ಬೀಸುವ ಈ ತಂಗಾಳಿ
ನೀಡಲಿಲ್ಲವೇ ನಿನಗೆ
ನಾ ಕಳಿಸಿದ ಸಿಹಿ ಚುಂಬನವ ?
ಮರೆಯಾಗುತ್ತಿರುವ ಆ ಸೂರ್ಯ
ಕೊಡಲಿಲ್ಲವೇ ಗೆಳತಿ
ನಿನಗೆಂದು ನಾ ಬರೆದ
ಅಮರ ಪ್ರೇಮದೋಲೆಯ ?
ತಾಳು ತಾಳೆಲೆ ಹುಡುಗಿ
ಬರುವನು ಸುಂದರ ಚಂದ್ರಮ
ನಿನ್ನ ಸೌಂದರ್ಯವ ಕಂಡು
ಬೆರಗಾಗಿ ನಾಚಿಕೊಂಡು
ನಿನಗಿವನೇ ಜೋಡಿಯೆಂದು
ಓಡುವನು ನೋಡು ಇಂದು !
ನಿನಗಾಗಿ ಕಾಣಿಕೆಯ
ನಾನೇನು ತರಲಿ ಚೆಲುವೆ ?
ಈ ನನ್ನ ಜೀವನವ
ನಿನಗೆಂದೇ ಮೀಸಲಿಟ್ಟಿರುವೆ.
ನೀಡಲಿಲ್ಲವೇ ನಿನಗೆ
ನಾ ಕಳಿಸಿದ ಸಿಹಿ ಚುಂಬನವ ?
ಮರೆಯಾಗುತ್ತಿರುವ ಆ ಸೂರ್ಯ
ಕೊಡಲಿಲ್ಲವೇ ಗೆಳತಿ
ನಿನಗೆಂದು ನಾ ಬರೆದ
ಅಮರ ಪ್ರೇಮದೋಲೆಯ ?
ತಾಳು ತಾಳೆಲೆ ಹುಡುಗಿ
ಬರುವನು ಸುಂದರ ಚಂದ್ರಮ
ನಿನ್ನ ಸೌಂದರ್ಯವ ಕಂಡು
ಬೆರಗಾಗಿ ನಾಚಿಕೊಂಡು
ನಿನಗಿವನೇ ಜೋಡಿಯೆಂದು
ಓಡುವನು ನೋಡು ಇಂದು !
ನಿನಗಾಗಿ ಕಾಣಿಕೆಯ
ನಾನೇನು ತರಲಿ ಚೆಲುವೆ ?
ಈ ನನ್ನ ಜೀವನವ
ನಿನಗೆಂದೇ ಮೀಸಲಿಟ್ಟಿರುವೆ.
ಕಾಮೆಂಟ್‌ಗಳು