೧. ಅತಂತ್ರ ಲೋಕಸಭೆ ಏನಾದರೂ ಆಗಿದ್ದರೆ ಅದರಿಂದ ದೇಶಕ್ಕೆ ತುಂಬಾ ನಷ್ಟವೇ ಆಗುತ್ತಿತ್ತು.
೨. ರಾಹುಲ್ / ಸೋನಿಯಾಗಾಂಧಿಗೆ ಪಕ್ಷವನ್ನು/ದೇಶವನ್ನು ಮುನ್ನಡೆಸುವಂತಾ ಶಕ್ತಿ ಇಲ್ಲ ಅನ್ನುವುದು ಸಾಬೀತಾಯ್ತು.
೩. ಹತ್ತಾರು ವರ್ಷಗಳಿಂದ ಒಂದೇ ಪಕ್ಷದ ಅಧಿಕಾರ ಇರುವುದು ಕೂಡಾ ಉತ್ತಮ ಬೆಳವಣಿಗೆ ಅಲ್ಲ. ಅದರಲ್ಲೂ ೨ಜಿ, ಕಾಮನ್‌ವೆಲ್ತ್‌ನಂತಹ ಲಕ್ಷಾಂತರ ಕೋಟಿ ರೂಪಾಯಿಗಳ ಹಗರಣ ನಡೆದ ಬಳಿಕವೂ ಯುಪಿಎ ಯನ್ನು ಮುಂದುವರಿಸಿದ್ದರೆ ಅದು ಅವರ ಭ್ರಷ್ಟಾಚಾರಕ್ಕೆ ನೀಡುವ ಕುಮ್ಮಕ್ಕಿನಂತೆ ಆಗುವ ಸಾಧ್ಯತೆ ಇತ್ತು.
೪. ಕಾಂಗ್ರೆಸ್ ಅಲ್ಪಸಂಖ್ಯಾತರ ಮತಬ್ಯಾಂಕ್ ರಾಜಕಾರಣ ಮಾಡುತ್ತಾ ಬಂದಿರುವುದೇ ಬಹುಸಂಖ್ಯಾತರು ಬಿಜೆಪಿಯತ್ತ ಒಲಿಯಲು ಪ್ರಮುಖ ಕಾರಣ.
೫. ಕಾಂಗ್ರೆಸ್ ಮಾಡಿದ ಒಳ್ಳೆಯ ಕೆಲಸಗಳನ್ನೂ ಪ್ರಚಾರ ಮಾಡದೇ ಕೇವಲ ರಾಹುಲ್‌ಗಾಂಧಿ ಬಜನೆಯಲ್ಲಿ ತೊಡಗಿದ್ದು ಮತ್ತೊಂದು ತಪ್ಪು. (ನೆಹರು ಕುಟುಂಬದಿಂದ ಆ ಪಕ್ಷ ಹೊರ ಬಾರದಿದ್ದುದರ ಪರಿಣಾಮ ಇದು)
೫. ಆಮ್ ಆದ್ಮಿ ಪಕ್ಷ ಸ್ಪಷ್ಟ ದಾರಿಯನ್ನು ಕಂಡುಕೊಳ್ಳಲಿಲ್ಲ. ಅದೂ ಕೂಡಾ ಕೇಜ್ರೀವಾಲ್ ಕೇಂದ್ರೀಕೃತವಾಯ್ತು, ಅಲ್ಲದೇ 'ಆಮ್ ಆದ್ಮಿ' ಎಂಬ ಹೆಸರೇ ಹಿಂದಿಯೇತರ ರಾಜ್ಯಗಳಿಗೆ ಪರಕೀಯವೆನ್ನಿಸುತ್ತದೆ.
ಅದೇನೇ ಇದ್ದರೂ ಜನರ ತೀರ್ಮಾನವೇ ಅಂತಿಮ. ಮುಂಬರುವ ಸರ್ಕಾರ, ಪ್ರಧಾನಿ ಜನರ/ದೇಶದ ಆಶೋತ್ತರಗಳಿಗೆ ಸ್ಪಂದಿಸಲಿ. ಮೋದಿ ಪ್ರಧಾನಿಯಾದಲ್ಲಿ ಚೆಡ್ಡಿಗಳನ್ನು ದೂರವಿಟ್ಟು ಉತ್ತಮ ಆಡಳಿತ ನೀಡಲಿ. ಸ್ವತಃ ಕೆಳ ಸಮುದಾಯದಿಂದ ಬಂದಿರುವ ಮೋದಿಯಿಂದಾದರೂ ದೇಶದ ಕೆಳವರ್ಗ ಮುಖ್ಯವಾಹಿನಿಗೆ ಬರುವಂತಾಗಲಿ. ಚೆಡ್ಡಿ ಬಳಗ ಹೇಳುವಂತೆ ಪಾಕಿಸ್ತಾನ, ಚೀನಾದ ಮೇಲೆಲ್ಲಾ ದಂಡೆತ್ತಿ ಹೋಗಿ ನಮ್ಮ ಸೈನಿಕರ ಪ್ರಾಣ ಪಣಕ್ಕಿಡುವುದರ ಬದಲಾಗಿ ಎಲ್ಲಾ ದೇಶಗಳ ಜೊತೆಗೂ ಉತ್ತಮ ಬಾಂಧವ್ಯವನ್ನು ವೃದ್ದಿಸಲಿ. ಭ್ರಷ್ಟಾಚಾರಕ್ಕೆ ಕೊನೆ ಹಾಡಿ ತಾನೇ ಹೇಳಿರುವಂತೆ 'ಎಲ್ಲಾ ಪಕ್ಷಗಳ ಭ್ರಷ್ಟಾಚಾರಿಗಳನ್ನೂ ಜೈಲಿಗೆ ಕಳಿಸಲಿ'. ಗುಜರಾಥಿಯೂ ಸೇರಿದಂತೆ ಎಲ್ಲಾ ಪ್ರಾದೇಶಿಕ ಭಾಷೆಗಳನ್ನೂ ಹಿಂದಿಯವರ ದಬ್ಬಾಳಿಕೆಯಿಂದ ಮುಕ್ತಗೊಳಿಸಿ ನಿಜವಾದ ಪ್ರಜಾಪ್ರಭುತ್ವವನ್ನು ನೀಡಲಿ.

ಕಾಮೆಂಟ್‌ಗಳು