ವಿಷಯಕ್ಕೆ ಹೋಗಿ

ನಿಖಿತಾಗೆ ನಿಷೇಧ ... ಇದ್ಯಾವ ನ್ಯಾಯ ?

"ನಟ ದರ್ಶನ್ ಕುಟುಂಬದಲ್ಲಿ ಬಿರುಕು ಬರಲು ನಟಿ ನಿಖಿತಾ ಕಾರಣ" ಎಂಬ ಕಾರಣ ನೀಡಿರುವ ಕನ್ನಡ ಚಲನಚಿತ್ರ ನಿರ್ಮಾಪಕರ ಸಂಘ ಆಕೆಯನ್ನು ಮೂರು ವರ್ಷ ಕನ್ನಡ ಚಿತ್ರರಂಗದಿಂದ ನಿಷೇಧಿಸಿ "ಮುಲ್ಲಾ ಕಾನೂನು" ಜಾರಿಗೊಳಿಸಿದೆ. ಇಂತಹ ತೀರ್ಪು ನೀಡಲು ಇವರು ಬಳಸಿದ ಮಾನದಂಡಗಳು ಯಾವುವು ಅನ್ನುವುದು ತಿಳಿದು ಬಂದಿಲ್ಲ. ಆದರೆ ನಮ್ಮಲ್ಲೇಳುವ ಪ್ರಶ್ನೆಗಳಿಗೆ ಇವರಲ್ಲಿ ಉತ್ತರವಿಲ್ಲ.

* ದರ್ಶನ್ ಜೊತೆ ನಿಖಿತಾಳೇ ಗೆಳೆತನ ಬೆಳೆಸಿದಳು ಎಂದು ಇವರಿಗೆ ಹೇಗೆ ತಿಳಿಯಿತು ? ದರ್ಶನ್ ಸ್ವತಃ ತಾನೇ ಅವಳನ್ನು ಬುಟ್ಟಿಗೆ ಹಾಕಿಕೊಂಡಿರುವ ಸಾಧ್ಯತೆ ಇದೆಯಲ್ಲ? ಹಾಗಿದ್ದರೆ ದರ್ಶನ್‌ಗೆ ಶಿಕ್ಷೆ ಏನು ? ದರ್ಶನ್ ತಾನೇ ನಿಖಿತಾಳನ್ನು ಬುಟ್ಟಿಗೆ ಹಾಕಿಕೊಂಡಿದ್ದರೆ ಮುಂದೆ ಅವಳಿಲ್ಲದಿದ್ದರೆ ಇನ್ನೊಬ್ಬಳನ್ನು ಇಟ್ಟುಕೊಳ್ಳುವುದಿಲ್ಲ ಅಂತ ಏನು ಗ್ಯಾರಂಟೀ ?

* ದರ್ಶನ್ - ವಿಜಯಲಕ್ಷ್ಮಿ ಯರದ್ದು ಕುಟುಂಬ ಕಲಹ. ಅದರ ಬಗ್ಗೆ ತೀರ್ಪು ನೀಡಲು ಇವರಿಗೆ ಏನು ಅಧಿಕಾರವಿದೆ ? ಇವರಿಗೆ ವಿಜಯಲಕ್ಷ್ಮಿ ಅವರೇನಾದರೂ ದೂರು ನೀಡಿದ್ದರೆ ?

* ದರ್ಶನ್ - ನಿಖಿತಾ ಇಬ್ಬರೂ ಸೇರಿ ತಪ್ಪು ಮಾಡಿರುವಾಗ ಒಬ್ಬಳಿಗೆ ಶಿಕ್ಷೆ ನೀಡಿದರೆ ಹೇಗೆ ? ಇಬ್ಬರನ್ನೂ ನಿಷೇಧಿಸಬೇಕಾಗಿತ್ತಲ್ಲವೇ ? ಒಂದು ಕಣ್ಣಿಗೆ ಬೆಣ್ಣೆ, ಇನ್ನೊಂದು ಕಣ್ಣಿಗೆ ಸುಣ್ಣ ಬಳಿದಂತೆ ಆಗಲಿಲ್ಲವೇ ?

* ಅವರಿಬ್ಬರ ನಡುವೆ ಸಂಬಂಧ ಇದ್ದುದೇ ಹೌದಾದರೆ ಆಕೆಯನ್ನು ನಿಷೇಧಿಸಿದರೆ ಏನುಪಯೋಗ ? ಅವಳು ನಟಿಸದಿದ್ದರೂ ಸಂಬಂಧ ಮುಂದುವರಿಯದೇ ?

