ವಿಷಯಕ್ಕೆ ಹೋಗಿ

ಹೊಸ ಕೃಷಿ ಕಾಯ್ದೆಯ ಬಗ್ಗೆ ಕೆಲವು ವಿವರಣೆಗಳು

ಹೊಸ ಕೃಷಿ ಕಾಯ್ದೆಯ ಬಗ್ಗೆ ಕೆಲವು ವಿವರಣೆಗಳು:

ಅದಾನಿ, ಅಂಬಾನಿ ಮತ್ತು ಇತರ ಕಾರ್ಪೊರೇಟ್‌ಗಳು ಭಾರತದ ಬೃಹತ್ ಆಹಾರ ಧಾನ್ಯ ಮಾರುಕಟ್ಟೆಯ ಮೇಲೆ ಕಣ್ಣಿಟ್ಟಿದ್ದರು. ಆದರೆ ರೈತರ ಹೊಲಕ್ಕೆ ಲಗ್ಗೆ ಹಾಕಲು ಅವರಿಗೆ ಕೆಲವು ತಡೆಗಳು ಇದ್ದವು:

ತಡೆ 1:
ರೈತರಿಂದ ಆಹಾರ ಧಾನ್ಯಗಳನ್ನು ಖರೀದಿಸಲು ಬೇರೆ ಬೇರೆ ರಾಜ್ಯಗಳು ಬೇರೆ ಬೇರೆ ಕಟ್ಟಳೆ ಮತ್ತು ಕಾನೂನುಗಳನ್ನು ಹೊಂದಿದ್ದವು.  ಕಾರ್ಪೊರೇಟ್‌ಗಳು ಹಲವು ವಿಭಿನ್ನ ನಿಯಮಗಳು ಮತ್ತು ತೆರಿಗೆಗಳನ್ನು ಹೊಂದಿರುವ ಅನೇಕ ರಾಜ್ಯಗಳನ್ನು ನಿರ್ವಹಿಸುವುದು ಕಷ್ಟಕರವಾಗಿತ್ತು.

ಮೋದಿ ಕೊಟ್ಟ ಪರಿಹಾರ:
ರಾಜ್ಯಗಳಿಂದ ನಿಯಂತ್ರಣವನ್ನು ತೆಗೆದುಕೊಂಡು ಇಡೀ ದೇಶಕ್ಕೆ 1 ಕಾಯ್ದೆ ಮಾಡಿದೆ.  ಕಾರ್ಪೊರೇಟ್‌ಗಳು ಈಗ ಸಂತೋಷವಾಗಿದ್ದಾರೆ.

ತಡೆ 2:
ಕಾರ್ಪೊರೇಟ್‌ಗಳು ಬೆಳೆಗಳನ್ನು ಖರೀದಿಸಿ ಸಂಗ್ರಹಿಸಿ ಆ ಮೂಲಕ ಬೆಲೆಗಳು ಏರುವಂತೆ ಮಾಡಿ ಆಮೇಲೆ ಮಾರಾಟ ಮಾಡುವ ಹೊಂಚು ಹಾಕಿದ್ದವು.  ಆದರೆ ಎಸೆನ್ಷಿಯಲ್ ಕಮೊಡಿಟಿ ಆಕ್ಟ್ ಮಾರುಕಟ್ಟೆಯಲ್ಲಿ ಬೆಲೆಗಳನ್ನು ಹೆಚ್ಚಿಸುವುದರಿಂದ ದೀರ್ಘಕಾಲದವರೆಗೆ ಬೆಳೆಗಳನ್ನು ಸಂಗ್ರಹಿಸುವುದನ್ನು ನಿರ್ಬಂಧಿಸಿತ್ತು.

ಮೋದಿ ಕೊಟ್ಟ ಪರಿಹಾರ:
ಆಹಾರ ಬೆಳೆಗಳು ಅಗತ್ಯ ಸರಕು ಕಾಯ್ದೆಯಡಿ ಬರುವುದಿಲ್ಲ ಮತ್ತು ಅದನ್ನು ದೀರ್ಘಕಾಲದವರೆಗೆ ಸಂಗ್ರಹಿಸಬಹುದು.  ಕಾರ್ಪೊರೇಟ್‌ಗಳು ಮತ್ತೆ ಸಂತೋಷಗೊಂಡಿದ್ದಾರೆ.

