ತರ್ಲೆ ಬೈರಪ್ಪರಿಗೂ ಸಂಸ್ಕೃತಕ್ಕೂ ಅದೇನು ನಿಕಟ ಸಂಬಂಧವೋ ತಿಳಿದಿಲ್ಲ. ಆದರೆ ಆಗಾಗ ತಮ್ಮ ಸಂಸ್ಕೃತ ಪ್ರೀತಿಯನ್ನು ಕನ್ನಡಿಗರ ಮೇಲೆ ಹೇರುತ್ತಲೇ ಇದ್ದಾರೆ. ಈ ಹಿಂದೆ ಕರ್ನಾಟಕದಲ್ಲಿ ಸಂಸ್ಕೃತ ವಿ.ವಿ. ಆಗಬೇಕು ಎಂದು ಯಡ್ಡಿಗೆ ಫರ್ಮಾನು ನೀಡಿದ್ದರು. ಈಗ ಹೈಸ್ಕೂಲು ಪಠ್ಯದಲ್ಲಿ ಸಂಸ್ಕೃತ ಕಡ್ಡಾಯವಾಗಲಿ ಎಂದು ಹೇಳಿದ್ದಾರೆ. ಅಷ್ಟಕ್ಕೇ ಸುಮ್ಮನಾಗದೇ "ಸಂಸ್ಕತ ಅಧ್ಯಯನ ಮಾಡಿದವರ ಕನ್ನಡ ಗಟ್ಟಿಯಾಗಿರುತ್ತದೆ, ಅವರ ಮಾತು ಸ್ಪಷ್ಟವಾಗಿರುತ್ತದೆ" ಎಂದೆಲ್ಲಾ ಹೇಳಿದ್ದಾರೆ. ಆದರೆ ಕನ್ನಡವನ್ನು ಇವರಿಗಿಂತಲೂ ಸ್ಪಷ್ಟವಾಗಿ ಮಾತನಾಡುತ್ತಿದ್ದ ರಾಜ್‌ಕುಮಾರ‍್ ಅವರು ಸಂಸ್ಕೃತ ಹಾಗಿರಲಿ, ಕನ್ನಡ ಶಾಲೆಗೂ ಸರಿಯಾಗಿ ಹೋದವರಲ್ಲ ಅನ್ನೋದು ಗೊತ್ತಿಲ್ಲವೋ ಏನೋ. ಹಾಗೆಯೇ ಕನ್ನಡದ ಅನೇಕ ಸಾಹಿತಿಗಳು ಹೆಚ್ಚೇನೂ ಓದದೇನೇ ಉತ್ತಮ ಸಾಹಿತ್ಯ ರಚಿಸಿದ್ದಾರೆ. ಇದೇ ಬೈರಪ್ಪರು ಸಹ ಕನ್ನಡದಲ್ಲೇ ಸಾಹಿತ್ಯ ರಚಿಸಿದ್ದೇ ಹೊರತೂ ಸಂಸ್ಕೃತದಲ್ಲಿ ಅಲ್ಲ. ಸಂಸ್ಕೃತ ಈಗಾಗಲೇ ಒಂದು ಐಚ್ಚಿಕ ವಿಷಯವಾಗಿ ಹೈಸ್ಕೂಲಿನಲ್ಲಿ ಇದೆ. ಅದನ್ನೂ ಕಡ್ಡಾಯ ಮಾಡಿ ಮತ್ತೊಂದಿಷ್ಟು ಕನ್ನಡಿಗ ಮಕ್ಕಳು ಅನುತ್ತೀರ್ಣರಾಗುವ ಹಾಗೆ ಮಾಡದಿರಲಿ.
