಕ್ಕೆ ಬೀಳುತ್ತಾರೆ. ಗಂಡಸರಿಗಾದರೆ ಪ್ರಮುಖ ವರ್ಣಗಳಷ್ಟೇ ನಿಖರವಾಗಿ ಕಾಣಿಸಬಲ್ಲವು. ಅಂದರೆ ಹಸಿರು, ಕೆಂಪು, ನೀಲಿ ಮುಂತಾದವುಗಳನ್ನು ಮಾತ್ರ ಗಂಡಸರು ಚೆನ್ನಾಗಿ ಗ್ರಹಿಸಬಲ್ಲರು. ಆದರೆ ಸ್ತ್ರೀಯರು ಹಾಗಲ್ಲ, ಒಂದೊಂದು ಪ್ರಮುಖ ವರ್ಣದಲ್ಲಿಯೂ ಹತ್ತಾರು ಕುಲ ವರ್ಣಗಳನ್ನು ಕಂಡು ಹಿಡಿಯಬಲ್ಲರು. ಹಾಗೂ ಅವಕ್ಕೆ ಆಸೆ ಪಡುವರು. ಕೆಂಪಾದರೆ ಅದರಲ್ಲೇ ಕಡುಗೆಂಪು, ತಿಳಿಗೆಂಪು, ರಕ್ತಗೆಂಪು, ಸೂರ್ಯಗೆಂಪು ಎಂದು ಅನೇಕ ವಿಧಗಳನ್ನವರು ಸರಾಗವಾಗಿ ವಿಂಗಡಿಸುತ್ತಾರೆ. ಗಂಡಸರಿಗೆ ಹೆಚ್ಚಾಗಿ ಎಲ್ಲಾ ಕೆಂಪುಗಳೂ ಒಂದೇ. ಹಾಗಾಗಿಯೇ ಹೆಂಡತಿಯ ಬಳಿ ಹಸಿರು ಸೀರೆಗಳಿದ್ದರೂ ಮತ್ತೊಂದು ಅದೇ ಬಣ್ಣದ ಸೀರೆಯನ್ನೇಕೆ ಕೊಂಡಳು ಎಂಬುದು ಗಂಡನಿಗೆ ಅರ್ಥವಾಗುವುದೇ ಇಲ್ಲ. ಅಸಲಿ ವಿಷಯವೇನೆಂದರೆ ಅವಳಲ್ಲಿರುವ ಎಲ್ಲಾ ಸೀರೆಗಳೂ ಹಸಿರಿನವೇ ಆದರೂ ಅವುಗಳೊಳಗೆ ಕುಲವರ್ಣಗಳು ಅನೇಕ ವಿಧದ್ದಾಗಿರುತ್ತವೆ, ಅದು ಪಾಪದ ಪ್ರಾಣಿ ಗಂಡನಾದವನಿಗೆ ತಿಳಿಯುವುದಿಲ್ಲವಷ್ಟೇ. ಹೆಂಗಸರಿಗೆ ವರ್ಣಗಳಲ್ಲಿನ  ಅಷ್ಟೊಂದು ಪ್ರಬೇಧಗಳೂ ಪ್ರತ್ಯೇಕವಾಗಿ ಗೋಚರವಾಗುವುದರಿಂದಲೇ ಅವರು ಸೀರೆಯನ್ನು ಆರಿಸುವಾಗ ಗೊಂದಲಕ್ಕೆ ಬೀಳುತ್ತಾರೆ. ಯಾವುದನ್ನು ಆರಿಸಿಕೊಳ್ಳುವುದೆಂದು ತಿಳಿಯದೇ ಕಂಗಾಲಾಗುವುದೂ ಇದೆ. ಈ ಕಾರಣಕ್ಕೆ ಅವರು ಸೀರೆ ಅಂಗಡಿಯೊಳಗೆ ಹೋದರೆ ಗಂಟೆಗಟ್ಟಲೇ ತಡ ಮಾಡುವುದು ಎಂದು ತಜ್ಞರು ಹೇಳುತ್ತಿದ್ದಾರೆ.

