ವಿಷಯಕ್ಕೆ ಹೋಗಿ

ವಿಶ್ವ ಹಿರಿದೋ ? ನಕ್ಷತ್ರ ಹಿರಿದೋ ??


ಬಹುತೇಕ ವಿಜ್ಞಾನಿಗಳ ಲೆಕ್ಕಾಚಾರದ ಪ್ರಕಾರ ಈ ವಿಶ್ವದ ಸೃಷ್ಟಿಯಾಗಿದ್ದು ( ಮಹಾಸ್ಪೋಟದ ಮೂಲಕ ) ೧೩.೮ ಬಿಲಿಯನ್‌ ವರ್ಷಗಳ ಹಿಂದೆ. ಈಗ ಅಸ್ತಿತ್ವದಲ್ಲಿ ಇರುವ ವಸ್ತು, ಕಪ್ಪು ವಸ್ತು, ಕಪ್ಪು ಶಕ್ತಿ - ಹೀಗೆ ಎಲ್ಲವೂ ೧೩.೮ ಬಿಲಿಯನ್‌ ವರ್ಷದ ಹಿಂದಷ್ಟೇ ಸೃಷ್ಟಿ ಆದವು ಎನ್ನಲಾಗಿದೆ. ಅಂದರೆ ಅದಕ್ಕಿಂತ ಮೊದಲು ಈಗ ಇರುವ ಏನೊಂದೂ ಇರಲಿಲ್ಲ.

ಆದರೆ ಅದೇ ವಿಜ್ಞಾನಿಗಳಿಗೆ ಈಗ ಬಹು ದೊಡ್ಡ ಸಮಸ್ಯೆಯೊಂದು ಎದುರಾಗಿದೆ.
ಅದೇನೆಂದರೆ ಸುಮಾರು ೧೪.೫ ಬಿಲಿಯನ್‌ ವರ್ಷ ವಯಸ್ಸಿನ ಕೆಲವು ನಕ್ಷತ್ರಗಳನ್ನು ಇದೀಗ ಹಬಲ್‌ ಟೆಲಿಸ್ಕೋಪ್‌ ಗುರುತಿಸಿದೆ ! ವಿಶ್ವಕ್ಕಿಂತಲು ಸುಮಾರು ೦.೭ ಬಿಲಿಯನ್‌ ವರ್ಷ ಹಿರಿಯ ನಕ್ಷತ್ರಗಳು ಬಂದಿರುವುದಾದರೂ ಎಲ್ಲಿಂದ ? ಇದು ಹೇಗೆ ಸಾಧ್ಯವಾಯ್ತು ಅನ್ನೋದು ವಿಜ್ಞಾನಿಗಳ ತಲೆಬಿಸಿಗೆ ಕಾರಣವಾಗಿದೆ.

ಅಂದರೆ ಇಲ್ಲಿ ಒಂದೋ ವಿಶ್ವದ ಸೃಷ್ಟಿಯ ಲೆಕ್ಕಾಚಾರ ತಪ್ಪಿರಬೇಕು. ( ೧೪.೫ ಬಿಲಿಯನ್‌ ವರ್ಷಗಳಿಗಿಂತಲೂ ಹಿಂದೆಯೇ ವಿಶ್ವವು ಸೃಷ್ಟಿಯಾಗಿರಬೇಕು. ). ಅಥವಾ ನಕ್ಷತ್ರಗಳ ವಯಸ್ಸಿನ ಲೆಕ್ಕಚಾರ ತಪ್ಪಾಗಿರಬೇಕು. ( ನಕ್ಷತ್ರಗಳ ಗಾತ್ರ, ಅವುಗಳಿಂದ ಬರುತ್ತಿರುವ ಇನ್ಫ್ರಾರೆಡ್‌ ಕಿರಣ, ಬೆಳಕಿನ ವೇವ್‌ಲೆನ್ತ್‌, ಮಾಸ್‌ ಮುಂತಾದವುಗಳ ಮೂಲಕ ನಕ್ಷತ್ರವೊಂದರ ವಯಸ್ಸನ್ನು ಅಳೆಯಲಾಗುತ್ತಿದೆ. ) ಇವೆರಡರಲ್ಲಿ ಯಾವ ಲೆಕ್ಕ ತಪ್ಪಾಗಿದೆ ಅನ್ನೋದನ್ನ ಈಗ ಪತ್ತೆ ಹಚ್ಚುವ ಕೆಲಸ ನಡೆದಿದೆಯಂತೆ. 