* ಇಷ್ಟಕ್ಕೂ ನಿಖಿತಾ ಬಗ್ಗೆ ದೂರಿರುವುದು ದರ್ಶನ್ ಪತ್ನಿ ವಿಜಯಲಕ್ಷ್ಮಿ ಅವರು. ಹಾಗಂತೆ ನಿರ್ಮಾಪಕರ ಸಂಘಕ್ಕೆ ಅವರು ಯಾವ ಪುರಾವೆಯನ್ನೂ ನೀಡಿಲ್ಲ. ಅಕಸ್ಮಾತ್ ಅದು ಸುಳ್ಳಾಗಿದ್ದರೆ ? ವಿಜಯಲಕ್ಷ್ಮಿಯವರು ಅಂದುಕೊಂಡಂತೆ ದರ್ಶನ್ ಗೆಳೆತನ ಬೆಳೆಸಿದ್ದು ನಿಖಿತಾ ಆಗಿರದೇ ಬೇರೆ ಹೆಣ್ಣಾಗಿದ್ದರೆ ?

* ನಿಖಿತಾ ನಟಿಯಾಗಿರುವ ಕಾರಣಕ್ಕೆ ನಿಷೇಧ ಹೇರಲು ಸಾಧ್ಯವಾಯ್ತು. ಒಂದು ವೇಳೆ ಆಕೆ ನಟಿಯಾಗಿರದೇ ಹೋಗಿದ್ದರೆ ಇವರು ಯಾವ ನಿಷೇಧ ಹೇರುತ್ತಿದ್ದರು ?

ಅದೇನೇ ಆದರೂ ಆಕೆ ಈಗ ನ್ಯಾಯಾಲಯದ ಮೊರೆ ಹೋದರೆ ಇವರಿಗೆ ಮುಖಭಂಗ ಕಟ್ಟಿಟ್ಟ ಬುತ್ತಿ. ಕೇವಲ ಅನುಮಾನದ ಆಧಾರದ ಮೇಲೆ ಯಾರನ್ನೂ ಚಿತ್ರರಂಗದಿಂದ ನಿಷೇಧಿಸುವ ಅಧಿಕಾರ ಯಾರಿಗೂ ಇಲ್ಲ. ಇದು ಇವರ ಮುಲ್ಲಾ ಕಾನೂನು ಅಷ್ಟೇ ಅಲ್ಲ... ಮೂರ್ಖ ಕಾನೂನು ಕೂಡಾ.

ಕಾಮೆಂಟ್‌ಗಳು

shruthi1995mg ಹೇಳಿದ್ದಾರೆ…
sum sumne nisheda madi amele tappaytu anta ivru vapas tagondralla, ivrige swalpanu comon sense ilva?

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ವರದಾ ಬಸ್ಸಿಗೆ ಬೆಂಕಿ ಬಿತ್ತು !!