ಭಾವನೆ ಬಿಂಬಿಸುವ ಕಣ್ಣುಗಳು


ಸ್ತ್ರೀಯರ ಕಣ್ಣಿನ ಬಿಳಿಯ ಭಾಗ ಪುರುಷರದಕ್ಕಿಂತಲೂ ಹೆಚ್ಚಾಗಿರುತ್ತದಾದ್ದರಿಂದ ಅವರ ಕಂಗಳು ಹೆಚ್ಚು ಸುಂದರ ಹಾಗೂ ಆಕರ್ಷಕ. ಆ ಬಿಳಿ ಭಾಗದೊಳಗಿನ ಕಪ್ಪು ಗೋಲ ಸಂಮೋಹನಕ್ಕೆ ಹೇಳಿ ಮಾಡಿಸಿದಂತಿರುವುದರಿಂದಲೇ ಅವರದೊಂದು ನೋಟ ತಗುಲಿದರೂ ಹುಡುಗರು ಬೋಲ್ಡ್ ಆಗುತ್ತಾರೆ. ಭಾವನೆಗಳನ್ನು ರವಾನಿಸಲು ಹಾಗೂ ಪಡೆಯಲು ಹುಡುಗಿಯರ ಕಂಗಳು ಹೆಚ್ಚು ಸೂಕ್ತವಾಗಿರುತ್ತದೆ. ಅವು ಅತಿ ಸೂಕ್ಷ್ಮ ಸಂವೇದಿಯ್ನು ಹೊಂದಿರುವುದರಿಂದ ಎದುರಿನ ಹುಡುಗನ ಮನಸ್ಸಿನಾಳದಲ್ಲಿ ಏನಿದೆಯೆಂಬುದನ್ನು ಕ್ಷಣ  ಮಾತ್ರದಲ್ಲಿ ಅರಿಯುತ್ತಾರೆ.

ಆದುದರಿಂದಲೇ ಹುಡುಗಿಯೊಬ್ಬಳನ್ನು ಇಷ್ಟ ಪಡತೊಡಗುವ ಹುಡುಗ ಬಹುಬೇಗನೆ ಸಿಕ್ಕಿಬೀಳುತ್ತಾನೆ. ಅವನು ಯಾರಲ್ಲಿಯೂ ಹೇಳಿಕೊಳ್ಳದೇ ಹೋದರೂ ಸಹ ಆ ಹುಡುಗಿಗದು ತಿಳಿದು ಹೋಗುವುದರಲ್ಲಿ ಸಂಶಯವಿಲ್ಲ. ಆದರೆ ಅದೇ ಹುಡುಗಿ ಹುಡುಗನೊಬ್ಬನನ್ನು ಇಷ್ಟಪಟ್ಟಳೆಂದರೆ ಅವನಿಗದು ತಕ್ಷಣಕ್ಕೆ ತಿಳಿಯುವುದೇ ಇಲ್ಲ! `ಐ ಲವ್ ಯೂ ಕಣೋ' ಎಂದು ಹೇಳುವವರೆಗೂ. ಇದಕ್ಕೆ ಕಾರಣ ಹುಡುಗ ಹಾಗು ಹುಡುಗಿಯರ ಕಣ್ಣಿನ ಸೂಕ್ಷ್ಮ ವ್ಯತ್ಯಾಸವೇ ಕಾರಣವಾಗಿದೆ.

ಅದಲ್ಲದೇ ಸ್ತ್ರೀಯರು ತಮ್ಮೆಲ್ಲಾ ಭಾವನೆಗಳನ್ನು ಕೇವಲ ಕಣ್ಣುಗಳಿಂದಲೇ ವ್ಯಕ್ತಪಡಿಸಬಲ್ಲರು. ಮಾತಾಗಲಿ, ಬರಹವಾಗಲಿ ಅವರಿಗೆ ಅವಶ್ಯಕತೆಯೇ ಇಲ್ಲ. ಆ `ಕಣ್ಣಿನ ಭಾಷೆ'ಯನ್ನು ಅರಿಯುವ ಸಾಮರ್ಥ್ಯ ಗಂಡಿಗಿರಬೇಕು ಅಷ್ಟೇ.

ಈ ಭಿನ್ನತೆ ಬಂದಿದ್ದಾದರೂ ಯಾಕೆ ?