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ವರದಾ ಬಸ್ಸಿಗೆ ಬೆಂಕಿ ಬಿತ್ತು !!

ಇದು ನಾನು ಹೈಸ್ಕೂಲು ಓದುತ್ತಿದ್ದಾಗ ನಡೆದ ಘಟನೆ. ಸಾಗರದಲ್ಲಿ ಶ್ರೀ ವರದಾ ಬಸ್‌ನ ಹೆಸರನ್ನು ಕೇಳದವರೇ ಇಲ್ಲ. ನನಗೆ ಬುದ್ದಿ ತಿಳಿದಾಗಿನಿಂದಲೂ ನಮ್ಮೂರಿಗೆ ಬರುತ್ತಿದ್ದುದು ಅದೇ ಬಸ್ಸು. ಅದರ ಮಾಲೀಕರಿಗೆ ಇದ್ದದ್ದು ಅದೊಂದೇ ಬಸ್ಸು. ಹಾಗಂತ ಅದೇನೂ ಐರಾವತ ಥರಾ ಇರಲಿಲ್ಲ. ಸಾಧಾರಣವಾಗೇ ಇತ್ತು. ಸಾಗರದಿಂದ ಚಂದನಹಳ್ಳಿಗೆ ಇರುವ ಹತ್ತು ಕಿಲೋ ಮೀಟರನ್ನು ಕೇವಲ ಒಂದು ಗಂಟೆಯ ಅವಧಿಯಲ್ಲೇ ಕ್ರಮಿಸಿ ದಾಖಲೆ ಮಾಡಿತ್ತು. ಯಾಕೆಂದರೆ ಅದೇ ರಸ್ತೆಯಲ್ಲಿ ಕಾರುಗಳು ಬಂದರೆ ಅವು ಎರಡು ಗಂಟೆ ತೆಗೆದುಕೊಳ್ಳುತ್ತಿದ್ದವು. ರಸ್ತೆ ಹಾಗಿತ್ತು. ಅದಕ್ಕೆ ತಕ್ಕಂತೆ ಬಸ್ಸೂ ಸಹ ಪ್ರತಿ ದಿನ ಬಿಹೆಚ್ ರಸ್ತೆಯ ಒಂದು ಗ್ಯಾರೇಜಿಗೆ ಹೋಗಿ ತಪಾಸಣೆ ಮಾಡಿಸಿಕೊಂಡೇ ಬರುತ್ತಿತ್ತು. ಸಾಗರದಲ್ಲಿ ಗುರುವಾರ ಸಂತೆ. ಗುರುವಾರ ಬಂತೆಂದರೆ ಭಯಂಕರ ರಷ್ಶು. ಅದೊಂದು ಗುರುವಾರ ಸಾಗರದ ಜ್ಯೂನಿಯರ‍್ ಕಾಲೇಜಿನಲ್ಲಿ ಪರೀಕ್ಷೆ ಮುಗಿಸಿಕೊಂಡು ಮಧ್ಯಾಹ್ನ ಬಿಹೆಚ್ ರಸ್ತೆಯ ಗ್ಯಾರೇಜಿನಲ್ಲೇ ಇರುತ್ತಿದ್ದ ವರದಾ ಬಸ್ಸನ್ನು ಹತ್ತಿ ಹೇಗೋ ಸೀಟು ಹಿಡಿದು ಕುಳಿತಿದ್ದೆ. ಸೀಟು ಬೇಕಾದವರೆಲ್ಲಾ ಅಲ್ಲೇ ಬಂದು ಬಸ್ ಹತ್ತುತ್ತಿದ್ದರು. ಬಸ್ ಅಂತೂ ಒಂದು ಗಂಟೆಗೆ ಹೊರಟು ಜೋಗ ಬಸ್‌ ನಿಲ್ದಾಣ ಬಂದಾಗ ಯಕ್ಕಾಮಕ್ಕಾ ಜನ ಹತ್ತಿಯೇ ಬಿಟ್ಟರು. ಬಸ್‌ನ ಟಾಪ್‌ನಲ್ಲೂ ಜನರು ಹತ್ತಿ ಕುಳಿತರು. ಒಳಗಡೆಯಂತೂ ಉಸಿರುಗಟ್ಟುವಷ್ಟು ಜನಸಂದಣಿ. ಗಂಡಸರು, ಹೆಂಗಸರು, ಮಕ್ಕಳು ಮದುಕರು, ಮುದುಕಿಯರು, ಹರೆಯದ ಹು...