ತಡೆ 3:
ರೈತರು ಯಾವ ರೀತಿಯ ಬೆಳೆ ಬೆಳೆಯುತ್ತಾರೆ ಎಂದು ನಿರ್ಣಯಿಸುವ ಅಧಿಕಾರ ಕಾರ್ಪೊರೇಟ್ ಗಳಿಗೆ ಇರಲಿಲ್ಲ. ರೈತ ತನಗೆ ಬೇಕಾದ ಬೆಳೆಯನ್ನು ಬೆಳೆವ ಸ್ವಾತಂತ್ರ್ಯ ಹೊಂದಿದ್ದನು.

ಮೋದಿ ಕೊಟ್ಟ ಪರಿಹಾರ:

ಕಾರ್ಪೊರೇಟ್ ಗಳು ಇನ್ಮುಂದೆ ರೈತರೊಂದಿಗೆ ಕರಾರು/ಒಪ್ಪಂದ ಮಾಡಿಕೊಳ್ಳಲಿವೆ, ಅಲ್ಲಿ ಯಾವ ರೀತಿಯ ಬೆಳೆ ಬೆಳೆಯಬೇಕೆಂದು ಕಾರ್ಪೊರೇಟ್‌ ಗಳೇ ನಿರ್ಣಯ ಮಾಡುತ್ತವೆ!.  ಕಾರ್ಪೊರೇಟ್‌ಗಳು ಮತ್ತೆ ಸಂತೋಷಗೊಂಡಿದ್ದಾರೆ.

ತಡೆ 4:

ರೈತರ ವಿರುದ್ಧ ಏನಾದರೂ ತಪ್ಪಾದಲ್ಲಿ ಕಾರ್ಪೊರೇಟ್‌ಗಳು ನ್ಯಾಯಾಲಯದ ಪ್ರಕರಣಗಳನ್ನು ನಿರ್ವಹಿಸಲು ಕಷ್ಟ ಆಗುತ್ತಿತ್ತು.

ಮೋದಿ ನೀಡಿದ ಪರಿಹಾರ:

ರೈತರು ನ್ಯಾಯಾಲಯಗಳಿಗೆ ಹೋಗುವ ಅವಕಾಶ ತಪ್ಪಿಸಿ. ಅವರು ಎಸ್‌ಡಿಎಂ ಮತ್ತು ಡಿಸಿಗೆ ಹೋಗುವಂತೆ ಹೊಸ ಕಾಯ್ದೆ ಹೇಳುತ್ತದೆ. ಕಾರ್ಪೊರೇಟ್‌ಗಳು ಅವರಿಗೆ ಲಂಚ  ಕೊಟ್ಟು ತಮಗೆ ಬೇಕಾದಂತೆ ನಿರ್ಣಯ ಮಾಡಿಸಿಕೊಳ್ಳುವ ಸದವಕಾಶ. ಮತ್ತೊಮ್ಮೆ ಕಾರ್ಪೊರೇಟ್ ಗಳು ಬಹಳ ಅನಂದವಾಗಿವೆ!

ಒಟ್ಟಾರೆ ಹೊಸ ಕೃಷಿ ಕಾಯ್ದೆಯಿಂದಾಗಿ:
ಕಾರ್ಪೊರೇಟ್‌ಗಳಿಗೆ ಅನುಕೂಲ - 100%
ರೈತರಿಗೆ ಅನಾನುಕೂಲ - 100%

ಆದಾಗ್ಯೂ ಮೋದಿ ಮತ್ತು ಅವರ ಬೆಂಬಲಿಗರು ಹೇಳುತ್ತಾರೆ.. "ಈ ಬಿಲ್
ಬೆಳೆಗಾರರ ಪರವಾಗಿದೆ" ಎಂದು!!.  🙄🙄🙄

https://youtu.be/5kdyio7H-oo

(ಅಂಗ್ಲದಿಂದ ನುಡಿಮಾರ್ಪು)

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಶಿಕ್ಷಣದ ಬಗೆಗಿನ ನುಡಿಮುತ್ತುಗಳು