ಅದಕ್ಕೆ ಕಾರಣಗಳನ್ನು ಹುಡುಕಲು ನಾವು ಸಾವಿರಾರು ವರ್ಷಗಳ ಹಿಂದೆಯೇ ಹೋಗಬೇಕು. ಏಕೆಂದರೆ ನಮ್ಮ ಕಣ್ಣಿನ ರಚನೆ ಸಾವಿರಾರು ವರ್ಷಗಳ ಹಿಂದೆಯೇ ಬದಲಾವಣೆ ಹೊಂದಿದೆ. ಆಗ ಮಾನವರು ಗುಡ್ಡಗಾಡುಗಳಲ್ಲಿ ಗುಡಿಸಲುಗಳಲ್ಲಿ ವಾಸವಾಗಿದ್ದರಷ್ಷೇ! ಆಗ ಶತ್ರುಗಳ, ಪ್ರಾಣಿಗಳ ದಾಳಿ ವಿಪರೀತವಾಗಿತ್ತು. ಅದನ್ನು ತಡೆಯಲು ದೈಹಿಕವಾಗಿ ಬಲಾಢ್ಯನಾಗಿದ್ದ ಗಂಡಸೇ ಮುಂದಾಗಬೇಕಿತ್ತು. ಕುಟುಂಬದ ರಕ್ಷಣೆ ಅವನದಾದಾಗ ಅವನು ಪ್ರಯತ್ನಪೂರ್ವಕವಾಗಿ ದೂರದತ್ತ ನೋಟ ಬೀರುವುದು, ಶತ್ರುಗಳು, ಪ್ರಾಣಿಗಳ ಆಗಮನವಾಗುತ್ತಿದ್ದರೆ ಜಾಗೃತನಾಗುವುದು ಸಹಜವಾಯ್ತು. ಅದು ಸಾವಿರಾರು ವರ್ಷಗಳವರೆಗೆ ಮುಂದುವರಿದಾಗ ಅವನ ದೃಷ್ಠಿ ದೂರದತ್ತಲೇ ಹೆಚ್ಚು ಹರಿಯುವಂತಾಯ್ತು. ಗಂಡಿನ ಕಣ್ಣುಗಳು ಸ್ತ್ರೀಯ ಕಣ್ಣಿಗಳಿಗಿಂತಲೂ ದೊಡ್ಡದಾದುದು ಇದಕ್ಕೇ.

ಆದರೆ ಹೆಂಗಸರಿಗೆ ತಾನು, ತನ್ನ ಮಗುವಿನ ರಕ್ಷಣೆಯಷ್ಟೇ ಮುಖ್ಯವಾದುದರಿಂದ ಆಕೆ ದೂರದತ್ತ ಹೆಚ್ಚು ದೃಷ್ಠಿ ಹಾಯಿಸದೇ ಸಮೀಪದಲ್ಲೇ ಅತ್ತಿತ್ತ ಚಲಿಸುವುದನ್ನು ಅಭ್ಯಾಸ ಮಾಡಿಕೊಂಡಳು. ಇದರಿಂದಾಗಿ ಸ್ತ್ರೀಯರ ದೃಷ್ಠಿ ಹೆಚ್ಚಾಗಿ ಸಮೀಪದ ವಸ್ತುಗಳತ್ತಲೇ ಇರುತ್ತದೆ. ದೂರದಿಂದ ಯಾರೋ ಬಂದುದನ್ನು ಗಮನಿಸುವುದಕ್ಕಿಂತಲೂ, ಹತ್ತಿರದವರ ಆಭರಣಗಳನ್ನು ಗಮನಿಸುವುದರಲ್ಲೇ ಅವರು ತಲ್ಲೀನರಾಗಿರುತ್ತಾರೆ.

ಹೆಂಗಸರು ಪ್ರತಿ ದಿಕ್ಕಿನಲ್ಲೂ ಬರೇ ಕಣ್ಣನ್ನು ಮಾತ್ರ ತಿರುಗಿಸಿ (ಮೂಖವನ್ನು ಹೊರಳಿಸದೆಯೇ) 45 ಡಿಗ್ರಿಯಷ್ಟು ದೃಶ್ಯವನ್ನು ಪರಾಂಬರಿಸಬಲ್ಲರು. ಇದು ಗಂಡಸರಿಂದ ಸಾಧ್ಯವಿಲ್ಲ. ಅವರು ಹಾಗೆ ನೋಡಬೇಕೆಂದರೆ ಮುಖವನ್ನೇ ಹೊರಳಿಸಬೇಕಾಗುತ್ತದೆ! ಈ ಕಾರಣದಿಂದಲೇ ಗಂಡಸರು `ಲೇ ಪೆನ್ ಏನಾಯ್ತೆ? ಗಾಡಿ ಕೀ ಎಲ್ಲೇ?' ಎಂದು ಹೆಂಡಂತಿಯನ್ನೇ ಕೇಳುವುದು. ಹುಡುಗರು ಹುಡುಗಿಯರನ್ನು ಕದ್ದು ನೋಡಲು ಹೋದರೆ ಸಿಕ್ಕಿ ಬೀಳುವುದೂ ಇದೇ ಕಾರಣಕ್ಕೇ. ಏಕೆಂದರೆ ಅವರು ದೃಷ್ಠಿಗಾಗಿ ತಲೆಯನ್ನೇ ಹೊರಳಿಸಿರುತ್ತಾರೆ. ಹುಡುಗಿಯರಾದರೆ ಹಾಗಲ್ಲ, ಕಂಗಳನ್ನು ಮಾತ್ರ ಹೊರಳಿಸಿ ತನ್ನ ಪ್ರಿಯ ಹುಡುಗನನ್ನು ಯಾರಿಗೂ ತಿಳಿಯದಂತೆ ನೋಡಬಲ್ಲರು.