ಗುರುವಿನಂತಹ ಆಂಟಿಯಿರಬೇಕು

ಎಲ್ಲರಿಗೂ ಅಂಥಹ ಆಂಟಿ ಸಿಕ್ಕಿಬಿಡುತ್ತಾರೆನ್ನಲಾಗದು. ಆದರೂ ಸಿಕ್ಕಿವರೇ ಅದೃಷ್ಟವಂತರು. ಆಂಟಿಯೆಂದರೆ `ಚಿಕ್ಕಮ್ಮ' ಎಂದು ಆರ್ಥ. ಅಂದರೆ ಅಮ್ಮನಿಗೇ ಸಮಾನ. ಆದರೆ ಆಂಟಿ ನೀಡುವ ಪ್ರೀತಿ. ವಿಶ್ವಾಸ ವಿಭಿನ್ನ. ಆಂಟಿ ಎಂಬುದರ ಅರ್ಥ ಚಿಕ್ಕಮ್ಮನೇ ಆದರೂ ಎಲ್ಲರಿಗೂ ಚಿಕ್ಕಮ್ಮ ಇರುವ ಸಂದರ್ಭ ಕಡಿಮೆ. ಇದ್ದರೂ ನಾವು ಬಯಸುವಂತಹ ದೇವರಂತಹ ಅಥವಾ ಗುರುವಿನಂತಹ ಆಂಟಿಯಾಗಿರಲೂ ಸಾಧ್ಯವಿಲ್ಲ. ಆಗ ಬೇರೆ ಯಾರೋ ಒಬ್ಬರು ಆ ಜಾಗಕ್ಕೆ ಬಂದರೆ ಉತ್ತಮ. ಆದರಲ್ಲೂ ಟೀನೇಜ್ನ ಹುಡುಗ ಹುಡುಗಿಯರಿಗೆ ಅಪ್ಯಾಯಮಾನಳಾದ ಒಬ್ಬ ಆಂಟಿ ಇರಲೇಬೇಕು. ಆಕೆಗೆ ಮೂವತ್ತರಿಂದ ನಲವತ್ತು ವರ್ಷ ವಯಸ್ಸಿರಬೇಕು. ಅಂದಾಗ ಮದುವೆಯಾಗಿರುತ್ತದೆ. ಮತ್ತು ಹೆಚ್ಚು ಕಡಿಮೆ ಟೀನೇಜು ಪ್ರವೇಶಿಸುವ ಅಥವಾ ಪ್ರವೇಶಿಸಿರುವ ಮಕ್ಕಳಿರುತ್ತಾರೆ. ಗೆಳೆತನದ ಅನುಭವದ ಜೊತೆಗೆ ತಾಯ್ತನದ ಅನುಭವವೂ ಇರುತ್ತದೆ. ಆಕೆಯ ಮೇಲೆ ಗೌರವವೂ ಮೂಡುತ್ತದೆ. ಅವರು ನಮ್ಮನ್ನು ಪ್ರೀತಿಸುತ್ತಾಳೆ. ಒಳ್ಳೆಯ ಗುಣಗಳನ್ನು ಹೇಳಿಕೊಡುತ್ತಾಳೆ. ತಪ್ಪು ಮಾಡಿದಾಗ ಖಂಡಿಸುತ್ತಾಳೆ, ಜೋಕು ಹೇಳಿದಾಗ ನಕ್ಕು ಪ್ರೋತ್ಸಾಹಿಸುತ್ತಾಳೆ. ಅಲ್ಪಸ್ವಲ್ಪ ಪೋಲಿತನಗಳನ್ನೂ ಸಹಿಸುತ್ತಾಳೆ. ಹೆಚ್ಚಾದರೆ ತಿವಿದು ಬುದ್ಧಿ ಕಲಿಸುತ್ತಾಳೆ. ಹೆಚ್ಚಾಗಿ ಸ್ವಂತ ಚಿಕ್ಕಮ್ಮನಿಲ್ಲದೇ ಹೋದಾಗ ಗೆಳೆಯ ಗೆಳತಿಯರ ತಾಯಿ ಈ ಪಾತ್ರ ವಹಿಸಬಲ್ಲರು. ಬಾಲ್ಯದಲ್ಲಿ ನಮ್ಮನ್ನು ಎತ್ತಿ ಮುದ್ದಾಡಿದ ಪಕ್ಕದ ಮನೆ ಆಂಟಿ ಈ ಸ್ಥಾನ ತುಂಬಲು ತೀರಾ ಯೋಗ್ಯ. ಈ ಆ...