* ನಿಜವಾದ ಶಿಕ್ಷಣವೆಂದರೆ ಮಾನವೀಯತೆಯ ವಿಕಾಸ. - ಸ್ವಾಮಿ ವಿವೇಕಾನಂದರು . * ಸಚ್ಛಾರಿತ್ರ್ಯದ ಬೆಳವಣಿಗೆಯೇ ಶಿಕ್ಷಣದ ಆರಂಭ. - ಮಾಹಾತ್ಮ ಗಾಂಧೀಜಿ. * ಶಿಕ್ಷಣ ಪ್ರತಿ ವ್ಯಕ್ತಿಯಲ್ಲಿ ಪರಿಪೂರ್ಣತೆಯನ್ನು ತರಬೇಕು.  ಜೀವನದಲ್ಲಿ ಮುನ್ನಡೆಸುವ ಸಾಮಥ್ರ್ಯ ನೀಡಬೇಕು. -    ಜಿಡ್ಡು ಕೃಷ್ಣಮೂರ್ತಿ . * ದೈಹಿಕ, ಮಾನಸಿಕ ಹಾಗೂ ಆಧ್ಯಾತ್ಮಿಕ ಪ್ರಗತಿಗೆ ಇಂಬು ಕೊಡದ ಶಿಕ್ಷಣ ಅಪೂರ್ಣ. - ಡಾ. ಎಸ್. ರಾಧಾಕೃಷ್ಣನ್. * ಶಿಕ್ಷಣವೆಂದರೆ, ಪುಸ್ತಕದ ಜ್ಞಾನವೇ ಮಾತ್ರ ಅಲ್ಲ.  ಸಂಸಾರ, ಮನುಷ್ಯ ಮತ್ತು ಕಾರ್ಯ ಕಲಾಪಗಳ ಪರಸ್ಪರ ಸಂಯೋಗವೇ ಶಿಕ್ಷಣ. -    ಬರ್ಕ. * ಜೀವನವೇ ಶಿಕ್ಷಣ, ಶಿಕ್ಷಣವೇ ಜೀವನ. - ಜಾನ್ ಟ್ಯೂಯ್ಲಿ. * ಸಮನ್ವಯತೆ, ಸಮತೋಲನ, ಉಪಯುಕ್ತತೆ,  ಪರಿಪೂರ್ಣತೆ, ಆನಂದದಾಯಕ ಹಾಗೂ ನೈಸರ್ಗಿಕತೆಯೇ ಶಿಕ್ಷಣದ ಗುಣಗಳು. - ರೂಸೋ. * ಶಿಕ್ಷಣವು ಧಾರ್ಮಿಕ ವಿಚಾರಗಳ ಸಮನ್ವಯವಾದಾಗಲೇ ಪೂರ್ಣವಾಗುವುದು. - ಅಜ್ಞಾತ. * ನಡತೆ ಬೋಧಿಸುವ ಶಿಕ್ಷಣ, ಮನುಷ್ಯತ್ವ ತೋರದ ವಿಜ್ಞಾನ, ಇವೆರಡೂ ಅಪಾಯಕಾರಿ ಮತ್ತು ಉಪಯೋಗವಿಲ್ಲದವು. - ನೀತಿವಚನ . * ಶಿಕ್ಷಣವೇ ಜೀವನದ ಬೆಳಕು - ಗೊರೂರು * ಶಿಕ್ಷಣವು ಮನುಷ್ಯನನ್ನು ಶ್ರೇಷ್ಠ ನಾಗರಿಕನನ್ನಾಗಿ ಮಾಡುತ್ತದೆ. - ಡಾ: ಎಸ್. ರಾಧಾಕೃಷ್ಣನ್. * ಮನುಷ್ಯರಲ್ಲಿ ಪರಿಪೂರ್ಣತೆಯನ್ನು ಹಿಗ್ಗಿಸುವದೇ ಶಿಕ್ಷಣ - ವಿವೇಕಾನಂದ. * ವಿದ್ಯೆ ಗುರುಗಳ ಗುರು - ಭ್ರತೃ ಹರಿ. * ವಿದ್ಯೆಯಿಂದಲೇ ಮನುಷ್ಯನಿಗೆ ಸುಖ, ಭೋಗ, ಧನ,

ವರದಾ ಬಸ್ಸಿಗೆ ಬೆಂಕಿ ಬಿತ್ತು !!