ದೃಶ್ಯಗಳನ್ನೂ ಎಡಿಟ್ ಮಾಡುವ ಮೆದುಳು


ಬೆಳಕು ಅಣುಗಳ ರೂಪದಲ್ಲಿರುತ್ತದೆ. ಅದು ನಮ್ಮ ಕಣ್ಣಿಗೆ ನಿಲುಕದ ಕ್ರಿಯೆ ಬಿಡಿ. ಆದರೆ ಆ ಬೆಳಕಿನ ಅಣುಗಳು ಪ್ರತಿ ಸೆಕೆಂಡಿಗೆ ಒಂದು ನೂರು ಮೆಗಾ ಬೈಟ್ಗಳಷ್ಟು ಬಂದು ಕಣ್ಣಿನ ರೆಟಿನಾಗೆ ಬಡಿಯುತ್ತಿರುತ್ತವೆ. ಈ ಬೆಳಕಿನ ಅಣುಗಳೆಂದರೆ ವಸ್ತುವಿನ ಪ್ರತಿಬಿಂಬಗಳೆ. ವಿವಿಧ ವಸ್ತುಗಳಿಗೆ ಬಡಿದು ಬಂದಂತಹ ಬಣ್ಣ, ಆಕಾರ, ವಸ್ತುಗಳನ್ನೂ ಗಮನಕ್ಕೆ ತೆಗೆದುದಕೊಳ್ಳುವುದಿಲ್ಲ. ಆ ಸಮಯಕ್ಕೆ ಯಾವುದು ಮುಖ್ಯವೋ ಅದನ್ನು ಮಾತ್ರ ಗಮನಿಸುತ್ತದೆ. ಉದಾಹರಣೆಗೆ ಟೇಬಲ್ ಮೇಲೆ ಕುಳಿರಿತುವ ನೊಣ ನಮ್ಮ ಗಮನಕ್ಕೆ ಬಾರದೇ ಇರಬಹುದು. ಆದರೆ ಅದೇ ನೊಣ ಟೀಯಲ್ಲಿ ಬಿದ್ದಿದ್ದರೆ? ಅದೇ ದೊಡ್ಡದಾಗಿ ಕಾಣಿಸುತ್ತದೆ. ಅಪರಿಚಿತರ ಗುಂಪಿನ ನಡುವೆ ಪರಿಚಿತನೊಬ್ಬ  ಕಂಡರೆ ಗಮನ ಅವನ ಕಡೆ ಕೇಂದ್ರೀಕೃತವಾಗುತ್ತದೆ. ಹಾಗೆಯೇ ಪರಿಚಿತರ ಗುಂಪಿನ ನಡುವೆ ಅಪರಿಚಿತನೊಬ್ಬ ಕಂಡರೂ ಗಮನ ಅವನೆಡಗೇ ಹರಿಯುತ್ತದೆ. ಹೀಗೆ ನಮಗೆ ಮುಖ್ಯವೆನ್ನಿಸುವ ದೃಶ್ಯ ಮಾತ್ರ ನಮ್ಮ ಗಮನಕ್ಕೆ ಬರುತ್ತದೆ.

