ತರ್ಲೆ ಬೈರಪ್ಪರಿಗೂ ಸಂಸ್ಕೃತಕ್ಕೂ ಅದೇನು ನಿಕಟ ಸಂಬಂಧವೋ ತಿಳಿದಿಲ್ಲ. ಆದರೆ ಆಗಾಗ ತಮ್ಮ ಸಂಸ್ಕೃತ ಪ್ರೀತಿಯನ್ನು ಕನ್ನಡಿಗರ ಮೇಲೆ ಹೇರುತ್ತಲೇ ಇದ್ದಾರೆ. ಈ ಹಿಂದೆ ಕರ್ನಾಟಕದಲ್ಲಿ ಸಂಸ್ಕೃತ ವಿ.ವಿ. ಆಗಬೇಕು ಎಂದು ಯಡ್ಡಿಗೆ ಫರ್ಮಾನು ನೀಡಿದ್ದರು. ಈಗ ಹೈಸ್ಕೂಲು ಪಠ್ಯದಲ್ಲಿ ಸಂಸ್ಕೃತ ಕಡ್ಡಾಯವಾಗಲಿ ಎಂದು ಹೇಳಿದ್ದಾರೆ. ಅಷ್ಟಕ್ಕೇ ಸುಮ್ಮನಾಗದೇ "ಸಂಸ್ಕತ ಅಧ್ಯಯನ ಮಾಡಿದವರ ಕನ್ನಡ ಗಟ್ಟಿಯಾಗಿರುತ್ತದೆ, ಅವರ ಮಾತು ಸ್ಪಷ್ಟವಾಗಿರುತ್ತದೆ" ಎಂದೆಲ್ಲಾ ಹೇಳಿದ್ದಾರೆ. ಆದರೆ ಕನ್ನಡವನ್ನು ಇವರಿಗಿಂತಲೂ ಸ್ಪಷ್ಟವಾಗಿ ಮಾತನಾಡುತ್ತಿದ್ದ ರಾಜ್ಕುಮಾರ್ ಅವರು ಸಂಸ್ಕೃತ ಹಾಗಿರಲಿ, ಕನ್ನಡ ಶಾಲೆಗೂ ಸರಿಯಾಗಿ ಹೋದವರಲ್ಲ ಅನ್ನೋದು ಗೊತ್ತಿಲ್ಲವೋ ಏನೋ. ಹಾಗೆಯೇ ಕನ್ನಡದ ಅನೇಕ ಸಾಹಿತಿಗಳು ಹೆಚ್ಚೇನೂ ಓದದೇನೇ ಉತ್ತಮ ಸಾಹಿತ್ಯ ರಚಿಸಿದ್ದಾರೆ. ಇದೇ ಬೈರಪ್ಪರು ಸಹ ಕನ್ನಡದಲ್ಲೇ ಸಾಹಿತ್ಯ ರಚಿಸಿದ್ದೇ ಹೊರತೂ ಸಂಸ್ಕೃತದಲ್ಲಿ ಅಲ್ಲ. ಸಂಸ್ಕೃತ ಈಗಾಗಲೇ ಒಂದು ಐಚ್ಚಿಕ ವಿಷಯವಾಗಿ ಹೈಸ್ಕೂಲಿನಲ್ಲಿ ಇದೆ. ಅದನ್ನೂ ಕಡ್ಡಾಯ ಮಾಡಿ ಮತ್ತೊಂದಿಷ್ಟು ಕನ್ನಡಿಗ ಮಕ್ಕಳು ಅನುತ್ತೀರ್ಣರಾಗುವ ಹಾಗೆ ಮಾಡದಿರಲಿ.
