ವಿಷಯಕ್ಕೆ ಹೋಗಿ

ತರ್ಲೆ ಬೈರಪ್ಪರ ಸಂಸ್ಕೃತ ರಾಗ

ತರ್ಲೆ ಬೈರಪ್ಪರಿಗೂ ಸಂಸ್ಕೃತಕ್ಕೂ ಅದೇನು ನಿಕಟ ಸಂಬಂಧವೋ ತಿಳಿದಿಲ್ಲ. ಆದರೆ ಆಗಾಗ ತಮ್ಮ ಸಂಸ್ಕೃತ ಪ್ರೀತಿಯನ್ನು ಕನ್ನಡಿಗರ ಮೇಲೆ ಹೇರುತ್ತಲೇ ಇದ್ದಾರೆ. ಈ ಹಿಂದೆ ಕರ್ನಾಟಕದಲ್ಲಿ ಸಂಸ್ಕೃತ ವಿ.ವಿ. ಆಗಬೇಕು ಎಂದು ಯಡ್ಡಿಗೆ ಫರ್ಮಾನು ನೀಡಿದ್ದರು. ಈಗ ಹೈಸ್ಕೂಲು ಪಠ್ಯದಲ್ಲಿ ಸಂಸ್ಕೃತ ಕಡ್ಡಾಯವಾಗಲಿ ಎಂದು  ಹೇಳಿದ್ದಾರೆ. ಅಷ್ಟಕ್ಕೇ ಸುಮ್ಮನಾಗದೇ "ಸಂಸ್ಕತ ಅಧ್ಯಯನ ಮಾಡಿದವರ ಕನ್ನಡ ಗಟ್ಟಿಯಾಗಿರುತ್ತದೆ, ಅವರ ಮಾತು ಸ್ಪಷ್ಟವಾಗಿರುತ್ತದೆ" ಎಂದೆಲ್ಲಾ ಹೇಳಿದ್ದಾರೆ. ಆದರೆ ಕನ್ನಡವನ್ನು ಇವರಿಗಿಂತಲೂ ಸ್ಪಷ್ಟವಾಗಿ ಮಾತನಾಡುತ್ತಿದ್ದ ರಾಜ್‌ಕುಮಾರ‍್ ಅವರು ಸಂಸ್ಕೃತ ಹಾಗಿರಲಿ, ಕನ್ನಡ ಶಾಲೆಗೂ ಸರಿಯಾಗಿ ಹೋದವರಲ್ಲ ಅನ್ನೋದು ಗೊತ್ತಿಲ್ಲವೋ ಏನೋ. ಹಾಗೆಯೇ ಕನ್ನಡದ ಅನೇಕ ಸಾಹಿತಿಗಳು ಹೆಚ್ಚೇನೂ ಓದದೇನೇ ಉತ್ತಮ ಸಾಹಿತ್ಯ ರಚಿಸಿದ್ದಾರೆ. ಇದೇ ಬೈರಪ್ಪರು ಸಹ ಕನ್ನಡದಲ್ಲೇ ಸಾಹಿತ್ಯ ರಚಿಸಿದ್ದೇ ಹೊರತೂ ಸಂಸ್ಕೃತದಲ್ಲಿ ಅಲ್ಲ. ಸಂಸ್ಕೃತ ಈಗಾಗಲೇ ಒಂದು ಐಚ್ಚಿಕ ವಿಷಯವಾಗಿ ಹೈಸ್ಕೂಲಿನಲ್ಲಿ ಇದೆ. ಅದನ್ನೂ ಕಡ್ಡಾಯ ಮಾಡಿ ಮತ್ತೊಂದಿಷ್ಟು ಕನ್ನಡಿಗ ಮಕ್ಕಳು ಅನುತ್ತೀರ್ಣರಾಗುವ ಹಾಗೆ ಮಾಡದಿರಲಿ.