ಇದು ನಾನು ಹೈಸ್ಕೂಲು ಓದುತ್ತಿದ್ದಾಗ ನಡೆದ ಘಟನೆ. ಸಾಗರದಲ್ಲಿ ಶ್ರೀ ವರದಾ ಬಸ್‌ನ ಹೆಸರನ್ನು ಕೇಳದವರೇ ಇಲ್ಲ. ನನಗೆ ಬುದ್ದಿ ತಿಳಿದಾಗಿನಿಂದಲೂ ನಮ್ಮೂರಿಗೆ ಬರುತ್ತಿದ್ದುದು ಅದೇ ಬಸ್ಸು. ಅದರ ಮಾಲೀಕರಿಗೆ ಇದ್ದದ್ದು ಅದೊಂದೇ ಬಸ್ಸು. ಹಾಗಂತ ಅದೇನೂ ಐರಾವತ ಥರಾ ಇರಲಿಲ್ಲ. ಸಾಧಾರಣವಾಗೇ ಇತ್ತು. ಸಾಗರದಿಂದ ಚಂದನಹಳ್ಳಿಗೆ ಇರುವ ಹತ್ತು ಕಿಲೋ ಮೀಟರನ್ನು ಕೇವಲ ಒಂದು ಗಂಟೆಯ ಅವಧಿಯಲ್ಲೇ ಕ್ರಮಿಸಿ ದಾಖಲೆ ಮಾಡಿತ್ತು. ಯಾಕೆಂದರೆ ಅದೇ ರಸ್ತೆಯಲ್ಲಿ ಕಾರುಗಳು ಬಂದರೆ ಅವು ಎರಡು ಗಂಟೆ ತೆಗೆದುಕೊಳ್ಳುತ್ತಿದ್ದವು. ರಸ್ತೆ ಹಾಗಿತ್ತು. ಅದಕ್ಕೆ ತಕ್ಕಂತೆ ಬಸ್ಸೂ ಸಹ ಪ್ರತಿ ದಿನ ಬಿಹೆಚ್ ರಸ್ತೆಯ ಒಂದು ಗ್ಯಾರೇಜಿಗೆ ಹೋಗಿ ತಪಾಸಣೆ ಮಾಡಿಸಿಕೊಂಡೇ ಬರುತ್ತಿತ್ತು. ಸಾಗರದಲ್ಲಿ ಗುರುವಾರ ಸಂತೆ. ಗುರುವಾರ ಬಂತೆಂದರೆ ಭಯಂಕರ ರಷ್ಶು. ಅದೊಂದು ಗುರುವಾರ ಸಾಗರದ ಜ್ಯೂನಿಯರ‍್ ಕಾಲೇಜಿನಲ್ಲಿ ಪರೀಕ್ಷೆ ಮುಗಿಸಿಕೊಂಡು ಮಧ್ಯಾಹ್ನ ಬಿಹೆಚ್ ರಸ್ತೆಯ ಗ್ಯಾರೇಜಿನಲ್ಲೇ ಇರುತ್ತಿದ್ದ ವರದಾ ಬಸ್ಸನ್ನು ಹತ್ತಿ ಹೇಗೋ ಸೀಟು ಹಿಡಿದು ಕುಳಿತಿದ್ದೆ. ಸೀಟು ಬೇಕಾದವರೆಲ್ಲಾ ಅಲ್ಲೇ ಬಂದು ಬಸ್ ಹತ್ತುತ್ತಿದ್ದರು. ಬಸ್ ಅಂತೂ ಒಂದು ಗಂಟೆಗೆ ಹೊರಟು ಜೋಗ ಬಸ್‌ ನಿಲ್ದಾಣ ಬಂದಾಗ ಯಕ್ಕಾಮಕ್ಕಾ ಜನ ಹತ್ತಿಯೇ ಬಿಟ್ಟರು. ಬಸ್‌ನ ಟಾಪ್‌ನಲ್ಲೂ ಜನರು ಹತ್ತಿ ಕುಳಿತರು. ಒಳಗಡೆಯಂತೂ ಉಸಿರುಗಟ್ಟುವಷ್ಟು ಜನಸಂದಣಿ. ಗಂಡಸರು, ಹೆಂಗಸರು, ಮಕ್ಕಳು ಮದುಕರು, ಮುದುಕಿಯರು, ಹರೆಯದ ಹು...