ಇದು ನಾನು ಹೈಸ್ಕೂಲು ಓದುತ್ತಿದ್ದಾಗ ನಡೆದ ಘಟನೆ. ಸಾಗರದಲ್ಲಿ ಶ್ರೀ ವರದಾ ಬಸ್ನ ಹೆಸರನ್ನು ಕೇಳದವರೇ ಇಲ್ಲ. ನನಗೆ ಬುದ್ದಿ ತಿಳಿದಾಗಿನಿಂದಲೂ ನಮ್ಮೂರಿಗೆ ಬರುತ್ತಿದ್ದುದು ಅದೇ ಬಸ್ಸು. ಅದರ ಮಾಲೀಕರಿಗೆ ಇದ್ದದ್ದು ಅದೊಂದೇ ಬಸ್ಸು. ಹಾಗಂತ ಅದೇನೂ ಐರಾವತ ಥರಾ ಇರಲಿಲ್ಲ. ಸಾಧಾರಣವಾಗೇ ಇತ್ತು. ಸಾಗರದಿಂದ ಚಂದನಹಳ್ಳಿಗೆ ಇರುವ ಹತ್ತು ಕಿಲೋ ಮೀಟರನ್ನು ಕೇವಲ ಒಂದು ಗಂಟೆಯ ಅವಧಿಯಲ್ಲೇ ಕ್ರಮಿಸಿ ದಾಖಲೆ ಮಾಡಿತ್ತು. ಯಾಕೆಂದರೆ ಅದೇ ರಸ್ತೆಯಲ್ಲಿ ಕಾರುಗಳು ಬಂದರೆ ಅವು ಎರಡು ಗಂಟೆ ತೆಗೆದುಕೊಳ್ಳುತ್ತಿದ್ದವು. ರಸ್ತೆ ಹಾಗಿತ್ತು. ಅದಕ್ಕೆ ತಕ್ಕಂತೆ ಬಸ್ಸೂ ಸಹ ಪ್ರತಿ ದಿನ ಬಿಹೆಚ್ ರಸ್ತೆಯ ಒಂದು ಗ್ಯಾರೇಜಿಗೆ ಹೋಗಿ ತಪಾಸಣೆ ಮಾಡಿಸಿಕೊಂಡೇ ಬರುತ್ತಿತ್ತು. ಸಾಗರದಲ್ಲಿ ಗುರುವಾರ ಸಂತೆ. ಗುರುವಾರ ಬಂತೆಂದರೆ ಭಯಂಕರ ರಷ್ಶು. ಅದೊಂದು ಗುರುವಾರ ಸಾಗರದ ಜ್ಯೂನಿಯರ್ ಕಾಲೇಜಿನಲ್ಲಿ ಪರೀಕ್ಷೆ ಮುಗಿಸಿಕೊಂಡು ಮಧ್ಯಾಹ್ನ ಬಿಹೆಚ್ ರಸ್ತೆಯ ಗ್ಯಾರೇಜಿನಲ್ಲೇ ಇರುತ್ತಿದ್ದ ವರದಾ ಬಸ್ಸನ್ನು ಹತ್ತಿ ಹೇಗೋ ಸೀಟು ಹಿಡಿದು ಕುಳಿತಿದ್ದೆ. ಸೀಟು ಬೇಕಾದವರೆಲ್ಲಾ ಅಲ್ಲೇ ಬಂದು ಬಸ್ ಹತ್ತುತ್ತಿದ್ದರು. ಬಸ್ ಅಂತೂ ಒಂದು ಗಂಟೆಗೆ ಹೊರಟು ಜೋಗ ಬಸ್ ನಿಲ್ದಾಣ ಬಂದಾಗ ಯಕ್ಕಾಮಕ್ಕಾ ಜನ ಹತ್ತಿಯೇ ಬಿಟ್ಟರು. ಬಸ್ನ ಟಾಪ್ನಲ್ಲೂ ಜನರು ಹತ್ತಿ ಕುಳಿತರು. ಒಳಗಡೆಯಂತೂ ಉಸಿರುಗಟ್ಟುವಷ್ಟು ಜನಸಂದಣಿ. ಗಂಡಸರು, ಹೆಂಗಸರು, ಮಕ್ಕಳು ಮದುಕರು, ಮುದುಕಿಯರು, ಹರೆಯದ ಹು...
ಕಾಮೆಂಟ್ಗಳು