ಕಾಮೆಂಟ್‌ಗಳು

ಪ್ರವರ ಕೊಟ್ಟೂರು ಹೇಳಿದ್ದಾರೆ…
ಸಂಸ್ಕೃತ ಅನ್ನೋದು ಹುಳು ಅಷ್ಟೇ ಹೊರತು, ಕನ್ನಡದ ಹುರುಳಲ್ಲ
ಗುಡುಗು ಮಿಂಚು ಹೇಳಿದ್ದಾರೆ…
ಆದರೂ ಕೆಲವರು ಸಂಸ್ಕೃತವೇ ಕನ್ನಡದ ಹುರುಳು ಅಂತ ನಂಬಿಸಲು ಪ್ರಯತ್ನಿಸುತ್ತಲೇ ಇದ್ದಾರೆ.
Agni ಹೇಳಿದ್ದಾರೆ…
ನಮ್ಮ ನಾಡು ನಮ್ಮ ಭಾಷೆ ನಮ್ಮಜನ ನಮ್ಮ ಸಂಸ್ಕೃತಿ ಇತ್ಯಾದಿಗಳಿಗೆ ಪ್ರಾಮುಖ್ಯತೆ ಇರಬೇಕು ಹಾಗೇ ಬೇರೆ ಬೇರೆ ಭಾಷೆಗಳನ್ನೂ ಕಲಿಯಲು ಇಚ್ಛೆಯಿರುವವರಿಗೆ ಸಹಕಾರ ನೀಡಬೇಕು ಇದಲ್ಲದೇ ನಮ್ಮ ಪ್ರಪಂಚದಲ್ಲೇ ಅತೀ ಪ್ರಾಚೀನ ಭಾಷೆ, ಎಲ್ಲಾ ಭಾಷೆಗಳ ತಾಯಿ ಇತ್ಯಾದಿಯೆಲ್ಲಾ ಹೇಳಿ ಜನರನ್ನು ಅಡ್ಡದಾರಿಗೆಳೆದು ನಂಬಿಸಲು ಪ್ರಯತ್ನಿಸಿ ಸರಳ ಮತ್ತು ಸುಲಭವಾದ ಭಾಷೆಗಳನ್ನು ಅವಸಾನದತ್ತ ತಳ್ಳಲು ಪ್ರಯತ್ನಿಸುತ್ತಿರುವ ಇಂತಹವರನ್ನು ಹಿಡ್ಕೊಂಡು ಸರಿಯಾಗಿ ಹೊಡೀಬೇಕು ಏನಾದ್ರೂ ತೆಗೆದುಕೊಂಡು...!
ಗುಡುಗು ಮಿಂಚು ಹೇಳಿದ್ದಾರೆ…
ನೀವು ಹೇಳಿದ್ದು ಸರಿ. ಇವರಿಗೆ ಸಂಸ್ಕೃತದ ಮೇಲೆ ಅಷ್ಟೊಂದು ವ್ಯಾಮೋಹವಿದ್ದರೆ ತಾವೇ ಸ್ವತಃ ಸಂಸ್ಕೃತ ಶಾಲೆ ತೆರೆಯಲಿ. ಅಥವಾ ಸಂಸ್ಕೃತದ ಪ್ರತ್ಯೇಕ ಶಾಲೆ ತೆರೆಯುವಂತೆ ಸರ್ಕಾರಕ್ಕೆ ಹೇಳಲಿ. ಅದು ಬಿಟ್ಟು ಕನ್ನಡದ ಮಕ್ಕಳ ಮೇಲೇ ಸಂಸ್ಕೃತವನ್ನೂ ಹೇರಲು ಹೇಳುವುದು ಸರಿಯಲ್ಲ.

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಶಿಕ್ಷಣದ ಬಗೆಗಿನ ನುಡಿಮುತ್ತುಗಳು