ಮೆದುಳು ಒಮ್ಮೊಮ್ಮೆ ನಮ್ಮನ್ನು ಕನ್ಪ್ಯೂಸ್ ಮಾಡುವುದೂ ಇದೆ. ನಮಗೆ ಬೇಕಾದ ಪೆನ್ ಟೇಬಲ್ ಮೇಲೆಯೇ ಇದ್ದರೂ ಒಮ್ಮೊಮ್ಮೆ ಕಾಣಿಸುವುದೇ ಇಲ್ಲ. ಎಲ್ಲೆಲ್ಲೋ ತಡಕಾಡಿ ಸುಸ್ತಾಗಿ ಕುಳಿತ ನಂತರ ಅಲ್ಲೇ ಇರುವ ಪೆನ್ ಕಾಣಿಸುತ್ತದೆ. `ಅರರೇ, ಇಷ್ಟು ಹೊತ್ತು ಹುಡುಕಿದರೂ ಸಿಗದ್ದು ಈಗೆಲ್ಲಿಂದ ಬಂತು? ಎಂದು ಅಚ್ಚರಿ ಪಡುತ್ತೇವೆ. ಅದು ಮೆದುಳು ಕನ್ಪ್ಯೂಸ್ ಆದುದರ ಪರಿಣಾಮ. ನಮ್ಮ  ಕಣ್ಣು ಆ ಲೇಖನಿಯ ಪ್ರತಿಬಿಂಬವನ್ನು ಮೆದುಳಿಗೆ ಎಂದಿನಂತೆಯೇ ರವಾನಿಸಿರುತ್ತದೆ. ಆದರೆ ಮೆದುಳು ನಾವು ಹುಡುಕುತ್ತಿರುವುದು, ಅದನ್ನಲ್ಲವೇನೋ ಎಂದುಕೊಂಡು(?!) ಅದನ್ನು ಗಮನಕ್ಕೆ ತೆಗೆದುಕೊಳ್ಳುವುದೇ ಇಲ್ಲ. ಆದ್ದರಿಂದ ಮೇಜಿನ ಮೇಲೇ ಇರುವ ಪೆನ್ ನಮಗೆ ಕಾಣಿಸದೇ ಹೋಗುತ್ತದೆ. ಕಣ್ಕಟ್ಟು ಮಾಡುವವರೂ, ಜಾದೂ ಮಾಡುವವರೂ ಇದೇ ತಂತ್ರ ಅನುಸರಿಸುತ್ತಾರೆ. ಅವರು ಯಾವುದೋ ರೂಪದಲ್ಲಿ ನಮ್ಮ ಮೆದುಳನ್ನು ಪ್ರವೇಶಿಸಿ ನಿರ್ದಿಷ್ಟ ವಸ್ತುವನ್ನು ಮೆದುಳು ಉಪೇಕ್ಷಿಸುವಂತೆ ಮಾಡುತ್ತಾರೆ. ಆಗ ಆ ವಸ್ತು ನಮಗೆ `ಅದೃಶ್ಯ'ವಾದಂತೆ ಅನ್ನಿಸುತ್ತದೆ. ಆದರೆ ವಾಸ್ತವದಲ್ಲಿ ಆ ವಸ್ತು ಅಲ್ಲಿಯೇ ಇರುತ್ತದೆ. ಸಂಮೋಹನದಲ್ಲಿಯೂ ಇದನ್ನು ವೈಜ್ಞಾನಿಕವಾಗಿ ನಿರೂಪಿಸಬಹುದು.

ಹೆಂಗಸರು ಮಾಡುವ ಅಪಘಾತಗಳೇ ಹೆಚ್ಚು !


ವಿದೇಶದಲ್ಲಿ ಮಹಿಳೆಯರೂ ಹೆಚ್ಚಾಗಿ ಕಾರು ಓಡಿಸುತ್ತಾರೆ. ಭಾರತದಲ್ಲೂ ಈಗ ಹೆಚ್ಚಾಗಿ ಕಾಣಬಹುದೆನ್ನಿ. ವಿದೇಶದಲ್ಲಿ ಆಗುವ ಅಪಫಾತಗಳ ವಿವರವನ್ನು ಗಮನಿಸಿದರೆ ಕುಡಿತದ ಪ್ರಕರಣಗಳನ್ನು ಹೊರಗಿಟ್ಟರೆ ಗಂಡ ಗಂಡಸರು ಮಾಡುವ ಅಪಘಾತಗಳು ತೀರಾ ಕಡಿಮೆಯಂತೆ. ಏಕೆಂದರೆ ಹೆಂಗಸರು ಹತ್ತಿರದ ವಾಹನಗಳನ್ನು ಚೆನ್ನಾಗಿ ಗಮನಿಸಬಲ್ಲರೇ ಹೊರತೂ, ವೇಗವಾಗಿ ಬಂದು ಬಿಡುವ ದೂರದ ವಾಹನಗಳನ್ನು ಶೀಘ್ರವೇ ಗಮನಿಸಲು ವಿಫಲರಾಗುವುದೇ ಇದಕ್ಕೆ ಕಾರಣವಂತೆ. ಹಾಗಾಗಿಯೇ ಸ್ತ್ರೀಯರು ಬೆಂಗಳೂರಿನಂತ ಭಯಂಕರ ಟ್ರಾಫಿಕ್ನ ರಸ್ತೆಯಲ್ಲಿ ನಿರಾಳವಾಗಿ ಕಾರು ಚಾಲನೆ ಮಾಡಿದರೂ ಸಹ ದೂರದ ಪ್ರಯಾಣ ಮಾಡಲು ಅಳುಕುತ್ತಾರೆ. ಏಕೆಂದರೆ ಅಲ್ಲಿ ದೂರದ ವಾಹನಗಳನ್ನೂ (ಹೈವೇಗಳಲ್ಲಿ) ಗಮನಿಸಬೇಕಾದ್ದರಿಂದ ಅದು ಅವರಿಗೆ ಕಪ್ಟವಾಗುತ್ತದೆ. ಹಾಗೆಯೇ ವಾಹನಗಳನ್ನು ಹಿಂದಕ್ಕೆ ತಂದು ಪಾಕರ್್ ಮಾಡಲೂ ಸಹ ಅವರಿಗೆ ಕಷ್ಟವಂತೆ !

