ವಿಷಯಕ್ಕೆ ಹೋಗಿ

ವಿಶ್ವೇಶ್ವರ ಭಟ್ಟರು ಕನ್ನಡಪ್ರಭ ಪತ್ರಿಕೆಯ ಪ್ರಧಾನ ಸಂಪಾದಕರಾಗಿದ್ದಾರೆ

ವಿಶ್ವೇಶ್ವರ ಭಟ್ಟರು ಕನ್ನಡಪ್ರಭ ಪತ್ರಿಕೆಯ ಪ್ರಧಾನ ಸಂಪಾದಕರಾಗಿದ್ದಾರೆ. ಈ ಹಿಂದೆ ಸಹ-ಸಂಪಾದಕರಾಗಿ ಇದೇ ಪತ್ರಿಕೆಯಲ್ಲಿ ಭಟ್ಟರು ಕೆಲಸ ಮಾಡಿದ್ದರು. ಕನ್ನಡದ ವಿಷಯದಲ್ಲಿ ಕನ್ನಡಪ್ರಭ ಹೆಚ್ಚು ಉಗ್ರವಾಗಿ ಜನರನ್ನು ಎಚ್ಚರಿಸುತ್ತಾ ಬಂದಿದೆ. ಮತ್ತು ಯಾವುದೇ ರಾಜಕೀಯ ಪಕ್ಷಕ್ಕೂ ಮಣೆ ಹಾಕದೇ ತನ್ನದೇ ಆದ ಛಾಪನ್ನೂ ಉಳಿಸಿಕೊಂಡಿದೆ. ಇನ್ನು ಮುಂದೆ ಭಟ್ಟರು ಪತ್ರಿಕೆಯನ್ನು ಯಾವ ರೀತಿ ಮುನ್ನಡೆಸುತ್ತಾರೆ ಕಾದು ನೋಡಬೇಕಾಗಿದೆ. ಮೂರನೇ ಸ್ಥಾನದಲ್ಲಿರು ಪತ್ರಿಕೆ
ಕನ್ನಡಪ್ರಭ ಸೇರಿದ್ದು ಸಂತೋಷದ ವಿಷಯ. ಕನ್ನಡದ ವಿಷಯದಲ್ಲಿ ಈ ಪತ್ರಿಕೆ ಮೊದಲಿನಿಂದಲೂ ವಿಶೇಷ ಕಾಳಜಿ ವಹಿಸುತ್ತಾ ಬಂದಿದೆ. ಇನ್ನು ಭಟ್ಟರ ಸಾರಥ್ಯದಲ್ಲಿ ಹೊಸ ಹೋರಾಟಗಳು ಶುರುವಾಗಲಿ. ಮುಖ್ಯವಾಗಿ ನಾಡಿಗೆ ಮಾರಕವಾಗಿರುವ ಭ್ರಷ್ಟಾಚಾರದ ವಿರುದ್ಧ ತಮ್ಮ ಲೇಖನಿ ಜಳಪಿಸಲಿ.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ವರದಾ ಬಸ್ಸಿಗೆ ಬೆಂಕಿ ಬಿತ್ತು !!