ಪಿಸುಮಾತು ಬ್ಲಾಗ್‌ನ ಆಂಡ್ರಾಯಿಡ್ ಆಪ್ !

​ ಬ್ಲಾಗ್‌ಗೂ ಆಂಡ್ರಾಯಿಡ್ ಆಪ್‌? ಅಂತ ಮುಗು ಮುರಿಯಬೇಡಿ. ಆಪ್‌ಗಳ ವಿನ್ಯಾಸಕ್ಕೆ ಪ್ರವೇಶ ಮಾಡುವ ಸಲುವಾಗಿ ಮೊದಲ ಪ್ರಯತ್ನವಾಗಿ ಇದನ್ನು ತಯಾರಿಸಲಾಗಿದೆ. [ ಇಲ್ಲಿಂದ ನಿಮ್ಮ ಮೊಬೈಲ್‌ಗೆ ಡೌನ್‌ಲೋಡ್ ಮಾಡಿಕೊಳ್ಳಿ : https://play.google.com/store/apps/details?id=ana.sree.pisumathu4u ] ನನ್ನ ಬ್ಲಾಗ್‌ ಅನ್ನು ನಿರಂತರವಾಗಿ ಓದುತ್ತಿರುವವರು ಆಂಡ್ರಾಯಿಡ್ ಮೊಬೈಲನ್ನೂ ಉಪಯೋಗಿಸುತ್ತಿದ್ದಲ್ಲಿ ಈ ಆಪ್‌ ಮುಖಾಂತರ ಬ್ಲಾಗ್‌ ಬರಹಗಳನ್ನು ಓದಿಕೊಳ್ಳಬಹುದು. ಇದು ಉಚಿತ ಆಪ್‌ ಮತ್ತು ಇದು ಕಾರ್ಯ ನಿರ್ವಹಿಸಲು ಇಂಟರ್ನೆರ್ಟ್‌ ಬೇಕು. ಕನ್ನಡದ ಇನ್ನೂ ಅನೇಕ ಆಪ್‌ಗಳನ್ನು ತಯಾರಿಸುವ ಯೋಜನೆ ಇದೆ. ಆದರೆ ಸೀಮಿತ ಜನರು ಉಪಯೋಗಿಸುವ ಆಪ್‌ಗಳನ್ನು ಮಾಡಲು ಕೂಡಾ ತುಂಬಾ ಖರ್ಚಾಗುತ್ತದೆ. ಪಾವತಿಸಿ ಉಪಯೋಗಿಸುವ ಆಪ್‌ ಮಾಡಿದರೆ ಎಷ್ಟು ಜನ ಉಪಯೋಗಿಸುತ್ತಾರೋ ಗೊತ್ತಿಲ್ಲ.