ಹೆಣ್ಣಿನ ಕಣ್ಣಿನಲ್ಲಿ ಇಷ್ಟೆಲ್ಲಾ ವೈಶಿಷ್ಟ್ಯತೆ ಇರುವುದರಿಂದಲೇ ಅವು ಎಂದಿಗೂ ತೇಜೋಮಯ. ಆಕರ್ಷಕ ಹಾಗೂ ಮನಮೋಹಕ. ಆದ್ದರಿಂದಲೇ ಕವಿ ಕಾಳಿದಾಸ `ಕಮಲೇ ಕಮಲೋತ್ಪತ್ತಿಃ' ಎಂದುದು. ಎಲ್ಲಾ ಕವಿಗಳೂ ಹೆಣ್ಣಿನ ಕಣ್ಣನ್ನು ಹಾಡಿ ಹೊಗಳುವುದು. ಇನ್ನಾದರೂ ಹುಡುಗರು ಸುಂದರಿಯರತ್ತ ಕಣ್ಣು ಹಾಕುವ ಮುನ್ನ ಸ್ವಲ್ಪ ಎಚ್ಚರಿಕೆಯಿಂದ ಇರಿ.
 

ಕಾಮೆಂಟ್‌ಗಳು

Swarna ಹೇಳಿದ್ದಾರೆ…
ಹುಡುಗರಿಗೆ ಹುಡುಗಿಯರ ತಿಳಿಯಲು
ಹುಡುಗಿಯರಿಗೆ ಸ್ವಯಂ ಅರ್ಥವಾಗಲು
ಸಹಾಯ ಮಾಡಿದ್ದಾಕಾಗಿ ವಂದನೆಗಳು
ಮಾಹಿತಿಪೂರ್ಣ ಲೇಖನ, ಅದನು ನೀವು ಜೋಡಿಸಿರುವ ಬಗೆಯೂ ಚೆನ್ನಾಗಿದೆ
ಸ್ವರ್ಣಾ
ಗುಡುಗು ಮಿಂಚು ಹೇಳಿದ್ದಾರೆ…
ಧನ್ಯವಾದಗಳು Gold13

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಶಿಕ್ಷಣದ ಬಗೆಗಿನ ನುಡಿಮುತ್ತುಗಳು