ಇದು ನಾನು ಹೈಸ್ಕೂಲು ಓದುತ್ತಿದ್ದಾಗ ನಡೆದ ಘಟನೆ. ಸಾಗರದಲ್ಲಿ ಶ್ರೀ ವರದಾ ಬಸ್‌ನ ಹೆಸರನ್ನು ಕೇಳದವರೇ ಇಲ್ಲ. ನನಗೆ ಬುದ್ದಿ ತಿಳಿದಾಗಿನಿಂದಲೂ ನಮ್ಮೂರಿಗೆ ಬರುತ್ತಿದ್ದುದು ಅದೇ ಬಸ್ಸು. ಅದರ ಮಾಲೀಕರಿಗೆ ಇದ್ದದ್ದು ಅದೊಂದೇ ಬಸ್ಸು. ಹಾಗಂತ ಅದೇನೂ ಐರಾವತ ಥರಾ ಇರಲಿಲ್ಲ. ಸಾಧಾರಣವಾಗೇ ಇತ್ತು. ಸಾಗರದಿಂದ ಚಂದನಹಳ್ಳಿಗೆ ಇರುವ ಹತ್ತು ಕಿಲೋ ಮೀಟರನ್ನು ಕೇವಲ ಒಂದು ಗಂಟೆಯ ಅವಧಿಯಲ್ಲೇ ಕ್ರಮಿಸಿ ದಾಖಲೆ ಮಾಡಿತ್ತು. ಯಾಕೆಂದರೆ ಅದೇ ರಸ್ತೆಯಲ್ಲಿ ಕಾರುಗಳು ಬಂದರೆ ಅವು ಎರಡು ಗಂಟೆ ತೆಗೆದುಕೊಳ್ಳುತ್ತಿದ್ದವು. ರಸ್ತೆ ಹಾಗಿತ್ತು. ಅದಕ್ಕೆ ತಕ್ಕಂತೆ ಬಸ್ಸೂ ಸಹ ಪ್ರತಿ ದಿನ ಬಿಹೆಚ್ ರಸ್ತೆಯ ಒಂದು ಗ್ಯಾರೇಜಿಗೆ ಹೋಗಿ ತಪಾಸಣೆ ಮಾಡಿಸಿಕೊಂಡೇ ಬರುತ್ತಿತ್ತು. ಸಾಗರದಲ್ಲಿ ಗುರುವಾರ ಸಂತೆ. ಗುರುವಾರ ಬಂತೆಂದರೆ ಭಯಂಕರ ರಷ್ಶು. ಅದೊಂದು ಗುರುವಾರ ಸಾಗರದ ಜ್ಯೂನಿಯರ‍್ ಕಾಲೇಜಿನಲ್ಲಿ ಪರೀಕ್ಷೆ ಮುಗಿಸಿಕೊಂಡು ಮಧ್ಯಾಹ್ನ ಬಿಹೆಚ್ ರಸ್ತೆಯ ಗ್ಯಾರೇಜಿನಲ್ಲೇ ಇರುತ್ತಿದ್ದ ವರದಾ ಬಸ್ಸನ್ನು ಹತ್ತಿ ಹೇಗೋ ಸೀಟು ಹಿಡಿದು ಕುಳಿತಿದ್ದೆ. ಸೀಟು ಬೇಕಾದವರೆಲ್ಲಾ ಅಲ್ಲೇ ಬಂದು ಬಸ್ ಹತ್ತುತ್ತಿದ್ದರು. ಬಸ್ ಅಂತೂ ಒಂದು ಗಂಟೆಗೆ ಹೊರಟು ಜೋಗ ಬಸ್‌ ನಿಲ್ದಾಣ ಬಂದಾಗ ಯಕ್ಕಾಮಕ್ಕಾ ಜನ ಹತ್ತಿಯೇ ಬಿಟ್ಟರು. ಬಸ್‌ನ ಟಾಪ್‌ನಲ್ಲೂ ಜನರು ಹತ್ತಿ ಕುಳಿತರು. ಒಳಗಡೆಯಂತೂ ಉಸಿರುಗಟ್ಟುವಷ್ಟು ಜನಸಂದಣಿ. ಗಂಡಸರು, ಹೆಂಗಸರು, ಮಕ್ಕಳು ಮದುಕರು, ಮುದುಕಿಯರು, ಹರೆಯದ ಹು...

ಈ ಹುಡುಗಿಯರೇ ಹೀಗೆ !

ಬೆಟ್ಟದ ಬದಿಯಿಂದ ಮುಂಜಾನೆಯ ರವಿ ಇಣುಕಿದಂತೆ ಕಿಟಕಿ ಹಿಂದಿನ ಕಂಗಳು, ಕಂಡೂ ಕಾಣದ ಮುಂಗುರುಳು ಗಲಗಲ ಬಳೆಯ ತರಂಗ ಕಿಲಕಿಲ ನಗುವಿನಂತರಂಗ, ಎದುರು ಬರಲಾರರು ಚೆಲುವೆಯರು ಬಂದರೂ ಬಹು ಲಾಸ್ಯ ಲಜ್ಜೆ ಇಡುತಲಿ ಒಂದೊಂದೇ ಹೆಜ್ಜೆ ಮುಗಿಲಿಂದ ಬರಗಾಲದಿ ಮಳೆ ಹನಿ ಬಿಸಿ ನೆಲಕ್ಕೆ ಎಣಿಸಿ ಮುತ್ತಿಕ್ಕಿದಂತೆ ! ಕಿರು ಹಣತೆ ಉರಿಯಂತೆ ತುಟಿ ರಂಗು ಪತಂಗ ಹಾರಿದಂತೆ ತೆಳು ಸೆರಗು ಕಾವ್ಯದೊಡತಿಯರು, ಮೌನವೇ ಮಾತು. ಅರೆಕ್ಷಣದಿ ಸೃಷ್ಟಿಸಿ ಕಲ್ಪಾನಾ ಲೋಕ ನಗ್ನ ಬಿಂಬ ತೋರಿ ತೆರೆವರು ಪ್ರೇಮಲೋಕ ಒಮ್ಮೆ ಧಾರಾಳ ದಮಯಂತಿ ಮಗದೊಮ್ಮೆ ಮುನಿದ ಮಗುವಂತೆ ಅಲ್ಲಿ ಪ್ರೇಮ ಪ್ರೀತಿಯನ್ನರಸುವ ಹುಡುಗನ ನಿರಂತರ ಬೇಟೆ ! ಅರಿವಾಗುವ ಮುನ್ನವೇ ಮಾನಸಿಕ ಪತ್ನಿಯಾಗಿರುತ್ತಾಳೆ, ಛೇಧಿಸಿ ಹೃದಯ ಕೋಟೆ.