ನಾಲ್ಕು ಎರಡು ಸಾಲಿನ ಕತೆಗಳು

1. ಕಾಡಿನಲ್ಲಿ ದಾರಿ ಕಾಣದೇ ಅತ್ತಿತ್ತ ಅಲೆದಾಡುತ್ತಿದ್ದವನ ಪಕ್ಕದಲ್ಲೇ ಒಂದು ಕಾರು ಬಂದು ನಿಂತಿತು. ಅದರಿಂದ ಇಣುಕಿದ ಸುಂದರ ಯುವತಿ "ಬನ್ನಿ ಡ್ರಾಪ್ ಮಾಡ್ತೀನಿ" ಎಂದು ಉಲಿದಳು. ಸಂತೋಷದಿಂದ ಹತ್ತಿ ಕುಳಿತ.... ಮರುಕ್ಷಣವೇ ಎಚ್ಚರಾಗಿ ಹೋಯ್ತು. 2. "ನೀನು ತುಂಬಾ ಸುಂದರಿ" "ನೀನು ತುಂಬಾ ತುಂಟ" 3."ನಿನಗೆ ವಯಸ್ಸಾಯ್ತು ಕಣೆ" "ನಿಮಗೆ ಕೈಲಾಗಲ್ಲ" 4. ಆತ ತಡವರಿಸಿ ತಡವರಿಸಿ "ಐ ಲವ್ ಯೂ" ಅಂದ. ಆಕೆ ತಡವರಿಸದೇ ನುಡಿದಳು.. "ನೀನು ಇನ್ನೂ ಶುರುನಲ್ಲೇ ಇದೀಯಲ್ಲೋ" 5. ನೀರಿನಲ್ಲಿ ಮೀನಿನ ಹೆಜ್ಜೆ ಗುರುತನ್ನು ಹುಡುಕುತ್ತಾ ಹೊರಟ ಅವನಿಗೆ ಅವಳು ಅವನ ಹೃದಯದೊಳಗೆ ಬಂದು ಹೋದ ಗುರುತು ಕಾಣಿಸಲೇ ಇಲ್ಲ. 6. "ಹೆಣ್ಣೇ ಆದರೂ ಈ ಸಲ ಭ್ರೂಣ ಹತ್ಯೆ  ಮಾಡಿಸುವುದು ಬೇಡ" ಅವರು ಮಾತಾಡಿಕೊಂಡರು. ಆದರೆ ಅದೇಕೋ ಅವಳ ಮುಟ್ಟು ನಿಲ್ಲಲೇ ಇಲ್ಲ. 7. "ಅಮ್ಮಾ... ಯಾವ ಸೀಮೆಯ ರಾಜಕುಮಾರ ಬಂದು ಕರೆದರೂ ನಾ ನಿನ್ನ ಬಿಟ್ಟು ಹೋಗಲಾರೆ" ಅಂದಿದ್ದ ಮಗಳು ಗಮಾರನೊಬ್ಬನ ಪ್ರೇಮಕ್ಕೆ ಸಿಲುಕಿ ಓಡಿ ಹೋದಳು. 8. ಜೀವನದಲ್ಲಿ ಏನೂ ಸಾಧಿಸಲಾಗದೆ ಅವನು ಜಿಗುಪ್ಸೆಗೊಂಡು ಕಾಡಿಗೆ ಹೋಗಿ ದೊಡ್ಡ ಮರವೊಂದಕ್ಕೆ ಹಗ್ಗ ಕಟ್ಟಿ ನೇಣು ಹಾಕಿಕೊಂಡ. ಹಗ್ಗ ತುಂಡಾದ ಕಾರಣ ಸಾವನ್ನೂ ಸಾಧಿಸಲಾಗೆದೇ ಮನೆಗೆ ಹಿಂದಿರುಗಿದ. 9. ಎರಡು ಸಾಲಿನ ಕಥೆ ಹೇಳ...

ಈ ಹುಡುಗಿಯರೇ ಹೀಗೆ !

ಬೆಟ್ಟದ ಬದಿಯಿಂದ ಮುಂಜಾನೆಯ ರವಿ ಇಣುಕಿದಂತೆ ಕಿಟಕಿ ಹಿಂದಿನ ಕಂಗಳು, ಕಂಡೂ ಕಾಣದ ಮುಂಗುರುಳು ಗಲಗಲ ಬಳೆಯ ತರಂಗ ಕಿಲಕಿಲ ನಗುವಿನಂತರಂಗ, ಎದುರು ಬರಲಾರರು ಚೆಲುವೆಯರು ಬಂದರೂ ಬಹು ಲಾಸ್ಯ ಲಜ್ಜೆ ಇಡುತಲಿ ಒಂದೊಂದೇ ಹೆಜ್ಜೆ ಮುಗಿಲಿಂದ ಬರಗಾಲದಿ ಮಳೆ ಹನಿ ಬಿಸಿ ನೆಲಕ್ಕೆ ಎಣಿಸಿ ಮುತ್ತಿಕ್ಕಿದಂತೆ ! ಕಿರು ಹಣತೆ ಉರಿಯಂತೆ ತುಟಿ ರಂಗು ಪತಂಗ ಹಾರಿದಂತೆ ತೆಳು ಸೆರಗು ಕಾವ್ಯದೊಡತಿಯರು, ಮೌನವೇ ಮಾತು. ಅರೆಕ್ಷಣದಿ ಸೃಷ್ಟಿಸಿ ಕಲ್ಪಾನಾ ಲೋಕ ನಗ್ನ ಬಿಂಬ ತೋರಿ ತೆರೆವರು ಪ್ರೇಮಲೋಕ ಒಮ್ಮೆ ಧಾರಾಳ ದಮಯಂತಿ ಮಗದೊಮ್ಮೆ ಮುನಿದ ಮಗುವಂತೆ ಅಲ್ಲಿ ಪ್ರೇಮ ಪ್ರೀತಿಯನ್ನರಸುವ ಹುಡುಗನ ನಿರಂತರ ಬೇಟೆ ! ಅರಿವಾಗುವ ಮುನ್ನವೇ ಮಾನಸಿಕ ಪತ್ನಿಯಾಗಿರುತ್ತಾಳೆ, ಛೇಧಿಸಿ ಹೃದಯ ಕೋಟೆ.