* ನಿಜವಾದ ಶಿಕ್ಷಣವೆಂದರೆ ಮಾನವೀಯತೆಯ ವಿಕಾಸ. - ಸ್ವಾಮಿ ವಿವೇಕಾನಂದರು . * ಸಚ್ಛಾರಿತ್ರ್ಯದ ಬೆಳವಣಿಗೆಯೇ ಶಿಕ್ಷಣದ ಆರಂಭ. - ಮಾಹಾತ್ಮ ಗಾಂಧೀಜಿ. * ಶಿಕ್ಷಣ ಪ್ರತಿ ವ್ಯಕ್ತಿಯಲ್ಲಿ ಪರಿಪೂರ್ಣತೆಯನ್ನು ತರಬೇಕು.  ಜೀವನದಲ್ಲಿ ಮುನ್ನಡೆಸುವ ಸಾಮಥ್ರ್ಯ ನೀಡಬೇಕು. -    ಜಿಡ್ಡು ಕೃಷ್ಣಮೂರ್ತಿ . * ದೈಹಿಕ, ಮಾನಸಿಕ ಹಾಗೂ ಆಧ್ಯಾತ್ಮಿಕ ಪ್ರಗತಿಗೆ ಇಂಬು ಕೊಡದ ಶಿಕ್ಷಣ ಅಪೂರ್ಣ. - ಡಾ. ಎಸ್. ರಾಧಾಕೃಷ್ಣನ್. * ಶಿಕ್ಷಣವೆಂದರೆ, ಪುಸ್ತಕದ ಜ್ಞಾನವೇ ಮಾತ್ರ ಅಲ್ಲ.  ಸಂಸಾರ, ಮನುಷ್ಯ ಮತ್ತು ಕಾರ್ಯ ಕಲಾಪಗಳ ಪರಸ್ಪರ ಸಂಯೋಗವೇ ಶಿಕ್ಷಣ. -    ಬರ್ಕ. * ಜೀವನವೇ ಶಿಕ್ಷಣ, ಶಿಕ್ಷಣವೇ ಜೀವನ. - ಜಾನ್ ಟ್ಯೂಯ್ಲಿ. * ಸಮನ್ವಯತೆ, ಸಮತೋಲನ, ಉಪಯುಕ್ತತೆ,  ಪರಿಪೂರ್ಣತೆ, ಆನಂದದಾಯಕ ಹಾಗೂ ನೈಸರ್ಗಿಕತೆಯೇ ಶಿಕ್ಷಣದ ಗುಣಗಳು. - ರೂಸೋ. * ಶಿಕ್ಷಣವು ಧಾರ್ಮಿಕ ವಿಚಾರಗಳ ಸಮನ್ವಯವಾದಾಗಲೇ ಪೂರ್ಣವಾಗುವುದು. - ಅಜ್ಞಾತ. * ನಡತೆ ಬೋಧಿಸುವ ಶಿಕ್ಷಣ, ಮನುಷ್ಯತ್ವ ತೋರದ ವಿಜ್ಞಾನ, ಇವೆರಡೂ ಅಪಾಯಕಾರಿ ಮತ್ತು ಉಪಯೋಗವಿಲ್ಲದವು. - ನೀತಿವಚನ . * ಶಿಕ್ಷಣವೇ ಜೀವನದ ಬೆಳಕು - ಗೊರೂರು * ಶಿಕ್ಷಣವು ಮನುಷ್ಯನನ್ನು ಶ್ರೇಷ್ಠ ನಾಗರಿಕನನ್ನಾಗಿ ಮಾಡುತ್ತದೆ. - ಡಾ: ಎಸ್. ರಾಧಾಕೃಷ್ಣನ್. * ಮನುಷ್ಯರಲ್ಲಿ ಪರಿಪೂರ್ಣತೆಯನ್ನು ಹಿಗ್ಗಿಸುವದೇ ಶಿಕ್ಷಣ - ವಿವೇಕಾನಂದ. * ವಿದ್ಯೆ ಗುರುಗಳ ಗುರು - ಭ್ರತೃ ಹರಿ. * ವಿದ್ಯೆಯಿಂದಲೇ ಮನುಷ್ಯನಿಗೆ ಸುಖ, ಭೋಗ, ಧನ, ...

ಈ ಹುಡುಗಿಯರೇ ಹೀಗೆ !

ಬೆಟ್ಟದ ಬದಿಯಿಂದ ಮುಂಜಾನೆಯ ರವಿ ಇಣುಕಿದಂತೆ ಕಿಟಕಿ ಹಿಂದಿನ ಕಂಗಳು, ಕಂಡೂ ಕಾಣದ ಮುಂಗುರುಳು ಗಲಗಲ ಬಳೆಯ ತರಂಗ ಕಿಲಕಿಲ ನಗುವಿನಂತರಂಗ, ಎದುರು ಬರಲಾರರು ಚೆಲುವೆಯರು ಬಂದರೂ ಬಹು ಲಾಸ್ಯ ಲಜ್ಜೆ ಇಡುತಲಿ ಒಂದೊಂದೇ ಹೆಜ್ಜೆ ಮುಗಿಲಿಂದ ಬರಗಾಲದಿ ಮಳೆ ಹನಿ ಬಿಸಿ ನೆಲಕ್ಕೆ ಎಣಿಸಿ ಮುತ್ತಿಕ್ಕಿದಂತೆ ! ಕಿರು ಹಣತೆ ಉರಿಯಂತೆ ತುಟಿ ರಂಗು ಪತಂಗ ಹಾರಿದಂತೆ ತೆಳು ಸೆರಗು ಕಾವ್ಯದೊಡತಿಯರು, ಮೌನವೇ ಮಾತು. ಅರೆಕ್ಷಣದಿ ಸೃಷ್ಟಿಸಿ ಕಲ್ಪಾನಾ ಲೋಕ ನಗ್ನ ಬಿಂಬ ತೋರಿ ತೆರೆವರು ಪ್ರೇಮಲೋಕ ಒಮ್ಮೆ ಧಾರಾಳ ದಮಯಂತಿ ಮಗದೊಮ್ಮೆ ಮುನಿದ ಮಗುವಂತೆ ಅಲ್ಲಿ ಪ್ರೇಮ ಪ್ರೀತಿಯನ್ನರಸುವ ಹುಡುಗನ ನಿರಂತರ ಬೇಟೆ ! ಅರಿವಾಗುವ ಮುನ್ನವೇ ಮಾನಸಿಕ ಪತ್ನಿಯಾಗಿರುತ್ತಾಳೆ, ಛೇಧಿಸಿ ಹೃದಯ ಕೋಟೆ.