ಕಾರ್ಗಿಲ್ ಕಥೆ : ಸೈನಿಕನೆಂದರೆ

"ನಿನಗೇನಾದರೂ ಪೆಟ್ಟಾಯಿತೆ?" ಎಂದು ಕೇಳಿದನು ಮಹರ್ಷಿ. ನಾನು ನನ್ನ ಕೈ ಮೈಯನ್ನು ನೋಡಿಕೊಂಡೆ. ಮುಂಗೈಗೆ ಒಂದು ಮೊನಚು ಕಲ್ಲು ಹೊಡೆದು ಅರ್ಧ ಇಂಚಿನಷ್ಟು ಅಳಕ್ಕೆ ಗಾಯವಾಗಿತ್ತು. ರಕ್ತದ ಹನಿಗಳು ಪಟಪಟನೆ ಸುರಿಯುತ್ತಿದ್ದವು. ಅದನ್ನು ಕಂಡ ಅವನು  ತನ್ನಲ್ಲಿದ್ದ ಹತ್ತಿಯನ್ನು ಗಾಯದ ಮೇಲಿಟ್ಟು ಕರವಸ್ತ್ರದಿಂದ ಗಟ್ಟಿಯಾಗಿ ಕಟ್ಟು ಹಾಕಿದನು. ಮತ್ತೆ ನಮ್ಮ ನಮ್ಮ ಬಂದೂಕುಗಳನ್ನು ಎತ್ತಿಕೊಂಡೆವು! ಶತ್ರು ಪಡೆಗಳ ಸೆಲ್‌ಗಳೂ ಅವರ ಗನ್‌ಗಳ ಗುಂಡುಗಳೂ ಅಲ್ಲಲ್ಲಿ ಬಿದ್ದು ಸಿಡಿಯುತ್ತಿದ್ದವು. ನಾವಿಬ್ಬರೂ ಈಗ ಆ ದೊಡ್ಡ ಬಂಡೆಯ ಹಿಂದೆ ರಕ್ಷಣೆ ಪಡೆದಿದ್ದೆವು. ಮತ್ತೆ ಕೇಳಿದನು ಮಹರ್ಷಿ...... ``ಈಗೇನು ಮಾಡೋಣ?" ``ಇರು... ನಮ್ಮವರು ಬಂದು ನಮ್ಮನ್ನು ಸೇರಿಕೊಳ್ಳಲಿ. ಇದೀಗ ನಾವು ಆಯಕಟ್ಟಿನ ಸ್ಥಳಕ್ಕೆ ಬಂದಾಗಿದೆ... ಇನ್ನೇನಿದ್ದರೂ ಮುಖಾಮುಖಿ" ಎಂದೆ. ``ಇದು ನಮಗೆ ಎಷ್ಟನೇ ಮುಖಾಮುಖಿ? ಅವನ ಬೆನ್ನು ತಟ್ಟಿ ಹೇಳಿದೆ ``ಮೂರನೆಯದು" ``ಈ ಕುನ್ನಿಗಳಿಂದ ನಮ್ಮನ್ನೇನು ಮಾಡಲು ಸಾಧ್ಯವಿಲ್ಲ ಅಲ್ಲವಾ?" ಎನ್ನುತ್ತ ಅವನು ನನ್ನ ಕೈ ಕುಲಕಿದ್ದನು. ಆದರೆ ನನ್ನ ಮನಸ್ಸು ಮಾತ್ರ ಹಿಂದೆ ಓಡುತ್ತಿತ್ತು. *  *  *  ಒಂದೇ ಊರಿನಲ್ಲಿ ಹುಟ್ಟಿ ಬೆಳೆದ ನಮಗೆ ಊರಿನ ಜನರಲ್ಲಿ ಗೆಳೆಯರು ಎಂಬುದಕ್ಕಿಂತ ಅಣ್ಣ ತಮ್ಮಂದಿರೆಂಬ ಪರ್ಯಾಯ ಸಂಬಂಧವಿತ್ತು. ``ಮನು ಮಹರ್ಷಿಯರು ಅಗಲಿದ್ದುದನ್ನು ನಾವೆಂದೂ ನೋಡೇ ಇಲ್ಲ" ಎಂದು ಊರ ಜ...