ಇದು ನಾನು ಹೈಸ್ಕೂಲು ಓದುತ್ತಿದ್ದಾಗ ನಡೆದ ಘಟನೆ. ಸಾಗರದಲ್ಲಿ ಶ್ರೀ ವರದಾ ಬಸ್‌ನ ಹೆಸರನ್ನು ಕೇಳದವರೇ ಇಲ್ಲ. ನನಗೆ ಬುದ್ದಿ ತಿಳಿದಾಗಿನಿಂದಲೂ ನಮ್ಮೂರಿಗೆ ಬರುತ್ತಿದ್ದುದು ಅದೇ ಬಸ್ಸು. ಅದರ ಮಾಲೀಕರಿಗೆ ಇದ್ದದ್ದು ಅದೊಂದೇ ಬಸ್ಸು. ಹಾಗಂತ ಅದೇನೂ ಐರಾವತ ಥರಾ ಇರಲಿಲ್ಲ. ಸಾಧಾರಣವಾಗೇ ಇತ್ತು. ಸಾಗರದಿಂದ ಚಂದನಹಳ್ಳಿಗೆ ಇರುವ ಹತ್ತು ಕಿಲೋ ಮೀಟರನ್ನು ಕೇವಲ ಒಂದು ಗಂಟೆಯ ಅವಧಿಯಲ್ಲೇ ಕ್ರಮಿಸಿ ದಾಖಲೆ ಮಾಡಿತ್ತು. ಯಾಕೆಂದರೆ ಅದೇ ರಸ್ತೆಯಲ್ಲಿ ಕಾರುಗಳು ಬಂದರೆ ಅವು ಎರಡು ಗಂಟೆ ತೆಗೆದುಕೊಳ್ಳುತ್ತಿದ್ದವು. ರಸ್ತೆ ಹಾಗಿತ್ತು. ಅದಕ್ಕೆ ತಕ್ಕಂತೆ ಬಸ್ಸೂ ಸಹ ಪ್ರತಿ ದಿನ ಬಿಹೆಚ್ ರಸ್ತೆಯ ಒಂದು ಗ್ಯಾರೇಜಿಗೆ ಹೋಗಿ ತಪಾಸಣೆ ಮಾಡಿಸಿಕೊಂಡೇ ಬರುತ್ತಿತ್ತು. ಸಾಗರದಲ್ಲಿ ಗುರುವಾರ ಸಂತೆ. ಗುರುವಾರ ಬಂತೆಂದರೆ ಭಯಂಕರ ರಷ್ಶು. ಅದೊಂದು ಗುರುವಾರ ಸಾಗರದ ಜ್ಯೂನಿಯರ‍್ ಕಾಲೇಜಿನಲ್ಲಿ ಪರೀಕ್ಷೆ ಮುಗಿಸಿಕೊಂಡು ಮಧ್ಯಾಹ್ನ ಬಿಹೆಚ್ ರಸ್ತೆಯ ಗ್ಯಾರೇಜಿನಲ್ಲೇ ಇರುತ್ತಿದ್ದ ವರದಾ ಬಸ್ಸನ್ನು ಹತ್ತಿ ಹೇಗೋ ಸೀಟು ಹಿಡಿದು ಕುಳಿತಿದ್ದೆ. ಸೀಟು ಬೇಕಾದವರೆಲ್ಲಾ ಅಲ್ಲೇ ಬಂದು ಬಸ್ ಹತ್ತುತ್ತಿದ್ದರು. ಬಸ್ ಅಂತೂ ಒಂದು ಗಂಟೆಗೆ ಹೊರಟು ಜೋಗ ಬಸ್‌ ನಿಲ್ದಾಣ ಬಂದಾಗ ಯಕ್ಕಾಮಕ್ಕಾ ಜನ ಹತ್ತಿಯೇ ಬಿಟ್ಟರು. ಬಸ್‌ನ ಟಾಪ್‌ನಲ್ಲೂ ಜನರು ಹತ್ತಿ ಕುಳಿತರು. ಒಳಗಡೆಯಂತೂ ಉಸಿರುಗಟ್ಟುವಷ್ಟು ಜನಸಂದಣಿ. ಗಂಡಸರು, ಹೆಂಗಸರು, ಮಕ್ಕಳು ಮದುಕರು, ಮುದುಕಿಯರು, ಹರೆಯದ ಹು