* ನಿಜವಾದ ಶಿಕ್ಷಣವೆಂದರೆ ಮಾನವೀಯತೆಯ ವಿಕಾಸ. - ಸ್ವಾಮಿ ವಿವೇಕಾನಂದರು . * ಸಚ್ಛಾರಿತ್ರ್ಯದ ಬೆಳವಣಿಗೆಯೇ ಶಿಕ್ಷಣದ ಆರಂಭ. - ಮಾಹಾತ್ಮ ಗಾಂಧೀಜಿ. * ಶಿಕ್ಷಣ ಪ್ರತಿ ವ್ಯಕ್ತಿಯಲ್ಲಿ ಪರಿಪೂರ್ಣತೆಯನ್ನು ತರಬೇಕು. ಜೀವನದಲ್ಲಿ ಮುನ್ನಡೆಸುವ ಸಾಮಥ್ರ್ಯ ನೀಡಬೇಕು. - ಜಿಡ್ಡು ಕೃಷ್ಣಮೂರ್ತಿ . * ದೈಹಿಕ, ಮಾನಸಿಕ ಹಾಗೂ ಆಧ್ಯಾತ್ಮಿಕ ಪ್ರಗತಿಗೆ ಇಂಬು ಕೊಡದ ಶಿಕ್ಷಣ ಅಪೂರ್ಣ. - ಡಾ. ಎಸ್. ರಾಧಾಕೃಷ್ಣನ್. * ಶಿಕ್ಷಣವೆಂದರೆ, ಪುಸ್ತಕದ ಜ್ಞಾನವೇ ಮಾತ್ರ ಅಲ್ಲ. ಸಂಸಾರ, ಮನುಷ್ಯ ಮತ್ತು ಕಾರ್ಯ ಕಲಾಪಗಳ ಪರಸ್ಪರ ಸಂಯೋಗವೇ ಶಿಕ್ಷಣ. - ಬರ್ಕ. * ಜೀವನವೇ ಶಿಕ್ಷಣ, ಶಿಕ್ಷಣವೇ ಜೀವನ. - ಜಾನ್ ಟ್ಯೂಯ್ಲಿ. * ಸಮನ್ವಯತೆ, ಸಮತೋಲನ, ಉಪಯುಕ್ತತೆ, ಪರಿಪೂರ್ಣತೆ, ಆನಂದದಾಯಕ ಹಾಗೂ ನೈಸರ್ಗಿಕತೆಯೇ ಶಿಕ್ಷಣದ ಗುಣಗಳು. - ರೂಸೋ. * ಶಿಕ್ಷಣವು ಧಾರ್ಮಿಕ ವಿಚಾರಗಳ ಸಮನ್ವಯವಾದಾಗಲೇ ಪೂರ್ಣವಾಗುವುದು. - ಅಜ್ಞಾತ. * ನಡತೆ ಬೋಧಿಸುವ ಶಿಕ್ಷಣ, ಮನುಷ್ಯತ್ವ ತೋರದ ವಿಜ್ಞಾನ, ಇವೆರಡೂ ಅಪಾಯಕಾರಿ ಮತ್ತು ಉಪಯೋಗವಿಲ್ಲದವು. - ನೀತಿವಚನ . * ಶಿಕ್ಷಣವೇ ಜೀವನದ ಬೆಳಕು - ಗೊರೂರು * ಶಿಕ್ಷಣವು ಮನುಷ್ಯನನ್ನು ಶ್ರೇಷ್ಠ ನಾಗರಿಕನನ್ನಾಗಿ ಮಾಡುತ್ತದೆ. - ಡಾ: ಎಸ್. ರಾಧಾಕೃಷ್ಣನ್. * ಮನುಷ್ಯರಲ್ಲಿ ಪರಿಪೂರ್ಣತೆಯನ್ನು ಹಿಗ್ಗಿಸುವದೇ ಶಿಕ್ಷಣ - ವಿವೇಕಾನಂದ. * ವಿದ್ಯೆ ಗುರುಗಳ ಗುರು - ಭ್ರತೃ ಹರಿ. * ವಿದ್ಯೆಯಿಂದಲೇ ಮನುಷ್ಯನಿಗೆ ಸುಖ, ಭೋಗ, ಧನ, ...
ಕಾಮೆಂಟ್‌ಗಳು