* ನಿಜವಾದ ಶಿಕ್ಷಣವೆಂದರೆ ಮಾನವೀಯತೆಯ ವಿಕಾಸ. - ಸ್ವಾಮಿ ವಿವೇಕಾನಂದರು . * ಸಚ್ಛಾರಿತ್ರ್ಯದ ಬೆಳವಣಿಗೆಯೇ ಶಿಕ್ಷಣದ ಆರಂಭ. - ಮಾಹಾತ್ಮ ಗಾಂಧೀಜಿ. * ಶಿಕ್ಷಣ ಪ್ರತಿ ವ್ಯಕ್ತಿಯಲ್ಲಿ ಪರಿಪೂರ್ಣತೆಯನ್ನು ತರಬೇಕು.  ಜೀವನದಲ್ಲಿ ಮುನ್ನಡೆಸುವ ಸಾಮಥ್ರ್ಯ ನೀಡಬೇಕು. -    ಜಿಡ್ಡು ಕೃಷ್ಣಮೂರ್ತಿ . * ದೈಹಿಕ, ಮಾನಸಿಕ ಹಾಗೂ ಆಧ್ಯಾತ್ಮಿಕ ಪ್ರಗತಿಗೆ ಇಂಬು ಕೊಡದ ಶಿಕ್ಷಣ ಅಪೂರ್ಣ. - ಡಾ. ಎಸ್. ರಾಧಾಕೃಷ್ಣನ್. * ಶಿಕ್ಷಣವೆಂದರೆ, ಪುಸ್ತಕದ ಜ್ಞಾನವೇ ಮಾತ್ರ ಅಲ್ಲ.  ಸಂಸಾರ, ಮನುಷ್ಯ ಮತ್ತು ಕಾರ್ಯ ಕಲಾಪಗಳ ಪರಸ್ಪರ ಸಂಯೋಗವೇ ಶಿಕ್ಷಣ. -    ಬರ್ಕ. * ಜೀವನವೇ ಶಿಕ್ಷಣ, ಶಿಕ್ಷಣವೇ ಜೀವನ. - ಜಾನ್ ಟ್ಯೂಯ್ಲಿ. * ಸಮನ್ವಯತೆ, ಸಮತೋಲನ, ಉಪಯುಕ್ತತೆ,  ಪರಿಪೂರ್ಣತೆ, ಆನಂದದಾಯಕ ಹಾಗೂ ನೈಸರ್ಗಿಕತೆಯೇ ಶಿಕ್ಷಣದ ಗುಣಗಳು. - ರೂಸೋ. * ಶಿಕ್ಷಣವು ಧಾರ್ಮಿಕ ವಿಚಾರಗಳ ಸಮನ್ವಯವಾದಾಗಲೇ ಪೂರ್ಣವಾಗುವುದು. - ಅಜ್ಞಾತ. * ನಡತೆ ಬೋಧಿಸುವ ಶಿಕ್ಷಣ, ಮನುಷ್ಯತ್ವ ತೋರದ ವಿಜ್ಞಾನ, ಇವೆರಡೂ ಅಪಾಯಕಾರಿ ಮತ್ತು ಉಪಯೋಗವಿಲ್ಲದವು. - ನೀತಿವಚನ . * ಶಿಕ್ಷಣವೇ ಜೀವನದ ಬೆಳಕು - ಗೊರೂರು * ಶಿಕ್ಷಣವು ಮನುಷ್ಯನನ್ನು ಶ್ರೇಷ್ಠ ನಾಗರಿಕನನ್ನಾಗಿ ಮಾಡುತ್ತದೆ. - ಡಾ: ಎಸ್. ರಾಧಾಕೃಷ್ಣನ್. * ಮನುಷ್ಯರಲ್ಲಿ ಪರಿಪೂರ್ಣತೆಯನ್ನು ಹಿಗ್ಗಿಸುವದೇ ಶಿಕ್ಷಣ - ವಿವೇಕಾನಂದ. * ವಿದ್ಯೆ ಗುರುಗಳ ಗುರು - ಭ್ರತೃ ಹರಿ. * ವಿದ್ಯೆಯಿಂದಲೇ ಮನುಷ್ಯನಿಗೆ ಸುಖ, ಭೋಗ, ಧನ, ...

ಈ ಹುಡುಗಿಯರೇ ಹೀಗೆ !

ಬೆಟ್ಟದ ಬದಿಯಿಂದ ಮುಂಜಾನೆಯ ರವಿ ಇಣುಕಿದಂತೆ ಕಿಟಕಿ ಹಿಂದಿನ ಕಂಗಳು, ಕಂಡೂ ಕಾಣದ ಮುಂಗುರುಳು ಗಲಗಲ ಬಳೆಯ ತರಂಗ ಕಿಲಕಿಲ ನಗುವಿನಂತರಂಗ, ಎದುರು ಬರಲಾರರು ಚೆಲುವೆಯರು ಬಂದರೂ ಬಹು ಲಾಸ್ಯ ಲಜ್ಜೆ ಇಡುತಲಿ ಒಂದೊಂದೇ ಹೆಜ್ಜೆ ಮುಗಿಲಿಂದ ಬರಗಾಲದಿ ಮಳೆ ಹನಿ ಬಿಸಿ ನೆಲಕ್ಕೆ ಎಣಿಸಿ ಮುತ್ತಿಕ್ಕಿದಂತೆ ! ಕಿರು ಹಣತೆ ಉರಿಯಂತೆ ತುಟಿ ರಂಗು ಪತಂಗ ಹಾರಿದಂತೆ ತೆಳು ಸೆರಗು ಕಾವ್ಯದೊಡತಿಯರು, ಮೌನವೇ ಮಾತು. ಅರೆಕ್ಷಣದಿ ಸೃಷ್ಟಿಸಿ ಕಲ್ಪಾನಾ ಲೋಕ ನಗ್ನ ಬಿಂಬ ತೋರಿ ತೆರೆವರು ಪ್ರೇಮಲೋಕ ಒಮ್ಮೆ ಧಾರಾಳ ದಮಯಂತಿ ಮಗದೊಮ್ಮೆ ಮುನಿದ ಮಗುವಂತೆ ಅಲ್ಲಿ ಪ್ರೇಮ ಪ್ರೀತಿಯನ್ನರಸುವ ಹುಡುಗನ ನಿರಂತರ ಬೇಟೆ ! ಅರಿವಾಗುವ ಮುನ್ನವೇ ಮಾನಸಿಕ ಪತ್ನಿಯಾಗಿರುತ್ತಾಳೆ, ಛೇಧಿಸಿ ಹೃದಯ ಕೋಟೆ.