ಪಡುವಣಕ್ಕೆ ಹೊರಟ ವಿಮಾನ ಏಕೆ ಬೇಗನೆ ತಲುಪುವುದಿಲ್ಲ ?

ಭೂಮಿ ವೇಗವಾಗಿ ಸುತ್ತುತ್ತಿದೆ ಎಂಬುದನ್ನು ಒಪ್ಪದವರು ಮುಂದಿಡುವ ಒಂದು ಪ್ರಶ್ನೆ ಹೀಗಿದೆ. "ಭೂಮಿ ಅಷ್ಟು ವೇಗವಾಗಿ ತಿರುಗುತ್ತ ಇದ್ದರೆ ಒಂದು ವಿಮಾನವು ಚೀನಾದಿಂದ ಸೌದಿಗೆ ಹೋಗಬೇಕಾದಲ್ಲಿ ಸ್ವಲ್ಪ ಮೇಲೆ ಹೋಗಿ ನಿಂತುಕೊಂಡರೆ ಸಾಕಲ್ಲ, ಭೂಮಿ ತಿರುಗುವುದರಿಂದ ಸೌದಿ ಅರೇಬಿಯಾ ತಾನಾಗಿಯೇ ವಿಮಾನದ ಕೆಳಗೆ ಬರುತ್ತದೆ. ಅಥವಾ ಮೂಡಣ ದಿಕ್ಕಿಗೆ ಹೊರಟ ವಿಮಾನವು ತಡವಾಗಿ ತಲುಪಬೇಕು ಮತ್ತು ಪಡುವಣ ದಿಕ್ಕಿಗೆ ಹೊರಟ ವಿಮಾನವು ಬೇಗನೆ ತಲುಪಬೇಕು" ಎಂಬ ವಾದವನ್ನು ಮುಂದಿಡುತ್ತಾರೆ. ಆದರೆ ಹಾಗೆ ಆಗಲು ಸಾಧ್ಯವಿಲ್ಲ, ಏಕೆಂದರೆ ಭೂಮಿ ಅಂದರೆ ಬರೀ ನೆಲವಷ್ಟೇ ಅಲ್ಲ, ಅದರ ಸುತ್ತಲಿನ ವಾತಾವರನವೂ ಸೇರಿ ಅದರ ಜೊತೆಗೇ ತಿರುಗುತ್ತಾ ಇದೆ. ಹಾಗಾಗಿ ವಿಮಾನವು ಮೇಲೆ ಹೋಗಿ ನಿಂತರೂ ಸಹ ಅದು ಭೂಮಿಯ ಜೊತೆಗೇ ಸಾಗುತ್ತದೆಯಾದ್ದರಿಂದ ಕೆಳಗಿನ ನೆಲ ಮಾತ್ರ ಜರುಗಲು ಸಾಧ್ಯ ಇಲ್ಲ. ಇದನ್ನು ನಾವೇ ಪರಿಶೀಲಿಸಬಹುದು. ಹೇಗೆಂದರೆ.. ವೇಗವಾಗಿ ಹೋಗುತ್ತಿರುವ ರೈಲಿನ ಎಲ್ಲಾ ಕಿಟಕಿಗಳನ್ನೂ ಮುಚ್ಚಿ ಅದರ ಮಾಡಿನ ಹತ್ತಿರದಿಂದ ಒಂದು ಚಿಕ್ಕ ವಸ್ತುವನ್ನು (ಉದಾ : ಗೋಲಿ) ಬಿಟ್ಟರೆ ಅದು ನಾವು ಬಿಟ್ಟಬಿಂದುವಿನ ನೇರಕ್ಕೇ ಬಿಳುತ್ತದೆಯೆ ಹೊರತಾಗಿ ರೈಲು ಓಡುತ್ತಿರುವುದರಿಂದ ಸ್ವಲ್ಪ ಹಿಂದೆ ಬೀಳುವುದಿಲ್ಲ. ಹಾಗೆಯೇ ಗಾಳಿಯಾಡದಂತೆ ಮುಚ್ಚಿದ ರೈಲು ಬೋಗಿಯ ಒಳಗೆ ಒಂದು ತುದಿಯಿಂದ ಇನ್ನೊಂದು ತುದಿಗೆ ಚೆಂಡನ್ನು ಒಂದೇ ಜೋರಿನಲ್ಲಿ ಎಸೆದರೆ ಅದು ಎರಡೂ ದಿಕ್ಕಿಗೂ (ಮುಂದಿನಿ...