ದೀಪದ ಬೆಳಕಲ್ಲಿ ನಿನ್ನ ನೋಡುವೆ,
ತಂಗಾಳಿಯಾ ಅಲೆಯಾಗಿ ಕೆನ್ನೆ ಸವರಿ ಹೋಗುವೆ,
ಕನಸು ಕೂಡ ನಿನ್ನಿಂದ ಏಕೋ ನೂತನವೆನಿಸಿದೆ ,
ಸೇರೆಯಾದಾಗ ಮನಸು ಇನ್ನು ಚೆಂದ ಅನಿಸಿದೆ ,
ಈ ಪ್ರೀತಿ ಈ ರೀತಿ ಭೂಮಿಗೆ ಸಾರಥಿಯಾಗಿದೆ ,
ಕತ್ತಲೆಯಾದಾಗ ಜಗವು ,
ಸಹನೆ ಕಳೆದುಕೊಳ್ಳುತಿದೆ ಒಲವು,
ಇದು ತಾರೆ ಎಣಿಸುವ ಕ್ಷಣವೂ,
ನೀನೆ ಹೇಳು !!!
ಮನಸಿಗೂ ಬೇಕು ತಲ್ಲಣ ,
ಬೆಳದಿಂಗಳಿಗಿಂತ ಇನ್ನಾವುದಿದೆ ನೂತನ,
ದೂರದ ತೀರದಲ್ಲಿದೆ ಅಲೆಗಳ ನರ್ತನ,
ಈಗ ನೀನೆ ನೋಡು ,
ಈ ಪ್ರೀತಿ ಈ ರೀತಿ ಭೂಮಿಗೆ ಸಾರಥಿಯಾಗಿದೆ
ನೀ ಬರುವಾಗ ನಾನು,
ಬೇಕೆಂತಲೇ ಹಿಂದೆ ಸರಿವೆ ,
ಕೋಪದಿಂದ ಬಂದು ನೀನು ,
ಅಪ್ಪಿಕೊಂಡಾಗ ಈ ಲೋಕವನ್ನೇ ಮರಿವೆ ,
ನಿನ್ನ ಬೊಂಬೆ ನಾನು ,
ನನಗೆಂದೆ ತಾನೇ ನೀನು,
ಈಗ ನಿನ್ನಲ್ಲಿ ಇರೋದು ನಾನು,
ನನ್ನಲ್ಲೂ ತಾನೇ ನೀನು ,
ಈ ರೀತಿ ಈ ಪ್ರೀತಿ ಭೂಮಿಗೆ ಸಾರಥಿಯಾಗಿದೆ.....
ಚೇತನ್.ಎನ್
ತಂಗಾಳಿಯಾ ಅಲೆಯಾಗಿ ಕೆನ್ನೆ ಸವರಿ ಹೋಗುವೆ,
ಕನಸು ಕೂಡ ನಿನ್ನಿಂದ ಏಕೋ ನೂತನವೆನಿಸಿದೆ ,
ಸೇರೆಯಾದಾಗ ಮನಸು ಇನ್ನು ಚೆಂದ ಅನಿಸಿದೆ ,
ಈ ಪ್ರೀತಿ ಈ ರೀತಿ ಭೂಮಿಗೆ ಸಾರಥಿಯಾಗಿದೆ ,
ಕತ್ತಲೆಯಾದಾಗ ಜಗವು ,
ಸಹನೆ ಕಳೆದುಕೊಳ್ಳುತಿದೆ ಒಲವು,
ಇದು ತಾರೆ ಎಣಿಸುವ ಕ್ಷಣವೂ,
ನೀನೆ ಹೇಳು !!!
ಮನಸಿಗೂ ಬೇಕು ತಲ್ಲಣ ,
ಬೆಳದಿಂಗಳಿಗಿಂತ ಇನ್ನಾವುದಿದೆ ನೂತನ,
ದೂರದ ತೀರದಲ್ಲಿದೆ ಅಲೆಗಳ ನರ್ತನ,
ಈಗ ನೀನೆ ನೋಡು ,
ಈ ಪ್ರೀತಿ ಈ ರೀತಿ ಭೂಮಿಗೆ ಸಾರಥಿಯಾಗಿದೆ
ನೀ ಬರುವಾಗ ನಾನು,
ಬೇಕೆಂತಲೇ ಹಿಂದೆ ಸರಿವೆ ,
ಕೋಪದಿಂದ ಬಂದು ನೀನು ,
ಅಪ್ಪಿಕೊಂಡಾಗ ಈ ಲೋಕವನ್ನೇ ಮರಿವೆ ,
ನಿನ್ನ ಬೊಂಬೆ ನಾನು ,
ನನಗೆಂದೆ ತಾನೇ ನೀನು,
ಈಗ ನಿನ್ನಲ್ಲಿ ಇರೋದು ನಾನು,
ನನ್ನಲ್ಲೂ ತಾನೇ ನೀನು ,
ಈ ರೀತಿ ಈ ಪ್ರೀತಿ ಭೂಮಿಗೆ ಸಾರಥಿಯಾಗಿದೆ.....
ಚೇತನ್.ಎನ್
ಕಾಮೆಂಟ್‌ಗಳು