
ಭ್ರಷ್ಟಾಚಾರದ ಬಗ್ಗೆ ನಾವು ಕೇವಲ ರಾಜಕಾರಣಿಗಳನ್ನು ದೂರುತ್ತೇವೆ. ಆದರೆ ನಿಜವಾಗಿಯೂ ಹೆಚ್ಚು ಭ್ರಷ್ಟರಾಗಿರುವುದು ಈ ದೇಶದ ಅಧಿಕಾರಿಗಳು.
ಹಾಗೆಯೇ ಹೊರ ದೇಶದಲ್ಲಿರುವ ಕಪ್ಪುಹಣಕ್ಕಿಂತಾ ನಮ್ಮ ದೇಶದಲ್ಲಿರುವ ಕಪ್ಪು ಹಣ ಅತಿ ಮುಖ್ಯ. (ಇಂದಿಗೂ ಪ್ರತಿನಿತ್ಯ ಇದು ಸೃಷ್ಟಿಯಾಗುತ್ತಲೇ ಇದೆ)
ಆಧಾರ್ ಅನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುವುದರಿಂದ ಮಾತ್ರ ಭ್ರಷ್ಟಾಚಾರಕ್ಕೆ ಹಾಗೂ ಕಪ್ಪು ಹಣಕ್ಕೆ ಬಹುತೇಕ ಕಡಿವಾಣ ಹಾಕಲು ಸಾಧ್ಯ. ಆಧಾರ್‌ಗೆ ಮನ್ನಣೆ ನೀಡಿರುವ ಕೇಂದ್ರಕ್ಕೆ ಧನ್ಯವಾದಗಳು. ಇದೀಗ ಕೆಂದ್ರ ಸರ್ಕಾರದ ಎಲ್ಲಾ ಅಧಿಕಾರಿಗಳೂ ತಮ್ಮ ಸೇವಾ ಪುಸ್ತಕದಲ್ಲಿ ಆಧಾರ್ ಸಮಖ್ಯೆ ನೀಡುವುದು ಕಡ್ಡಾಯವಾಗಿದೆ. ಇದನ್ನು ಎಲ್ಲಾ ರಾಜ್ಯ ಸರ್ಕಾರಗಳೂ ಅನುಸರಿಸಬೇಕು.
ಆದರೆ ಕೇವಲ ಪಿಂಚಣಿ ಮುಂತಾದುವಕ್ಕೆ ಇದನ್ನು ಉಪಯೋಗಿಸುವುದರಿಂದ ಯಾವ ಪ್ರಯೋಜನವೂ ಇಲ್ಲ. ಮೊದಲು ಎಲ್ಲರಿಗೂ ಆಧಾರ‍್ ವಿತರಿಸಿ, ನಂತರ ಸಾವಿರ ರೂಪಾಯಿಗಿಂತಾ ಹೆಚ್ಚಿನ ಮೌಲ್ಯದ ಯಾವುದೇ ವಸ್ತು ಕೊಳ್ಳಬೇಕೆಂದರೂ ಆಧಾರ‍್ ಸಂಖ್ಯೆ ನೀಡುವುದು (ಪ್ರತಿಯೊಬ್ಬರೂ) ಕಡ್ಡಾಯವಾಗಬೇಕು. ಹಾಗೆ ಕೊಳ್ಳುವ ವಸ್ತುಗಳ ವಿವರ ನಮ್ಮ ಆಧಾರ್ ಖಾತೆಯಲ್ಲಿ ದಾಖಲಾಗುತ್ತಾ ಹೋಗಬೇಕು. ಇದನ್ನು ಮೋದಿಯವರು ಮಾಡಲಿ ಎಂದು ಆಶಿಸುತ್ತೇನೆ.
ಕಾಮೆಂಟ್‌ಗಳು