ರೇಡಿಯೋ ಕಾಮೆಂಟೇಟರ‍್ ಡಿಕ್ಕಿ ರತ್ನಾಗರ‍್ ನಿಧನ!

ಈ ಸುದ್ದಿಯ ತಲೆ ಬರಹವನ್ನು ಇಂದಿನ ಕನ್ನಡಪ್ರಭದಲ್ಲಿ ನೋಡಿ ಕೊಂಚ ಯೋಚಿಸುವಂತಾಯ್ತು. ಮೊದಲಿಗೆ ರತ್ನಾಗರ‍್ ಯಾರೆಂದು ನನಗೆ ತಿಳಿದಿಲ್ಲ. ಆದರೂ ಅವರು ನಿಧನರಾಗಿರುವ ಸುದ್ದಿ ಪತ್ರಿಕೆಯಲ್ಲಿ ಬಂದಿರುವುದರಿಂದ ಅವರೊಬ್ಬ ಖ್ಯಾತ ವ್ಯಕ್ತಿ ಎಂದು ಅರಿವಾಯ್ತು. ಇಲ್ಲದಿದ್ದರೆ ಮುಖಪುಟದಲ್ಲಿ ಹೆಸರು ಹಾಕಿ ನಿಧನ ಸುದ್ದಿ ಹಾಕುತ್ತಿರಲಿಲ್ಲ. ಒಳಗಿನ ಯಾವುದೋ ಪುಟದಲ್ಲಿ "ರೇಡಿಯೋ ಕಮೆಂಟೇಟರ‍್ ಡಿಕ್ಕಿ - ವ್ಯಕ್ತಿ ಸಾವು" ಎಂದು ಕೊಟ್ಟಿರುತ್ತಿದ್ದರು. ಆದರೆ ಅವರು ಸತ್ತಿರುವ ರೀತಿ ಸ್ವಲ್ಪ ಗೊಂದಲ ಮೂಡಿಸಿತು. ನನಗೆ ಮೊದಲು ಅನ್ನಿಸಿದ್ದು ರೇಡಿಯೋ ಕಮೆಂಟೇಟರ‍್ ಡಿಕ್ಕಿಯಿಂದಾಗಿ ರತ್ನಾಗರ‍್ ಸತ್ತಿದ್ದಾರೆ ಎಂದು. ಸುದ್ದಿಯ ತಲೆಬರಹ ಮುಖಪುಟದಲ್ಲಿ ಇದ್ದು ವಿವರ ೧೫ನೇ ಪುಟದಲ್ಲಿರುವುದಾಗಿ ತೋರಿಸಿದ್ದರು. ಆ ಪುಟಕ್ಕೆ ಹೋಗುವ ಮುನ್ನ ಉಳಿದ ಪ್ರಮುಖ ಸುದ್ದಿಗಳತ್ತ ಕಣ್ಣಾಡಿಸಲೇ ಬೇಕಿತ್ತು. ಆ ಸಮಯದಲ್ಲೇ ರತ್ನಾಗರ‍್ ಸಾವಿನ ಬಗ್ಗೆ ನಾನು ಯೋಚಿಸಿದ್ದು. ರೇಡಿಯೋ ಕಮೆಂಟೇಟರ‍್ ಡಿಕ್ಕಿಯಿಂದಾಗಿ ರತ್ನಾಗರ‍್ ಸಾಯಬೇಕಿದ್ದರೆ ರೇಡಿಯೋ ಕಮೆಂಟೇಟರ‍್ ಬಹುಶಃ ಅತಿ ವೇಗವಾಗಿಯೇ ಬಂದಿರಬೇಕು. ಎಷ್ಟೇ ವೇಗವಾಗಿ ಬಂದರೂ ಒಬ್ಬ ವ್ಯಕ್ತಿ ಇನ್ನೊಬ್ಬರಿಗೆ ಡಿಕ್ಕಿ ಹೊಡೆದರೆ ಸಾವು ಸಂಭವಿಸುವುದು ಅಷ್ಟೊಂದು ಸಲೀಸಲ್ಲ. ಓಡಿ ಬಂದು ಡಿಕ್ಕಿ ಹೊಡೆದಿರಬಹುದೇ ? ಒಂದು ವೇಳೆ ರತ್ನಾಗರ‍್ ವಯಸ್ಸಾದವರಾಗಿದ್ದರೆ ಎದುರಿನ ವ್ಯಕ್ತಿ ಓಡಿ ಬಂದು ಡಿಕ್ಕಿ ಹೊಡೆದರೆ...