ದಿನ ದಿನವೂ ಸಂಸಾರ ಜಂಜಾಟ
ಜೊತೆಗೆ ಸವಿಯಲೊಂದಿಷ್ಟು ತುಂಟಾಟ
ತುಂಟ ಗೆಳೆಯರ ಕಾಟ
ಕೂತು ನೋಡಿದ ನೆನಪಿನ ಬಯಲಾಟ
ಪ್ರೀತಿ ವಂಚಿಸಿದ ಹೃದಯದ ತೊಳಲಾಟ
ಬದುಕಲ್ಲಿ ಸಿಹಿ ಕಹಿಗಳ ಪೀಕಲಾಟ
ಯೌವ್ವನಗಿತ್ತಿಯರ ಓರೆ ಕೋರೆ ನೋಟ
ಮನಸೆಳೆವ ಮದನೆಯರ ಮೈಮಾಟ
ಬದುಕು ಓಡಿಸಿದೆಡೆಗೆ ನಿಲ್ಲದ ಓಟ
ನಿಂತಲ್ಲಿ ಸಿಕ್ಕವರೊಂದಿಗೆ ಸ್ನೇಹಕೂಟ
ಅನಿಸುತ್ತೆ ಕೆಲವೊಮ್ಮೆ ಇದೆಲ್ಲಾ ಬಂಡಾಟ
ಆದರೂ ಬಿಡೆವು ಸಾಯುವ ತನಕ ಮೊಂಡಾಟ
ಬದುಕೊಂದು ನಿಲ್ಲದ ಹಾವು ಏಣಿಯಾಟ
ದಿನವೂ ಉಂಟಿಲ್ಲಿ ಕಷ್ಟ ಸುಖಗಳ ಸವಿಯೂಟ
ಜೊತೆಗೆ ಸವಿಯಲೊಂದಿಷ್ಟು ತುಂಟಾಟ
ತುಂಟ ಗೆಳೆಯರ ಕಾಟ
ಕೂತು ನೋಡಿದ ನೆನಪಿನ ಬಯಲಾಟ
ಪ್ರೀತಿ ವಂಚಿಸಿದ ಹೃದಯದ ತೊಳಲಾಟ
ಬದುಕಲ್ಲಿ ಸಿಹಿ ಕಹಿಗಳ ಪೀಕಲಾಟ
ಯೌವ್ವನಗಿತ್ತಿಯರ ಓರೆ ಕೋರೆ ನೋಟ
ಮನಸೆಳೆವ ಮದನೆಯರ ಮೈಮಾಟ
ಬದುಕು ಓಡಿಸಿದೆಡೆಗೆ ನಿಲ್ಲದ ಓಟ
ನಿಂತಲ್ಲಿ ಸಿಕ್ಕವರೊಂದಿಗೆ ಸ್ನೇಹಕೂಟ
ಅನಿಸುತ್ತೆ ಕೆಲವೊಮ್ಮೆ ಇದೆಲ್ಲಾ ಬಂಡಾಟ
ಆದರೂ ಬಿಡೆವು ಸಾಯುವ ತನಕ ಮೊಂಡಾಟ
ಬದುಕೊಂದು ನಿಲ್ಲದ ಹಾವು ಏಣಿಯಾಟ
ದಿನವೂ ಉಂಟಿಲ್ಲಿ ಕಷ್ಟ ಸುಖಗಳ ಸವಿಯೂಟ
ಕಾಮೆಂಟ್‌ಗಳು